ಚಾಮರಾಜನಗರದಲ್ಲಿ ಕೊರೋನಾ ಪ್ರಕರಣ ಸಂಖ್ಯೆ 114ಕ್ಕೇರಿಕೆ; ಚೇತರಿಸಿಕೊಂಡವರು 24 ಮಂದಿ

ಇಂದು 20 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿರುವುದು ಗಮನಾರ್ಹವಾಗಿದೆ. ಇದುವರೆಗೆ 24 ಮಂದಿ ಗುಣಮುಖರಾಗಿ ಬಿಡುಗಡೆ ಆಗಿದ್ದು ಸಕ್ರಿಯ ಪ್ರಕರಣ ಸಂಖ್ಯೆ 90 ಕ್ಕೆ ಇಳಿದಂತಾಗಿದೆ.

news18-kannada
Updated:July 6, 2020, 7:33 PM IST
ಚಾಮರಾಜನಗರದಲ್ಲಿ ಕೊರೋನಾ ಪ್ರಕರಣ ಸಂಖ್ಯೆ 114ಕ್ಕೇರಿಕೆ; ಚೇತರಿಸಿಕೊಂಡವರು 24 ಮಂದಿ
ಚಾಮರಾಜನಗರದ ಕೋವಿಡ್ ಆಸ್ಪತ್ರೆ
  • Share this:
ಚಾಮರಾಜನಗರ(ಜುಲೈ 06): ಚಾಮರಾಜನಗರದಲ್ಲಿ ಜಿಲ್ಲೆಯಲ್ಲಿ ಇಂದು 12 ಮಂದಿಗೆ ಕೊರೋನಾ ಸೋಂಕು ದೃಢಪಟ್ಟಿದ್ದು ಕೊರೋನಾ ಸೋಂಕಿತರ ಸಂಖ್ಯೆ 114 ಕ್ಕೆ ಏರಿದೆ. ಇದೇ ವೇಳೆ 20 ಮಂದಿ ಗುಣಮುಖರಾಗಿ ಕೋವಿಡ್ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.

ಜಿಲ್ಲಾಡಳಿತದಿಂದ ಇಂದಿನ ಹೆಲ್ತ್ ಬುಲೆಟಿನ್ ಬಿಡುಗಡೆಯಾಗಿದ್ದು, ಚಾಮರಾಜನಗರ ತಾಲೋಕಿನ ಒಬ್ಬರಿಗೆ, ಗುಂಡ್ಲುಪೇಟೆ ತಾಲೋಕಿನ ಒಂಭತ್ತು ಮಂದಿಗೆ ಹಾಗು ಕೊಳ್ಳೇಗಾಲ ತಾಲೋಕಿನ ಇಬ್ಬರಿಗೆ ಕೊರೋನಾ ದೃಢಪಟ್ಟಿದೆ.

ಇಂದು 20 ಮಂದಿ ಗುಣಮುಖರಾಗಿ ಕೋವಿಡ್ ಆಸ್ಪತ್ರೆಯಿಂದ ಬಿಡುಗಡೆಯಾಗಿರುವುದು ಗಮನಾರ್ಹವಾಗಿದೆ. ಇದರೊಂದಿಗೆ ಇದುವರೆಗೆ 24 ಮಂದಿ ಗುಣಮುಖರಾಗಿ ಬಿಡುಗಡೆ ಆಗಿದ್ದು ಸಕ್ರಿಯ ಪ್ರಕರಣ ಸಂಖ್ಯೆ 90 ಕ್ಕೆ ಇಳಿದಂತಾಗಿದೆ.

ಇದುವರೆಗೆ 8688 ಮಂದಿಯ ಗಂಟಲು ದ್ರವ ಮಾದರಿಗಳನ್ನು ಪರೀಕ್ಷೆ ನಡೆಸಲಾಗಿದ್ದು ಈ ಪೈಕಿ 8570ಮಂದಿಯ ವರದಿ ನೆಗೆಟಿವ್ ಬಂದಿದೆ. ಇನ್ನೂ 1,236 ಮಂದಿಯ ಪರೀಕ್ಷಾ ವರದಿ ಬರಬೇಕಿದೆ.  ಸೋಂಕಿತರ ಪ್ರಾಥಮಿಕ ಹಾಗು ದ್ವಿತೀಯ ಸಂಪರ್ಕದಲ್ಲಿದ್ದ 941 ಮಂದಿ ನಿಗಾವಣೆಯಲ್ಲಿದ್ದಾರೆ.

ಇದನ್ನೂ ಓದಿ: Sumalatha Ambareesh: ಸುಮಲತಾ ಅಂಬರೀಷ್​ಗೂ ತಗುಲಿದ ಕೊರೋನಾ ಸೋಂಕು; ಸೋಷಿಯಲ್ ಮೀಡಿಯಾದಲ್ಲಿ ಖಚಿತಪಡಿಸಿದ ಮಂಡ್ಯ ಸಂಸದೆ

ಹಾಟ್ ಸ್ಪಾಟ್ ಆಗುತ್ತಿರುವ ಗುಂಡ್ಲುಪೇಟೆ:

ತಮಿಳುನಾಡು ಹಾಗು ಕೇರಳ ಗಡಿಗೆ ಹೊಂದಿಕೊಂಡಂತಿರುವ ಗುಂಡ್ಲುಪೇಟೆ ಕೊರೋನಾ ಹಾಟ್ ಸ್ಪಾಟ್ ಆಗತೊಡಗಿದೆ.   ಇಂದು     ಗುಂಡ್ಲುಪೇಟೆ  ತಾಲೋಕಿನ ಒಂಭತ್ತು ಮಂದಿಗೆ ಸೋಂಕು ತಗುಲಿದ್ದು ತಾಲೋಕಿನಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 62 ಕ್ಕೆ ಏರಿದೆ. ಇದರೊಂದಿಗೆ ಚಾಮರಾಜನಗರ ಜಿಲ್ಲೆಯ ಶೇ 50 ಕ್ಕಿಂತ ಹೆಚ್ಚು ಕೊರೋನಾ ಪ್ರಕರಣಗಳು ಗುಂಡ್ಲುಪೇಟೆ ತಾಲೋಕೊಂದರಲ್ಲೇ ವರದಿಯಾಗಿವೆ.

ಗುಂಡ್ಲುಪೇಟೆ ಪಟ್ಟಣವಲ್ಲದೆ, ತಾಲೋಕಿನ ಬರಗಿ, ಕಬ್ಬಹಳ್ಳಿ ಮಡಹಳ್ಳಿ, ದೊಡ್ಡತುಪ್ಪೂರು, ಕೆಲ್ಸೂರು, ದೇಪಾಪುರ ಗ್ರಾಮಗಳಲ್ಲು ಕೊರೋನಾ ಹರಡಿದ್ದು ಆತಂಕ ಮೂಡಿಸಿದೆ.

ವರದಿ: ಎಸ್.ಎಂ. ನಂದೀಶ್
Published by: Vijayasarthy SN
First published: July 6, 2020, 7:33 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading