ಚಿಕ್ಕಬಳ್ಳಾಪುರ: ಸೆ.5ರಂದು ಗೌರಿಬಿದನೂರು ತಾಲೂಕಿನ ವಾಟದಹೊಸಹಳ್ಳಿ ಬಾವಿಯಲ್ಲಿ ಮಹಿಳೆಯೊಬ್ಬರ ಶವ ಸಿಕ್ಕಿತ್ತು. ಮೃತ ಮಹಿಳೆಯನ್ನು ಫರ್ವಿನಾ ಮುಬಾರಕ್ ಎಂದು ಗುರುತಿಸಲಾಗಿತ್ತು. ಮೇಲ್ನೋಟಕ್ಕೆ ಆತ್ಮಹತ್ಯೆಯಂತೆ ಕಾಣುತ್ತಿದ್ದ ಪ್ರಕರಣದ ಸತ್ಯಾಸತ್ಯತೆಯನ್ನು ಪೊಲೀಸರು ಬಯಲಿಗೆಳೆದಿದ್ದಾರೆ. ಮೂವರು ಗಂಡಂದಿರೂ ಇಲ್ಲವಾಗಿ ಫರ್ವಿನಾ ತವರು ಮನೆ ಸೇರಿದ್ದಳು. ಜೀವನದಲ್ಲಿ ಜಿಗುಪ್ಸೆಯಿಂದ ಆತ್ಮಹತ್ಯೆಗೆ ಶರಣಾಗಿದ್ದಾಳೆ ಎಂದೇ ಎಲ್ಲರೂ ಭಾವಿಸಿದ್ದರು. ಆದರೆ ಫರ್ವಿನಾ ಸಾವು ಆತ್ಮಹತ್ಯೆಯಲ್ಲ ಕೊಲೆ ಎಂಬ ಅನುಮಾನ ಪೊಲೀಸರ ಮೂಗಿ ಬಡಿದಿತ್ತು. ಪ್ರಕರಣದ ಬೆನ್ನೆತ್ತಿ ಹೋದ ಪೊಲೀಸರ ಫರ್ವಿನಾಳ ತಾಯಿ ಹಾಗೂ ದೊಡ್ಡಪ್ಪನ ಅಸಲಿಯತ್ತು ಬಯಲಾಗಿದೆ.
ಗಂಡನನ್ನು ಬಿಟ್ಟು ಪ್ರೇಮಿ ಬಳಿಗೆ ಬಂದು ಬಿಟ್ಟಿದ್ದಳು
ಫರ್ವಿನಾಳನ್ನು ಕೆಲ ವರ್ಷಗಳ ಹಿಂದೆ ಬಲವಂತವಾಗಿ ಅವರದ್ದೇ ಸಮುದಾಯದಲ್ಲಿ ಮದುವೆ ಮಾಡಿಕೊಡಲಾಗಿತ್ತು. ಆದರೆ ಫರ್ವಿನಾ ತನ್ನ ಗ್ರಾಮ ಮಡಿವಾಲದ ಶಿವಪ್ಪ ಎಂಬುವವರನ್ನು ಪ್ರೀತಿಸುತ್ತಿದ್ದಳು. ಹೀಗಾಗಿ ಮದುವೆಯ ಬಳಿಕ ಪತಿಯನ್ನು ತೊರೆದು ಪ್ರೇಮಿ ಶಿವಪ್ಪನ ಬಳಿ ಬಂದು ಬಿಟ್ಟಿದ್ದಳು. ಶಿವಪ್ಪನನ್ನು ಮದುವೆಯಾಗಿ ತನ್ನ ಹೆಸರನ್ನು ಶಿಲ್ಪಾ ಎಂದು ಬದಲಿಸಿಕೊಂಡು ಬದುಕತೊಡಗಿದ್ದಳು. ಆದರೆ ಆಕೆ ಬಾಳಲ್ಲಿ ವಿಧಿ ಬೇರೆಯದ್ದನ್ನೇ ಬಯಸಿತ್ತು. 2ನೇ ಪತಿ ಶಿವಪ್ಪ ಅನಾರೋಗ್ಯದಿಂದ ಸಾವಿನ ಮನೆ ಸೇರಿಬಿಟ್ಟ. 2 ಮದುವೆಯಾದರೂ ಫರ್ವಿನಾ ಒಂಟಿಯಾಗಿ ಬಿಟ್ಟಳು.
3ನೇ ಮದುವೆಯೂ ಕೈ ಹಿಡಿಯಲಿಲ್ಲ
2ನೇ ಗಂಡ ಶಿವಪ್ಪ ಮೃತಪಟ್ಟ ನಂತರ ಫವಿರ್ನಾಗೆ ವಿನಯ್ಕುಮಾರ್ ಎಂಬಾತನ ಪರಿಚಯವಾಗಿತ್ತು. ವಿಧವೆ ಫರ್ವಿನಾಳ ಮೇಲೆ ಕರುಣೆಯಿಂದಲೋ ಪ್ರೇಮದಿಂದಲೋ ವಿನಯ್ ಆಕೆಯನ್ನು ಮದುವೆಯಾಗಲು ಮುಂದಾದ. ಫರ್ವಿನಾ ಮತ್ತೆ ಪ್ರೀತಿ-ಮದುವೆಯಲ್ಲಿ ನಂಬಿಕೆ ಇಟ್ಟು ಹೊಸ ಬಾಳಿಗೆ ಕಾಲಿಟ್ಟಳು. ವಿನಯ್ ಕುಮಾರನನ್ನು ಫರ್ವಿನಾ 3ನೇ ಮದುವೆಯಾದಳು. ಆದರೆ ವಿಧಿ ಮತ್ತೆ ಆಕೆಯನ್ನು ನೆಮ್ಮದಿಯಾಗಿ ಬದುಕಲು ಬಿಡಲೇ ಇಲ್ಲ. 3ನೇ ಪತಿ ವಿನಯ್ ಅಪಘಾತದಲ್ಲಿ ಸತ್ತೇ ಹೋದ. ಫರ್ವಿನಾಗೆ ಮತ್ತೆ ಗಂಡನ ಸಾವು, ಮತ್ತೆ ವಿಧವೆ ಪಟ್ಟ, ಮತ್ತೆ ಒಂಟಿ ಬಾಳು ಎದುರಾಗಿತ್ತು.
ದೊಡ್ಡಪ್ಪನ ಹಾಸಿಗೆಯಲ್ಲಿ ತಾಯಿ..!
ಮೂವರು ಗಂಡಂದಿರು ಇಲ್ಲವಾಗಿ ಕೊನೆಗೆ ನೊಂದ ಫರ್ವಿನಾ ತವರು ಮನೆ ಸೇರಿದ್ದಳು. ಅಬಲೆ ಹೆಣ್ಣಿಗೆ ತವರೇ ಆಸರೆ ಎಂದು ಭಾವಿಸಿದ್ದಳು. ಜೀವವಿಲ್ಲದ ಶವದಂತೆ ಬದುಕಲಾರಂಭಿಸಿದಳು. ಆದರೆ ತವರು ಮನೆಯೂ ಆಕೆಗೆ ನರಕವಾಗಿ ಬಿಟ್ಟಿತು. ಹೆತ್ತ ತಾಯಿಯನ್ನು ದೊಡ್ಡಪ್ಪನ ಜೊತೆ ಬೆತ್ತಲೆಯಾಗಿರುವುದನ್ನು ನೋಡಿಯೇ ಬಿಟ್ಟಳು. ಅಲ್ಲಿಗೆ ಫರ್ವಿನಾಳಿಗೆ ಮನುಷ್ಯ ಸಂಬಂಧಗಳ ಮೇಲೆ ನಂಬಿಕೆಯೇ ಹೊರಟು ಹೋಯ್ತು.
ಇದನ್ನೂ ಓದಿ: ಸಿನಿಮೀಯ ರೀತಿಯಲ್ಲಿ Kidnap: ಪೊಲೀಸರ ವಶದಲ್ಲಿ ಭರ್ಜರಿ-KGF ಸಿನಿಮಾ ಖ್ಯಾತಿಯ ಕಲಾವಿದ
ಹೆತ್ತ ತಾಯಿಯೇ ಪ್ರಾಣ ತೆಗೆದಳು
ತಾವು ಮಾಡಿದ ಮದುವೆ ಬಿಟ್ಟು ಮತ್ತೆರೆಡು ಮದುವೆಯಾಗಿ ತವರು ಸೇರಿದ್ದ ಫರ್ವಿನಾ ಮೇಲೆ ಕುಟುಂಬಸ್ಥರಿಗೆ ಕೋಪವಿತ್ತು. ಜೊತೆಗೆ ತನ್ನ ಹಾಗೂ ಪತಿಯ ಅಣ್ಣನ ಅಕ್ರಮ ಸಂಬಂಧ ಮಗಳಿಗೆ ಗೊತ್ತಾಗಿ ಬಿಡ್ತು ಎಂದು ತಾಯಿ ಗುಲ್ಜಾರ್ ಬಾನು ಕೈ ಕೈ ಹಿಸಿಕಿಕೊಂಡಳು. ಮಗಳ ಮೂಲಕ ಎಲ್ಲಿ ಅಕ್ರಮ ಸಂಬಂಧ ಹೊರ ಜಗತ್ತಿ ಗೊತ್ತಾಗುತ್ತೋ ಎನ್ನುವ ಭೀತಿಯಲ್ಲಿ ತಾಯಿ ಹಾಗೂ ದೊಡ್ಡಪ್ಪ ಪ್ಯಾರೇಜಾನು ಇಬ್ಬರು ಸೇರಿಕೊಂಡು ಫರ್ವಿನಾಳನ್ನು ಕೊಂದೇ ಬಿಟ್ಟರು. ಆತ್ಮಹತ್ಯೆಯಂತೆ ಬಿಂಬಿಸುವ ಸಲುವಾಗಿ ಶವವನ್ನು ಬಾವಿಗೆ ತಳ್ಳಿದ್ದರು.
ಫರ್ವಿನಾಳ ದುರಂತ ಬದುಕು
ಘಟನೆ ನಡೆದ 2 ವಾರ ಎಲ್ಲವೂ ಆರೋಪಿಗಳು ಅಂದುಕೊಂಡಂತೆ ನಡೆದಿತ್ತು. ಆದರೆ ಪೊಲೀಸರ ತನಿಖೆಯಿಂದ ಆರೋಪಿಗಳ ಬಣ್ಣ ಬಯಲಾಗಿದೆ. ಪ್ರೇಮ-ಸಾವುಗಳ ಮಧ್ಯೆ ಫರ್ವಿನಾಳನ್ನು ಎಳೆದಾಡಿದ್ದ ವಿಧಿ ಕೊನೆಗೆ ಆಕೆ ತಾಯಿಯ ಕೈನಿಂದಲೇ ಉಸಿರು ನಿಲ್ಲಿಸಿಬಿಟ್ಟಿದೆ. ನೋವಿನ ಮೇಲೆ ನೋವು ತಿಂದಿದ್ದ ಫರ್ವಿನ್ ಈಗ ತಣ್ಣಗೆ ಮಲಗಿಬಿಟ್ಟಿದ್ದಾಳೆ. ಅಕ್ರಮ ಸಂಬಂಧಕ್ಕಾಗಿ ಮಗಳನ್ನೇ ಬಲಿ ಕೊಟ್ಟ ತಾಯಿ ಗುಲ್ಜಾರ್, ದೊಡ್ಡಪ್ಪ ಪ್ಯಾರೇಜಾನ್ ಕಂಬಿ ಎಣಿಸುತ್ತಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ