HOME » NEWS » District » CHENNAPATNA DEVELOPMENT AUTHORITY WILL GET POWER SOON PROMISES DCM ATVR SNVS

ಚನ್ನಪಟ್ಟಣ ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ಶೀಘ್ರದಲ್ಲೇ ಅಧಿಕಾರ: ಡಿಸಿಎಂ ಅಶ್ವಥ್ ನಾರಾಯಣ ಭರವಸೆ

ಎರಡು ವರ್ಷಗಳ ಹಿಂದೆಯೇ ಚನ್ನಪಟ್ಟಣ ಅಭಿವೃದ್ಧಿ ಪ್ರಾಧಿಕಾರ ರಚನೆಯಾದರೂ ಅಧ್ಯಕ್ಷ ಮತ್ತು ಸದಸ್ಯರ ನೇಮಕವಾಗದೇ ನಿಷ್ಕ್ರಿಯ ಸ್ಥಿತಿಯಲ್ಲಿದೆ. ಈಗ ಡಿಸಿಎಂ ಅಶ್ವಥ್ ನಾರಾಯಣ ಅವರು ಪ್ರಾಧಿಕಾರಕ್ಕೆ ಚಾಲನೆ ನೀಡುವ ಭರವಸೆ ನೀಡಿದ್ದಾರೆ.

news18-kannada
Updated:November 3, 2020, 11:45 AM IST
ಚನ್ನಪಟ್ಟಣ ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ಶೀಘ್ರದಲ್ಲೇ ಅಧಿಕಾರ: ಡಿಸಿಎಂ ಅಶ್ವಥ್ ನಾರಾಯಣ ಭರವಸೆ
ಉಪ ಮುಖ್ಯಮಂತ್ರಿ ಡಾ. ಸಿ.ಎನ್.ಅಶ್ವತ್ಥನಾರಾಯಣ
  • Share this:
ರಾಮನಗರ (ಚನ್ನಪಟ್ಟಣ): ರಾಮನಗರ - ಚನ್ನಪಟ್ಟಣ ಎರಡೂ ಕೂಡ ಅವಳಿ ನಗರಗಳು. ರಾಜಧಾನಿ ಬೆಂಗಳೂರಿಗೆ ಕೂಗಳತೆ ದೂರದಲ್ಲಿರುವ ರಾಮನಗರ ಜಿಲ್ಲೆಗೆ ಈ ಎರಡೂ ನಗರಗಳು ಪ್ರಮುಖವಾದವು. ರಾಮನಗರದಲ್ಲಿ ಅಭಿವೃದ್ಧಿ ಪ್ರಾಧಿಕಾರ ಅಸ್ತಿತ್ವದಲ್ಲಿ ಇದ್ದು, ಅಭಿವೃದ್ಧಿ ಕೆಲಸಗಳು ನಡೆಯುತ್ತಿವೆ. ಆದರೆ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಅವರ ತವರು ಕ್ಷೇತ್ರ ಚನ್ನಪಟ್ಟಣದಲ್ಲಿ ಪ್ರಾಧಿಕಾರ ಇನ್ನು ಅಸ್ತಿತ್ವಕ್ಕೆ ಬಂದಿಲ್ಲ. ಹಾಗಾಗಿ ಅಭಿವೃದ್ಧಿಗೆ ಕುಂಠಿತವಾಗುತ್ತಿದೆ ಎನ್ನಲಾಗ್ತಿದೆ.

ಎರಡು ವರ್ಷಗಳಿಂದ ಚನ್ನಪಟ್ಟಣ ನಗರ ಯೋಜನಾ ಪ್ರಾಧಿಕಾರಕ್ಕೆ ಅಧ್ಯಕ್ಷ ಮತ್ತು ಸದಸ್ಯರನ್ನು ನೇಮಕ ಮಾಡದ ಹಿನ್ನೆಲೆಯಲ್ಲಿ ನಗರದ ಅಭಿವೃದ್ಧಿಗೆ ತೊಡಕಾಗಿದೆ ಎಂಬ ಕೂಗು ಕೇಳಿ ಬರುತ್ತಿದೆ. 2017ರಲ್ಲಿ ರಾಮನಗರ – ಚನ್ನಪಟ್ಟಣ ನಗರಾಭಿವೃದ್ಧಿ ಪ್ರಾಧಿಕಾರವನ್ನು ವಿಭಜಿಸಿ, ಚನ್ನಪಟ್ಟಣ - ರಾಮನಗರ ನಗರ ಯೋಜನಾ ಪ್ರಾಧಿಕಾರವನ್ನ ಪ್ರತ್ಯೇಕವಾಗಿ ರಚಿಸಲಾಯಿತು. ಮೊದಲ ಅಧ್ಯಕ್ಷರಾಗಿ ಕಾಂಗ್ರೆಸ್‌ ಪಕ್ಷದವರು ಅಧಿಕಾರ ಚಲಾಯಿಸಿದ್ದರು. ನಂತರ ಬಂದ ಹೆಚ್​ಡಿಕೆ ನೇತೃತ್ವದ ಮೈತ್ರಿ ಸರ್ಕಾರದಲ್ಲಿ ಹಲವರು ಅಧ್ಯಕ್ಷರಾಗಿ ನೇಮಕವಾಗಲು ಪ್ರಯತ್ನಿಸಿದಾದರೂ ಸಫಲವಾಗಲಿಲ್ಲ.

ಇದನ್ನೂ ಓದಿ: ಚಿಕ್ಕಮಗಳೂರು; ಅಕ್ರಮ ಸಂಬಂಧ ಹೊಂದಿದ್ದ ಗಂಡನ ಒತ್ತಾಯಕ್ಕೆ ಹೆಂಡತಿ ಆತ್ಮಹತ್ಯೆ

ಇನ್ನೇನು ಸ್ಥಾನಗಳನ್ನ ತುಂಬುವ ಹೊತ್ತಿಗೆ ಸರ್ಕಾರ ಪತನವಾಯಿತು. ನಂತರ ಬಿಜೆಪಿ ಸರ್ಕಾರ ಬಂದು ವರ್ಷ ಕಳೆದು ಎರಡನೇ ವರ್ಷಕ್ಕೆ ಕಾಲಿಟ್ಟಿದ್ದರೂ ಕೂಡ  ಪ್ರಾಧಿಕಾರಕ್ಕೆ ಅಧ್ಯಕ್ಷರ ನೇಮಕವಾಗದಿರುವುದು ಚರ್ಚೆಗೆ ಕಾರಣವಾಗಿದೆ. ಹಾಗಾಗಿ ಈ ಕೂಡಲೇ ರಾಜ್ಯ ಸರ್ಕಾರ ಗಮನ ಹರಿಸಿದರೆ ಚನ್ನಪಟ್ಟಣ ನಗರಾಭಿವೃದ್ಧಿಗೆ ಅನುಕೂಲವಾಗಲಿದೆ ಎಂದು ಚನ್ನಪಟ್ಟಣ ನಗರ ಜೆಡಿಎಸ್ ಅಧ್ಯಕ್ಷ ರಾಜಣ್ಣ ರಾಂಪುರ ಅವರು ನ್ಯೂಸ್ 18 ಗೆ ತಿಳಿಸಿದ್ದಾರೆ.

Channapatna Railway Station
ಚನ್ನಪಟ್ಟಣ ರೈಲ್ವೆ ನಿಲ್ದಾಣ


ಇನ್ನು ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರದಲ್ಲಿ ಪಕ್ಷದ ಕಾರ್ಯಕರ್ತರಿಗೆ ಅಧಿಕಾರ ನೀಡುವ ಸಲುವಾಗಿ ಪ್ರಾಧಿಕಾರವನ್ನು ವಿಭಜಿಸಿ, ಅಧ್ಯಕ್ಷ ಮತ್ತು ಸದಸ್ಯರನ್ನು ನೇಮಕಕ್ಕೆ ಕ್ರಮ ಕೈಗೊಳ್ಳಲಾಗಿತ್ತು. ಆದರೆ, ಮೈತ್ರಿ ಸರ್ಕಾರ ಹಾಗೂ ಈಗಿನ ಬಿಜೆಪಿ ಸರ್ಕಾರ ಪ್ರಾಧಿಕಾರಕ್ಕೆ ಯಾರೊಬ್ಬರನ್ನೂ ನೇಮಕ ಮಾಡದ ಪರಿಣಾಮ ಪ್ರಾಧಿಕಾರದ ಕೆಲಸ ಕಾರ್ಯಗಳು ನನೆಗುದಿಗೆ ಬಿದ್ದಿವೆ.

ಇದನ್ನೂ ಓದಿ: ವಿದೇಶದಲ್ಲಿ ಕನ್ನಡದ ಕಂಪು ಪಸರಿಸುತ್ತಿದ್ದಾರೆ ಚಿಕ್ಕಬಳ್ಳಾಪುರದ ಈ ಯುವತಿಈ ಬಗ್ಗೆ ಪ್ರತಿಕ್ರಿಯಿಸಿರುವ ಡಿಸಿಎಂ ಅಶ್ವಥ್ ನಾರಾಯಣ್ ಅವರು, ಆದಷ್ಟು ಬೇಗ ಪ್ರಾಧಿಕಾರವನ್ನ ಅಸ್ತಿತ್ವಕ್ಕೆ ತರಲಾಗುತ್ತೆ, ಈ ಬಗ್ಗೆ ಕ್ರಮವಹಿಸಲಾಗುತ್ತೆ ಎಂದು ಭರವಸೆ ಕೊಟ್ಟಿದ್ದಾರೆ.

ಒಟ್ಟಾರೆ 116 ಗ್ರಾಮಗಳನ್ನು ಒಳಗೊಂಡಿರುವ ಪ್ರಾಧಿಕಾರಕ್ಕೆ ಹಲವು ಜವಾಬ್ದಾರಿಗಳಿವೆ. ಆದರೆ, ಪ್ರಾಧಿಕಾರಕ್ಕೆ ಪ್ರಮುಖ ಮೇಟಿಯಾಗಬೇಕಾದ ಅಧ್ಯಕ್ಷರ ಹುದ್ದೆಯೇ ಕಳೆದ 2 ವರ್ಷಗಳಿಂದ ಖಾಲಿ ಉಳಿದಿರುವ ಕಾರಣ, ಪ್ರಾಧಿಕಾರದ ಕೆಲಸ ಕಾರ್ಯಗಳು ಸಮರ್ಪಕವಾಗಿ ಸಾಗುತ್ತಿಲ್ಲ. ಕೇವಲ ಮನೆ ಕಟ್ಟುವ ಪರವಾನಗಿ ಬಿಟ್ಟು ಯಾವುದೇ ವಿಶೇಷ ಯೋಜನೆಗಳು ಅಥವಾ ಪ್ರಾಧಿಕಾರಕ್ಕೆ ಆದಾಯ ಕ್ರೋಢೀಕರಿಸುವ ಕೆಲಸಗಳು ನಡೆಯುತ್ತಿಲ್ಲ. ಹಾಗಾಗಿ ರಾಜ್ಯ ಸರ್ಕಾರ ಈ ಕುರಿತು ಸೂಕ್ತ ನಿರ್ಧಾರ ಕೈಗೊಳ್ಳಬೇಕೆಂದು ಚನ್ನಪಟ್ಟಣ ಜನರು ಒತ್ತಾಯಿಸಿದ್ದಾರೆ.

ವರದಿ: ಎ.ಟಿ. ವೆಂಕಟೇಶ್
Published by: Vijayasarthy SN
First published: November 3, 2020, 11:45 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading