ಚಿಕ್ಕಮಗಳೂರು: ಹಾಡುಹಗಲೇ ದೊಣ್ಣೆಯಿಂದ ಹೊಡೆದು ವೃದ್ಧೆಯನ್ನು ಕೊಂದು ಚಿನ್ನದ ಸರ ಕಳ್ಳತನ

ಇಂದು ದೇವಸ್ಥಾನದ ಪ್ರದಕ್ಷಿಣೆ ಹಾಕುವಾಗ ಹಿಂದಿನಿಂದ ಬಂದ ದುಷ್ಕರ್ಮಿಗಳು ವೃದ್ಧೆಯ ತಲೆಗೆ ಬಲವಾದ ದೊಣ್ಣೆಯಿಂದ ಹೊಡೆದು ಆಕೆಯ ಕೊರಳಲಿದ್ದ 20 ಗ್ರಾಮ ಚಿನ್ನದ ಸರವನ್ನ ಕದ್ದು ಪರಾರಿಯಾಗಿದ್ದಾರೆ. ಆದರೆ, ಬಲವಾದ ಹೊಡೆತದಿಂದ ವೃದ್ಧೆ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

news18-kannada
Updated:September 25, 2020, 7:12 AM IST
ಚಿಕ್ಕಮಗಳೂರು: ಹಾಡುಹಗಲೇ ದೊಣ್ಣೆಯಿಂದ ಹೊಡೆದು ವೃದ್ಧೆಯನ್ನು ಕೊಂದು ಚಿನ್ನದ ಸರ ಕಳ್ಳತನ
ಸಾಂದರ್ಭಿಕ ಚಿತ್ರ
  • Share this:
ಚಿಕ್ಕಮಗಳೂರು : ದೇವಸ್ಥಾನದಲ್ಲಿ ಪ್ರದಕ್ಷಿಣೆ ಹಾಕುತ್ತಿದ್ದ ಮಹಿಳೆಗೆ ಹಿಂಬದಿಯಲ್ಲಿ ಬಂದು ದೊಣ್ಣೆಯಿಂದ ಹೊಡೆದು ಕೊಲೆ ಮಾಡಿ ಆಕೆಯ ಕೊರಳಿದ್ದ 20 ಗ್ರಾಂ ತೂಕದ ಚಿನ್ನದ ಸರವನ್ನ ಕದ್ದು ಪರಾರಿಯಾಗಿರೋ ಘಟನೆ ಚಿಕ್ಕಮಗಳೂರು ಜಿಲ್ಲೆ ಅಜ್ಜಂಪುರ ಪಟ್ಟಣದಲ್ಲಿ ನಡೆದಿದೆ. ದುರಾದೃಷ್ಟವಶಾತ್ ಆ ಮಹಿಳೆ ದೇವಸ್ಥಾನದ ಆವರಣದಲ್ಲೇ ಸಾವನ್ನಪ್ಪಿದ್ದಾರೆ. ಮೃತರನ್ನು 70 ವರ್ಷದ ನಾಗರತ್ನ ಎಂದು ಗುರುತಿಸಲಾಗಿದೆ. ಮೃತ ನಾಗರಾತ್ನ ಬಹಳ ವರ್ಷಗಳಿಂದ ಅಜ್ಜಂಪುರದ ಪಟ್ಟಣದಲ್ಲಿದ್ದ ಶಿವಾನಂದಾಶ್ರಮಕ್ಕೆ ಹೋಗಿ ಬರುತ್ತಿದ್ದರು. ಪೂಜೆ ಮಾಡಿ ದೇವಸ್ಥಾನದ ಸುತ್ತಲು ಪ್ರದಕ್ಷಿಣಿ ಹಾಕಿಕೊಂಡು ಬರುತ್ತಿದ್ದರು.

ಆದರೆ, ಇಂದು ದೇವಸ್ಥಾನದ ಪ್ರದಕ್ಷಿಣೆ ಹಾಕುವಾಗ ಹಿಂದಿನಿಂದ ಬಂದ ದುಷ್ಕರ್ಮಿಗಳು ವೃದ್ಧೆಯ ತಲೆಗೆ ಬಲವಾದ ದೊಣ್ಣೆಯಿಂದ ಹೊಡೆದು ಆಕೆಯ ಕೊರಳಲಿದ್ದ 20 ಗ್ರಾಮ ಚಿನ್ನದ ಸರವನ್ನ ಕದ್ದು ಪರಾರಿಯಾಗಿದ್ದಾರೆ. ಆದರೆ, ಬಲವಾದ ಹೊಡೆತದಿಂದ ವೃದ್ಧೆ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಇದನ್ನೂ ಓದಿ : ದೆಹಲಿ ಗಲಭೆ ಪ್ರಕರಣ; ಉಮರ್​ ಖಾಲಿದ್​ಗೆ ಅಕ್ಟೋಬರ್​ 22ರ ವರೆಗೆ ನ್ಯಾಯಾಂಗ ಬಂಧನ ಮುಂದುವರೆಸಿದ ಕೋರ್ಟ್​

ಸ್ಥಳಕ್ಕೆ ಪೊಲೀಸ್ ವರಿಷ್ಠಾಧಿಕಾರಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಜ್ಜಂಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಕೃತ್ಯವನ್ನ ಯಾರೋ ನೋಡಿಕೊಂಡಿರುವವರೆ ಮಾಡಿರೋದು ಎಂದು ಅಂದಾಜಿಸಲಾಗಿದೆ. ಪ್ರಕರಣ ದಾಖಲಿಸಿಕೊಂಡಿರೋ ಪೊಲೀಸರು ಕೊಲೆಗಾರರ ಶೋಧ ಕಾರ್ಯದಲ್ಲಿ ನಿರತರಾಗಿದ್ದಾರೆ.
Published by: MAshok Kumar
First published: September 25, 2020, 7:12 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading