ಮಳೆಯಿಂದ ಹಾನಿಗೊಳಗಾದ ಮನೆಗಳಿಗೆ ತಕ್ಷಣ 25 ಸಾವಿರ ರೂಪಾಯಿ ಪರಿಹಾರ ; ಸಿಎಂ ಯಡಿಯೂರಪ್ಪ 

ಇಂಜಿನಿಯರಿಂಗ್ ಕಾಲೇಜು ಸೇರಿದಂತೆ, ಎಲ್ಲಾ ಪದವಿ ಕಾಲೇಜುಗಳನ್ನು ತೆರೆಯುವುದಕ್ಕೆ ಸರ್ಕಾರ ಅನುಮತಿ ನೀಡಿದೆ. ಎಲ್ಲಾ ತಜ್ಞರ, ಹಿರಿಯರ ಸಲಹೆ ಪಡೆದು ಈ ತೀರ್ಮಾನ ಮಾಡಲಾಗಿದೆ.

ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ

ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ

  • Share this:
ಶಿವಮೊಗ್ಗ(ಅಕ್ಟೋಬರ್​. 25) : ರಾಜ್ಯದ ಉತ್ತರ ಕರ್ನಾಟಕ ಭಾಗದಲ್ಲಿ ನೆರೆಯಿಂದಾಗಿ ನೂರಾರು ಗ್ರಾಮಗಳು ಜಲಾವೃತವಾಗಿವೆ. ಜನರು ಕೂಡ ಸಂಕಷ್ಟಕ್ಕೆ ಸಿಲುಕಿದ್ದಾರೆ. ಬೆಂಗಳೂರಿನಲ್ಲಿಯೂ ಕೂಡ ನಿರೀಕ್ಷೆಗೂ ಮೀರಿದ ಮಳೆಯಿಂದಾಗಿ ಸಾಕಷ್ಟು ಅನಾಹುತವಾಗಿವೆ. ಸುಮಾರು 600 ಮನೆಗಳನ್ನು ನಾನು ಪರಿಶೀಲನೆ ನಡೆಸಿದ್ದೇನೆ. ಅನಾಹುತವಾದ ಪ್ರತಿ ಮನೆಗೆ 25 ಸಾವಿರ ರೂಪಾಯಿ ಪರಿಹಾರ ನೀಡಲು ಆದೇಶಿಸಿದ್ದೇನೆ ಎಂದು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ತಿಳಿಸಿದ್ದಾರೆ. ಶಿವಮೊಗ್ಗದಲ್ಲಿ ಮಾತನಾಡಿದ ಸಿಎಂ ಯಡಿಯೂರಪ್ಪ, ಬೆಂಗಳೂರಿನಲ್ಲಿ ನಿರೀಕ್ಷೆಗೂ ಮೀರಿದ ಮಳೆಯಿಂದಾಗಿ ಸಾಕಷ್ಟು ಅನಾಹುತವಾಗಿವೆ. ಸುಮಾರು 600 ಮನೆಗಳನ್ನು ನಾನು ಪರಿಶೀಲನೆ ನಡೆಸಿದ್ದೇನೆ. ಅನಾಹುತವಾದ ಪ್ರತಿ ಮನೆಗೆ 25 ಸಾವಿರ ರೂಪಾಯಿ ಪರಿಹಾರ ನೀಡಲು ಆದೇಶಿಸಿದ್ದೇನೆ ಎಂದು ತಿಳಿಸಿದರು. ಈಗಾಗಲೇ ಅಲ್ಲಿ ಚೆಕ್ ವಿತರಣೆ ಮಾಡುವ ಕೆಲಸ ಆರಂಭವಾಗಿದೆ ಎಂದು ಸಿಎಂ ತಿಳಿಸಿದರು.

ನಿನ್ನೆ ಬೆಳಿಗ್ಗೆಯಿಂದ ಸಂಜೆವರೆಗೆ ತೊಂದರೆಯಾದ ಮನೆಗಳಿಗೆ ಭೇಟಿ ನೀಡಿದ್ದೇನೆ. ಒಂದು ಕಡೆ ಕೋವಿಡ್ ಪರೀಕ್ಷೆ ಮತ್ತೊಂದು ಕಡೆ ನೆರೆ ಸಮಸ್ಯೆ ನಡುವೆ ಜನರಿಗೆ ಸ್ಪಂಧಿಸಬೇಕಾದುದು ಸರ್ಕಾರದ ಜವಾಬ್ದಾರಿಯಾಗಿದೆ. ಆ ಕೆಲಸವನ್ನು ಸರ್ಕಾರ ಮಾಡುತ್ತಿದೆ ಎಂದು ಅಭಿಪ್ರಾಯಪಟ್ಟರು.

ಆರ್. ಆರ್. ನಗರದ ಚುನಾವಣೆಯಲ್ಲಿ ದೊಡ್ಡ ಅಂತರದಿಂದ ನಮ್ಮ ಗೆಲುವು ನಿಶ್ಚಿತ, ಅದೇ ರೀತಿ ಶಿರಾದಲ್ಲಿಯೂ ಕೂಡ, ನೂರಕ್ಕೆ ನೂರು ನಾವು ಗೆಲ್ಲುತ್ತೇವೆ. ಈ ಹಿಂದೆ ಹೇಳಿದಂತೆ, ಎಲ್ಲಾ ಚುನಾವಣೆಗಳು ನಾವು ಗೆಲ್ಲುತ್ತೇವೆ.  ಮುಂದಿನ ದಿನಗಳಲ್ಲಿ ರಾಜ್ಯದ ಉದ್ದಗಲಕ್ಕೂ ನಾನು ತಿರುಗಾಡುತ್ತೇನೆ ಎಂದು ತಿಳಿಸಿದರು.

ರಾಜ್ಯದ ಸರ್ವಾಂಗೀಣ ಅಭಿವೃದ್ಧಿಗಾಗಿ ನಾನು ಶ್ರಮಿಸುತ್ತೇನೆ. ಜನರಿಗೆ ಸಂಕಷ್ಟ ಬಂದಾಗ ಹೆದರಿ ಕೈ ಕಟ್ಟಿ ಕೂರುವುದಿಲ್ಲ, ಜನರು ನೆಮ್ಮದಿಯಿಂದ ಬದುಕಲು ನಾನು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ಕೋವಿಡ್, ಅತಿವೃಷ್ಟಿ ಕಡಿಮೆಯಾಗಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ. ಮತ್ತೊಮ್ಮೆ ಇಂತಹ ಅನಾಹುತವಾಗದಂತೆ, ರೈತರು ಗ್ರಾಮಸ್ಥರು ನೆಮ್ಮದಿ ಜೀವನ ನಡೆಸಬೇಕೆಂದು ದೇವರಲ್ಲಿ ಪ್ರಾರ್ಥಿಸುತ್ತೇನೆ ಎಂದರು.

ಇನ್ನು ಇಂಜಿನಿಯರಿಂಗ್ ಕಾಲೇಜು ಸೇರಿದಂತೆ, ಎಲ್ಲಾ ಪದವಿ ಕಾಲೇಜುಗಳನ್ನು ತೆರೆಯುವುದಕ್ಕೆ ಸರ್ಕಾರ ಅನುಮತಿ ನೀಡಿದೆ. ಎಲ್ಲಾ ತಜ್ಞರ, ಹಿರಿಯರ ಸಲಹೆ ಪಡೆದು ಈ ತೀರ್ಮಾನ ಮಾಡಲಾಗಿದೆ. ಎಲ್ಲಾ ರೀತಿಯ ಚರ್ಚೆ ನಡೆಸಿ ನವೆಂಬರ್​ 17 ರಿಂದ ಕಾಲೇಜು ನಡೆಸಲು ಅನುಮತಿ ನೀಡಲಾಗಿದೆ. ಆದರೆ, ಯಾವುದೇ ಕಾಲೇಜುಗಳನ್ನು ತೆರೆಯಲು ಒತ್ತಡ ಹೇರುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ಪೋಷಕರು,  ತಂದೆ, ತಾಯಿಯರ ಅನುಮತಿ ಪಡೆದು, ಕಾಲೇಜಿಗೆ ಬರುವ ವಿದ್ಯಾರ್ಥಿಗಳಿಗೆ ತರಗತಿ ನಡೆಸಲು ಸೂಚಿಸಲಾಗಿದೆ ಎಂದು ತಿಳಿಸಿದರು.
Published by:G Hareeshkumar
First published: