ಕ್ಯಾನ್ಸರ್ ಗೆದ್ದ ಈ ರೈತ ಬರಡು ಭೂಮಿಯನ್ನೇ ಬಂಗಾರ ಮಾಡಿದ್ದಾರೆ!

ದಿನದ 24 ಗಂಟೆಯು ಕೃಷಿಯನ್ನೇ ಜಪಿಸುವ ಪಟ್ಟಕಾರಮೂರ್ತಿ ಪ್ರತಿದಿನ 50 ರಿಂದ 60 ಜನರಿಗೆ ಕೂಲಿ ಕೆಲಸ ನೀಡುತ್ತಿದ್ದಾರೆ

ಟ್ಟಕಾರಮೂರ್ತಿ

ಟ್ಟಕಾರಮೂರ್ತಿ

  • Share this:
ಚಾಮರಾಜ‌ನಗರ: ಆಗದು ಎಂದು, ಕೈಲಾಗದು ಎಂದು  ಕೈ ಕಟ್ಟಿ ಕುಳಿತರೆ ಸಾಗದು ಕೆಲಸವು ಮುಂದೆ... ಎಂಬ ಬಂಗಾರದ ಮನುಷ್ಯ ಚಲನಚಿತ್ರದ ಹಾಡಿಗೆ ಅನ್ವರ್ಥವಾಗಿ ಇಲ್ಲೊಬ್ಬ ರೈತನಿದ್ದಾನೆ.  ಕ್ಯಾನ್ಸರ್ ಪೀಡಿತರಾಗಿದ್ದ ಈ ರೈತ ಆತ್ಮವಿಶ್ವಾಸದಿಂದ ಕ್ಯಾನ್ಸರ್  ಹಿಮ್ಮೆಟ್ಟಿಸಿ ಇದೀಗ  ಬರೋಬ್ಬರಿ 120 ಎಕರೆ ಪ್ರದೇಶದಲ್ಲಿ ಕಬ್ಬು ಬೆಳೆಯುವ ಮೂಲಕ ವಿಶಿಷ್ಠ ಸಾಧನೆಗೈದಿದ್ದಾರೆ.  ಬರಡಾಗಿದ್ದ ಭೂಮಿಯಲ್ಲಿ ಚಿನ್ನದಂತಹ ಬೆಳೆ ಬೆಳೆಯುವ ಮೂಲಕ ಕೃಷಿಯಲ್ಲಿ ಸಾಧನೆಗೈದ ಛಲಗಾರ ಎನಿಸಿದ್ದಾರೆ.

ಹೌದು... ಚಾಮರಾಜನಗರ ತಾಲೋಕು ಹೊಂಗಲವಾಡಿ ಬಳಿ  ನೆಲಸಿರುವ ತಮಿಳುನಾಡು ಮೂಲದ  ಪಟ್ಟಕಾರಮೂರ್ತಿ ಎಂಬ ರೈತ 125ಕ್ಕೂ ಹೆಚ್ಚು ಪ್ರದೇಶದಲ್ಲಿ  ವ್ಯವಸಾಯ ಮಾಡತೊಡಗಿದ್ದು ಗಣನೀಯ ಸಾಧನೆ ಮಾಡಿದ್ದಾರೆ. ಇವರ ಮಾಡುವ ವ್ವವಸಾಯದ ಪರಿ ನೋಡಿ ಸುತ್ತಮುತ್ತಲ ಗ್ರಾಮಸ್ಥರು   ಮೂಕವಿಸ್ಮಿತರಾಗಿದ್ದಾರೆ24 ವರ್ಷಗಳ ಹಿಂದೆ ತಮಿಳುನಾಡಿನಿಂದ   ಇಲ್ಲಿಗೆ ಬಂದು ನೆಲಸಿದ ಮೂರ್ತಿ ಮೊದಲಿಗೆ ಹತ್ತು ಎಕರೆ ಭೂಮಿಯನ್ನು ಇಲ್ಲಿನ ರೈತರಿಂದ ಗುತ್ತಿಗೆ ಪಡೆದು  ವ್ಯವಸಾಯ ಮಾಡತೊಡಗಿದ್ದರು. ಈ ನಡುವೆ ಕಳೆದ ಐದು ವರ್ಷಗಳ ಹಿಂದೆ ಇವರ ಎಡಗಾಲಿನಲ್ಲಿ ಕ್ಯಾನ್ಸರ್ ಗೆಡ್ಡೆ ಉಂಟಾಗಿ ಇನ್ನೇನು ಅವರ ಜೀವನ ಮುಗಿಯಿತು ಎನ್ನುವಂತಾಗಿತ್ತು. ಆದರೆ ಕ್ಯಾನ್ಸರ್ ರೋಗಕ್ಕೆ  ಎದೆಗುಂದದ ಮೂರ್ತಿ ಕೊಯಮತ್ತೂರಿನ ಖಾಸಗಿ ಅಸ್ಪತ್ರೆಯಲ್ಲಿ   ಮೂರು ತಿಂಗಳು ಚಿಕಿತ್ಸೆ ಪಡೆದಿದ್ದರು. ಅವರ ಕಾಲಿನಲ್ಲಿದ್ದ   ಕ್ಯಾನ್ಸರ್ ಗೆಡ್ಡೆಯನ್ನು  ಶಸ್ತ್ರ ಚಿಕಿತ್ಸೆ ಮೂಲಕ ತೆಗೆಯಲಾಗಿತ್ತು. ಕ್ಯಾನ್ಸರ್ ವಾಸಿಯಾಗುವ ಬಗ್ಗೆ ವೈದರು  ಯಾವುದೇ ಗ್ಯಾರಂಟಿಯನ್ನು ಕೊಟ್ಟಿರಲಿಲ್ಲ.  ಚಿಕಿತ್ಸೆ ಪಡೆದು ವಾಪಸ್ ಬಂದ ಮೂರ್ತಿ ಒಂದು ಕಾಲು  ದುರ್ಬಲಗೊಂಡಿದ್ದರೂ ತಲೆಕೆಡೆಸಿಕೊಳ್ಳದೆ  ಹಂತಹಂತವಾಗಿ ತಮ್ಮ ವ್ಯವಸಾಯದ ಪ್ರದೇಶವನ್ನು ವಿಸ್ತರಿಸುತ್ತಾ ಇದೀಗ 125 ಎಕರೆ ಭೂಮಿಯಲ್ಲಿ ಕೃಷಿ ಮಾಡತೊಡಗಿದ್ದಾರೆ.60 ರ ದಶಕದಲ್ಲಿ ಕಂದಾಯ ಮತ್ತು ಅರಣ್ಯಸಚಿವರಾಗಿದ್ದ ಬಿ.ರಾಚಯ್ಯ ಅವರು ಈ ಭಾಗದ ನೂರಾರು ರೈತರಿಗೆ ಅರಣ್ಯ ಭೂಮಿ ಮಂಜೂರು ಮಾಡಿದ್ದರು. ಆದರೆ ಕೆಲ ವರ್ಷಗಳ ಕಾಲ ಉಳುಮೆ ಮಾಡಿದ ರೈತರು ನಂತರ ವ್ಯವಸಾಯ ಕೈಬಿಟ್ಟಿದ್ದರು. ಇದರಿಂದ ಕಳೆದ 30 -35 ವರ್ಷಗಳಿಂದ ಜಮೀನುಗಳು ಗಿಡಗಂಟಿ ಬೆಳೆದು ಪಾಳುಬಿದ್ದಿದ್ದವು.. ಇಂತಹ ಜಮೀನುಗಳನ್ನು ಗುತ್ತಿಗೆ ಪಡೆದ ಮೂರ್ತಿ  ಈ ಜಮೀನಗಳನ್ನು ಲಕ್ಷಾಂತರ ರೂಪಾಯಿ ವ್ಯಯಿಸಿ  ಸಮತಟ್ಟು ಮಾಡಿಸಿ ಬೋರ್ ಕೊರೆಸಿ ವಿದ್ಯುತ್ ಸಂಪರ್ಕ ಪಡೆದು ಕಬ್ಬು, ಬಾಳೆ, ಅರಿಶಿನ ಟೊಮ್ಯಾಟೋ ತರಕಾರಿ ಮೊದಲಾದ ಬೆಳೆಗಳನ್ನು ಬೆಳೆಯತೊಡಗಿದ್ದರು. ಆದರೆ ಕಳೆದ ಎರಡು ವರ್ಷಗಳಿಂದ ಕೋವಿಡ್-19 ಹಿನ್ನಲೆಯಲ್ಲಿ ಸಾಕಷ್ಟು ನಷ್ಟ ಅನುಭವಿಸಿದರು.  ಇತ್ತೀಚೆಗೆ 30 ಎಕರೆ ಪ್ರದೇಶದಲ್ಲಿ ಬೆಳೆದಿದ್ದ ಟೊಮ್ಯಾಟೋ ಹಣ್ಣನ್ನು ಕೇಳುವವರಿಲ್ಲದೆ ಉಳುಮೆ ಮಾಡಿದ್ದರು.  ಆದರೂ ಛಲಬಿಡದೆ  ಇದೀಗ 120 ಎಕರೆ ಪ್ರದೇಶದಲ್ಲಿ ಕಬ್ಬು ಬೆಳೆದಿದ್ದಾರೆ ಇದರಲ್ಲಿ 60 ಎಕರೆ ಕಟಾವಿಗೆ ಬಂದಿದ್ದು ಕೋವಿಡ್ ಸಂದರ್ಭದಲ್ಲಿ ಉಂಟಾದ ನಷ್ಟ ತುಂಬಲಿದೆ ಎಂಬ ಭರವಸೆ ಹೊಂದಿದ್ದಾರೆ

ಇದನ್ನು ಓದಿ: ಕೊಡಗಿನಲ್ಲಿ ಮಳೆ ಅಬ್ಬರಕ್ಕೆ ಪಾರಾಣೆ ಮೂರ್ನಾಡು ಸಂಪರ್ಕ ಕಡಿತ

ದಿನದ 24 ಗಂಟೆಯು ಕೃಷಿಯನ್ನೇ ಜಪಿಸುವ ಪಟ್ಟಕಾರಮೂರ್ತಿ ಪ್ರತಿದಿನ 50 ರಿಂದ 60 ಜನರಿಗೆ ಕೂಲಿ ಕೆಲಸ ನೀಡುತ್ತಿದ್ದಾರೆ ಧರ್ಮದ ಹಾದಿಯಲ್ಲಿ ಸಂಪಾದಿಸುವ ವೃತ್ತಿ  ಎಂದರೆ ಅದು ಕೃಷಿ ಮಾತ್ರ ಎನ್ನುವ ಅವರು ದುಡ್ಡೆ ದೊಡ್ಡದಲ್ಲ, ನನ್ನಿಂದ ಈ ಭಾಗದ  ರೈತರಿಗೆ,  ಕೂಲಿ ಕಾರ್ಮಿಕರಿಗೆ ಉಪಯೋಗಬೇಕು, ಅವರ ಜೊತೆಗೆ ನಾನೂ ನಾಲ್ಕು ಕಾಸು ಸಂಪಾದಿಸಬೇಕು  ಅದಕ್ಕಾಗಿ ಇಷ್ಟೆಲ್ಲಾ ಶ್ರಮ ಪಡುತ್ತಿದ್ದೇನೆ ಎನ್ನುತ್ತಾರೆ.

ಹಳ್ಳ,, ದಿಣ್ಣೆ ಕಲ್ಲುಬಂಡೆಗಳಿಂದ ಕೂಡಿದ್ದ ಹಾಗು   ಗಿಡಗಂಟಿಗಳು ಬೆಳೆದಿದ್ದ ತಮ್ಮ ಜಮೀನುಗಳನ್ನು ಪಟ್ಟಕಾರಮೂರ್ತಿ  ಸಮತಟ್ಟು ಮಾಡಿ ಈಗ ವ್ಯವಸಾಯ ಯೋಗ್ಯವಾಗಿರುವುದನ್ನು ಮಾಡಿರುವುದನ್ನು ಕಂಡು ಈ  ಭಾಗದ ರೈತರು ಮೂಗಿನ ಮೇಲೆ ಬೆರಳು ಇಟ್ಟುಕೊಳ್ಳುವಂತಾಗಿದೆ. ಇನ್ನು ಮುಂದೆ ವ್ಯವಸಾಯ ಮಾಡಲು ಸಾಧ್ಯವೇ ಇಲ್ಲ ಎನ್ನುವಂತಿದ್ದ  ಜಮೀನುಗಳಲ್ಲಿ  ಬೆಳೆಗಳು ನಳನಳಸಿಸುತ್ತಿದ್ದು   ರೈತ ಪಟ್ಟಕಾರಮೂರ್ತಿ ಬಂಗಾರದ ಮನುಷ್ಯನಾಗಿ ಹೊರಹೊಮ್ಮಿದ್ದಾರೆ

(ಎಸ್.ಎಂ.ನಂದೀಶ್, ಚಾಮರಾಜನಗರ)
Published by:Seema R
First published: