ರಾಮನಗರ: ಎಂಟು ತಿಂಗಳ ಸೀಮೆಹಸು ಬಲಿ ಪಡೆದ ಚಿರತೆ, ಆತಂಕದಲ್ಲಿ ಸ್ಥಳೀಯರು
ತಡರಾತ್ರಿ ಮನೆಯ ಬಳಿ ಕಟ್ಟಿದ್ದ ಹಸುವಿನ ಮೇಲೆ ಚಿರತೆ ದಾಳಿ ಮಾಡಿ ಅರ್ಧ ಮಾಂಸ ತಿಂದು ಕೊಂದು ಪರಾರಿಯಾಗಿದೆ. ತೋಟಕ್ಕೆ ಮನೆ ಹತ್ತಿರದಲ್ಲಿದ್ದ ಪರಿಣಾಮ ಚಿರತೆ ದಾಳಿ ಮಾಡಲು ಅನುಕೂಲವಾಗಿದೆ ಎನ್ನಲಾಗಿದೆ.
ರಾಮನಗರ(ಜು.21): ಚಿರತೆ ದಾಳಿ ನಡೆಸಿದ ಪರಿಣಾಮ ಎಂಟು ತಿಂಗಳ ಸೀಮೆಹಸುವೊಂದು ಅಸುನೀಗಿದ ಘಟನೆ ರಾಮನಗರ ಜಿಲ್ಲೆ ಚನ್ನಪಟ್ಟಣದಲ್ಲಿ ನಡೆದಿದೆ. ಚನ್ನಪಟ್ಟಣದ ಗಡಿ ಗ್ರಾಮವಾದ ಇಗ್ಗಲೂರಿನಲ್ಲಿ ಘಟನೆ ನಡೆದಿದ್ದು, ರೈತ ನಾಗರಾಜ್ ಎಂಬುವರಿಗೆ ಸೇರಿದ ಮೃತ ಸೀಮೆಹಸು ಇದಾಗಿದೆ.
ತಡರಾತ್ರಿ ಮನೆಯ ಬಳಿ ಕಟ್ಟಿದ್ದ ಹಸುವಿನ ಮೇಲೆ ಚಿರತೆ ದಾಳಿ ಮಾಡಿ ಅರ್ಧ ಮಾಂಸ ತಿಂದು ಕೊಂದು ಪರಾರಿಯಾಗಿದೆ. ತೋಟಕ್ಕೆ ಮನೆ ಹತ್ತಿರದಲ್ಲಿದ್ದ ಪರಿಣಾಮ ಚಿರತೆ ದಾಳಿ ಮಾಡಲು ಅನುಕೂಲವಾಗಿದೆ ಎನ್ನಲಾಗಿದೆ.
ಇನ್ನು ಕಳೆದ ಒಂದೆರಡು ತಿಂಗಳುಗಳಿಂದ ಈ ಭಾಗದಲ್ಲಿ ಚಿರತೆಗಳ ಹಾವಳಿ ಹೆಚ್ಚಾಗಿದೆ. ಪಕ್ಕದ ಬೋರೆಗೌಡನದೊಡ್ಡಿ ಗ್ರಾಮದಲ್ಲಿ ಈಗಷ್ಟೇ ಚಿರತೆ ಕಾಣಿಸಿಕೊಂಡಿತ್ತು. ಆದರೆ ಈಗ ಇಗ್ಗಲೂರಿನಲ್ಲಿ ಕಾಣಿಸಿ ಹಸುವನ್ನೇ ಬಲಿಪಡೆದಿದೆ.
ಹಾಗಾಗಿ ಕೂಡಲೇ ಸಂಬಂಧಿಸಿದ ಅರಣ್ಯ ಇಲಾಖೆ ಅಧಿಕಾರಿಗಳು ನಮ್ಮೂರಿನಲ್ಲಿ ಬೋನ್ ಇಟ್ಟು ಚಿರತೆಯನ್ನ ಸೆರೆಯಿಡಿಯಬೇಕು. ಇಲ್ಲವಾದರೆ ಮುಂದೆ ಭಾರೀ ಅನಾಹುತವಾಗುವ ಸಾಧ್ಯತೆಗಳು ದಟ್ಟವಾಗಿವೆ ಎಂದು ಇಗ್ಗಲೂರು ಗ್ರಾಮದ ರೈತರು ನ್ಯೂಸ್ 18ಗೆ ತಿಳಿಸಿದ್ದಾರೆ.
ಇನ್ನು, ಸದ್ಯದಲ್ಲೇ ಗ್ರಾಮದಲ್ಲಿ ಬೋನ್ ಇಡುವ ವ್ಯವಸ್ಥೆ ಮಾಡುತ್ತೇವೆ. ಜತೆಗೆ ತ್ವರಿತವಾಗಿ ಚಿರತೆ ಸೆರೆಯಿಡಿಯಲಾಗುತ್ತದೆ ಎಂದು ಚನ್ನಪಟ್ಟಣ ವಲಯ ಅರಣ್ಯ ಸಂರಕ್ಷಣಾಧಿಕಾರಿ ಮನ್ಸೂರ್ ತಿಳಿಸಿದ್ದಾರೆ.
Published by:Ganesh Nachikethu
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ