ಪಾಪನಾಶಿ ತಾಂಡಾದಲ್ಲಿ ಕೋಳಿ ಕೂಗುವ ಹಾಗಿಲ್ಲಾ! ಕೋಳಿ ಸಾಕಿದ್ರೆ, ಮದ್ಯ ಮಾರಿದರೆ ಹಾಕ್ತಾರೆ ದಂಡ!

ಮುಖ್ಯವಾಗಿ ಇದಕ್ಕೆ ಕಾರಣ ಇಲ್ಲಿನ ದೇವರುಗಳು. ಮತ್ತು ಈ ಸಮುದಾಯದ ಗುರುಗಳ ಕಡೆ ಬೆಟ್ಟು ಮಾಡ್ತಾರೆ. ಕುಬಸಾದ್ ಮಹಾರಾಜರು, ಡಾಕುಸಾದ್ ಮಹಾರಾಜರ ಕಾಲದಿಂದಲೂ ಈ ಪದ್ದತಿ ಅಳವಡಿಸಿಕೊಂಡು ಬಂದಿದ್ದಾರಂತೆ. ಈಗಲೂ ಹಿಂದಿನ ಸಂಪ್ರದಾಯವನ್ನು ಯಾರಾದರೂ ಮುರಿದರೆ ಅವರಿಗೆ ದಂಡವನ್ನು ಸಹ ಹಾಕ್ತಾರೆ.

ಗದಗ ತಾಲೂಕಿನಲ್ಲಿ ಪಾಪನಾಶಿ ತಾಂಡ

ಗದಗ ತಾಲೂಕಿನಲ್ಲಿ ಪಾಪನಾಶಿ ತಾಂಡ

  • Share this:
ಗದಗ:  ಹಳ್ಳಿಗಳಲ್ಲಿ ಇವತ್ತಿಗೂ ಕೋಳಿ ಕೂಗಿದ್ರೆ ಬೆಳಗಾಯಿತು ಅಂತಾನೇ ಅರ್ಥ, ಆದ್ರೆ, ಗದಗ ಜಿಲ್ಲೆಯ ಪಾಪನಾಸಿ ತಾಂಡಾದಲ್ಲಿ ಕೋಳಿ ಕೂಗು ಕೇಳಲ್ಲಾ. ಅಯ್ಯೋ ಯಾಕೇ ಅಷ್ಟೊಂದು ನಿರ್ಬಂಧ ಅಂತೀರಾ. ಅದಕ್ಕೂ ಒಂದು ಕಾರಣ ಇದೆ. ಗ್ರಾಮದಲ್ಲಿ ನೂರಾರು ವರ್ಷಗಳಿಂದ ಕೋಳಿ ಕೂಗಿಯೇ ಇಲ್ಲಾ. ಯಾಕಂದರೆ ಈ ಪುಟ್ಟ ಗ್ರಾಮದಲ್ಲಿ ಕೋಳಿ ಸಾಕುವುದಕ್ಕೆ ನಿಷೇಧ ಹೇರಲಾಗಿದೆ.

ಹೌದು, ಈಗ ಹಕ್ಕಿ ಜ್ವರದ ಭೀತಿ ಹೆಚ್ಚಾಗಿದೆ. ಹೀಗಾಗಿ ದೇಶಾದ್ಯಂತ ಕೋಳಿಗಳನ್ನು ಸಾಯಿಸುತ್ತಿದ್ದಾರೆ. ಹಾಗೇ ಕೋಳಿ ಸಾಕಿದವರು ಕೂಡ ಭಯ ಪಡ್ತಾಯಿದ್ದಾರೆ. ಆದರೆ, ನಾವು ಹೇಳ್ತಾಯಿರುವ ಈ ಗ್ರಾಮದಲ್ಲಿ ಆ ಭಯ ಇಲ್ಲವೇ ಇಲ್ಲಾ. ಯಾಕಂದರೆ ಈ ಗ್ರಾಮದಲ್ಲಿ ಕೋಳಿಯನ್ನು ಸಾಕುವಾಗಿಯೇ ಇಲ್ಲಾ.

ಗದಗ ತಾಲೂಕಿನಲ್ಲಿ ಪಾಪನಾಶಿ ತಾಂಡದಲ್ಲಿ ಅಪ್ಪಿತಪ್ಪಿ ನೀವು ಅಲ್ಲಿಗೆ ಹೋದರೆ ಅಲ್ಲಿ ಒಂದೇ ಒಂದು ಕೋಳಿ ಕಾಣೋದಿಲ್ಲಾ. ಹಿಂದಿನ ಕಾಲದಲ್ಲಿ ಕೋಳಿ ಕೂಗಿದ ಮೇಲೆ‌ ನಮ್ಮ‌ ರೈತರು ದಿನದ ಬೆಳಗಿನ ಜಾವ ಆಯ್ತು ಅಂತ ಎದ್ದು ತಮ್ಮ ದಿನನಿತ್ಯದ ಕೆಲಸಕ್ಕೆ ಅಣಿಯಾಗ್ತಿದ್ದರು. ಈಗಲೂ ಸಹ ಕೋಳಿ ಸಾಕುವುದು ಅಂದರೆ ಅದೊಂದು ದೊಡ್ಡ ಬ್ಯುಸಿನೆಸ್ ಸಹ. ಆದರೆ ಈ ಗ್ರಾಮದಲ್ಲಿ ಮಾತ್ರ ಕೋಳಿ ಕಾಣೋದಿಲ್ಲಾ. ಯಾರೊಬ್ಬರೂ ಕೋಳಿ ಸಾಕೋದಿಲ್ಲಾ. ಇಡಿ ಊರಿಗೇ ಊರೇ ಹುಡುಕಿದರೂ ಒಂದೇ ಒಂದು ಕೋಳಿ ಮರಿಯೂ ಕಾಣೋದಿಲ್ಲಾ. ಯಾಕೆಂದರೆ ಈ ಊರಿನಲ್ಲಿ ಕೋಳಿ ಸಾಕುವುದಕ್ಕೆ ನಿಷೇಧ ಹೇರಲಾಗಿದೆ. ಅದಕ್ಕೂ ಒಂದು ಕಾರಣ ಇದೆ. ಹಿಂದೆ ಪ್ಲೇಗ್ ಎಂಬ ಮಹಾಮಾರಿ ಕಾಯಿಲೆ ಬಂದಾಗ ಕೋಳಿ ಸಾಕೋದು ಬಿಟ್ಟಿದ್ದಾರಂತೆ. ಅಪ್ಪಿತಪ್ಪಿ ಕೋಳಿ ಸಾಕಿದರೆ ಆ ಗ್ರಾಮಕ್ಕೆ, ಕೋಳಿ ಸಾಕಿದ ಮನೆತನಕ್ಕೆ ಅಪಾಯ ತಪ್ಪಿದ್ದಲ್ಲಾ ಅಂತಾರೆ ಈ ಗ್ರಾಮಸ್ಥರು.

ಇದನ್ನು ಓದಿ: ದೆಹಲಿಯಲ್ಲಿ ಗೃಹ ಸಚಿವ ಅಮಿತ್ ಶಾ ಭೇಟಿಯಾದ ಸಿಎಂ ಬಿಎಸ್ ಯಡಿಯೂರಪ್ಪ

ಇಲ್ಲಿ ಕೋಳಿ ಅಷ್ಟೇ ಅಲ್ಲ. ಮದ್ಯ ಕೂಡ ಮಾರಾಟ ಮಾಡೋ ಆಗಿಲ್ಲ, ಕುಡಿಯೋದಿಲ್ಲಾ. ಕಳ್ಳತನ ಮಾಡೋದಿಲ್ಲಾ ಅನ್ನೋದು ಪ್ರತಿಯೊಂದು ಮನೆಯ ಶಪತ ಇದೆ. ಇದು ಹಿಂದಿನಿಂದಲೇ ನಡೆದುಕೊಂಡು ಬಂದಿರುವ ಪದ್ದತಿ. ಮುಖ್ಯವಾಗಿ ಇದಕ್ಕೆ ಕಾರಣ ಇಲ್ಲಿನ ದೇವರುಗಳು. ಮತ್ತು ಈ ಸಮುದಾಯದ ಗುರುಗಳ ಕಡೆ ಬೆಟ್ಟು ಮಾಡ್ತಾರೆ. ಕುಬಸಾದ್ ಮಹಾರಾಜರು, ಡಾಕುಸಾದ್ ಮಹಾರಾಜರ ಕಾಲದಿಂದಲೂ ಈ ಪದ್ದತಿ ಅಳವಡಿಸಿಕೊಂಡು ಬಂದಿದ್ದಾರಂತೆ. ಈಗಲೂ ಹಿಂದಿನ ಸಂಪ್ರದಾಯವನ್ನು ಯಾರಾದರೂ ಮುರಿದರೆ ಅವರಿಗೆ ದಂಡವನ್ನು ಸಹ ಹಾಕ್ತಾರೆ. ಹಾಗಾಗಿಯೇ ಈ ಗ್ರಾಮದಲ್ಲಿ ಸಾಂಕ್ರಾಮಿಕ ರೋಗದ ಭೀತಿ ಇಲ್ಲ ಎನ್ನುವುದು ಗ್ರಾಮದ ಹಿರಿಯರ ಮಾತು.

ಗ್ರಾಮದ ಹಿರಿಯರು ಕೈಗೊಂಡ ಪ್ರತಿಯೊಂದು ತೀರ್ಮಾನ ಕ್ಕೆ ಬದ್ಧರಾಗಿರ್ತಾರಂತೆ. ಒಂದೇ ವಿಚಾರಕ್ಕೆ ಅಂಟಿಕೊಂಡಿರ್ತಾರಂತೆ. ಒಟ್ಟಿನಲ್ಲಿ 100 ರಿಂದ‌ 150 ವರ್ಷಗಳಿಂದ  ಕೋಳಿ ಸಾಕದೆ ವಿಚಿತ್ರ ಪದ್ಧತಿ ಇವರು ಅಳವಡಿಸಿಕೊಂಡಿದ್ದು ಮಾತ್ರ ಅಚ್ಚರಿ ಮೂಡಿಸುತ್ತೇ.

ವರದಿ: ಸಂತೋಷ ಕೊಣ್ಣೂರ
Published by:HR Ramesh
First published: