ಚಿಂಚೋಳಿ ವನ್ಯಜೀವಿ ಧಾಮದಲ್ಲಿ ಚಿರತೆ ಪ್ರತ್ಯಕ್ಷ ; ನಾಯಿ, ಆಕಳುಗಳನ್ನು ತಿಂದ ಚಿರತೆ

ಚಂದ್ರಂಪಳ್ಳಿ ಜಲಾಶಯದ ಹಿಂಬದಿಯ ಪ್ರದೇಶದಲ್ಲಿ ಚಿರತೆ ಪ್ರತ್ಯಕ್ಷಗೊಂಡಿದೆ. ಚಿರತೆ ಪ್ರತ್ಯಕ್ಷದಿಂದ ಕರ್ನಾಟಕ ಮತ್ತು ತೆಲಂಗಾಣ ಗಡಿಗಳಲ್ಲಿರುವ ಗ್ರಾಮಗಳ ಜನತೆ ಆತಂಕಗೊಂಡಿದೆ

news18-kannada
Updated:June 30, 2020, 5:59 PM IST
ಚಿಂಚೋಳಿ ವನ್ಯಜೀವಿ ಧಾಮದಲ್ಲಿ ಚಿರತೆ ಪ್ರತ್ಯಕ್ಷ ; ನಾಯಿ, ಆಕಳುಗಳನ್ನು ತಿಂದ ಚಿರತೆ
ಸಾಂದರ್ಭಿಕ ಚಿತ್ರ
  • Share this:
ಕಲಬುರ್ಗಿ(ಜೂ.30): ಕಲಬುರ್ಗಿ ಜಿಲ್ಲೆ ಚಿಂಚೋಳಿ ವನ್ಯಜೀವಿ ಧಾಮದಲ್ಲಿ ಚಿರತೆ ಪ್ರತ್ಯಕ್ಷಗೊಂಡಿದ್ದು, ಜನತೆಯಲ್ಲಿ ಭೀತಿ ಸೃಷ್ಟಿಯಾಗಿದೆ. ಮೂರು ಹಸುಗಳನ್ನು ಮತ್ತು ಒಂದು ನಾಯಿಯನ್ನು ತಿಂದಿರುವ ಚಿರತೆ. ಕುಸರಂಪಳ್ಳಿಯ ಗೊಟ್ಟಂಗೊಟ್ಟ ಅರಣ್ಯ ಪ್ರದೇಶದಲ್ಲಿ ಚಿರತೆ ಪ್ರತ್ಯಕ್ಷವಾಗಿದೆ. ದನ ಕಾಯುವ ಹುಡಗರು ಚಿರತೆಯನ್ನು ನೋಡಿದ್ದಾರೆ ಎನ್ನಲಾಗಿದೆ.

ಇದುವರೆಗೆ ಮೂರು ಆಕಳುಗಳನ್ನು ಕೊಂದು ರಕ್ತ ಕುಡಿದಿರುವ ಚಿರತೆ. ತೆಲಂಗಾಣದ ಪಡಿಯಾಲ ತಾಂಡಾ, ಕುಸ್ರಂಪಳ್ಳಿ ತಾಡಾ ಹಾಗೂ ಕುಸ್ರಂಪಳ್ಳಿ ಗ್ರಾಮದ ದನಗಳನ್ನು ಕೊಂದಿರುವ ಚಿರತೆ, ಅವುಗಳ ರಕ್ತ ಹೀರಿದೆ. ಮತ್ತೊಂದೆಡೆ ಐನೋಳ್ಳಿ ತಾಂಡಾ ಬಳಿ ನಾಯಿಯನ್ನು ಕೊಂದು ಹಾಕಿದೆ.

ಚಂದ್ರಂಪಳ್ಳಿ ಜಲಾಶಯದ ಹಿಂಬದಿಯ ಪ್ರದೇಶದಲ್ಲಿ ಚಿರತೆ ಪ್ರತ್ಯಕ್ಷಗೊಂಡಿದೆ. ಚಿರತೆ ಪ್ರತ್ಯಕ್ಷದಿಂದ ಕರ್ನಾಟಕ ಮತ್ತು ತೆಲಂಗಾಣ ಗಡಿಗಳಲ್ಲಿರುವ ಗ್ರಾಮಗಳ ಜನತೆ ಆತಂಕಗೊಂಡಿದೆ. ಜಾನುವಾರು ಸಾವನ್ನಪ್ಪಿರುವ ಪ್ರದೇಶಕ್ಕೆ ಅರಣ್ಯ ಇಲಾಖೆ ಸಿಬ್ಬಂದಿ ಭೇಟಿ ನೀಡಿದೆ. ವಲಯ ಅರಣ್ಯಾಧಿಕಾರಿ ಸಂಜೀವಕುಮಾರ ಚವ್ಹಾಣ ಮತ್ತು ಅರಣ್ಯ ರಕ್ಷಕ ಸಿದ್ದಾರೂಢ ಭೇಟಿ ನೀಡಿ, ಪರಿಶೀಲನೆ ಮಾಡಿದ್ದಾರೆ.

ಚಿರತೆಯ ಹೆಜ್ಜೆ ಗುರುತುಗಳ ಪತ್ತೆಗೆ ಮುಂದಾಗಿರುವ ಸಿಬ್ಬಂದಿ. ಈ ಪ್ರದೇಶದ ಗ್ರಾಮ ಮತ್ತು ತಾಂಡಾಗಳಲ್ಲಿ ಡಂಗೂರ ಸಾರಿ ಜಾಗೃತಿ ಮೂಡಿಸಲಾಗುತ್ತಿದೆ. ಅರಣ್ಯ ಪ್ರದೇಶದ ಕಡೆ ಹೋಗದಿರುವಂತೆ, ಎಚ್ಚರಿಕೆಯಿಂದಿರುವಂತೆ ಸೂಚನೆ ನೀಡಲಾಗುತ್ತಿದೆ.

ಇದನ್ನೂ ಓದಿ : ಟೋಲ್ ಗೇಟ್ ಸಿಬ್ಬಂದಿ ದಾದಾಗಿರಿ ; ಮುಂಡರಗಿ ತಾಲೂಕಿನ ರೈತರು ಹೈರಾಣ

ಅರಣ್ಯ ಇಲಾಖೆ ಸಿಬ್ಬಂದಿ ಕಣ್ಣಿಗೆ ಇದುವರೆಗೂ ಚಿರತೆ ಕಾಣಿಸಿಕೊಂಡಿಲ್ಲ. ಊರವರಿಗೆ ಕಾಣಸಿಕೊಂಡಿದೆ ಎಂಬ ಮಾಹಿತಿ ಹಿನ್ನೆಲೆಯಲ್ಲಿ ಪರಿಶೀಲನೆ ಮಾಡಲಾಗುತ್ತಿದೆ ಎಂದು ವಲಯ ಅರಣ್ಯಾಧಿಕಾರಿ ಸಜೀವಕುಮಾರ ಚವ್ಹಾಣ ಮಾಹಿತಿ ನೀಡಿದ್ದಾರೆ.
ಸಾಮಾನ್ಯವಾಗಿ ಚಿರತೆ ಆಕಳು ಮತ್ತು ನಾಯಿಗಳನ್ನೇ ಟಾರ್ಗೆಟ್ ಮಾಡುತ್ತದೆ. ಚಿಂಚೋಳಿ ವನ್ಯಜೀವಿ ಧಾಮದಲ್ಲಿಯೂ ಆಕಳು ಹಾಗೂ ನಾಯಿಗಳನ್ನು ಕೊಂದು ಹಾಕಿರುವುದರಿಂದ  ಇದು ಚಿರತೆಯ ಕೃತ್ಯವೆಂದು ಜನತೆ ಬಲವಾಗಿ ನಂಬುತ್ತಿದೆ. ಆದಷ್ಟು ಬೇಗ ಚಿರತೆಯನ್ನು ಹಿಡಿಯುವಂತೆಯೂ ಆಗ್ರಹಿಸಿದೆ.
First published:June 30, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading