HOME » NEWS » District » CHAMARAJANAGARA DISTRICT IS DEVELOPING IN ALL ASPECTS AND HERE IS THE PROMOTIONAL VIDEO NCHM HK

ಚೆಲುವ ಚಾಮರಾಜನಗರಕ್ಕೆ ಮತ್ತಷ್ಟು ಪವರ್: ಜಿಲ್ಲೆಯ ಪ್ರವಾಸೋದ್ಯಮದ ಪ್ರಮೋಷನಲ್ ವಿಡಿಯೋ ಸಿದ್ದ

ಜಿಲ್ಲೆಯ ಪ್ರವಾಸೋದ್ಯಮ ಅಭಿವೃದ್ಧಿಗೆ ಚೆಲುವ ಚಾಮರಾಜನಗರದ ರಾಯಭಾರಿ ಪವರ್ ಸ್ಟಾರ್ ಪುನೀತ್ ರಾಜ್​​​ಕುಮಾರ್ ಸಂದೇಶ ಇರುವ  ಪ್ರಮೋಷನ್ ವಿಡಿಯೋವೊಂದನ್ನು ಜಿಲ್ಲಾಡಳಿತ ಸಿದ್ದಪಡಿಸಿದೆ

news18-kannada
Updated:November 11, 2020, 10:00 PM IST
ಚೆಲುವ ಚಾಮರಾಜನಗರಕ್ಕೆ ಮತ್ತಷ್ಟು ಪವರ್: ಜಿಲ್ಲೆಯ ಪ್ರವಾಸೋದ್ಯಮದ ಪ್ರಮೋಷನಲ್ ವಿಡಿಯೋ ಸಿದ್ದ
ಸಾಂದರ್ಭಿಕ ಚಿತ್ರ
  • Share this:
ಚಾಮರಾಜನಗರ(ನವೆಂಬರ್. 11): ತಮಿಳುನಾಡು ಹಾಗು ಕೇರಳ ರಾಜ್ಯಗಳ ಗಡಿಗೆ ಹೊಂದಿಕೊಂಡಂತಿರುವ ಚಾಮರಾಜನಗರ ಜಿಲ್ಲೆ ಪ್ರಾಕೃತಿಕವಾಗಿ ಶ್ರೀಮಂತ ಜಿಲ್ಲೆ. ಆದರೆ, ಇಲ್ಲಿನ ಪ್ರಕೃತಿ ಸೌಂದರ್ಯ ಹಾಗು ಪ್ರವಾಸಿತಾಣಗಳು ಹೊರಜಗತ್ತಿಗೆ ಸರಿಯಾದ ರೀತಿಯಲ್ಲಿ ಬಿಂಬಿತವಾಗಿಲ್ಲ. ಈ ಹಿನ್ನಲೆಯಲ್ಲಿ ಜಿಲ್ಲೆಯ ಪ್ರವಾಸೋದ್ಯಮ ಅಭಿವೃದ್ಧಿಗೆ ಚೆಲುವ ಚಾಮರಾಜನಗರದ ರಾಯಭಾರಿ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಸಂದೇಶ ಇರುವ ಪ್ರಮೋಷನ್ ವಿಡಿಯೋವೊಂದನ್ನು ಜಿಲ್ಲಾಡಳಿತ ಸಿದ್ದಪಡಿಸಿದೆ. ರಾಜ್ಯದಲ್ಲೆ ಎರಡು ಹುಲಿ ರಕ್ಷಿತಾರಣ್ಯಗಳಲಿರುವ ಏಕೈಕ ಜಿಲ್ಲೆ ಎಂದರೆ ಅದು ಚಾಮರಾಜನಗರ, ಇಷ್ಟೆ ಅಲ್ಲ ರಾಜ್ಯದಲ್ಲೇ ಎರಡು ವನ್ಯಧಾಮಗಳನ್ನು ಹೊಂದಿರುವ ಏಕೈಕ ಜಿಲ್ಲೆ ಎಂಬ ಹೆಗ್ಗಳಿಕೆಗೂ ಚಾಮರಾಜನಗರ ಜಿಲ್ಲೆ ಪಾತ್ರವಾಗಿದೆ. ಪೂರ್ವ ಪಶ್ಚಿಮ ಘಟ್ಟಗಳ ಬೆಸುಗೆಯ ವಿಶಿಷ್ಟ ತಾಣವಾದ ಚಾಮರಾಜನಗರ ಜಿಲ್ಲೆ ಪಾಕೃತಿಕವಾಗಿ ಶ್ರೀಮಂತ ಜಿಲ್ಲೆ. ಅಪ್ರತಿಮ ನೈಸರ್ಗಿಕ ಸಂಪತ್ತು ಹಾಗು ಶ್ರೀಮಂತ ಸಾಂಸ್ಕೃತಿಕ  ಪರಂಪರೆ ಹೊಂದಿರುವ ಕೆಲವೆ ಜಿಲ್ಲೆಗಳ ಪೈಕಿ ಚಾಮರಾಜನಗರ ಕೂಡ ಒಂದು. 

ಹುಲಿ, ಚಿರತೆ, ಆನೆ, ಕರಡಿ, ಕಾಡಮ್ಮೆ, ಜಿಂಕೆ, ಕಡವೆ, ಮೊದಲಾದ ಅಸಂಖ್ಯಾತ ಪ್ರಾಣಿಗಳ ಆವಾಸ ಸ್ಥಾನವಾದ  ಬಂಡೀಪುರ ಹುಲಿರಕ್ಷಿತಾರಣ್ಯ, ಬಿ.ಆರ್.ಟಿ. ಹುಲಿರಕ್ಷಿತಾರಣ್ಯ, ಮಲೆಮಹದೇಶ್ವರ ವನ್ಯಧಾಮ, ಕಾವೇರಿ ವನ್ಯಧಾಮ ಗಳು ಪರಿಸರ ಪ್ರವಾಸೋದ್ಯಮಕ್ಕೆ ಹೇಳಿ ಮಾಡಿಸಿದಂತಿವೆ, ಭರಚುಕ್ಕಿ ಜಲಪಾತ, ಹೊಗೇನಕಲ್ ಜಲಪಾತಗಳು ಕಾವೇರಿ ನದಿಯ ದೃಶ್ಯ ವೈಭವಕ್ಕೆ ಸಾಕ್ಷಿಯಾಗಿವೆ,

ಮಲೆಮಹದೇಶ್ವರ ಬೆಟ್ಟ, ಬಿಳಿಗಿರಿರಂಗನ ಬೆಟ್ಟದಂತ ಆಧ್ಯಾತ್ಮ ಹಾಗು ಧಾರ್ಮಿಕ ತಾಣಗಳಿವೆ. ಇತಿಹಾಸ ಸಾರುವ  ಹತ್ತಾರ ಪಾರಂಪರಿಕ  ಸ್ಥಳಿಗಳಿವೆ, ಗೊರವರ ಕುಣಿತ, ನೀಲಗಾರ ಪರಂಪರೆ, ಬುಡಕಟ್ಟು ಸೋಲಿಗರ ಗೊರುಕನ ಕುಣಿತದಂತಹ  ಶ್ರೀಮಂತ ಜಾನಪದ ಕಲೆಗಳ ಕಣಜವಾಗಿದೆ. ಆದರೆ, ಈ ಎಲ್ಲಾ ಪಾಕೃತಿಕ ಸೌಂದರ್ಯ ತಾಣಗಳು, ಜಾನಪದಕಲೆಗಳು ಹೊರಜಗತ್ತಿನಲ್ಲಿ ಸರಿಯಾದ ರೀತಿಯಲ್ಲಿ ಬಿಂಬಿತವಾಗಿಲ್ಲ. ಈ ಹಿನ್ನಲೆಯಲ್ಲಿ ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಪರಿಶ್ರಮದಿಂದ ಜಿಲ್ಲಾಡಳಿತ ಚೆಲುವ ಚಾಮರಾಜನಗರ ಎಂಬ ಜಿಲ್ಲಾ ಪ್ರವಾಸಿ ತಾಣಗಳ ಕೈಪಿಡಿ ಹೊರತಂದಿದೆ.

ಇದೀಗ ಜಿಲ್ಲೆಯ ಪ್ರವಾಸೋದ್ಯಮ ಅಭಿವೃದ್ಧಿಗೆ ಚೆಲುವ ಚಾಮರಾಜನಗರದ ರಾಯಭಾರಿ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಸಂದೇಶ ಇರುವ  ಪ್ರಮೋಷನ್ ವಿಡಿಯೋವೊಂದನ್ನು ಜಿಲ್ಲಾಡಳಿತ ಸಿದ್ದಪಡಿಸಿದೆ.

ಇದರಲ್ಲಿ ಜಿಲ್ಲೆಯ ಪ್ರವಾಸಿ ತಾಣಗಳ ಸೌಂದರ್ಯ ಅನಾವರಣಗೊಂಡಿದೆ. ಜಿಲ್ಲೆಯ ಸಂಸ್ಕೃತಿ ಮತ್ತು ಪ್ರಕೃತಿಯ ಸಮಾಗಮದ ದೃಶ್ಯ ವೈಭವ ಕಣ್ಮನ ಸೆಳೆಯುತ್ತಿದೆ. ಚಾಮರಾಜನಗರ ಜಿಲ್ಲೆಯ ನೈಸರ್ಗಿಕ ಸೊಬಗು ಬಿಂಬಿತವಾಗಿದೆ. ಈಗಾಗಲೇ ಜಿಲ್ಲೆಯ ಅಭಿವೃದ್ಧಿಯ ರಾಯಭಾರಿಯಾಗಿರುವ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಯಾವುದೇ ರೀತಿಯ ಸಂಭಾವನೆ ಪಡೆಯದೆ ಸಂದೇಶ ನೀಡುವ ಮೂಲಕ ತವರು ಜಿಲ್ಲೆಯ ಅಭಿವೃದ್ಧಿಗೆ ಸಾಥ್ ನೀಡಿದ್ದಾರೆ

ಜಿಲ್ಲೆಯ ಪ್ರವಾಸೋದ್ಯಮಕ್ಕೆ ಮತ್ತಷ್ಟು ಉತ್ತೇಜನ ನೀಡಲು ಈ ಪ್ರಮೋಷನಲ್ ವಿಡಿಯೋ ತಯಾರಿಸಲಾಗಿದೆ. ಬಹಳಷ್ಟು ಜನರ ಕಣ್ಣಿಗೆ ಕಾಣದ ಪ್ರವಾಸಿ ತಾಣಗಳ ಚೆಲುವನ್ನು ಇಲ್ಲಿ ಬಿಂಬಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಹೇಳುತ್ತಾರೆ.

ಇದನ್ನೂ ಓದಿ : ಜೆಡಿಎಸ್ ಪಕ್ಷ ಮುಗಿಸುವುದಕ್ಕೆ ಎರಡೂ ರಾಷ್ಟ್ರೀಯ ಪಕ್ಷಗಳು ಮುಂದಾಗಿವೆ: ಹೆಚ್ ಡಿ ರೇವಣ್ಣಪುನೀತ್ ರಾಜಕುಮಾರ್  ಕೇವಲ ಪ್ರವಾಸೋದ್ಯಮದ ರಾಯಭಾರಿಯಲ್ಲ, ಅವರು ಚಾಮರಾಜನಗರ ಜಿಲ್ಲೆಯ ಸರ್ವಾಂಗೀಣ ಅಭಿವೃದ್ಧಿಯನ್ನು ಪ್ರತಿಬಿಂಬಿಸುವ ರಾಯಭಾರಿಯಾಗಿದ್ದಾರೆ. ಜಿಲ್ಲೆಯ  ಪ್ರವಾಸೋದ್ಯಮದ ಬಗ್ಗೆ ಸಂದೇಶ ನೀಡುವಂತೆ ಕೋರಿಕೊಂಡಾಗ ಪುನೀತ್ ರಾಜಕುಮಾರ್, ಯಾವುದೇ ಸಂಭಾವನೆ ತೆಗೆದುಕೊಳ್ಳದೆ ವಿಡಿಯೋ ಸಂದೇಶ ನೀಡಿದ್ದಾರೆ. ಆ ಮೂಲಕ ತವರು ಜಿಲ್ಲೆಯ ಅಭಿವೃದ್ಧಿಗೆ ಸಾಥ್ ನೀಡಿದ್ದಾರೆ ಎಂದು ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಪುನೀತ್ ರಾಜ್​​ಕುಮಾರ್ ಅವರಿಗೆ ಜಿಲ್ಲಾಧಿಕಾರಿಗಳು ಪತ್ರ ಬರೆದು ಕೃತಜ್ಷತೆ ಸಲ್ಲಿಸಿದ್ದು, ಇದು ವರನಟ ಡಾ.ರಾಜ್ ಕುಮಾರ್ ಅವರ ಹುಟ್ಟೂರಿನ ಮೇಲೆ ಇಟ್ಟಿರುವ ಪ್ರೀತಿಯ ದ್ಯೋತಕವಾಗಿದೆ ಎಂದಿದ್ದಾರೆ.
Published by: G Hareeshkumar
First published: November 11, 2020, 7:28 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories