ನಷ್ಟದತ್ತ ಸಾಗಿದ ಚರಕ ಸಂಸ್ಥೆ: ಮಲೆನಾಡಿನ ಮಹಿಳಾ ನೇಕಾರರಿಗೆ ಸಂಕಷ್ಟ

ಚರಕ ಮಹಿಳಾ ವಿವಿದೋದ್ದೇಶ ಕೈಗಾರಿಕಾ ಸಹಕಾರ ಸಂಸ್ಥೆ ಭೀಮನಕೋಣೆ

ಚರಕ ಮಹಿಳಾ ವಿವಿದೋದ್ದೇಶ ಕೈಗಾರಿಕಾ ಸಹಕಾರ ಸಂಸ್ಥೆ ಭೀಮನಕೋಣೆ

ಕೊರೋನಾ ಮಹಾಮಾರಿ, ಎಲ್ಲಾ ಕ್ಷೇತ್ರಗಳ ಮೇಲೂ ಪರಿಣಾಮ ಬೀರಿದ್ದು, ಗಾಂಧೀಜಿ ಕನಸಿನಂತೆ ನಡೆಸಿಕೊಂಡು ಬರಲಾಗುತ್ತಿದ್ದ ಈ ಚರಕ ಸಂಸ್ಥೆಯೂ ಮುಚ್ಚುವಂತ ಸನ್ನಿಹಿತಕ್ಕೆ ಬಂದು ನಿಂತಿದೆ.

  • Share this:

ಶಿವಮೊಗ್ಗ(ಸೆಪ್ಟೆಂಬರ್​ 28): ಗಾಂಧಿಜೀಯವರ ಗ್ರಾಮ ಸ್ವರಾಜ್ಯದ ಕನಸನ್ನು ಸಕಾರಗೊಳಿಸುವ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸುತ್ತಾ ಬರುತ್ತಿದೆ ಚರಕ ಸಂಸ್ಥೆ. ಅಪ್ಪಟ ಖಾದಿ ಬಟ್ಟೆಗಳನ್ನು ಕೈ ಮಗ್ಗದ ಮೂಲಕ ಸಿದ್ಧಪಡಿಸಿ ರಾಷ್ಟ್ರ ಮತ್ತು ಅಂತರ್ ರಾಷ್ಟ್ರೀಯ ಮಟ್ಟದ ಮಾರುಕಟ್ಟೆಯಲ್ಲಿ ವ್ಯಾಪಾರ ವಹಿವಾಟು ನಡೆಸುತ್ತಿದೆ. ಇಲ್ಲಿ ತಯರಾಗುವ ಕೈಮಗ್ಗದ ಡ್ರೆಸ್ ಗಳು , ಆಧುನಿಕ ಯಂತ್ರದಿಂದ ತಯರಾದ ಬಟ್ಟೆಗಳಿಗೆ ಸವಾಲು ಒಡ್ಡುತ್ತಾ ಮುನ್ನುಗ್ಗುತ್ತಾ ಸಾಗುತ್ತಿವೆ. ಮಹಿಳೆಯರಿಂದಲೇ ನಡೆಯುತ್ತಿರುವ ಈ ಸಹಕಾರ ಸಂಸ್ಥೆ ಹೊಸ ದಿಕ್ಕಿನತ್ತಾ ಹೆಜ್ಜೆ ಹಾಕುತ್ತಾ ಸಮಾಜಕ್ಕೆ ಮಾದರಿಯಾಗಿದೆ. ಅದರೆ, ಈ ಕೊರೋನಾ ಮಹಾಮಾರಿಯ ಹೊಡೆದ ಈ ಸಂಸ್ಥೆಗೂ ತಟ್ಟಿದೆ. ಸಾಗರದ ಭೀಮನಕೋಣೆಯಲ್ಲಿ ಗಾಂಧಿ ತತ್ವಗಳ ಅಡಿಯಲ್ಲಿ ಪ್ರಸನ್ನ ಅವರು ಚರಕ ಸಂಸ್ಥೆಯನ್ನು ಸ್ಥಾಪಿಸಿದ್ದರು. ಮಲೆನಾಡಿನ ಮಹಿಳೆಯರಿಗಾಗಿ ಈ ಸಂಸ್ಥೆಯನ್ನು 1996 ರಲ್ಲಿ ಚರಕ ಮಹಿಳಾ ವಿವಿದೋದ್ದೇಶ ಕೈಗಾರಿಕಾ ಸಹಕಾರ ಸಂಸ್ಥೆ ಸ್ಥಾಪನೆ ಮಾಡಲಾಯಿತು. ಮಹಿಳೆಯರನ್ನು ಆರ್ಥಿಕವಾಗಿ ಸಬಲರನ್ನಾಗಿ ಮಾಡುವ ಉದ್ದೇಶದಿಂದ ಸ್ಥಾಪಿತವಾದ ಸಂಸ್ಥೆ ಮಾದರಿ ಸಂಸ್ಥೆಯಾಗಿ ದೇಶದಲ್ಲೇ ಗುರುತಿಸಿಕೊಂಡಿದೆ.


ಅದು ಸಹ ಗಾಂಧಿ ತತ್ವದ ಅಡಿಯಲ್ಲಿ. 27 ವರ್ಷಗಳ ಹಿಂದೆ  ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಭೀಮನಕೋಣೆಯಲ್ಲಿ ಆರಂಭವಾದ ಚಕರ ಮಹಿಳಾ ವಿವಿಧೋದ್ದೇಶ ಕೈಗಾರಿಕಾ ಸಹಕಾರ ಸಂಸ್ಥೆಯು ಕೈ ಮಗ್ಗದ ಬಟ್ಟೆಗಳಿಗೆ ಪ್ರಸಿದ್ಧಿಯಾಗಿದೆ. ಸಂಪೂರ್ಣವಾಗಿ ಕೈ ಮಗ್ಗದಿಂದ ನೇಯ್ದ ಬಟ್ಟೆಯನ್ನಷ್ಟೇ  ಅಲ್ಲದೇ ಅವುಗಳಿಂದ ಸಿದ್ಧ ಉಡುಪುಗಳನ್ನು ತಯಾರಿಸಲಾಗುತ್ತಿದೆ. ಜೊತೆಗೆ ದೇಸಿ ಸಂಸ್ಥೆಯ ಹೆಸರಿನಲ್ಲಿ ಬೆಂಗಳೂರು ಸೇರಿದಂತೆ ರಾಜ್ಯದ 17 ಕಡೆ ಅವರದ್ದೇ ಮಾರಾಟ ಮಳಿಗೆಗಳನ್ನು ತೆರೆದು ವ್ಯಾಪಾರ ವಹಿವಾಟು ನಡೆಸುತ್ತಿದ್ದಾರೆ.


ಇಲ್ಲಿ ಜುಬ್ಬಾ, ಪೈಜಾಮ, ಕೌದಿ, ಬ್ಯಾಗ್, ಚೂಡಿದಾರ ಸೇರಿದಂತೆ 100 ಕ್ಕೂ ಹೆಚ್ಚು ಬಟ್ಟೆಯ ವಸ್ತುಗಳನ್ನು ಸಿದ್ಧ ಪಡಿಸಲಾಗುತ್ತಿದೆ. ಆಧುನಿಕತೆಗೆ ತಕ್ಕಂತಹ ಬದಲಾವಣೆಗಳೊಂದಿಗೆ  ಹೊಸ ಹೊಸ ವಿನ್ಯಾಸಗಳಿಂದ ಕೂಡಿದ ಬಟ್ಟೆಗಳನ್ನು ಮತ್ತು ಸಿದ್ಧ ಉಡುಪುಗಳನ್ನು ತಯಾರಿಸಿ ಮಾರಾಟ ಮಾಡುವ ಮೂಲಕ ಮಾರುಕಟ್ಟೆಯಲ್ಲಿ ಸಹ ಬೀಗಿ ಹಿಡಿತ ಸಾಧಿಸಿದ್ದಾರೆ.
ಈ ಸಂಸ್ಥೆ ಈಗ ನಷ್ಟದ ಹಾದಿ ಹಿಡಿದಿದೆ. ಈ ಕೊರೋನಾ ಮಹಾಮಾರಿ, ಎಲ್ಲಾ ಕ್ಷೇತ್ರಗಳ ಮೇಲೂ ಪರಿಣಾಮ ಬೀರಿದ್ದು, ಗಾಂಧೀಜಿ ಕನಸಿನಂತೆ ನಡೆಸಿಕೊಂಡು ಬರಲಾಗುತ್ತಿದ್ದ ಈ ಚರಕ ಸಂಸ್ಥೆಯೂ ಮುಚ್ಚುವಂತ ಸನ್ನಿಹಿತಕ್ಕೆ ಬಂದು ನಿಂತಿದೆ. ಕೊರೋನಾ ಹಿನ್ನೆಲೆಯಲ್ಲಿ ಕೈಮಗ್ಗದ  ಉತ್ಪನ್ನಗಳು ಮಾರುಕಟ್ಟೆ ಕಳೆದುಕೊಂಡಿರುವ ಹಿನ್ನೆಲೆಯಲ್ಲಿ ರಾಷ್ಟ್ರಮಟ್ಟದಲ್ಲಿ ಹೆಸರು ಗಳಿಸಿರುವ ಶಿವಮೊಗ್ಗದ ಸಾಗರದ ಹೆಗ್ಗೋಡಿನ ಚರಕ ಸಂಸ್ಥೆ ಭವಿಷ್ಯ ಡೋಲಾಯಮಾನವಾಗಿದೆ. ಸಾಗರದ ಹೊನ್ನೇಸರದಲ್ಲಿರುವ ಚರಕ ಮಹಿಳಾ ವಿವಿದ್ದೋದ್ಧೇಶ ಸಂಘವು, ಆಗಸ್ಟ್ 28 ರಿಂದ ದಿವಾಳಿ ಘೋಷಿಸಿಕೊಂಡಿದೆ. ನೇಕಾರರಿಗೆ ಸಂಬಂಧಪಟ್ಟ ಎಲ್ಲಾ ಕೆಲಸಗಳನ್ನು ನಿಲ್ಲಿಸಿದೆ.


ಪ್ರಸ್ತುತ ಕೊರೋನಾ ಸಂಕಷ್ಟದಿಂದಾಗಿ ಮಾರುಕಟ್ಟೆಯಲ್ಲಿ ವ್ಯಾಪಾರ ಕುಸಿದಿದೆ. ಲಾಕ್ ಡೌನ್ ಸಮಯದಲ್ಲಿ ಉತ್ಪಾದಿಸಿದ ಕೈಮಗ್ಗ ಸಿದ್ದ ಉಡುಪುಗಳು ಬಿಕರಿಯಾಗದೆ, ಗೋದಾಮಿನ ತುಂಬಾ ತುಂಬಿದೆ. ಸುಮಾರು 65 ಸಾವಿರ ವೀಟರ್ ನಷ್ಟು ಬಟ್ಟೆ ಹಾಗೆ ಉಳಿದಿದೆ. ಉತ್ಪಾದಿಸಿದ ಕೈಮಗ್ಗ ವಸ್ತುಗಳಿಗೆ ಸೂಕ್ತ ಮಾರುಕಟ್ಟೆ ಸಿಗದೇ ಇರುವುದರಿಂದ ಇನ್ನಷ್ಟು ಉತ್ಪಾದಿಸುವ ಶಕ್ತಿ ಚರಕ ಸಂಸ್ಥೆಗೆ ಇಲ್ಲವಾಗಿದೆ. ಇದಕ್ಕೆ ಸ್ವಲ್ಪ ಮಟ್ಟಿಗೆ ಕೋವಿಡ್ ಮತ್ತು ಆರ್ಥಿಕ ಸಂಕಷ್ಟ  ಕಾರಣವಾದರೆ, ಇನ್ನೊಂದು ಕಡೆ ಸರ್ಕಾರ ಮತ್ತು ಅಧಿಕಾರಿಗಳ ಮಾನಸಿಕ ಸ್ಥಿತಿ ಕೂಡ ಹೌದು ಎನ್ನುತ್ತಾರೆ ಸಂಸ್ಥೆಯರು.


ಇದನ್ನೂ ಓದಿ : ಯಡಿಯೂರಪ್ಪ ಕುಟುಂಬದಿಂದ ವ್ಯಾಪಕ ಭ್ರಷ್ಟಾಚಾರ - ಕಾಂಗ್ರೆಸ್ ಸೋಲಿಸಿದ ಬಗ್ಗೆ ಜನರ ಮರುಕ ; ಸಿದ್ಧರಾಮಯ್ಯ


ಸುಮಾರು ಎರಡುವರೆ ಕೋಟಿ ರೂಪಾಯಿಗಳನ್ನು ರಾಜ್ಯ ಸರ್ಕಾರ ಈ ಸಂಸ್ಥೆಗೆ ಬಿಡುಗಡೆ ಮಾಡಬೇಕಿದೆಯಂತೆ. ಅದನ್ನು ಬಿಡುಗಡೆ ಮಾಡಿಲ್ಲ. ಇದೇ ಚರಕದಲ್ಲಿ ಕಾರ್ಯ ಚಟುವಟಿಕೆ ನಿಲ್ಲುವುದಕ್ಕೂ ಒಂದು ಪ್ರಮುಖ ಕಾರಣವಾಗಿದೆ. ಚರಕ ಮಾರಾಟ ಮಳಿಗೆಗಳಲ್ಲಿ ಒಂದು ದಿನಕ್ಕೆ ಒಂದು ಲಕ್ಷ ರೂಪಾಯಿ ವ್ಯಾಪಾರ ಆಗುತ್ತಿದ್ದ ಜಾಗದಲ್ಲಿ ಈಗ 5 ಸಾವಿರ ವ್ಯಾಪಾರ ಸಹ ಆಗುತ್ತಿಲ್ಲ. ರಾಜ್ಯ ಸರ್ಕಾರ ನಮಗೆ ನೀಡಬೇಕಾಗಿರುವ ಹಣ ನೀಡಿದರೆ, ನಾವು ನಮ್ಮ ಕೆಲಸ ಆರಂಭಿಸಲು ಅನುಕೂಲ ಆಗುತ್ತೇ ಎನ್ನುತ್ತಾರೆ ಸಂಸ್ಥೆಯವರು.


ಸಾವಿರಾರೂ ಜನ ನೇಕಾರರಿಗೆ ಕೆಲಸ ನೀಡಿತ್ತು ಈ ಸಂಸ್ಥೆ. ಜೊತೆಗೆ ಚಕರದಲ್ಲಿಯೇ 850 ಕ್ಕೂ ಹೆಚ್ಚು ಜನ ಮಹಿಳೆಯರು ಕೆಲಸ ಮಾಡುತ್ತಿದ್ದಾರೆ. ಅವರ ಬದುಕು ಈಗ ಅತಂತ್ರವಾಗಿದೆ. ರಾಜ್ಯ ಸರ್ಕಾರ ಕೂಡಲೇ ಇದರ ಬಗ್ಗೆ ಗಮನ ಹರಿಸಬೇಕಿದೆ.

Published by:G Hareeshkumar
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು