HOME » NEWS » District » CHIKKABALLAPURA ADMINISTRATION REMOVES YESU CROSSES FROM KAPALI GUDDA IN CHIKKABALLAPURA SNVS

ಚಿಕ್ಕಬಳ್ಳಾಪುರದ ಕಪಾಲ ಬೆಟ್ಟದಲ್ಲಿ ನಿರ್ಮಿಸಿದ್ದ ಏಸು ಶಿಲುಬೆ ತೆರವು

ಚಿಕ್ಕಬಳ್ಳಾಪುರದ ಸೊಸೆಪಾಳ್ಯ-ಅರಿಕೆರೆ ಮಧ್ಯೆ ಸರ್ಕಾರಿ ಜಮೀನಿನಲ್ಲಿ ಅಕ್ರಮವಾಗಿ ಸ್ಥಾಪಿಸಲಾಗಿದ್ದ ಏಸು ಶಿಲುಬೆಗಳನ್ನ ಕೋರ್ಟ್ ಆದೇಶದನ್ವಯ ಜಿಲ್ಲಾಡಳಿತ ತೆರವುಗೊಳಿಸಿತು. ಪ್ರತಿರೋಧಿಸಿದ ಸ್ಥಳೀಯರ ಮನವೊಲಿಸಿ ಈ ಶಿಲುಬೆಗಳನ್ನ ಸಮೀಪದ ಚರ್ಚ್ಗೆ ಸಾಗಿಸಲಾಯಿತು.

news18-kannada
Updated:September 23, 2020, 1:40 PM IST
ಚಿಕ್ಕಬಳ್ಳಾಪುರದ ಕಪಾಲ ಬೆಟ್ಟದಲ್ಲಿ ನಿರ್ಮಿಸಿದ್ದ ಏಸು ಶಿಲುಬೆ ತೆರವು
ಚಿಕ್ಕಬಳ್ಳಾಪುರದ ಸೊಸೆಪಾಳ್ಯದ ಬಳಿಯ ಕಪಾಲಿ ಬೆಟ್ಟದಲ್ಲಿರುವ ಏಸು ಶಿಲುಬೆಗಳು
  • Share this:
ಚಿಕ್ಕಬಳ್ಳಾಪುರ(ಸೆ. 23): ತಾಲ್ಲೂಕಿನ ಅರಿಕೆರೆಯ ಸರ್ವೆ ನಂಬರ್ 10 ರಲ್ಲಿ ಸುಮಾರು 170 ಎಕರೆ ಅರಣ್ಯ ಪ್ರದೇಶದಲ್ಲಿ ಅಕ್ರಮವಾಗಿ ಪ್ರತಿಷ್ಠಾಪನೆ ಮಾಡಲಾಗಿದ್ದ ಏಸು ಕ್ರಿಸ್ತನ ಶಿಲುಬೆಯನ್ನ ಜಿಲ್ಲಾಡಳಿತ ತೆರವು ಮಾಡಿಸಿದೆ. ಸೊಸೆಪಾಳ್ಯ ಮತ್ತು ಅರಿಕೆರೆ ಮಧ್ಯದಲ್ಲಿ ಅಕ್ರಮವಾಗಿ ಏಸು ಶಿಲುಬೆ ಪ್ರತಿಷ್ಠಾಪನೆ ಮಾಡಿದ್ದರ ಬಗ್ಗೆ ದೂರು ಬಂದ‌ ಹಿನ್ನೆಲೆ ಬಿಗಿ ಪೊಲೀಸ್ ಬಂದೋಬಸ್ತ್ ನಲ್ಲಿ ಬೆಳ್ಳಂಬೆಳಗ್ಗೆಯೇ ತೆರವು ಕಾರ್ಯಾಚರಣೆ ನಡೆಸಲಾಯಿತು. ಶಿಲುಬೆ ತೆರವಿಗೆ ಸ್ಥಳೀಯರ ವಿರೋಧ ವ್ಯಕ್ತವಾದರೂ ಕೋರ್ಟ್ ಆದೇಶದಂತೆ ಜಿಲ್ಲಾಡಳಿತ ತೆರವು ಕಾರ್ಯ ಮಾಡಿದೆ.

ಸದರಿ ಜಮೀನು ಸರ್ಕಾರದ ಸ್ವಾಧೀನದಲ್ಲಿದ್ದು ಗೋಮಾಳ ಪ್ರದೇಶದಲ್ಲಿ ಗುಡ್ಡಗಾಡು ಪ್ರದೇಶದ ಮೇಲೆ ಏಸುವಿನ ಶಿಲುಬೆಗಳನ್ನ ಪ್ರತಿಷ್ಠಾಪನೆ ಮಾಡಲಾಗಿತ್ತು, ಸಾರ್ವಜನಿಕರಿಂದ ತೀವ್ರ ವಿರೋಧ ವ್ಯಕ್ತವಾದ ಬೆನ್ನಲ್ಲೇ ಜಿಲ್ಲಾಡಳಿತ ಪರಿಶೀಲಿಸಿ ಸೂಕ್ತ ಕ್ರಮಕ್ಕೆ ಸೂಚನೆ ನೀಡಿತ್ತು. ಇದರ ವಿರುದ್ದ ಉಚ್ಚ ನ್ಯಾಯಾಲಯದ ಮೆಟ್ಟಿಲು ಏರಿದ್ದ ಸಾರ್ವಜನಿಕರ ಮನವಿ ಪುರಸ್ಕರಿಸಿದ ಉಚ್ಚ ನ್ಯಾಯಾಲಯ, ಏಸು ಶಿಲುಬೆಗಳಿರುವ ಜಾಗ ಸರ್ಕಾರಕ್ಕೆ ಸೇರಿದ ಭೂಮಿ ಎಂದು ಆದೇಶ ನೀಡಲಾಯಿತು. ಅದರ ಅನ್ವಯ, ಜಿಲ್ಲಾಡಳಿತವು ಸದರಿ ಜಮೀನಿನಲ್ಲಿ ಸ್ಥಾಪಿಸಲಾಗಿದ್ದ ಏಸು ಶಿಲುಬೆಗಳನ್ನ ತೆರವು ಗೊಳಿಸುವಂತೆ ಕ್ರೈಸ್ತ ಸಮುದಾಯದ ಧರ್ಮಗುರುಗಳಿಗೆ ಮನವಿ ಮಾಡಿತ್ತು.

ಇದನ್ನೂ ಓದಿ: Mysuru Dasara 2020: ಮೈಸೂರು ದಸರಾ; ಅಂಬಾರಿ ಹೊರಲು ಗಜಪಡೆಯ ಹೊಸ ಕ್ಯಾಪ್ಟನ್ ಅಭಿಮನ್ಯು ಸಜ್ಜು

ಚಿಕ್ಕಬಳ್ಳಾಪುರ ನಗರದ ಸೇಂಟ್ ಫ್ರಾನ್ಸಿಸ್ ಕ್ಸೇವಿಯರ್ ಚರ್ಚ್​ನ ಫಾದರ್ ಚೌರಿ ಮುತ್ತು ಅವರು ಈ ಕಪಾಲ ಬೆಟ್ಟದಲ್ಲಿ ಏಸು ಶಿಲುಬೆಗಳನ್ನ ಸ್ಥಾಪಿಸಿದ್ದರೆನ್ನಲಾಗಿದೆ. ಹಲವಾರು ವರ್ಷಗಳಿಂದ ನಾವು ಇಲ್ಲಿ ಪ್ರಾರ್ಥನೆ ಸಲ್ಲಿಸುತ್ತಾ ಬಂದಿದ್ದೇವೆ ಎಂದು ಇಲ್ಲಿನ ಸ್ಥಳೀಯ ಕ್ರೈಸ್ತ ಸಮುದಾಯದವರು ಹೇಳುತ್ತಾರೆ.. ಶಿಲುಬೆಗಳನ್ನ ತೆರವುಗೊಳಿಸಲು ಸಾರ್ವಜನಿಕರು ವಿರೋಧಿಸಿದ್ದರು. ಕೋರ್ಟ್ ಆದೇಶದಂತೆ ತೆರವುಗೊಳಿಸಲು ನೋಟೀಸ್ ಬಂದಿತ್ತು. ಇದಕ್ಕೆ ಉತ್ತರ ನೀಡದ ಹಿನ್ನೆಲೆಯಲ್ಲಿ ಜಿಲ್ಲಾಡಳಿತವು ಇಂದು ಬೆಳಗ್ಗೆಯೇ ತೆರವು ಕಾರ್ಯಾಚರಣೆ ಮಾಡಿದೆ.

ಇದನ್ನೂ ಓದಿ: ಚಾಮರಾಜನಗರ: ಚಾಮುಲ್ ಅಕ್ರಮ ನೇಮಕಾತಿ ತನಿಖಾ ವರದಿ ಸಲ್ಲಿಸಿ 6 ತಿಂಗಳಾದರೂ ಕ್ರಮವಿಲ್ಲ

ಇದೇ ರೀತಿ ಕೆಲ ದಿನಗಳ ಹಿಂದೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲ್ಲೂಕಿನ ದೊಡ್ಡಸಾಗರಹಳ್ಳಿ ಬೆಟ್ಟದಲ್ಲಿ ಪ್ರತಿಷ್ಠಾಪನೆ ಮಾಡಿದ್ದ ಏಸು ಕ್ರಿಸ್ತನ ಪ್ರತಿಮೆಯನ್ನೂ ತೆರವು ಮಾಡಲಾಗಿತ್ತು. ಏಸು ಪ್ರತಿಮೆ ಪ್ರತಿಷ್ಠಾಪನೆ ವಿವಾದ ತಾರಕಕ್ಕೇರಿ ರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗಿದ್ದರಿಂದ ಎಲ್ಲಾ ಮುಂಜಾಗ್ರತಾ ಕ್ರಮವಾಗಿ ಜಿಲ್ಲಾಡಳಿತ ಕೋರ್ಟ್ ಆದೇಶದಂತೆ ಸ್ಥಳೀಯರ ವಿರೋಧದ ನಡುವೆಯೂ ಏಸು ಕ್ರಿಸ್ತನ ಶಿಲುಬೆ ತೆರವು ಗೊಳಿಸಲಾಯಿತು. ಸಾರ್ವಜನಿಕರ ಮನ ವೊಲಿಸಿ ಶಿಲುಬೆಗಳನ್ನ ಸ್ಥಳೀಯ ಚರ್ಚ್​ಗೆ ಹಸ್ತಾಂತರ ಮಾಡಲಾಯಿತು.

ವರದಿ: ನವೀನ್ ಕುಮಾರ್
Published by: Vijayasarthy SN
First published: September 23, 2020, 1:40 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories