ಚಾಮರಾಜನಗರ ಆಕ್ಸಿಜನ್ ದುರಂತ ಪ್ರಕರಣ: ತನಿಖೆಗೆ  ಮೈಸೂರಿನಲ್ಲಿ ಕಚೇರಿ ತೆರೆದ ನ್ಯಾಯಾಂಗ ಆಯೋಗ

ಘಟನೆಗೆ ಸಂಬಂಧಿಸಿದಂತೆ ಮೃತರ ವಾರಸುದಾರರು, ಹಿತಾಸಕ್ತಿ ಉಳ್ಳವರು ಹಾಗು ಸಂಘ ಸಂಸ್ಥೆಗಳು ಮೈಸೂರಿನಲ್ಲಿ ತೆರೆದಿರುವ ಕಚೇರಿಯಲ್ಲಿ ದೂರು ಸಲ್ಲಿಸಲು ನ್ಯಾಯಾಂಗ ಆಯೋಗವು ಕಳೆದ ನಾಲ್ಕು ದಿನಗಳ ಹಿಂದೆ ಪ್ರಕಟಣೆ ಹೊರಡಿಸಿದೆ.

ನ್ಯಾಯಾಂಗ ತನಿಖೆ ಅಧಿಕಾರಿಗಳು.

ನ್ಯಾಯಾಂಗ ತನಿಖೆ ಅಧಿಕಾರಿಗಳು.

  • Share this:
ಚಾಮರಾಜನಗರ (ಜೂ.09) ಆಕ್ಸಿಜನ್ ಕೊರತೆಯ ದುರಂತ ನಡೆದಿದ್ದು ಚಾಮರಾ ಜನಗರದಲ್ಲಿ. ಆದರೆ ನ್ಯಾಯಾಂಗ ಆಯೋಗ ತನ್ನ ಕಚೇರಿ ತೆರೆದಿರೋದು ದೂರದ ಮೈಸೂರಿನಲ್ಲಿ. ಇದರಿಂದ ಹಲವು ಸಮಸ್ಯೆಗಳು ತಲೆದೋರಿವೆ. ಚಾಮ ರಾಜನಗರ ಜಿಲ್ಲಾಸ್ಪತ್ರೆಯಲ್ಲಿ ಮೇ 2 ರಂದು  ನಡೆದಿದ್ದ ಆಕ್ಸಿಜನ್ ಕೊರತೆಯ ದುರಂತ ಪ್ರಕರಣದಲ್ಲಿ 36 ಮಂದಿ ಕೊರೋನಾ ರೋಗಿಗಳು ಸಾವನ್ನಪ್ಪಿದ್ದರು‌ ಈ ದುರ್ಘಟ ನೆಗೆ ಸಂಬಂಧಿಸಿದಂತೆ ನ್ಯಾಯಾಂಗ ತನಿಖೆಗೆ ಆದೇಶಿದ ಸರ್ಕಾರ  ನಿವೃತ್ತ ನ್ಯಾಯಮೂರ್ತಿ ಬಿ‌.ಎ.ಪಾಟೀಲರನ್ನು ನೇಮಿಸಿದೆ  ಮೇ. 29 ರಂದು ಚಾಮರಾಜ ನಗರ ಜಿಲ್ಲಾಸ್ಪತ್ರೆಗೆ ಭೇಟಿ ನೀಡಿದ್ದ  ನಿವೃತ್ತ  ನ್ಯಾಯ ಮೂರ್ತಿ ಬಿ.ಎ.ಪಾಟೀಲ್, ಘಟನೆಗೆ ಸಂಬಂಧಿಸಿದಂತೆ ಅಗತ್ಯ ಮಾಹಿತಿ ಕಲೆಹಾಕಿ ಹೋಗಿದ್ದಾರೆ.   ಈಗಾಗಲೇ  ನ್ಯಾಯಾಂಗ ಆಯೋಗವು ಮೈಸೂರಿನ  ಜಲದರ್ಶಿನಿ ಅತಿಥಿ ಗೃಹದ ಹೊಸ ಕಟ್ಟಡದಲ್ಲಿ ಕಚೇರಿ ತೆರೆದು  ತನಿಖೆ ಪ್ರಕ್ರಿಯೆ ಆರಂಭಿಸಿದೆ. 

ಘಟನೆಗೆ ಸಂಬಂಧಿಸಿದಂತೆ ಮೃತರ ವಾರಸುದಾರರು, ಹಿತಾಸಕ್ತಿ ಉಳ್ಳವರು ಹಾಗು ಸಂಘ ಸಂಸ್ಥೆಗಳು ಮೈಸೂರಿನಲ್ಲಿ ತೆರೆದಿರುವ ಕಚೇರಿಯಲ್ಲಿ ದೂರು ಸಲ್ಲಿಸಲು ನ್ಯಾಯಾಂಗ ಆಯೋಗವು ಕಳೆದ ನಾಲ್ಕು ದಿನಗಳ ಹಿಂದೆ ಪ್ರಕಟಣೆ ಹೊರಡಿಸಿದೆ. ತಮ್ಮಲ್ಲಿರುವ ದಾಖಲೆಗಳನ್ನು ಪ್ರಮಾಣ ಪತ್ರ (ಅಫಿಡವಿಟ್) ದೊಂದಿಗೆ ಸಲ್ಲಿಸಲು 15 ದಿನಗಳ ಕಾಲಾವಕಾಶ ನೀಡಿದೆ.  ನೊಂದಾಯಿತ ಅಂಚೆ ಮೂಲಕವು ದೂರು ಸಲ್ಲಿಸಬಹುದು ಎಂದು ಪ್ರಕಟಣೆ ಯಲ್ಲಿ ತಿಳಿಸಲಾಗಿದೆ.. ಆದರೆ ಪ್ರಕಟಣೆ ಹೊರಡಿಸಿ ನಾಲ್ಕು ದಿನಗಳಾದರು ಒಂದೇ ಒಂದು ದೂರು ದಾಖಲಾಗಿಲ್ಲ

ಆಕ್ಸಿಜನ್ ಕೊರತೆಯ ದುರ್ಘಟನೆ ನಡೆದಿದ್ದು ಚಾಮರಾಜನಗರದಲ್ಲಿ. ಆದರೆ ನ್ಯಾಯಾಂಗ ಆಯೋಗವು ಮೈಸೂರಿನಲ್ಲಿ ಕಚೇರಿ ತೆರೆದಿರುವುದರಿಂದ ಅಲ್ಲಿಗೆ ಖುದ್ದಾಗಿ ಹೋಗಿ ದೂರು ದಾಖಲಿಸಲು ಮೃತರ ವಾರಸುದಾರರಿಗೆ ತೊಂದರೆಯಾಗಿದೆ. ಲಾಕ್ ಡೌನ್ ಹಿನ್ನಲೆಯಲ್ಲಿ ಅಂತರ ಜಿಲ್ಲೆಗೆ ಪ್ರವೇಶ ಇಲ್ಲ,‌ ಜೊತೆಗೆ ಬಸ್ ಇಲ್ಲ, ಟ್ರೈನ್ ಇಲ್ಲ, ದೂರು ಸಲ್ಲಿಸಲು ಮೃತರ ಸಂಬಂಧಿಕರು, ನೊಂದವರು,  ಚಾಮರಾಜನಗರದಿಂದ ದೂರದ ಮೈಸೂರಿಗೆ ಹೋಗುವು ದಾದರು ಹೇಗೆ ಎಂದು  ಪಕ್ಷವೊಂದರ ಮುಖಂಡ.ಶ್ರೀನಿವಾಸನಾಯಕ ಪ್ರಶ್ನಿಸುತ್ತಾರೆ.

ಇದನ್ನೂ ಓದಿ: ಆಗ್ರಾ ಆಸ್ಪತ್ರೆಯ ಆಮ್ಲಜನಕ ಅಣುಕು ಪ್ರದರ್ಶನ 22 ಜನರ ಸಾವಿಗೆ ಕಾರಣವಾಯ್ತಾ?: ತನಿಖೆಗೆ ಮುಂದಾದ ಉತ್ತರ ಪ್ರದೇಶ ಸರ್ಕಾರ

ನನ್ನ ಪತಿ ಜಿಲ್ಲಾಸ್ಪತ್ರೆಯಲ್ಲಿ ಮೇ 2 ರಂದು ಆಕ್ಸಿಜನ್ ಕೊರತೆಯಿಂದ ಮೃತಪಟ್ಟರು. ಆದರೆ ಮೃತರ ಪಟ್ಟಿಯಲ್ಲಿ ಅವರ  ಇಲ್ಲವಾಗಿದ್ದು ಅನ್ಯಾಯವಾಗುತ್ತಿದೆ. ಈ ಬಗ್ಗೆ ದೂರು ಕೊಡಲು ಚಿಕ್ಕ ಮಕ್ಕಳನ್ನು ಕಟ್ಟಿಕೊಂಡು ಮೈಸೂರಿಗೆ ಹೇಗೆ ಹೋಗಲಿ, ಇದುವರೆಗೆ ನಾನು ಮೈಸೂರನ್ನೇ ನೋಡಿಲ್ಲ, ಈಗ ಲಾಕ್ ಡೌನ್ ಬೇರೆ ಇದೆ, ಬಸ್ಸು, ರೈಲು ಯಾವುದು ಇಲ್ಲ, ನಾನು ದೂರು ಸಲ್ಲಿಸುವುದಾದರು ಹೇಗೆ ಎಂದು ತಮ್ಮ ಅಳಲು ತೋಡಿಕೊಳ್ಳುತ್ತಾರೆ ಬಿಸಿಲವಾಡಿಯ ಜ್ಯೋತಿ.

ಇದನ್ನೂ ಓದಿ: Narendra Modi: ಗಡ್ಡ ಬೋಳಿಸಿಕೊಳ್ಳಿ ಎಂದು ಪ್ರಧಾನಿ ನರೇಂದ್ರ ಮೋದಿಗೆ 100ರೂ ಕಳಿಸಿದ ಚಹಾ ಮಾರಾಟಗಾರ!

ಮೃತಪಟ್ಟವರು ಬಹುತೇಕ ಚಾಮರಾಜನಗರ ಜಿಲ್ಲೆಯವರಾಗಿದ್ದು ಅವರ ವಾರಸುದಾ ರರು ಯಾರು  ಸಹ ಮೈಸೂರಿಗೆ ಹೋಗಿ  ದೂರು ಸಲ್ಲಿಸುವ ಸ್ಥಿತಿಯಲ್ಲಿ ಇಲ್ಲ. ಅಲ್ಲದೇ ಘಟನೆಯ ಬಗ್ಗೆ ಗೊತ್ತಿರುವವರು ಸಹ  ಕೊರೋನಾ ಹರಡುತ್ತಿರುವ ಈ ಸಂದರ್ಭದಲ್ಲಿ ಮೈಸೂರಿಗೆ ಹೋಗಲು ಇಷ್ಟಪಡುವುದಿಲ್ಲ, ಹಾಗಾಗಿ ಚಾಮರಾಜನಗರ ದಲ್ಲೇ ನ್ಯಾಯಾಂಗ ಆಯೋಗದ ಕಚೇರಿ ತೆರೆದು ಇಲ್ಲಿಯೇ ತನಿಖೆ ನಡೆಸಬೇಕು, ಮೃತರ ಕುಟುಂಬಗಳಿಗೆ ನ್ಯಾಯ ಒದಗಿಸಬೇಕು ಎಂದು ಚಾಮರಾಜನಗರ ಶಾಸಕ ಸಿ.ಪುಟ್ಟರಂಗಶೆಟ್ಟಿ.

(ಎಸ್.ಎಂ. ನಂದೀಶ್, ಚಾಮರಾಜ ನಗರ)

ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾ ದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸು ವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು.
Published by:MAshok Kumar
First published: