HOME » NEWS » District » CHEETAH GETS INTO THE KITCHEN OF A HOUSE IN CHITRADURGA LATER TRAPPED BY FOREST DEPARTMENT VTC SKTV

ಬೆಳ್ಳಂಬೆಳಗ್ಗೆ ಅಡುಗೆಮನೆಗೆ ನುಗ್ಗಿದ್ದು ಬೆಕ್ಕಲ್ಲ, ಚಿರತೆ ! ಮನೆಯವರ ಪರಿಸ್ಥಿತಿ ಹೇಗಾಗಿರಬೇಡ ಹೇಳಿ !

ಕಳೆದ ಒಂದು ತಿಂಗಳಿಂದ ಮುದ್ದಾಪುರ ಗ್ರಾಮದ ಸುತ್ತಮುತ್ತ ಚಿರತೆಯೊಂದು ಜನರ ನಿದ್ದೆಗೆಡಿಸಿತ್ತು. ವಾರಕ್ಕೊಮ್ಮೆ ಕಾಣಿಸುತ್ತಾ ಉಪಟಳ ನೀಡುತ್ತಿದ್ದ ಚಿರತೆಗೆ ಗ್ರಾಮಸ್ಥರು ಬೆಚ್ಚಿ ಬಿದ್ದಿದ್ರು. ಇಂದು ಬೆಳಕಾಗುವ ಮುನ್ನವೇ ಆ ಚಿರತೆ ನಾಯಿ ಬೇಟೆಗೆ ಮುದ್ದಾಪುರ ಗ್ರಾಮಕ್ಕೆ ನುಗ್ಗಿ ಬಂದಿತ್ತು. ಆದ್ರೆ ಚಿರತೆ ಬೇಟೆಗೆ ಸಿಗಬೇಕಿದ್ದ ನಾಯಿ ಜಸ್ಟ್ ಮಿಸ್ ಆಗಿ ಎಸ್ಕೇಪ್ ಆಗಿತ್ತು. ಬಳಿಕ ಮನೆಯಲ್ಲಿ ಎಲ್ಲರೂ ಮಲಗಿದ್ದ ವೇಳೆಯೇ ಹಿಂಬಾಗಿಲ ಮೂಲಕ ಅಡಿಗೆ ಮನೆಗೆ ಚಿರತೆ ಎಂಟ್ರಿ ಕೊಟ್ಟಿತ್ತು.

news18-kannada
Updated:May 9, 2021, 8:45 AM IST
ಬೆಳ್ಳಂಬೆಳಗ್ಗೆ ಅಡುಗೆಮನೆಗೆ ನುಗ್ಗಿದ್ದು ಬೆಕ್ಕಲ್ಲ, ಚಿರತೆ ! ಮನೆಯವರ ಪರಿಸ್ಥಿತಿ ಹೇಗಾಗಿರಬೇಡ ಹೇಳಿ !
ಸೆರೆಸಿಕ್ಕ ಚಿರತೆ
  • Share this:
ಚಿತ್ರದುರ್ಗ: ನಾಯಿ ಬೇಟೆಗೆ ಚಿರತೆಯೊಂದು ಮುಂಜಾನೆಯೇ ಗ್ರಾಮವೊಂದಕ್ಕೆ ನುಗ್ಗಿತ್ತು. ಆ ಚಿರತೆಯ ರಣಬೇಟೆ ಜಸ್ಟ್ ಮಿಸ್ ಆಗ್ತಿದ್ದಂತೆ, ಚಿರತೆಗೆ ಬಂದಿದ್ದ ಹಾದಿಯೂ ತಪ್ಪಿ ಹೋಗಿತ್ತು. ಗಾಬರಿಗೊಂಡ ಚಿರತೆ ಏಕಾಏಕಿ ಅದೇ ಊರಿನ  ಮನೆಗೆ ನುಗ್ಗಿ  ಆತಂಕ ಸೃಷ್ಠಿಸಿತ್ತು. ಬಳಿ ಚಿರತೆ ಸೆರೆಗೆ  ಮೆಗಾ ಅಪರೇಶನ್ ಮಾಡಿದ ಚಿತ್ರದುರ್ಗ ಅರಣ್ಯ ಇಲಾಖೆಯ ಸಿಬ್ಬಂದಿ ಚಿರತೆ ಸೆರೆ ಹಿಡಿದು ಸಕ್ಸಸ್ ಆಗಿದ್ದಾರೆ.  ಆತಂಕದಿಂದ ಮನೆಯ ಮುಂದೆ ವಿಪರೀತ ಜನ ಸೇರಿದ್ದರು. ಚಿರತೆ ಸೆರೆಗೆ ಬಾಗಿಲಿನಲ್ಲಿ ಬೋನ್ ಹಿಡಿದು ಅರಣ್ಯ ಸಿಬ್ಬಂದಿಗಳ ಕಾರ್ಯಾಚರಣೆ ನಡೆದಿದೆ. ಈ ದೃಶ್ಯಗಳು ಕಂಡು ಬಂದಿದ್ದು ಕೋಟೆನಾಡು ಚಿತ್ರದುರ್ಗ ತಾಲ್ಲೂಕಿನ ಮುದ್ದಾಪುರ ಗ್ರಾಮದಲ್ಲಿ.

ಕಳೆದ ಒಂದು ತಿಂಗಳಿಂದ ಮುದ್ದಾಪುರ ಗ್ರಾಮದ ಸುತ್ತಮುತ್ತ ಚಿರತೆಯೊಂದು ಜನರ ನಿದ್ದೆಗೆಡಿಸಿತ್ತು. ವಾರಕ್ಕೊಮ್ಮೆ ಕಾಣಿಸುತ್ತಾ ಉಪಟಳ ನೀಡುತ್ತಿದ್ದ ಚಿರತೆಗೆ ಗ್ರಾಮಸ್ಥರು ಬೆಚ್ಚಿ ಬಿದ್ದಿದ್ರು. ಇಂದು ಬೆಳಕಾಗುವ ಮುನ್ನವೇ ಆ ಚಿರತೆ ನಾಯಿ ಬೇಟೆಗೆ ಮುದ್ದಾಪುರ ಗ್ರಾಮಕ್ಕೆ ನುಗ್ಗಿ ಬಂದಿತ್ತು. ಆದ್ರೆ ಚಿರತೆ ಬೇಟೆಗೆ ಸಿಗಬೇಕಿದ್ದ ನಾಯಿ ಜಸ್ಟ್ ಮಿಸ್ ಆಗಿ ಎಸ್ಕೇಪ್ ಆಗಿತ್ತು. ಬಳಿಕ ಗಾಬರಿಗೊಂಡಿದ್ದ ಬೇಟೆಗಾರ ಚಿರತೆ ಅದೇ ಗ್ರಾಮದ ಚಿದಾನಂದ ಎಂಬುವವರ ಮನೆಗೆ ಸದ್ದಿಲ್ಲದೆ ನುಗ್ಗಿತ್ತು. ಮನೆಯಲ್ಲಿ ಎಲ್ಲರೂ ಮಲಗಿದ್ದ ವೇಳೆಯೇ ಹಿಂಬಾಗಿಲ ಮೂಲಕ ಅಡಿಗೆ ಮನೆಗೆ ಚಿರತೆ ಎಂಟ್ರಿ ಕೊಟ್ಟಿತ್ತು.

ಚಿರತೆ ಬಂದಿದ್ದನ್ನ ನೋಡಿ ಚಿದಾನಂದ ಅವರ ಪತ್ನಿ ಎಲ್ಲರನ್ನ ಹೊರಗೆ ಕರೆದು ಬಾಗಿಲು ಹಾಕಿದ್ರು. ಕೂಡಲೇ ಅರಣ್ಯ ಸಿಬ್ಬಂದಿಗೆ ಚಿರತೆ ಬಂದಿರುವ ಮಾಹಿತಿ ಮುಟ್ಟಿಸಿದ್ರು. ಮಾಹಿತಿ ತಿಳಿದು ಕೂಡಲೇ ಸ್ಥಳಕ್ಕೆ ದೌಡಾಯಿಸಿದ ವಲಯ ಅರಣ್ಯಾಧಿಕಾರಿ ಸಂದೀಪ್ ನಾಯಕ ಅಂಡ್ ಟೀಂ ಚಿರತೆ ಸೆರೆಗೆ ಪ್ಲ್ಯಾನ್ ರೂಪಿಸಿದ್ರು. ಇನ್ನೂ ಚಿರತೆ ಮನೆಯಲ್ಲಿ ಅವಿತುಕೊಂಡ ಮಾಹಿತಿ ತಿಳಿಯುತ್ತಿದ್ದಂತೆ ಮನೆಯ ಮುಂದೆ ನೂರಾರು ಜನ ಜಮಾಯಿಸಿದ್ರು. ಇನ್ನೂ ಜನರನ್ನ ನಿಯಂತ್ರಿಸಲು ಪೊಲೀಸರು ಹರ ಸಾಹಸ ಪಡಬೇಕಾಯ್ತು. ಚಿರತೆ ಸೆರೆ ಹಿಡಿಯುವ ವರೆಗೆ ಆತಂಕದಲ್ಲಿ ನೋಡುತ್ತಿದ್ದ ಜನರಿಗೆ ಏನಾಗುತ್ತೋ ಏನೋ ಅನ್ನೋ ಭಯ ಮಾತ್ರ ಎದ್ದು ಕಾಣುತ್ತಿತ್ತು. ಇನ್ನೂ ಮನೆಯ ಒಂದು ಬಾಗಿಲಿನಲ್ಲಿ ಬೋನು ಇಟ್ಡಿದ್ದ ಅರಣ್ಯ ಸಿಬ್ಬಂದಿಗಳು, ಮತ್ತೊಂದು ಬಾಗಿಲಿನ ಮೂಲಕ ಚಿರತೆ ಓಡಿಸಲು ಪ್ರಯತ್ನ ಮಾಡಿದ್ರು.
Youtube Video

ಅರಣ್ಯ ಇಲಾಖೆ ಸಿಬ್ಬಂದಿಗಳು ನಡೆಸಿದ ಕಾರ್ಯಾಚರಣೆ ಕೊನೆಗೂ ಯಶಸ್ವಿಯಾಗಿದ್ದು,  ಚಿರತೆ ಬೋನಿಗೆ ಬಿದಿದೆ. ಸದ್ಯ ಚಿರತೆ ಸೆರೆ ಸಿಕ್ಕಿದ್ದು, ಮುದ್ದಾಪುರ ಗ್ರಾಮಸ್ಥರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ. ಒಟ್ಟಾರೆ ಕಾಡಿನಿಂದ ನಾಯಿ ಬೇಟೆಯಾಡಲು ನಾಡಿಗೆ ಬಂದಿದ್ದ ಚಿರತೆ,  ಕ್ಷಣಕಾಲ ಮುದ್ದಾಪುರ ಗ್ರಾಮಸ್ಥರನ್ನ ಬೆಚ್ಚಿ ಬೀಳಿಸಿತ್ತು. ಆದರೆ  ಅರಣ್ಯ ಸಿಬ್ಬಂದಿಗಳು ನಡೆಸಿದ ಕಾರ್ಯಾಚರಣೆಗೆ ಚಿರತೆ ಸೆರೆ ಸಿಕ್ಕಿದ್ದು,ಆಡುಮಲ್ಲೇಶ್ವರ ಕಿರು ಮೃಗಾಲಯದಲ್ಲಿ ಇಡಲಾಗಿದ್ದು,  ಸುರಕ್ಷಿತವಾಗಿ ಜೋಗಿ ಮಟ್ಟಿ ಅರಣ್ಯಕ್ಕೆ ಬಿಡಲು ಸೂಚಿಸಲಾಗಿದೆ.
Published by: Soumya KN
First published: May 9, 2021, 8:45 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories