HOME » NEWS » District » CHAMARAJANAGAR TRAGEDY COPS ATTACK ON HOSPITAL AND COLLECT SOME IMPORTANT FILES MAK

Chamarajanagara Tragedy: ಚಾಮರಾಜನಗರ ದುರಂತದ ಹಿನ್ನೆಲೆ ದಾಖಲೆಗಳ ಸೀಜ್​ಗೆ ಹೈಕೋರ್ಟ್​ ಸೂಚನೆ; ಆಸ್ಪತ್ರೆ ಮೇಲೆ ಪೊಲೀಸರ ದಾಳಿ!

ಈ ಘಟನೆಯನ್ನು ನ್ಯಾಯಾಂಗ ತನಿಖೆಗೆ ನೀಡಬೇಕು ಎಂದು ಹೈಕೋರ್ಟ್​ ಸರ್ಕಾರಕ್ಕೆ ಸ್ವತಃ ಆದೇಶಿಸಿತ್ತು. ಈ ಹಿನ್ನೆಲೆಯಲ್ಲಿ ಸರ್ಕಾರ ಸಹ ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ನೀಡಿದೆ. ಇದರ ಬೆನ್ನಿಗೆ ಪೊಲೀಸರು ದಾಳಿ ನಡೆಸಿದ್ದು, ಪ್ರಮುಖ ದಾಖಲೆಗಳನ್ನು ವಶಕ್ಕೆ ಪಡೆದಿದ್ದಾರೆ.

news18-kannada
Updated:May 5, 2021, 5:25 PM IST
Chamarajanagara Tragedy: ಚಾಮರಾಜನಗರ ದುರಂತದ ಹಿನ್ನೆಲೆ ದಾಖಲೆಗಳ ಸೀಜ್​ಗೆ ಹೈಕೋರ್ಟ್​ ಸೂಚನೆ; ಆಸ್ಪತ್ರೆ ಮೇಲೆ ಪೊಲೀಸರ ದಾಳಿ!
ಆಸ್ಪತ್ರೆಯ ಮೇಲೆ ದಾಳಿ ನಡೆಸಿರುವ ಪೊಲೀಸರು.
  • Share this:
ಚಾಮರಾಜನಗರ (ಮೇ 05): ಆಕ್ಸಿಜನ್​ ಕೊರತೆಯಿಂದಾಗಿ ಚಾಮರಾಜನಗರದಲ್ಲಿ ಮೊನ್ನೆ 24 ಜನ ಮೃತಪಟ್ಟಿದ್ದರು. ಈ ಸುದ್ದಿ ದೇಶದೆಲ್ಲೆಡೆ ದೊಡ್ಡ ಮಟ್ಟದ ಸದ್ದು ಮಾಡಿತ್ತು. ಅಲ್ಲದೆ, ವಿರೋಧ ಪಕ್ಷದ ನಾಯಕರು ಘಟನೆಗೆ ಸಂಬಂಧಿಸಿದಂತೆ ಆಡಳಿತ ಪಕ್ಷವನ್ನು ತರಾಟೆಗೆ ತೆಗೆದುಕೊಂಡಿದ್ದರು. ಈ ಘಟನೆಯ ನಂತರ ಸರ್ಕಾರವೂ ತುಸು ಎಚ್ಚೆತ್ತಂತಿದೆ. ಅಲ್ಲದೆ, ಈ ನಡುವೆ ಹೈಕೋರ್ಟ್​ ಸಹ ಈ ಘಟನೆಯ ಬಗ್ಗೆ ಕಳವಳ ವ್ಯಕ್ತಪಡಿಸಿತ್ತು. ಅಲ್ಲದೆ, ಆಕ್ಸಿಜನ್ ಕೊರತೆಯಿಂದ 24 ಮಂದಿ ಕೊರೋನಾ ರೋಗಿಗಳ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ದಾಖಲೆಗಳನ್ನು ಸೀಜ್ ಮಾಡಲು ಆದೇಶ ಹೊರಡಿಸಿತ್ತು. ಈ ಹಿನ್ನೆಲೆಯಲ್ಲಿ ಹಿರಿಯ ಅಧಿಕಾರಿಗಳು ಇಂದು ಆಸ್ಪತ್ರೆಯ ಮೇಲೆ ದಾಳಿ ನಡೆಸಿ ಮಹತ್ವದ ದಾಖಲೆಗಳನ್ನು ವಶಕ್ಕೆ ಪಡೆದಿದ್ದಾರೆ ಎಂದು ತಿಳಿದುಬಂದಿದೆ.

ಈ ಘಟನೆಯನ್ನು ನ್ಯಾಯಾಂಗ ತನಿಖೆಗೆ ನೀಡಬೇಕು ಎಂದು ಹೈಕೋರ್ಟ್​ ಸರ್ಕಾರಕ್ಕೆ ಸ್ವತಃ ಆದೇಶಿಸಿತ್ತು. ಈ ಹಿನ್ನೆಲೆಯಲ್ಲಿ ಸರ್ಕಾರ ಸಹ ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ನೀಡಿದೆ. ಇದರ ಬೆನ್ನಿಗೆ ಪೊಲೀಸರು ದಾಳಿ ನಡೆಸಿದ್ದು, ಪ್ರಮುಖ ದಾಖಲೆಗಳನ್ನು ವಶಕ್ಕೆ ಪಡೆದಿರುವುದು ಪ್ರಕರಣದ ಸತ್ಯಾಸತ್ಯತೆಗಳು ಬಯಲಾಗುವ ಸೂಚನೆಗಳನ್ನು ನೀಡಿದೆ.

ಡಿವೈಎಸ್​ಪಿ ಪ್ರಿಯದರ್ಶಿನಿ ಸಾಣೆಕೊಪ್ಪ ನೇತೃತ್ವದಲ್ಲಿ ದಾಳಿ ಜಿಲ್ಲಾಸ್ಪತ್ರೆ, ಜಿಲ್ಲಾಧಿಕಾರಿ ಕಚೇರಿ, ಡಿಎಚ್ಓ ಕಚೇರಿ, ಸರ್ಕಾರಿ ವೈದ್ಯಕೀಯ ಕಾಲೇಜು, ಡೀನ್ ಕಚೇರಿ ಸೇರಿದಂತೆ ಐದು ಕಡೆಗಳಲ್ಲಿ ನಡೆಸಿದ್ದು, ಘಟನೆಗೆ ಸಂಬಂಧಿಸಿದ ಪ್ರಮುಖ ದಾಖಲೆಗಳನ್ನು ವಶಕ್ಕೆ ಪಡೆಯಲಾಗಿದೆ. ಈ ದಾಳಿಯನ್ನು ವಿಡಿಯೋ ಚಿತ್ರೀಕರಣವೂ ಮಾಡಲಾಗಿದೆ ಎಂದು ತಿಳಿದುಬಂದಿದೆ.

ಪ್ರಕರಣದ ಹಿನ್ನೆಲೆ:

ಚಾಮರಾಜನಗರ ಕೋವಿಡ್ ಆಸ್ಪತ್ರೆಯಲ್ಲಿ ಆಕ್ಸಿಜನ್ ಕೊರತೆಯಿಂದಾಗಿ 24 ಮಂದಿ ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ. ಕೊರೋನಾ ಸೋಂಕಿತರು ಮೃತಪಟ್ಟಿರುವ ವಿಷಯವನ್ನು ಆರೋಗ್ಯಾಧಿಕಾರಿಗಳು ಖಚಿತಪಡಿಸಿದ್ದಾರೆ. ಆದರೆ ಈ ಬಗ್ಗೆ ಚಾಮರಾಜನಗರ ಜಿಲ್ಲಾಡಳಿತ ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲವಾದರೂ, ಆಮ್ಲಜನಕ ಕೊರತೆಯಿಂದಲೇ ಕೋವಿಡ್ ರೋಗಿಗಳು ಬಲಿಯಾಗಿರುವುದು ಮೇಲ್ನೋಟಕ್ಕೆ ಸ್ಪಷ್ಟವಾಗಿದೆ.

ಸಾವಿನ ಸಂಖ್ಯೆ ಏರುತ್ತಿದ್ದಂತೆ ಹೆಚ್ಚುವರಿ ಜಿಲ್ಲಾಧಿಕಾರಿ ಕಾತ್ಯಾಯಿನಿದೇವಿ, ಹೆಚ್ಚುವರಿ ಎಸ್ಪಿ ಅನಿತಾಹದ್ದಣ್ಣನವರ್ ಜಿಲ್ಲಾಸ್ಪತ್ರೆಗೆ ದೌಡಾಯಿಸಿದ್ದರು. ಮೃತರ ಕುಟುಂಬಸ್ಥರು ಆಸ್ಪತ್ರೆ ಮುಂದೆ ಜಮಾಯಿಸಿದ್ದು, ಅವರ ಆಕ್ರಂದನ ಮುಗಿಲು ಮುಟ್ಟಿತ್ತು. ಚಾಮರಾಜನಗರದಲ್ಲಿ ಲಿಕ್ವಿಡ್ ಆಕ್ಸಿಜನ್ ಪ್ಲಾಂಟ್ ನಿರ್ಮಾಣ ಮಾಡಿದ್ದರೂ ಆಕ್ಸಿಜನ್​ ಪರದಾಟ ಮಾತ್ರ ತಪ್ಪಿಲ್ಲ. ಆದರೆ, ಮೃತರು ಆಕ್ಸಿಜನ್ ಕೊರತೆಯಿಂದ ಸಾವನ್ನಪ್ಪಿಲ್ಲ ಎಂದು ಆರೋಗ್ಯ ಸಚಿವ ಸುಧಾಕರ್ ಹೇಳುತ್ತಿದ್ದಾರೆ.

ಇದನ್ನೂ ಓದಿ: Siddaramaiah: ಕೊರೋನಾಗಿಂತ ಅಪಾಯಕಾರಿ ತೇಜಸ್ವಿ ಸೂರ್ಯ ತಲೆಯಲ್ಲಿರುವ ಕೋಮು ವೈರಸ್​; ಸಿದ್ದರಾಮಯ್ಯ ಛೀಮಾರಿಆದರೆ, ಸಚಿವ ಸುಧಾಕರ್ ಅವರ ಕಾರ್ಯ ಕ್ಷಮತೆಯೇ ಇದೀಗ ಸರ್ಕಾರದಲ್ಲಿ ಪ್ರಶ್ನಾರ್ಥವಾಗಿದೆ. ಏಕೆಂದರೆ ಚಾಮರಾಜನಗರದ ಬೆನ್ನಿಗೆ ಕಲಬುರ್ಗಿಯ ಅಫಜಲಪುರ ಆಸ್ಪತ್ರೆಯಲ್ಲಿಯೂ ಆಕ್ಸಿಜನ್ ಕೊರತಯಿಂದಾಗಿ ನಾಲ್ಕು ಜನ ಸಾವನ್ನಪ್ಪಿದ್ದ ಸುದ್ದಿ ರಾಜ್ಯದಲ್ಲಿ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿತ್ತು. ಈ ನಡುವೆ ಸಂಸದ ತೇಜಸ್ವಿ ಸೂರ್ಯ ಬೆಡ್​ ಬ್ಲಾಕಿಂಗ್ ದಂಧೆಯನ್ನು ಹೊರಗೆಡವಿದ್ದರು. ಇದರಿಂದ ಸಾಮಾನ್ಯವಾಗಿ ಕೋವಿಡ್ ವಾರ್ ರೂಂ ಜವಾಬ್ದಾರಿ ಹೊತ್ತಿದ್ದ ಸಚಿವ ಸುಧಾಕರ್ ಮುಖಭಂಗ ಅನುಭವಿಸುವಂತಾಯ್ತು.
Youtube Video

ಹೀಗಾಗಿ ಈ ಜವಾಬ್ದಾರಿಯಿಂದ ಸುಧಾಕರ್ ಅವರನ್ನು ಕೂಡಲೇ ಕೆಳಗಿಳಿಸಿರುವ ಸಿಎಂ ಯಡಿಯೂರಪ್ಪ ಆ ಜವಾಬ್ದಾರಿಯನ್ನು ಸಚಿವರಾದ ಅರವಿಂದ ಲಿಂಬಾವಳಿ ಮತ್ತು ಆರ್. ಅಶೋಕ್ ಅವರಿಗ ನೀಡಿದ್ದಾರೆ. ಈಗಾಗಲೇ ಫೀಲ್ಡ್​ಗೆ ಇಳಿದಿರುವ ಆರ್​. ಅಶೋಕ್ ಹಾಗೂ ಲಿಂಬಾವಳಿ ಇಂದು ಬೆಳಗ್ಗೆಯಿಂದಲೇ ಎಲ್ಲಾ ಕೋವಿಡ್  ವಾರ್ ರೂಂಗಳಿಗೆ ಭೇಟಿ ನೀಡಿದ್ದು ಪರಿಶೀಲಿಸಿದ್ದಾರೆ. ಅಲ್ಲದೆ, ಈ ಸಮಸ್ಯೆಯನ್ನು ಬಗೆಹರಿಸುವ ಆಶ್ವಾಸನೆ ನೀಡಿದ್ದಾರೆ. ಈ ನಡುವೆ ಹೈಕೋರ್ಟ್​ ಸ್ವತಃ ಚಾಮರಾಜನಗರದ ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ನೀಡಿರುವುದು ಹಾಗೂ ಅದರ ಬೆನ್ನಿಗೆ ಆಸ್ಪತ್ರೆ ಮೇಲೆ ಪೊಲೀಸ್ ದಾಳಿಯಾಗಿರುವುದು ಸಾಕಷ್ಟು ಕುತೂಹಲವನ್ನು ಮೂಡಿಸಿದೆ.
Published by: MAshok Kumar
First published: May 5, 2021, 5:24 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories