HOME » NEWS » District » CHIKKAMAGALUR DC TAKES PRIVATE HOSPITALS TO TASK REGARDING CORONA VCTV SKTV

Coronavirus: ರೋಗಿಗಳನ್ನು ಸರಿಯಾಗಿ ನೋಡಿಕೊಳ್ಳದಿದ್ರೆ ಹುಷಾರ್ : ಖಾಸಗಿ ಆಸ್ಪತ್ರೆಗಳನ್ನು ತರಾಟೆಗೆ ತೆಗೆದುಕೊಂಡ ಚಿಕ್ಕಮಗಳೂರು ಡಿಸಿ

ನಗರದ ಆಶ್ರಯ ಖಾಸಗಿ ಆಸ್ಪತ್ರೆಯಲ್ಲಿ ಆಕ್ಸಿಜನ್ ಸಮಸ್ಯೆ ಉಂಟಾಗಿತ್ತು. ಸಂಜೆ ವೇಳೆಗೆ ಆಕ್ಸಿಜನ್ ಸಿಗದಿದ್ದರೆ ಕಷ್ಟ ಎಂದು ವೈದ್ಯರು ಹೇಳಿದ್ದರು. ಕೆಲ ಸೋಂಕಿತರನ್ನ ಬೇರೆ ಆಸ್ಪತ್ರೆಗೆ ರವಾನಿಸಿ, ಉಳಿದ ಸೋಂಕಿತರ ಸಂಬಂಧಿಕರಿಗೆ ಬೇರೆ ಕಡೆ ಕರೆದುಕೊಂಡು ಹೋಗಲು ಮನವಿ ಮಾಡುತ್ತೇವೆ, ಸರ್ಕಾರ ಆಕ್ಸಿಜನ್ ಪೂರೈಸುತ್ತಿಲ್ಲ ಎಂದು ಆರೋಪಿಸಿದ್ದರು.

news18-kannada
Updated:May 7, 2021, 12:16 PM IST
Coronavirus: ರೋಗಿಗಳನ್ನು ಸರಿಯಾಗಿ ನೋಡಿಕೊಳ್ಳದಿದ್ರೆ ಹುಷಾರ್ : ಖಾಸಗಿ ಆಸ್ಪತ್ರೆಗಳನ್ನು ತರಾಟೆಗೆ ತೆಗೆದುಕೊಂಡ ಚಿಕ್ಕಮಗಳೂರು ಡಿಸಿ
ಚಿಕ್ಕಮಗಳೂರು ಜಿಲ್ಲಾಧಿಕಾರಿ
  • Share this:
ಚಿಕ್ಕಮಗಳೂರು : ಖಾಸಗಿ ಆಸ್ಪತ್ರೆಯವರು ಪೇಶೆಂಟ್‍ಗಳನ್ನ ಟ್ರೀಟ್ ಮಾಡಿದ ಬಳಿಕ ಅವರ ಕೇರ್ ತೆಗೆದುಕೊಳ್ಳಬೇಕು, ಜವಾಬ್ದಾರಿಯಿಂದ ನುಣುಚಿಕೊಳ್ಳುವಂತಿಲ್ಲ. ಡಿಸ್ಚಾರ್ಜ್ ಮಾಡಿ ಹೋಗಪ್ಪ ಅಂತ ರಸ್ತೆಯಲ್ಲಿ ಬಿಟ್ಟರೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಚಿಕ್ಕಮಗಳೂರು ಜಿಲ್ಲಾಧಿಕಾರಿ ಕೆ.ಎನ್.ರಮೇಶ್ ಖಾಸಗಿ ಆಸ್ಪತ್ರೆಗಳಿಗೆ ಎಚ್ಚರಿಕೆ ನೀಡಿದ್ದಾರೆ. 

ಇಂದು ಬೆಳಗ್ಗೆ ನಗರದ ಆಶ್ರಯ ಖಾಸಗಿ ಆಸ್ಪತ್ರೆಯಲ್ಲಿ ಆಕ್ಸಿಜನ್ ಸಮಸ್ಯೆ ಉಂಟಾಗಿತ್ತು. ಸಂಜೆ ವೇಳೆಗೆ ಆಕ್ಸಿಜನ್ ಸಿಗದಿದ್ದರೆ ಕಷ್ಟ ಎಂದು ವೈದ್ಯರು ಹೇಳಿದ್ದರು. ಕೆಲ ಸೋಂಕಿತರನ್ನ ಬೇರೆ ಆಸ್ಪತ್ರೆಗೆ ರವಾನಿಸಿ, ಉಳಿದ ಸೋಂಕಿತರ ಸಂಬಂಧಿಕರಿಗೆ ಬೇರೆ ಕಡೆ ಕರೆದುಕೊಂಡು ಹೋಗಲು ಮನವಿ ಮಾಡುತ್ತೇವೆ, ಸರ್ಕಾರ ಆಕ್ಸಿಜನ್ ಪೂರೈಸುತ್ತಿಲ್ಲ ಎಂದು ಆರೋಪಿಸಿದ್ದರು.

ಆದರೆ, ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಜಿಲ್ಲಾಧಿಕಾರಿ ರಮೇಶ್, ಖಾಸಗಿ ಆಸ್ಪತ್ರೆಗಳು ಕೆಪಾಸಿಟಿ ಆಧಾರದ ಮೇಲೆ ಪೇಶೆಂಟ್‍ಗಳನ್ನ ತುಂಬಿಸಬೇಕು. ಕಮರ್ಷಿಯಲ್ ಆಧಾರದಲ್ಲಿ ಪೇಶೆಂಟ್‍ಗಳನ್ನ ತೆಗೆದುಕೊಳ್ಳಬಾರದು ಎಂದು ಎಚ್ಚರಿಸಿದ್ದಾರೆ. ಸರ್ಕಾರದಿಂದ ಈವರೆಗೆ ನಾವು ಖಾಸಗಿ ಆಸ್ಪತ್ರೆಗೆ ಯಾವ ಸೋಂಕಿತರನ್ನೂ ರೆಫರ್ ಮಾಡಿಲ್ಲ. ಖಾಸಗಿ ಆಸ್ಪತ್ರೆಗಳು 50 ಪರ್ಸೆಂಟ್ ಕೋಟಾ ಖಾಲಿ ಇಡಬೇಕು, ಇಟ್ಟಿದ್ದಾರೆ ಎಂದು ನಂಬಿದ್ದೇವೆ ಎಂದರು. ಒಂದು ವೇಳೆ, ಯಾವುದೇ ರೋಗಿಗಳಿಗೆ ತೀವ್ರ ಸಮಸ್ಯೆಯಾದಾಗ ಸರ್ಕಾರ ಸ್ಪಂದಿಸುತ್ತೆ. ಆದರೆ, ಖಾಸಗಿ ಆಸ್ಪತ್ರೆಯವರು ತಮ್ಮ ಎಲ್ಲಾ ಸೌಲಭ್ಯಗಳಿಗೆ ಅನುಗುಣವಾಗಿ ರೋಗಿಗಳನ್ನ ತೆಗೆದುಕೊಳ್ಳಬೇಕು ಎಂದು ಎಚ್ಚರಿಕೆ ನೀಡಿದ್ದಾರೆ.

ಇದನ್ನೂ ಓದಿ: https://kannada.news18.com/news/coronavirus-latest-news/oxygen-shortage-everywhere-what-is-the-severity-of-corona-for-a-patient-to-be-icu-or-o2-dependent-sktv-559607.html

ಸೊಂಕಿತರ ಸಂಖ್ಯೆ ಹೆಚ್ಚಾದಂತೆ ಆಕ್ಸಿಜನ್ ಅವಶ್ಯಕತೆಯೂ ಹೆಚ್ಚಾಗುತ್ತಿದೆ. ಈ ಹಿನ್ನೆಲೆಯಲ್ಲಿ ಜಿಲ್ಲಾಸ್ಪತ್ರೆ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ಆಕ್ಸಿಜನ್ ಕೊರತೆಯನ್ನು ತಪ್ಪಿಸುವ ಸಲುವಾಗಿ ಹಾಗೂ ಸೋಂಕಿತರಿಗೆ ಯಾವುದೇ ತೊಂದರೆಯಾಗಬಾರದು ಎಂಬ ದೃಷ್ಟಿಯಿಂದ ತಂಡಗಳನ್ನು ರಚನೆ ಮಾಡಿ ಹಗಲು_ರಾತ್ರಿ ಕಾರ್ಯನಿರ್ವಹಿಸಲಾಗುತ್ತಿದೆ. ಆದರೂ ಖಾಸಗಿ ಆಸ್ಪತ್ರೆಗಳಿಂದ ಆಕ್ಸಿಜನ್ ಕೊರತೆಯ ಬಗ್ಗೆ ದೂರುಗಳು ಬರುತ್ತಿದೆ. ಖಾಸಗಿ ಆಸ್ಪತ್ರೆಗಳಿಗೆ ಸರ್ಕಾರಿದಂದ ಯಾವುದೇ ರೋಗಿಯನ್ನು ರೆಫರ್ ಮಾಡಿಲ್ಲ. ಆದರೂ ಸಹ ಖಾಸಗಿ ಆಸ್ಪತ್ರೆಯಲ್ಲಿ ಆಕ್ಸಿಜನ್ ಕೊರತೆ ನಿಜವಾಗಿಯೂ ಸಂಭವಿಸಿದೆಯಾ ಎಂಬ ಬಗ್ಗೆ ಪರಿಶೀಲನೆ ಮಾಡಲು ತಂಡಗಳನ್ನು ರಚಸಿ ಪರಿಶೀಲನೆಗೆ ಕಳುಹಿಸಲಾಗಿದೆ. ಆ ರೀತಿಯ ತೊಂದರೆ ಎದುರಾದಲ್ಲಿ ಅಂತಹ ರೋಗಿಗಳ ಜವಾಬ್ದಾರಿಯನ್ನು ಜಿಲ್ಲಾಡಳಿತ ತಗೆದುಕೊಳ್ಳುತ್ತದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ರು.

ಇಂತಹ ಸಮಸ್ಯೆ ಉದ್ಭವವಾದ ಸಂದರ್ಭದಲ್ಲಿ ಖಾಸಗಿ ಆಸ್ಪತ್ರೆಗಳ ಜೊತೆ ಕೈಜೋಡಿಸುವ ಕೆಲಸ ಮಾಡಿದ್ದೇವೆ. ಯಾವುದೇ ಆಸ್ಪತ್ರೆಗಳಲ್ಲಿ ಜಿಲ್ಲಾಡಳಿತ ರೆಫರ್ ಮಾಡಿದ ರೋಗಿಗಳು ಇಲ್ಲದಿದ್ದರೂ, ಖಾಸಗಿ ಆಸ್ಪತ್ರೆಗೆ ನೇರವಾಗಿ ದಾಖಲಾದ ರೋಗಿಗಳ ಹಿತದೃಷ್ಟಿಯಿಂದ ನಗರದ ಎರಡು ಪ್ರತಿಷ್ಟಿತ ಆಸ್ಪತ್ರೆಗಳಿಗೆ ಜಿಲ್ಲಾಡಳಿತದಿಂದ ಈಗಾಗಲೇ ಆಕ್ಸಿಜನ್ ನ್ನು ವ್ಯವಸ್ಥೆ ಮಾಡಿದ್ದೇವೆ.
Youtube Video
ಖಾಸಗಿ ಆಸ್ಪತ್ರೆಗಳಲ್ಲಿ ಆಕ್ಸಿಜನ್ ಸುಖಾಸುಮ್ಮನೇ ಪೋಲಾಗದಂತೆ ನೋಡಿಕೊಳ್ಳಬೇಕು. ಈ ದೃಷ್ಟಿಯಿಂದ ಜಿಲ್ಲಾಸ್ಪತ್ರೆಯಲ್ಲಿ ಈ ವ್ಯವಸ್ಥೆಯನ್ನು ನೋಡಿಕೊಳ್ಳಲು ತಂಡಗಳನ್ನು ರಚಿಸಿದ್ದೇವೆ. ಖಾಸಗಿ ಆಸ್ಪತ್ರೆಗಳೂ ಸಹ ನಿಯಮಬದ್ದವಾಗಿ ಇಂತಹ ಸಂದರ್ಭದಲ್ಲಿ ಆಕ್ಸಿಜನ್ ಉಳಿಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಬೇಕೆಂದು ಸಲಹೆ ನೀಡಿದರು. ಹಾಗೂ ಅವಶ್ಯಕತೆ ಇದ್ದವರಿಗೆ ಮಾತ್ರ ಆಕ್ಸಿಜನ್ ನೀಡಬೇಕೆಂದು ತಿಳಿಸಿದರು.
Published by: Soumya KN
First published: May 7, 2021, 12:16 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories