ಚಿಕ್ಕಬಳ್ಳಾಪುರ ಗಾಂಜಾ ಗ್ಯಾಂಗ್ ಮೇಲೆ ಪೊಲೀಸರ ದಾಳಿ ಹಲವರ ಬಂಧನ

ಅಕ್ರಮವಾಗಿ ಗಾಂಜಾವನ್ನು ದಾಸ್ತಾನು ಮಾಡಿದ್ದ ಪೊರ್ದೋಸ್ ಖಾನ್ (35) ಮತ್ತು ಕೃತ್ಯಕ್ಕೆ ಸಹಕರಿಸಿದ ಫೈರೋಜ್ ಖಾನ್ (38)  ಇವರು ನೆಹರೂಜಿ ಕಾಲೋನಿ, ಗೌರಿಬಿದನೂರು ನಗರ ನಿವಾಸಿ ಗಳಾಗಿದ್ದು ಇವರ ಮೇಲೆ ಕಲಂ 20(ಬಿ), 1(ಎ) ಎನ್.ಡಿ.ಪಿ.ಎಸ್. ಕಾಯ್ದೆ-1985 ರೀತ್ಯಾ ಪ್ರಕರಣ ದಾಖಲಿಸಿ ಹೆಚ್ಚಿನ ವಿಚಾರಣೆಗೆ ನ್ಯಾಯಾಲಯದ ಅನುಮತಿ ಮೇರೆಗೆ ವಶಕ್ಕೆ ಪಡೆಯಲಾಗಿದೆ. 

news18-kannada
Updated:September 22, 2020, 7:23 PM IST
ಚಿಕ್ಕಬಳ್ಳಾಪುರ ಗಾಂಜಾ ಗ್ಯಾಂಗ್ ಮೇಲೆ ಪೊಲೀಸರ ದಾಳಿ ಹಲವರ ಬಂಧನ
ಗಾಂಜಾ ವಶಕ್ಕೆ ಪಡೆದಿರುವ ಪೊಲೀಸರು.
  • Share this:
ಚಿಕ್ಕಬಳ್ಳಾಪುರ: ಗೌರಿ ಬಿದನೂರು ನಗರ ಠಾಣಾ ಸರಹದ್ದಿನಲ್ಲಿ ಮಾದಕ ಪದಾರ್ಥಗಳ ಸಾಗಾಣಿಕೆ ಮತ್ತು ಮಾರಾಟಗಾರರ ಪತ್ತೆಗಾಗಿ ನಗರ ಠಾಣೆಯ ಪಿ.ಎಸ್.ಐ ಎನ್ ಚಂದ್ರಕಲಾ ಮತ್ತು ಸಿಬ್ಬಂದಿಯ ತಂಡವನ್ನು ಸಿಪಿಐ  ಎಸ್ ರವಿ ಗೌರಿಬಿದನೂರು ತಂಡ  ರಚಿಸಿದ್ದು, ಅಕ್ರಮ ಗಾಂಜಾ ಮಾರಾಟ ಜಾಲದ ಬಗ್ಗೆ  ಬಂದ ಖಚಿತ ಮಾಹಿತಿ ಮೇರೆಗೆ ಗೌರಿಬಿದನೂರು ನಗರದ ನೆಹರೂಜಿ ಕಾಲೋನಿಯ ಒಂದು ಮನೆಯಲ್ಲಿ ಅಕ್ರಮವಾಗಿ ಮಾದಕ ಪದಾರ್ಥವಾದ ಗಾಂಜಾವನ್ನು ದಾಸ್ತಾನು ಮಾಡಿ ಇಟ್ಟಿರುತ್ತಾರೆಂದು ತಿಳಿದು ಬಂದಿರುತ್ತದೆ. ಹಲವು ದಿನಗಳಿಂದ‌ ತಪ್ಪಿಸಿಕೊಂಡು ಮಾರಾಟ ಮಾಡ್ತಿದ್ದ ಕದೀಮರ ಚಲನ ವಲನಗಳ ಬಗ್ಗೆ ಖಚಿತ ಮೇರೆಗೆ ಕೂಡಲೇ ಸಿಬ್ಬಂದಿಯಾದ ಸಿ.ಹೆಚ್.ಸಿ.  ಶಿವಶಂಕರ, ಲೋಕೇಶ , ಲಿಂಗಪ್ಪ,  ಲಕ್ಷ್ಮೀನಾರಾಯಣ ಮತ್ತು ಗಿರೀಶ ಹಾಗೂ ಪಂಚರೊಂದಿಗೆ ಸ್ಥಳಕ್ಕೆ ದಿಢೀರ್ ದಾಳಿ ಮಾಡಲಾಗಿ ಮನೆಯಲ್ಲಿದ್ದ ಗಾಂಜ ಸೊಪ್ಪುಗಳು ವಶಕ್ಕೆ ತೆಗೆದುಕೊಂಡು, ಮಾರಾಟ ಮಾಡ್ತಿದ್ಸ ಫೈರೋಜ್ ಖಾನ್, ವಜೀರ್ ಖಾನ್ 38 ವರ್ಷ ದಸ್ತಗಿರಿ ಮಾಡಲಾಯಿತು.

ಬಂಧಿತರಿಂದ ಅಕ್ರಮವಾಗಿ ಮಾದಕ ಪದಾರ್ಥವಾದ ಗಾಂಜಾವನ್ನು ಶೇಖರಣೆ, ಮಾರಾಟ ಮಾಡಿರುವ ಬಗ್ಗೆ ವಿಚಾರಣೆ ಮಾಡಲಾಗಿದೆ. ಆರೋಪಿತರು ತನ್ನ ತಮ್ಮನಾದ ಪಿರ್ದೋಸ್ ಖಾನ್ ಎಂಬುವನು ಸುಮಾರು 7 ಗಾಂಜಾ ಪಾಕೇಟ್‍ಗಳನ್ನು ಒಂದು ಬ್ಯಾಗಿನಲ್ಲಿ ತೆಗೆದುಕೊಂಡು ಬಂದು ಕೊಠಡಿಯಲ್ಲಿ ಇಟ್ಟಿರುವುದಾಗಿ ತಿಳಿಸಿದ್ದು ತನಗೂ ಇದಕ್ಕೂ ಸಂಭಂದ ಇಲ್ಲವೆಂದು ಪೊಲೀಸರ ಬಳಿ ವಾಗ್ವಾದಕ್ಕೆ ಇಳಿದಿದ್ದಾಗಿ ತಿಳಿದುಬಂದಿದೆ.

ಇದನ್ನೂ ಓದಿ : ಕೊಡಗು: ಒಂದೂವರೆ ತಿಂಗಳಲ್ಲಿ ಮೂರು ಪ್ರವಾಹ, ಅಪಾರ ನಷ್ಟ ಅನುಭವಿಸಿದ ಭತ್ತ ಕಾಫಿ ಬೆಳೆಗಾರರು

ಅಕ್ರಮವಾಗಿ ಗಾಂಜಾವನ್ನು ದಾಸ್ತಾನು ಮಾಡಿದ್ದ ಪೊರ್ದೋಸ್ ಖಾನ್ (35) ಮತ್ತು ಕೃತ್ಯಕ್ಕೆ ಸಹಕರಿಸಿದ ಫೈರೋಜ್ ಖಾನ್ (38)  ಇವರು ನೆಹರೂಜಿ ಕಾಲೋನಿ, ಗೌರಿಬಿದನೂರು ನಗರ ನಿವಾಸಿ ಗಳಾಗಿದ್ದು ಇವರ ಮೇಲೆ ಕಲಂ 20(ಬಿ), 1(ಎ) ಎನ್.ಡಿ.ಪಿ.ಎಸ್. ಕಾಯ್ದೆ-1985 ರೀತ್ಯಾ ಪ್ರಕರಣ ದಾಖಲಿಸಿ ಹೆಚ್ಚಿನ ವಿಚಾರಣೆಗೆ ನ್ಯಾಯಾಲಯದ ಅನುಮತಿ ಮೇರೆಗೆ ವಶಕ್ಕೆ ಪಡೆಯಲಾಗಿದೆ.

ಸ್ಥಳಕ್ಕೆ ಚಿಕ್ಕಬಳ್ಳಾಪುರ ಉಪವಿಭಾಗ ಡಿವೈಎಸ್‍ಪಿ  ಕೆ ರವಿಶಂಕರ್  ಮನೆಯನ್ನು ಶೋಧನೆ ಮಾಡಿದ್ದು 6,72,000/- ರೂಪಾಯಿಗಳ ಬೆಲೆ ಬಾಳುವ 16 ಕೆ.ಜಿ 800 ಗ್ರಾಮ್ ದಾಸ್ತಾನು ಮಾಡಿದ್ದು ಮಾದಕ ಪದಾರ್ಥವಾದ ಗಾಂಜಾವನ್ನು ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.
Published by: MAshok Kumar
First published: September 22, 2020, 7:23 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading