ಚಾಮರಾಜನಗರ ಜಿಲ್ಲೆಯಲ್ಲಿ ಕೊರೋನಾ ಟೆಸ್ಟ್ ಕುರಿತು ಸಚಿವರಿಂದ ಸುಳ್ಳು ಮಾಹಿತಿ ; ಶಾಸಕ ಆರ್​. ನರೇಂದ್ರ ಗಂಭೀರ ಆರೋಪ

ಜಿಲ್ಲಾಡಳಿತ ಸರಿಯಾಗಿ ಕೆಲಸ ಮಾಡದೆ ಕೊರೋನಾ ಸೊಂಕು ಹರಡುವುದನ್ನು ತಡೆಗಟ್ಟುವಲ್ಲಿ ವಿಫಲವಾಗಿದೆ. 24 ಗಂಟೆಯೊಳಗೆ ಪರೀಕ್ಷಾ ವರದಿ ನೀಡಬೇಕು. ಆದರೆ, 8 ರಿಂದ 10 ದಿನಗಳಾದರೂ ನೀಡುತ್ತಿಲ್ಲ

news18-kannada
Updated:July 16, 2020, 1:05 PM IST
ಚಾಮರಾಜನಗರ ಜಿಲ್ಲೆಯಲ್ಲಿ ಕೊರೋನಾ ಟೆಸ್ಟ್ ಕುರಿತು ಸಚಿವರಿಂದ ಸುಳ್ಳು ಮಾಹಿತಿ ; ಶಾಸಕ ಆರ್​. ನರೇಂದ್ರ ಗಂಭೀರ ಆರೋಪ
ಶಾಸಕ ಆರ್.ನರೇಂದ್ರ
  • Share this:
ಚಾಮರಾಜನಗರ(ಜುಲೈ.16): ಚಾಮರಾಜನಗರ ಜಿಲ್ಲೆಯ ಕೊರೋನಾ ಟೆಸ್ಟ್ ರಿಪೋರ್ಟ್ ಅಂಕಿ ಅಂಶಗಳ ಬಗ್ಗೆ ಸತ್ಯಾಂಶ ಮರೆಮಾಚಲಾಗುತ್ತಿದೆ ಎಂಬ ಗಂಭೀರ ಆರೋಪ ಕೇಳಿ ಬರುತ್ತಿದೆ. ಜಿಲ್ಲಾ ಉಸ್ತುವಾರಿ ಸಚಿವ ಸುರೇಶ್ ಕುಮಾರ್ ಹೇಳುವುದು ಒಂದಾದರೇ, ವಾಸ್ತವಾಂಶವೇ ಬೇರೆ ಇದ್ದು, ಮಾಧ್ಯಮಗಳಿಗೆ ಸುಳ್ಳು ಮಾಹಿತಿ ನೀಡಲಾಗಿದೆ ಎಂದು ಶಾಸಕ ಆರ್. ನರೇಂದ್ರ ಆರೋಪ ಮಾಡಿದ್ದಾರೆ.

ಜಿಲ್ಲೆಯಲ್ಲಿ ಇದುವರೆಗೆ 14,775 ಸ್ಯಾಂಪಲ್ಸ್ ಟೆಸ್ಟ್ ನಡೆಸಲಾಗಿದ್ದು, ಇನ್ನೂ 1,600 ಸ್ಯಾಂಪಲ್ಸ್ ಟೆಸ್ಟ್ ಬಾಕಿ ಇದೆ ಎಂದು ಸಚಿವ ಸುರೇಶ್ ಕುಮಾರ್ ಹೇಳಿದ್ದರು. ಆದರೆ, ಜಿಲ್ಲೆಯಲ್ಲಿ ಇನ್ನೂ 3,362 ಸ್ಯಾಂಪಲ್ಸ್ ಟೆಸ್ಟ್ ಬಾಕಿ ಇದೆ ಎಂದು ಕೋವಿಡ್ ಪರಿಶೀಲನಾ ಸಭೆಯಲ್ಲಿ ಸ್ವತ: ಜಿಲ್ಲಾ ಆರೋಗ್ಯ ಅಧಿಕಾರಿಗಳೆ ಮಾಹಿತಿ ನೀಡಿದ್ದಾರೆ. ಆದರೆ, ಸಚಿವರು ಮಾಧ್ಯಮಗಳಿಗೆ ಸುಳ್ಳು ಅಂಕಿ ಅಂಶ ನೀಡಿದ್ದಾರೆ ಎಂದು ಶಾಸಕ ಆರ್. ನರೇಂದ್ರ ಹೇಳಿದ್ದಾರೆ.

ಜಿಲ್ಲಾಡಳಿತ ಸರಿಯಾಗಿ ಕೆಲಸ ಮಾಡದೆ ಕೊರೋನಾ ಸೊಂಕು ಹರಡುವುದನ್ನು ತಡೆಗಟ್ಟುವಲ್ಲಿ ವಿಫಲವಾಗಿದೆ. 24 ಗಂಟೆಯೊಳಗೆ ಪರೀಕ್ಷಾ ವರದಿ ನೀಡಬೇಕು. ಆದರೆ, 8 ರಿಂದ 10 ದಿನಗಳಾದರೂ ನೀಡುತ್ತಿಲ್ಲ, ಹಾಗಾಗಿ ಪರೀಕ್ಷೆಗೆ ಒಳಪಟ್ಟವರು ವರದಿ ಬರುವ ಮುನ್ನವೇ ಎಲ್ಲಾ ಕಡೆ ಓಡಾಡುತ್ತಿದ್ದಾರೆ. ಒಂದು ವೇಳೆ ಅವರಿಗೆ ಪಾಸಿಟಿವ್ ಇದ್ದರೆ ಸಾಕಷ್ಟು ಜನರಿಗೆ ಸೋಂಕು ಹರಡಿ ಪರಿಸ್ಥಿತಿ ಕೈಮೀರುತ್ತದೆ ಎಂದರು.

ಕೆಲವೆಡೆ ಐದು ದಿನಗಳಾದರೂ ಕಂಟೈನ್ ​ಮೆಂಟ್ ಝೋನ್ ನಿವಾಸಿಗಳ ಗಂಟಲು ದ್ರವ ಪರೀಕ್ಷೆ ನಡೆಸಿಲ್ಲ ತಮ್ಮ ಹನೂರು ಕ್ಷೇತ್ರದ ಕೊಂಗರಹಳ್ಳಿಯಲ್ಲಿ ಒಬ್ಬರು ಕೊರೋನಾ ಸೋಂಕಿನಿಂದ ಮೃತಪಟ್ಟು ಆರು ದಿನಗಳಾಗಿವೆ. ಇನ್ನೂ ಅಲ್ಲಿನ ಕಂಟೈನ್​ಮೆಂಟ್ ಝೋನ್ ನಿವಾಸಿಗಳ ಗಂಟಲು ದ್ರವ ಪರೀಕ್ಷೆ ನಡೆಸಿಲ್ಲ ಎಂದು ಅವರು ಆರೋಪಿಸಿದ್ದಾರೆ.

ಇದನ್ನೂ ಓದಿ : ಸೋಂಕಿತನ ಮನೆಗೆ ಕನ್ನ ಹಾಕಿದ ದುಷ್ಕರ್ಮಿಗಳು : ಹಿಂಡಲಗಾ ಜೈಲಿಗೂ ಕಾಲಿಟ್ಟ ಮಹಾಮಾರಿ ಕೊರೋನಾ

ತಾಲೂಕು ವೈದ್ಯಾಧಿಕಾರಿಗಳನ್ನು ಕೇಳಿದರೆ ನಮ್ಮಲ್ಲಿ ಅಗತ್ಯ ಪ್ರಮಾಣದ ಉಪಕರಣಗಳು, ಟೆಸ್ಟಿಂಗ್ ಟ್ಯೂಬ್ ಇಲ್ಲ ಖಾಲಿಯಗಿದೆ ಅಂತಾರೆ. ಈ ಬಗ್ಗೆ ಸಭೆಯಲ್ಲಿ ಪ್ರಸ್ತಾಪಿಸಿದಾಗ ಮೊದಲು ಡಿ.ಹೆಚ್.ಓ ಒಪ್ಪಿಕೊಳ್ಳಲಿಲ್ಲ. ಆದರೆ ಜಿಲ್ಲಾಧಿಕಾರಿಗಳೇ ಮಧ್ಯೆ ಪ್ರವೇಶಿಸಿ ಪರೀಕ್ಷಾ ಸಲಕರಣೆಗಳು ಹಾಗೂ ಟೆಸ್ಟಿಂಗ್ ಟ್ಯೂಬ್ ಖಾಲಿಯಾಗಿದೆ.
ಶೀಘ್ರದಲ್ಲೆ ತರಿಸುತ್ತೇವೆ ಎನ್ನುತ್ತಾರೆ, ಸರ್ಕಾರ ಚಾಮರಾಜನಗರದಂತಹ ಒಂದು ಸಣ್ಣ ಜಿಲ್ಲೆಯನ್ನೇ ಸಮರ್ಥವಾಗಿ ನಿಭಾಯಿಸಿಲು ಆಗದಿದ್ದ ಮೇಲೆ ಇನ್ನು ಒಂದುವರೆ ಕೋಟಿ ಜನಸಂಖ್ಯೆ ಇರುವ ಬೆಂಗಳೂರಿನ ಕಥೆ ಏನು ? ಎಂದು ಶಾಸಕ ನರೇಂದ್ರ ಕಿಡಿಕಾರಿದ್ದಾರೆ
Published by: G Hareeshkumar
First published: July 16, 2020, 12:53 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading