Chikkaballapur Tourism: ಮಳೆಯಿಂದ ಕಂಗೊಳಿಸುತ್ತಿದೆ ಚಿಕ್ಕಬಳ್ಳಾಪುರ; ಬೆಂಗಳೂರಿನ ಬಗಲಲ್ಲೇ ಇವೆ ಈ ಪ್ರವಾಸಿ ತಾಣಗಳು

ಬಯಲುಸೀಮೆ ಜಿಲ್ಲೆಗಳಾದ ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ಕೋಲಾರ, ರಾಮನಗರಗಳು ಮಲೆನಾಡಿನಂತಾಗಿವೆ. ಕಲ್ಲುಬಂಡೆಗಳಿಂದ ಆವೃತ್ತವಾಗಿದ್ದ ಇಲ್ಲಿನ ಬೆಟ್ಟಗಳು ಉತ್ತಮ ಮಳೆಯ ಪರಿಣಾಮ ಹಸಿರಿನ ಕಾನನದಂತೆ ಕಾಣುತ್ತಿದೆ. ಪ್ರವಾಸಿಗರನ್ನು ಕೈ ಬೀಸಿ ಕರೆಯುತ್ತಿದೆ.

ಚಿಕ್ಕಬಳ್ಳಾಪುರದ ಪ್ರವಾಸಿತಾಣಗಳು

ಚಿಕ್ಕಬಳ್ಳಾಪುರದ ಪ್ರವಾಸಿತಾಣಗಳು

  • Share this:
    ಚಿಕ್ಕಬಳ್ಳಾಪುರ: ಸದಾ ಬಿಸಿಲಿನ ತಾಪದಿಂದ ಕೂಡಿರುತ್ತಿದ್ದ ಬಯಲುಸೀಮೆ ಜಿಲ್ಲೆಗಳು ಹಸಿರಿನಿಂದ ಕಂಗೊಳಿಸುತ್ತಿದೆ. ಸತತವಾಗಿ ‌ಸುರಿಯುತ್ತಿರುವ ಮಳೆಗೆ (Rain) ಬಯಲುಸೀಮೆ ಜಿಲ್ಲೆಗಳಾದ ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ಕೋಲಾರ, ರಾಮನಗರಗಳು ( Bengaluru, Bangalore Rural, Chikkaballapur, Kolar and Ramanagara) ಮಲೆನಾಡಿನಂತಾಗಿವೆ. ಕಲ್ಲುಬಂಡೆಗಳಿಂದ ಆವೃತ್ತವಾಗಿದ್ದ ಇಲ್ಲಿನ ಬೆಟ್ಟಗಳು ಉತ್ತಮ ಮಳೆಯ ಪರಿಣಾಮ ಹಸಿರಿನ ಕಾನನದಂತೆ ಕಾಣುತ್ತಿದೆ. ಜಲಧಾರೆಗಳಿಗೆ ಜೀವಕಳೆ ಬಂದಿದೆ. ಪ್ರವಾಸಿಗರಿಗೆ ಬಯಲುಸೀಮೆಯ ತಾಣಗಳ ಕೈಬೀಸಿ ಕರೆಯುತ್ತಿವೆ. ಕೆರೆ-ಕುಂಟೆಗಳು ತುಂಬಿದ್ದು ಪಕ್ಷಿಸಂಕುಲಗಳ ಚಿಲಿಪಿಲಿ ಕಾಣಬಹುದಾಗಿದೆ. ಸಿಕ್ಕ ಅವಕಾಶದಲ್ಲಿ ಒಂದೊಮ್ಮೆ ಈ ತಾಣಗಳ ಕಣ್ತುಂಬಿಕೊಳ್ಳೋಣ ಬನ್ನಿ‌ ಎನ್ನುತ್ತಿದ್ದಾರೆ ಪ್ರವಾಸಿಗರು.

    ಬೆಟ್ಟಗಳಿಗೆ ಹಸಿರಿನ ಹೊಂದಿಕೆ : ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ ಜಿಲ್ಲೆಗಳ ವ್ಯಾಪ್ತಿಯಲ್ಲಿರುವ ನಂದಿಬೆಟ್ಟ, ಆವಲಬೆಟ್ಟ, ಸ್ಕಂದಗಿರಿ, ಚನ್ನಗಿರಿ, ಮಾಕಳಿ ಸೇರಿ ಬಹುತೇಕ ಬೆಟ್ಟಗಳು ಕಲ್ಲುಬಂಡೆಗಳಿಂದ ಆವೃತ್ತವಾಗಿತ್ತು.ಕಳೆದ ಕೆಲ ತಿಂಗಳಿಂದ ಸುರಿಯುತ್ತಿರುವ ಬಾರಿ ಮಳೆಯಿಂದ ಬೆಟ್ಟಗಳಲ್ಲಿ ಪಾಚಿ, ಸಣ್ಣಗಿಡ, ಮರಗಳು ಹಾಗೂ ಒಣಗಿದ ಗಿಡಗಳು ಚಿಗುರಿ ಕಾಡುಗಳಂತೆ ಕಂಗೊಳಿಸುತ್ತಿವೆ. ಜತೆಗೆ ಇಡೀ ಬೆಟ್ಟಕ್ಕೆ ಹಸಿರು ಉಡಿಸಿದಂತೆ ಕಾಣುತ್ತಿದೆ. ಬೆಂಗಳೂರು ನಗರಕ್ಕೆ ‌ಹೊಂದಿಕೊಂಡಿರುವುದರಿಂದ ಎಲ್ಲೆಡೆಯಿಂದ ಪ್ರವಾಸಿಗರ ಸೆಳೆಯುತ್ತಿದೆ.

    ಪ್ರಮುಖ ನದಿಗಳಿಗೆ ‌ಮರುಜೀವ: ನಂದಿಬೆಟ್ಟ, ಚನ್ನಗಿರಿ ಬೆಟ್ಟಗಳಲ್ಲಿ 5 ನದಿಗಳ ಉಗಮವಾಗುತ್ತವೆ. ನಂತರ ಮುಂದಿನ ಕೆರೆಗಳನ್ನು ತುಂಬಿಸಿಕೊಂಡು ಹರಿಯುತ್ತವೆ.ಈ ಬಾರಿ ಮಳೆಯಿಂದ ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಕೆರೆಗಳು ತುಂಬಿ ತುಳುಕುತ್ತಿವೆ.ಅನೇಕ ವರ್ಷಗಳಿಂದ ತುಂಬಿರದ ಕೆರೆಗಳು ಈ ಬಾರಿ ತುಂಬಿ ಕೋಡಿ ಹರಿದಿರುವ ಉದಾಹರಣೆಗಳು ಇದೆ.ಕೆರೆಗಳು ತುಂಬಿದರ ಪರಿಣಾಮವಾಗಿ ಪಕ್ಷಿಗಳು ಕೆರೆಗಳ ಕಡೆಗೆ ಧಾವಿಸುತ್ತಿದ್ದು ಕೆರೆಗಳು ಪಕ್ಷಿಧಾಮಗಳಂತೆ ಕಂಗೊಳಿಸುತ್ತಿವೆ.

    ಎಚ್ಎನ್ ವ್ಯಾಲಿ ಬಲ: ಜಿಲ್ಲೆಯ ಕೆಲ ಕೆರೆಗಳು ಚಿಕ್ಕಬಳ್ಳಾಪುರದ ಕೆಲ ಕೆರೆಗಳಿಗೆ ಎಚ್ ಎನ್ ವ್ಯಾಲಿ ಮೂಲಕ ಬೆಂಗಳೂರಿನ ಸಂಸ್ಕರಿಸಿದ ನೀರುಹರಿದು ಬಂದಿದೆ.ಇದರಿಂದ ಬರಿದಾಗಿದ್ದ ಕೆರೆಗಳ ಅಂತರ್ಜಲದ ಮಟ್ಟ ಕೊಂಚ ಸುಧಾರಿಸಿದೆ‌.ಜತೆಗೆ ಜಿಲ್ಲೆಗಳಲ್ಲಿನ ಉತ್ತಮ ಮಳೆಯಿಂದ ಕೆರೆಗಳ ಅಂದ ಹೆಚ್ಚಿದ್ದು ಮೀನುಗಾರಿಕೆ,ವಾಯುವಿಹಾರಕ್ಕೆ ಅನುಕೂಲಕರ ವಾತವರಣ ನಿರ್ಮಾಣವಾಗಿದೆ.

    ಹೆದ್ದಾರಿಗಳಿಗೆ ಹಸಿರಿನ ತೋರಣ: ಬೆಂಗಳೂರು ಹಾಗೂ ಹಿಂದೂಪುರ ಹೆದ್ದಾರಿ ಹಾಗೂ ದೊಡ್ಡಬಳ್ಳಾಪುರದಿಂದ ಚಿಕ್ಕಬಳ್ಳಾಪುರ ಹೆದ್ದಾರಿ ಸೇರಿದಂತೆ ಪ್ರಮುಖ ‌ಹೆದ್ದಾರಿಗಳಲ್ಲಿ ಉತ್ತಮ ಮಳೆಯ ಪರಿಣಾಮವಾಗಿ ಮರಗಿಡಗಳು ಹರಿಸಿನಿಂದ ಕಂಗೊಳಿಸುತ್ತಿದೆ‌.ವಿದ್ಯುತ್ ಕಂಬ,ಬೋರ್ಡ್ ಗಳಿಗೆ ಬಳಿಗಳು ಹಬ್ಬಿದೆ.ಇದು ವಾಹನಗಳು ತೆರಳುವಾಗ ತಂಪಾದ ಗಾಳಿ ನೀಡುವುದರ ಜತೆಗೆ ತೋರಣದಂತೆ ಕಾಣುತ್ತಿದೆ.

    ಡ್ಯಾಂಗಳು ಭರ್ತಿ: ಮಳೆಗಾಲ ಆರಂಭವಾಗುತ್ತಿದ್ದಂತೆ ಜಲಧಾರೆಗಳಿಗೆ ಮರುಜೀವ ಸಿಕ್ಕಂತಾಗುತ್ತದೆ.ಕಳೆದ ಬಾರಿಗಿಂತ ಈಬಾರಿ ಬಯಲುಸೀಮೆ ಜಿಲ್ಲೆಗಳಲ್ಲಿ ಉತ್ತಮ ಮಳೆಯಾಗಿದೆ.ಇದರಿಂದ ಜಲಪಾತಗಳು ನಿರ್ಮಾಣವಾಗಿವೆ.ಜತೆಗೆ ಜಿಲ್ಲೆಯ ಗಡಿಭಾಗದಲ್ಲಿನ ಚನ್ನಗಿರಿ ಪಾಲ್ಸ್ ಧುಮುಕುವ ಅಂದ ಹೆಚ್ಚಿದೆ.ಜತೆಗೆ ಮಂಚೇನಹಳ್ಳಿ ಜಲಾಶಯವು ತುಂಬಿದ್ದು ಕಂಗೊಳಿಸುತ್ತಿದೆ.ಬೆಟ್ಟಗಳ ಬಂಡೆಗಳ ಮೇಲೆ ಬಿದ್ದು ನೀರು ಹರಿದು ಸುಂದರ ಜಲಧಾರೆಗಳಂತೆ ಕಾಣ್ತುಂಬುತ್ತಿವೆ. ಪ್ರವಾಸಿ ತಾಣದಲ್ಲಿ ಜೋಪಾನ.ಬೆಟ್ಟ,ಗುಡ್ಡ,ಕೆರೆಗಳು ಹಸಿರುಮಯವಾಗಿದೆ.ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿದೆ.ಎಲ್ಲೆಡೆಯಿಂದ ಪ್ರವಾಸಿಗರು ಬಯಲುಸೀಮೆಯ ಜಿಲ್ಲೆಗಳತ್ತ ಬರುತ್ತಿದ್ದಾರೆ.ಪ್ರವಾಸಿಗರು ಬೆಟ್ಟಗಳಲ್ಲಿ ಸೆಲ್ಪಿ ತೆಗೆಯುವಾಗ ,ಬೆಟ್ಟ ಏರುವಾಗ ಜಾರುವ ಸಂಭವವಿದ್ದು ಎಚ್ಚರಿಕೆ ವಹಿಸಬೇಕಾಗಿದೆ.ಜತೆಗೆ ಮಳೆ ಮತ್ತೆ ಮುಂದುವರೆದಿದ್ದು ನೆಗಡಿ,ಜ್ವರದಂತಹ ಕಾಯಿಲೆಗಳಿಗೆ ದಾರಿ ಮಾಡಿಕೊಡುವ ಸಂಭವವಿದ್ದು ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕಾಗಿದೆ‌.

    ಇದನ್ನೂ ಓದಿ: Gol Gumbaz ಸ್ಮಾರಕ ವೀಕ್ಷಿಸಿದ ಡಾ.ವೀರೇಂದ್ರ ಹೆಗ್ಗಡೆ: ಫೋಟೋಗಳಲ್ಲಿ ನೋಡಿ

    ಬೆಂಗಳೂರು ನಗರದಿಂದ ೬೫ಕಿಮೀ ದೂರದಲ್ಲಿ ನಂದಿಬೆಟ್ಟ,೬೦ಕಿಮೀದೂರದಲ್ಲಿ ಚನ್ನಗಿರಿ ಫಾಲ್ಸ್ ,೫೮.೭ ಕಿಮೀ ದೂರದಲ್ಲಿ ಘಾಟಿ ಜಲಾಶಯ, ೩೬.೩ ಕಿಮೀ ನಲ್ಲಿ ಮಚ್ಚೇನಹಳ್ಳಿ ಡ್ಯಾಂ,೫೧.೮ಕಿಮೀ ದೂರದಲ್ಲಿ ಶಿವಗಂಗೆ ,೫೭.೩ ಕಿಮೀ ದೂರದಲ್ಲಿ ಮಾಕಳಿ ಮಲ್ಲೇಶ್ವರ ದೇವಾಲಯವಿದೆ.ಇದರ ಜತೆಗೆ ಆವಲಬೆಟ್ಟ,ಕೊಯಿರಾ ಬೆಟ್ಟ, ಸ್ಕಂದಗಿರಿ ಗಳಂತಹ ತಾಣಗಳ ಹಸಿರಿನಿಂದ ನಯನ ಮನೋಹರವಾಗಿ ಕಾಣುತ್ತಿವೆ.
    ಸದಾ ಬಿಸಿಲಿನಿಂದ ಕೂಡಿರುತ್ತಿದ್ದ ಬಯಲುಸೀಮೆ ಜಿಲ್ಲೆಗಳಲ್ಲಿ ನಿರಂತರ ಮಳೆಯಾಗುತ್ತಿದೆ. ಎಲ್ಲೆಡೆ ಮಲೆನಾಡಿನ ವಾತವರಣ ಸೃಷ್ಟಿಯಾಗುತ್ತಿದೆ.ಸರಕಾರ ಇಲ್ಲಿನ ಪರಿಸರದ ಉಳಿವಿಗೆ ಕ್ರಮವಹಿಸಬೇಕಾಗಿದೆ ಎಂದು ಪ್ರವಾಸಿಗ ಪ್ರತಾಪ ಹೇಳಿದರು.

    ವರದಿ: ಮನುಕುಮಾರ ಹೆಚ್ ಕೆ. 
    Published by:Kavya V
    First published: