HOME » NEWS » District » CHIKKABALLAPUR A YOUNG GIRL DIE SUFFOCATES A FIRE THAT HAD BEEN SET INSIDE THE HOUSE NKCKB MAK

ಚಿಕ್ಕಬಳ್ಳಾಪುರ; ಚಳಿಗೆಂದು ಮನೆಯೊಳಗೆ ಹಾಕಿದ್ದ ಬೆಂಕಿಗೆ ಉಸಿರುಗಟ್ಟಿ ಯುವತಿ ಬಲಿ

news18-kannada
Updated:November 28, 2020, 7:05 AM IST
ಚಿಕ್ಕಬಳ್ಳಾಪುರ; ಚಳಿಗೆಂದು ಮನೆಯೊಳಗೆ ಹಾಕಿದ್ದ ಬೆಂಕಿಗೆ ಉಸಿರುಗಟ್ಟಿ ಯುವತಿ ಬಲಿ
ಪ್ರಾತಿನಿಧಿಕ ಚಿತ್ರ.
  • Share this:
ಚಿಕ್ಕಬಳ್ಳಾಪುರ:- ಒಂದೇ ಕುಟುಂಬದ ನಾಲ್ವರು ಉಸಿರು ಗಟ್ಟಿ ಅಸ್ವಸ್ಥರಾಗಿದ್ದು, ಓರ್ವ ಯುವತಿ ಸಾವನ್ನಪ್ಪಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆ ಗೌರಿಬಿದನೂರು ತಾಲ್ಲೂಕು ತೊಂಡೆಬಾವಿ ಹೋಬಳಿ ಮರಾಠಿ ಪಾಳ್ಯದಲ್ಲಿ ನಡೆದಿದೆ. ತುಮಕೂರು ಜಿಲ್ಲೆಯ ಕೊರಟಗೆರೆ ಮೂಲದ  ರಾಮಾಂಜಿನೇಯಲು ಮರಾಠಿ ಪಾಳ್ಯ ಗ್ರಾಮದ ಬಳಿಯ ಇಟ್ಟಿಗೆ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದ. ಕಾರ್ಮಿಕನಾಗಿದ್ದ ರಾಮಾಂಜನೆಯಲು ತನ್ನ ಪತ್ನಿ ಶಾಂತಮ್ಮ ಮತ್ತು ಮಕ್ಕಳಾದ ಅರ್ಚನಾ, ಅಂಕಿತಾರೊಂದಿಗೆ ಇಟ್ಟಿಗೆ ಪ್ಯಾಕ್ಟರಿಯವರು ನೀಡಿದ್ದ ಚಿಕ್ಕ ಕೊಠಡಿಯೊಂದರಲ್ಲಿ ವಾಸವಿದ್ದರು. ತೀವ್ರ ಚಳಿಯಿದ್ದ ಕಾರಣಸೈಕ್ಲೋನ್ ಪ್ರಭಾವದಿಂದ ಕೊಠಡಿಯಲ್ಲಿ ಎಲ್ಲ ಬಾಗಿಲು ಭದ್ರ ಪಡಿಸಿ ಚಳಿ ನಿಗ್ರಹಿಸಲು ಕೆಂಡದ ಬಿಸಿ ಹಾಕಿಕೊಂಡು ಮಲಗಿದ್ದ ಕುಟುಂಬವನ್ನ ಜವರಾಯ ಹೊಗೆ ರೂಪದಲ್ಲಿ ಬಲಿ ಪಡೆದಿದ್ದು ಮಾತ್ರ ವಿಪರ್ಯಾಸ.

ಮುದ್ದಿನ ಹಿರಿಯ ಮಗಳು ಅರ್ಚನಾ (16) ಉಸಿರುಗಟ್ಟಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾಳೆ. ಚಳಿಗೆಂದು ಹಾಕಿದ ಬೆಂಕಿ ಉರಿದ ಕಾರಣ ಆಮ್ಲಜನಕ ಕೊರತೆಯಾಗಿ ಉಸಿರಾಟದ ತೊಂದರೆಯಾಗಿ ಇಡೀ ಕೊಠಡಿಗೆ ಎಲ್ಲೂ ಕಿಟಕಿ ಇಲ್ಲದ ಕಾರಣ ಹೊಗೆ ಹೊರ ಹೋಗಲು ಸಾಧ್ಯವಾಗಲಿಲ್ಲ. ಹೀಗಾಗಿ ಅರ್ಚನಾ ಸಾವನ್ನಪ್ಪಿದ್ದಾಳೆ ಎನ್ನಲಾಗುತ್ತಿದೆ.

ಇದನ್ನೂ ಓದಿ : ಬಂಗಾಳ ಚುನಾವಣೆಗೂ ಮುನ್ನವೇ ಟಿಎಂಸಿಗೆ ಶಾಕ್; ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ ಹಿರಿಯ ನಾಯಕ ಸುಭೇಂಡು ಅಧಿಕಾರಿ

ಉಳಿದವರು ಉಸಿರಾಟದ ತೊಂದರೆಯಿಂದ ಪ್ರಜ್ನೆ ತಪ್ಪಿದ್ದರು. ಅನುಮಾನಾಸ್ಪದ ರೀತಿಯಲ್ಲಿ ಒಂದೇ ಕುಟುಂಬದ ನಾಲ್ವರು ಸಾಯುವ ಸ್ಥಿತಿಯಲ್ಲಿ ಪತ್ತೆಯಾಗಿದ್ದು ಸ್ಥಳೀಯರು ಮನೆ ಬಾಗಿಲು ಮುರಿದು ಅವರನ್ನು ಗೌರಿಬಿದನೂರು ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿದ್ದಾರೆ. ಇಡೀ ಕುಟುಂಬ ಸಾವು ಬದುಕಿನ ನಡುವೆ ಹೋರಾಡುತ್ತಿದ್ದು ಮೂವರು ಚಿಂತಾಜನಕ ಪರಿಸ್ಥಿತಿಯಲ್ಲಿದ್ದಾರೆ.

ಉಸಿರು ಕಟ್ಟಿ ಸಾವನ್ನಪ್ಪಿರುವುದರಿಂದ  ಸ್ಥಳಿಯರು ಆತಂಕ ವ್ಯಕ್ತ ಪಡಿಸಿದ್ದಾರೆ.ಸ್ಥಳಕ್ಕೆ ಮಂಚೇನಹಳ್ಳಿ ಪೋಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಕೇಸು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ತಂದೆ  ತಾಯಿ ಹಾಗೂ ಕಿರಿಯ  ಮಗಳು ಅಂಕಿತಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಇಟ್ಟಿಗೆ ಫ್ಯಾಕ್ಟರಿ ಮಾಲೀಕ ವೆಂಕಟೇಶ್ ನ್ಯೂಸ್18 ಮಾಹಿತಿ ನೀಡಿದ್ದಾರೆ.
Published by: MAshok Kumar
First published: November 28, 2020, 7:05 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading