• ಹೋಂ
  • »
  • ನ್ಯೂಸ್
  • »
  • ಜಿಲ್ಲೆ
  • »
  • ಗ್ರಹಣದ ದಿನ ಚಾಮುಂಡಿಬೆಟ್ಟ, ನಂಜನಗೂಡು ದೇವಾಲಯ ಮುಚ್ಚಲಿವೆ; ಆದರೆ ಈ ವೇಳೆ ಚಾಮುಂಡಿ, ವಿಷಕಂಠನಿಗೆ ನಡೆಯಲಿದೆ ವಿಶೇಷ ಪೂಜೆ

ಗ್ರಹಣದ ದಿನ ಚಾಮುಂಡಿಬೆಟ್ಟ, ನಂಜನಗೂಡು ದೇವಾಲಯ ಮುಚ್ಚಲಿವೆ; ಆದರೆ ಈ ವೇಳೆ ಚಾಮುಂಡಿ, ವಿಷಕಂಠನಿಗೆ ನಡೆಯಲಿದೆ ವಿಶೇಷ ಪೂಜೆ

ಬೆಟ್ಟದ ಮೇಲಿರುವ ಚಾಮುಂಡೇಶ್ವರಿ ದೇವಾಲಯ.

ಬೆಟ್ಟದ ಮೇಲಿರುವ ಚಾಮುಂಡೇಶ್ವರಿ ದೇವಾಲಯ.

ಗ್ರಹಣದ ಸ್ಪರ್ಶ ಕಾಲದಿಂದ ಗ್ರಹಣದ ಮೋಕ್ಷ ಕಾಲದವರೆಗೆ ಸತತ 3 ಗಂಟೆಗಳ ಕಾಲ ಪೂಜೆ ನೆರವೇರಲಿದ್ದು,  ಗ್ರಹಣ ಸಂದರ್ಭದಲ್ಲಿ ಚಾಮುಂಡೇಶ್ವರಿಯ ಮೂಲ ವಿಗ್ರಹಕ್ಕೆ ನಾಲ್ಕು ಬಾರಿ ಅಭಿಷೇಕ ನಡೆಯಲಿದೆ. ಸ್ವರ್ಶ ಕಾಲ, ಮಧ್ಯ ಕಾಲ ಹಾಗೂ ಮೋಕ್ಷ ಕಾಲದಲ್ಲಿ  ಚಾಮುಂಡಿಗೆ ಅಭಿಷೇಕ ನೆರವೇರಲಿದ್ದು,  ಗ್ರಹಣ ಪೂಜೆ ವೇಳೆ ಪ್ರಧಾನ ಅರ್ಚಕರನ್ನು ಬಿಟ್ಟು ಮತ್ಯಾರಿಗೂ ಪ್ರವೇಶವಿರುವುದಿಲ್ಲ.

ಮುಂದೆ ಓದಿ ...
  • Share this:

ಮೈಸೂರು; ನಾಳೆ ಅಪರೂಪದ ಸೂರ್ಯ ಗ್ರಹಣ ನೆರವೇರಲಿದೆ. ಈ ಹಿನ್ನಲೆಯಲ್ಲಿ ರಾಜ್ಯದ ಪ್ರಸಿದ್ದ ದೇವಾಲಯಗಳಾಗಿರುವ ಮೈಸೂರು ಜಿಲ್ಲೆಯ ಚಾಮುಂಡೇಶ್ವರಿ ದೇವಾಲಯ ಹಾಗೂ ನಂಜನಗೂಡಿನ ನಂಜುಂಡೇಶ್ವರ ದೇವಾಲಯಗಳಲ್ಲಿ  ಗ್ರಹಣದ ಸಂದರ್ಭದಲ್ಲಿ ವಿಶೇಷ ಪೂಜೆ ನೆರವೇರಿಲಿದೆ. ಆದರೆ ಎರಡೂ ದೇವಾಲಯಗಳಲ್ಲಿ ಭಕ್ತರ ಪ್ರವೇಶ ನಿಷೇಧ ಇರುವುದರಿಂದ ಕೇವಲ ಆಚರಣೆ ಮಾತ್ರ ನಡೆಯಲಿದೆ.


ಚಾಮುಂಡಿಬೆಟ್ಟದ ಚಾಮುಂಡೇಶ್ವರಿ ದೇವಾಲಯದಲ್ಲಿ  ನಾಳೆ ಭಾನುವಾರದ ಹಿನ್ನೆಲೆಯಲ್ಲಿ ದೇವಾಲಯ ಬಂದ್‌ ಇರಲಿದೆ. ಭಕ್ತರು ಹಾಗೂ ಸಾರ್ವಜನಿಕರಿಗೆ ಪ್ರವೇಶ ನಿಷೇಧ ಮಾಡಲಾಗಿದ್ದು, ಜಿಲ್ಲಾಡಳಿತದ ಆದೇಶದಂತೆ  ಶನಿವಾರ ಮತ್ತು ಭಾನುವಾರ ದೇವಾಲಯಕ್ಕೆ ಪ್ರವೇಶ ನಿಷೇಧ ಮಾಡಿದ್ದು ಭಕ್ತರ ಸಂಖ್ಯೆ ಹೆಚ್ಚಾಗುವ ಹಿನ್ನೆಲೆಯಲ್ಲಿ ದೇವರ ದರ್ಶನಕ್ಕೆ ಬ್ರೇಕ್ ಹಾಕಲಾಗಿದೆ. ಆದರೆ  ಸೂರ್ಯ ಗ್ರಹಣದ ನಿಮಿತ್ತ ಚಾಮುಂಡೇಶ್ವರಿ ದೇವಾಲಯದಲ್ಲಿ ವಿಶೇಷ ಪೂಜೆ ಇರಲಿದೆ. ಗ್ರಹಣದ ಸ್ಪರ್ಶ ಕಾಲದಿಂದ ಗ್ರಹಣದ ಮೋಕ್ಷ ಕಾಲದವರೆಗೆ ಸತತ 3 ಗಂಟೆಗಳ ಕಾಲ ಪೂಜೆ ನೆರವೇರಲಿದ್ದು,  ಗ್ರಹಣ ಸಂದರ್ಭದಲ್ಲಿ ಚಾಮುಂಡೇಶ್ವರಿಯ ಮೂಲ ವಿಗ್ರಹಕ್ಕೆ ನಾಲ್ಕು ಬಾರಿ ಅಭಿಷೇಕ ನಡೆಯಲಿದೆ. ಸ್ವರ್ಶ ಕಾಲ, ಮಧ್ಯ ಕಾಲ ಹಾಗೂ ಮೋಕ್ಷ ಕಾಲದಲ್ಲಿ  ಚಾಮುಂಡಿಗೆ ಅಭಿಷೇಕ ನೆರವೇರಲಿದ್ದು,  ಗ್ರಹಣ ಪೂಜೆ ವೇಳೆ ಪ್ರಧಾನ ಅರ್ಚಕರನ್ನು ಬಿಟ್ಟು ಮತ್ಯಾರಿಗೂ ಪ್ರವೇಶವಿರುವುದಿಲ್ಲ. ಗ್ರಹಣ ಮೋಕ್ಷವಾದ ನಂತರ ದೇವಾಲಯದ ಶುದ್ದಿಕಾರ್ಯ ನಡೆಯಲಿದೆ ಅಂತ ದೇವಾಲಯದ ಪ್ರಧಾನ ಅರ್ಚಕ ಡಾ.ಶಶಿಶೇಖರ್‌ ದೀಕ್ಷಿತ್‌ ಮಾಹಿತಿ ನೀಡಿದ್ದಾರೆ.


ಇತ್ತ ನಂಜನನಗೂಡಿನ ನಂಜುಂಡೇಶ್ವರ ದೇವಾಲಯದಲ್ಲೂ ಇದೇ ಪರಿಸ್ಥಿತಿ ಇದ್ದು, ಇಲ್ಲಿ ಪೂಜಾ ವಿಧಿವಿಧಾನಗಳು ಕೊಂಚ ಭಿನ್ನವಾಗಿವೆ. ನಾಳೆ ಭಾನುವಾರ ಹಿನ್ನೆಲೆಯಲ್ಲಿ ನಂಜುಂಡೇಶ್ವರ ದೇವಾಲಯ ಸಹ ಬಂದ್ ಇರಲಿದೆ.  ಭಕ್ತರು ಹಾಗೂ ಸಾರ್ವಜನಿಕರಿಗೆ ಪ್ರವೇಶ ನಿಷೇಧ ಮಾಡಲಾಗಿದ್ದು,  ಸೂರ್ಯ ಗ್ರಹಣ ನಿಮಿತ್ತ ನಂಜುಂಡೇಶ್ವರ ದೇವಾಲಯದಲ್ಲಿ ವಿಶೇಷ ಪೂಜೆ ನಡೆಯಲಿದೆ. ನಂಜುಂಡೇಶ್ವರ ದೇವಾಲಯದಲ್ಲಿ ಗ್ರಹಣದ ಸ್ಪರ್ಶ ಕಾಲದಲ್ಲಿ ಮಾತ್ರ ಪೂಜೆ ಇರಲಿದ್ದು ಗ್ರಹಣದ ಸ್ಪರ್ಶ ಕಾಲದಲ್ಲಿ ನಂಜುಂಡೇಶ್ವರನಿಗೆ ಒಮ್ಮೆ ಮಾತ್ರ ಅಭಿಷೇಕ ನೆರವೇರಲಿದೆ. ಗ್ರಹಣದ ನಂತರ ದೇವಾಲಯದ ಬಾಗಿಲು ಹಾಕುವ ಅರ್ಚಕರು ನಂತರ ಗ್ರಹಣ ಮುಗಿದ ಮೇಲೆ ಬಾಗಿಲು ತೆರೆಯಲಿದ್ದಾರೆ. ಗ್ರಹಣ ಪೂಜೆ ವೇಳೆ ಪ್ರಧಾನ ಅರ್ಚಕರನ್ನ ಬಿಟ್ಟು ಮತ್ಯಾರಿಗೂ ಪ್ರವೇಶವಿಲ್ಲ. ಗ್ರಹಣ ಮೋಕ್ಷಗೊಂಡ ನಂತರ ದೇವಾಲಯದ ಶುದ್ದಿಕಾರ್ಯ ನಡೆಯಲಿದೆ  ಆ ನಂತರ ಎಂದಿನಂತೆ ಪೂಜಾ ಕೈಂಕರ್ಯಗಳು ಮುಂದುವರೆಲಿವೆ ಅಂತ ದೇವಾಲಯದ ಪ್ರಧಾನ ಅರ್ಚಕ  ನಾಗಚಂದ್ರ ದೀಕ್ಷಿತ್‌ ಮಾಹಿತಿ ನೀಡಿದ್ದಾರೆ.


ಇದನ್ನು ಓದಿ: ಭಾರತದಲ್ಲಿ 4 ಲಕ್ಷದ ಗಡಿ ಸಮೀಪಿಸಿದ ಕೊರೋನಾ ಸೋಂಕಿತರ ಸಂಖ್ಯೆ


ಇದನ್ನು ಹೊರತುಪಡಿಸಿದರೆ ಮೈಸೂರಿನ ಸಣ್ಣಪುಟ್ಟ ದೇವಾಲಯಗಳಲ್ಲಿ ಒಂದೊಂದು ರೀತಿಯ ಆಚರಣೆಗಳು ನಡೆಯಲಿದೆ. ನಗರದ ಅಮೃತೇಶ್ವರ ದೇವಾಲಯದಲ್ಲಿ ಗ್ರಹಣ ದೋಷ ಪರಿಹಾರಕ್ಕಾಗಿ ವಿಶೇಷ ಹೋಮ ಹವನ ನಡೆದರೆ ಇತರೆ ವೆಂಕಟೇಶ್ವರ ಹಾಗೂ ಪಾರ್ವತಿ ದೇವಾಲಯಗಳಲ್ಲಿ ಗ್ರಹಣದ ಸಂದರ್ಭದಲ್ಲಿ ಬಾಗಿಲು ಮುಚ್ಚಿ ಗ್ರಹಣ ಮುಗಿದ ಮೇಲೆ ಶುದ್ದಿಕಾರ್ಯ ಮಾಡಲಿದ್ದಾರೆ. ನಾಳಿನ ಸೂರ್ಯಗ್ರಹಣ ಕರ್ನಾಟಕದಲ್ಲಿ ಶೇ.40 ಗೋಚರಿಸುವ ಸಾಧ್ಯತೆ ಇದ್ದು ಅಪರೂಪದ ಖಗೋಳ ಮಂಡಲದ ಕೌತುಕ ನೋಡಲು ಸಾರ್ವಜನಿಕರು ಕಾತುರರಾಗಿದ್ದಾರೆ.

First published: