ಚಿಕ್ಕಮಗಳೂರಿನ ಎಂಎಲ್​ಸಿಗೆ ಕೊರೋನಾ ಸೋಂಕು; ಪತ್ನಿ ಸಮೇತ ಕೋವಿಡ್ ಆಸ್ಪತ್ರೆಗೆ ದಾಖಲು

ಎಂಕೆ ಪ್ರಾಣೇಶ್ ಜೊತೆ ಸಭೆಯಲ್ಲಿ ಪಾಲ್ಗೊಂಡಿದ್ದ ಆರ್. ಅಶೋಕ್ ಹಾಗೂ ಇತರ ಕೆಲ ಬಿಜೆಪಿ ಮುಖಂಡರಿಗೂ ಈಗ ಕೊರೋನಾ ಆತಂಕ ಶುರುವಾಗಿದೆ.

news18-kannada
Updated:July 6, 2020, 8:02 PM IST
ಚಿಕ್ಕಮಗಳೂರಿನ ಎಂಎಲ್​ಸಿಗೆ ಕೊರೋನಾ ಸೋಂಕು; ಪತ್ನಿ ಸಮೇತ ಕೋವಿಡ್ ಆಸ್ಪತ್ರೆಗೆ ದಾಖಲು
ವಿಧಾನಪರಿಷತ್ ಸದಸ್ಯ ಎಂಕೆ ಪ್ರಾಣೇಶ್
  • Share this:
ಚಿಕ್ಕಮಗಳೂರು: ಜಿಲ್ಲೆಯ ವಿಧಾನ ಪರಿಷತ್ ಸದಸ್ಯ ಹಾಗೂ ಬಿಜೆಪಿ ಮುಖಂಡ ಎಂ.ಕೆ. ಪ್ರಾಣೇಶ್ ಹಾಗೂ ಅವರ ಪತ್ನಿಗೆ ಕೊರೊನಾ ಸೋಂಕು ದೃಢವಾಗಿದೆ. ಈ ವಿಷಯವನ್ನು ವಿಧಾನ ಪರಿಷತ್ ಸದಸ್ಯ ಎಂ.ಕೆ.ಪ್ರಾಣೇಶ್ ಅವರೇ ತಮ್ಮ ಫೇಸ್​ಬುಕ್​ನಲ್ಲಿ ಸ್ಪಷ್ಟಪಡಿಸಿದ್ದಾರೆ. ಕೊರೋನಾ ಸೋಂಕಿತ ಪ್ರಾಣೇಶ್ ಹಾಗೂ ಅವರ ಪತ್ನಿಯನ್ನು ನಗರದ ಕೋವಿಡ್ ಆಸ್ವತ್ರೆಗೆ ದಾಖಲು ಮಾಡಲಾಗಿದ್ದು ಚಿಕಿತ್ಸೆ ನೀಡಲಾಗುತ್ತಿದೆ. 

ಪ್ರಾಣೇಶ್ ಅವರು ಇತ್ತೀಚೆಗೆ ಸಮಿತಿಯೊಂದರ ತುರ್ತು ಸಭೆಯ ನಿಮಿತ್ತ ಬೆಂಗಳೂರಿಗೆ ಹೋಗಿ ವಾಪಸ್ ಬಂದಿದ್ದರು ಎಂದು ಹೇಳಲಾಗುತ್ತಿದೆ. ಅವರು ಬೆಂಗಳೂರಿನಿಂದ ವಾಪಸ್ಸಾದ ಬಳಿಕ ತಲೆ ನೋವು ಕಾಣಿಸಿಕೊಂಡಿತ್ತು. ವೈದ್ಯರನ್ನು ಸಂಪರ್ಕಿಸಿ ಕೋವೀಡ್ ಟೆಸ್ಟ್ ಮಾಡಿಸಿದಾಗ ಅವರಿಗೆ ಕೊರೊನಾ ಇರುವುದು ದೃಢವಾಗಿದೆ. ಬಳಿಕ ಪ್ರಾಣೇಶ್ ದಂಪತಿಯನ್ನ ಭಾನುವಾರ ಸಂಜೆ ನಗರದ ಕೋವಿಡ್ ಆಸ್ವತ್ರೆಗೆ ದಾಖಲಾಗಿದೆ.

ಇದನ್ನೂ ಓದಿ: ಚಾಮರಾಜನಗರದಲ್ಲಿ ಕೊರೋನಾ ಪ್ರಕರಣ ಸಂಖ್ಯೆ 114ಕ್ಕೇರಿಕೆ; ಚೇತರಿಸಿಕೊಂಡವರು 24 ಮಂದಿ

ನಾಲ್ಕು ದಿನಗಳ ಹಿಂದೆ ಕಂದಾಯ ಸಚಿವ ಆರ್. ಅಶೋಕ್ ಜಿಲ್ಲೆಯ ನೂತನ ಜಿಲ್ಲಾಧಿಕಾರಿ ಕಚೇರಿಯ ಕಟ್ಟಡದ ಸ್ಥಳ ಪರಿಶೀಲನೆಗೆಂದು ಜಿಲ್ಲೆಗೆ ಆಗಮಿಸಿದ್ದರು. ಈ ವೇಳೆ ಜಿಲ್ಲಾ ಮಟ್ಟದ ವಿವಿಧ ಅಧಿಕಾರಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ವಿಧಾನಪರಿಷತ್ ಸದಸ್ಯ ಎಂ.ಕೆ. ಪ್ರಾಣೇಶ್ ಕೂಡ ಆ ಸಭೆಯಲ್ಲಿ ಪಾಲ್ಗೊಂಡಿದ್ದರು. ಈಗ ಪ್ರಾಣೇಶ್ ಅವರಿಗೆ ಕೊರೋನಾ ಸೋಂಕು ದೃಢಪಟ್ಟಿರುವ ಹಿನ್ನೆಲೆ, ಅಂದು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಅಧಿಕಾರಿಗಳು, ಬಿಜೆಪಿ ಮುಖಂಡರು ಹಾಗೂ ಪಕ್ಷದ ಕಾರ್ಯಕರ್ತರಲ್ಲೂ ಆತಂಕ ಎದುರಾಗಿದೆ.

ಇನ್ನು ಎಂಎಲ್ ಸಿ ಪ್ರಾಣೇಶ್ ವಾಸವಾಗಿದ್ದ ಮೂಡಿಗೆರೆ ತಾಲೂಕಿನ ಘಟ್ಟದಹಳ್ಳಿಯ ಮನೆಯನ್ನ ತಾಲೂಕು ಅಧಿಕಾರಿಗಳು ಸೀಲ್​ಡೌನ್ ಮಾಡಿದ್ದಾರೆ. ಇನ್ನು ಮನೆಯಲ್ಲಿ ಬೇರೆ ಯಾರೂ ವಾಸವಿಲ್ಲದಿರುವುದು ಸಮಾಧಾನ ತಂದಿದ್ದರೂ ಜನಪ್ರತಿನಿಯಾಗಿರುವ ಕಾರಣ ಪ್ರತಿದಿನ ನೂರಾರು ಜನರ ಭೇಟಿ ಮಾಡುತ್ತಿರುತ್ತಾರೆ. ಈಗ ಆ ಜನರಲ್ಲೂ ಕೊರೊನಾ ಭಯ ಶುರುವಾಗಿದೆ.

ಇದನ್ನೂ ಓದಿ: Sumalatha Ambareesh: ಸುಮಲತಾ ಅಂಬರೀಷ್​ಗೂ ತಗುಲಿದ ಕೊರೋನಾ ಸೋಂಕು; ಸೋಷಿಯಲ್ ಮೀಡಿಯಾದಲ್ಲಿ ಖಚಿತಪಡಿಸಿದ ಮಂಡ್ಯ ಸಂಸದೆ

ಈ ಬಗ್ಗೆ ಸ್ವತಃ ಫೇಸ್​ಬುಕ್​ನಲ್ಲಿ ಬರೆದುಕೊಂಡಿರುವ ಎಂ.ಕೆ. ಪ್ರಾಣೇಶ್ ನನಗೆ ಹಾಗೂ ಪತ್ನಿಗೆ ಕೊರೊನಾ ಪಾಸಿಟಿವ್ ಬಂದಿದೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದೇವೆ. ಯಾರೂ ಆತಂಕ ಪಡಬೇಕಿಲ್ಲ. ಶ್ರೀಘ್ರವೇ ಗುಣಮುಖರಾಗಿ ಬರುತ್ತೇವೆಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ವರದಿ: ವೀರೇಶ್ ಹೆಚ್ ಜಿ
Published by: Vijayasarthy SN
First published: July 6, 2020, 8:02 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading