• Home
  • »
  • News
  • »
  • district
  • »
  • ಚಾಮರಾಜನಗರ: ಕೊರೋನಾ ನಿಯಂತ್ರಣಕ್ಕೆ 130 ಕೋವಿಡ್ ಕ್ಯಾಪ್ಟನ್​ಗಳ ನೇಮಕ

ಚಾಮರಾಜನಗರ: ಕೊರೋನಾ ನಿಯಂತ್ರಣಕ್ಕೆ 130 ಕೋವಿಡ್ ಕ್ಯಾಪ್ಟನ್​ಗಳ ನೇಮಕ

ಕೋವಿಡ್ ಕ್ಯಾಪ್ಟೆನ್ಸ್​.

ಕೋವಿಡ್ ಕ್ಯಾಪ್ಟೆನ್ಸ್​.

ಜಿಲ್ಲೆಯ ಎಲ್ಲಾ 130 ಗ್ರಾಮ ಪಂಚಾಯ್ತಿಯಗಳಿಗೆ ಪದವಿ ಪೂರ್ವಶಿಕ್ಷಣ ಇಲಾಖೆಯ 130  ಉಪನ್ಯಾಸಕರನ್ನು ಕೋವಿಡ್ ಕ್ಯಾಪ್ಟನ್ ಗಳಾಗಿ ನಿಯೋಜಿಸಲಾಗಿದ್ದು ಸೋಂಕಿನ ಪಾಸಿಟಿವಿಟಿ ದರ ಕಡಿಮೆ ಮಾಡುವುದು ಯೋಜನೆಯ ಉದ್ದೇಶವಾಗಿದೆ.

  • Share this:

ಚಾಮರಾಜನಗರ (ಮೇ.24) ಮೊದಲ ಅಲೆಯಲ್ಲಿ ಸತತ ಮೂರು ತಿಂಗಳಿಗೂ ಹೆಚ್ಚು ಕಾಲ ಹಸಿರು ವಲಯದಲ್ಲಿದ್ದು ಇಡೀ ದೇಶದ ಗಮನ ಸೆಳೆದಿದ್ದ ಚಾಮರಾಜ ನಗರ ಜಿಲ್ಲೆಯಲ್ಲಿ ಕೊರೋನಾ ಬಿಟ್ಟು ಬಿಡದೆ ಕಾಡತೊಡಗಿದೆ. ಪ್ರತಿ ದಿನ 400 ಕ್ಕು ಹೆಚ್ಚು ಹೊಸ ಪ್ರಕರಣಗಳು ದಾಖಲಾಗುತ್ತಲೇ ಇವೆ. ಪಾಸಿಟಿವಿಟಿ ದರವಷ್ಟೇ ಅಲ್ಲ ಮರಣ ಪ್ರಮಾಣವೂ ಹೆಚ್ಚಾಗುತ್ತಿದೆ. ಈ ಬಾರಿ ನಗರ ಪ್ರದೇಶ ಗಳಿಂತ ಗ್ರಾಮಾಂತರ ಪ್ರದೇಶಗಳಲ್ಲೇ ಕೊರೋನಾ ಸೋಂಕು ವ್ಯಾಪಕವಾಗಿ ಹಬ್ಬಿದ್ದು ವಾರದಲ್ಲಿ ನಾಲ್ಕು ದಿನ ಸಂಪೂರ್ಣ ಲಾಕ್ ಡೌನ್ ಜಾರಿ ಮಾಡಿದರು ಫಲ ನೀಡುತ್ತಿಲ್ಲ. ಜಿಲ್ಲೆಯ ಎಲ್ಲಾ 130 ಗ್ರಾಮಪಂಚಾಯ್ತಿಗಳ ವ್ಯಾಪ್ತಿಯಲ್ಲು ಕೋವಿಡ್-19 ತನ್ನ ಕಬಂಧ ಬಾಹು ಚಾಚಿದ್ದು  ಶೇಕಡಾ 79 ರಷ್ಟು ಪ್ರಕರಣಗಳು ಗ್ರಾಮಾಂತರ ಪ್ರದೇಶಗಳಲ್ಲೇ ಕಂಡು ಬಂದಿವೆ. ಹಲವಾರು ಕ್ರಮಗಳನ್ನು ಕೈಗೊಂಡರು ಸಹ ಕೊರೋನಾ ಸೋಂಕಿನ ಪ್ರಮಾಣ ನಿಯಂತ್ರಣಕ್ಕೆ ಬರುತ್ತಿಲ್ಲ.


ಈ ಹಿನ್ನಲೆಯಲ್ಲಿ ಮತ್ತೊಂದು ಹೆಜ್ಜೆ ಇಟ್ಟಿರುವ ಜಿಲ್ಲಾಡಳಿತ  ಗ್ರಾಮೀಣ ಭಾಗದಲ್ಲಿ  ಶಂಕಿತರ ಟೆಸ್ಟ್ ಮಾಡಿಸುವುದು,  ಸೋಂಕಿತರನ್ನು ಪತ್ತೆ ಹಚ್ಚುವುದು ಹಾಗು ಅವರಿಗೆ ಸೂಕ್ತ ಚಿಕಿತ್ಸೆ ಕೊಡಿಸಿ ಕೊರೋನಾ ಸೋಂಕಿನ ನಿಯಂತ್ರಣ ಮಾಡುವ ಗುರಿಯೊಂದಿಗೆ   ಕೋವಿಡ್ ಕ್ಯಾಪ್ಟನ್ ಗಳನ್ನು  ನೇಮಕ ಮಾಡಿದೆ.


ಜಿಲ್ಲೆಯ ಎಲ್ಲಾ 130 ಗ್ರಾಮ ಪಂಚಾಯ್ತಿಯಗಳಿಗೆ ಪದವಿ ಪೂರ್ವಶಿಕ್ಷಣ ಇಲಾಖೆಯ 130  ಉಪನ್ಯಾಸಕರನ್ನು ಕೋವಿಡ್ ಕ್ಯಾಪ್ಟನ್ ಗಳಾಗಿ ನಿಯೋಜಿಸಲಾಗಿದ್ದು ಸೋಂಕಿನ ಪಾಸಿಟಿವಿಟಿ ದರ ಕಡಿಮೆ ಮಾಡುವುದು, ರೆಕವರಿ ದರ ಹೆಚ್ಚಿಸುವುದು, ಮರಣ ಪ್ರಮಾಣ ಕಡಿಮೆ ಮಾಡುವುದು ಜನರಲ್ಲಿ ಕೊರೋನಾ ಸೋಂಕಿನ ಬಗ್ಗೆ  ಜಾಗೃತಿ ಮೂಡಿಸಿ  ಆತ್ಮವಿಶ್ವಾಸ ತುಂಬುವ ಗುರಿ ಹೊಂದಲಾಗಿದೆ ಎನ್ನುತ್ತಾರೆ ಜಿಲ್ಲಾಧಿಕಾರಿ ಡಾ.ಎಂ.ಆರ್. ರವಿ.


ಇದನ್ನೂ ಓದಿ: Sputnik-V: ದೆಹಲಿಯಲ್ಲೇ ಆರಂಭವಾಯ್ತು ಸ್ಪುಟ್ನಿಕ್ ಲಸಿಕೆ ಉತ್ಪಾದನೆ; ವರ್ಷಕ್ಕೆ 100 ಮಿಲಿಯನ್ ಡೋಸ್ ಉತ್ಪಾದನೆ ಗುರಿ


ಈ  ಟಾಸ್ಕ್ ಕೈಗೆತ್ತಿಕೊಳ್ಳಲು  50 ವರ್ಷಕ್ಕಿಂತ  ಕಡಿಮೆ ಇರುವ ಮತ್ತು  ಯಾವುದೇ ಸಹವರ್ತಿ ಕಾಯಿಲೆಗಳು ಇಲ್ಲದ ಉಪನ್ಯಾಸಕರನ್ನು ಆಯ್ಕೆ ಮಾಡಿಕೊಳ್ಳಲಾಗಿದ್ದು  ಅವರು ವಾರ  ಪೂರ್ತಿ  ಬೆಳಿಗ್ಗೆ 8 ರಿಂದ ರಾತ್ರಿ 8 ರವರೆಗು ಕೆಲಸ ಮಾಡಲಿದ್ದಾರೆ ಅವರಿಗೆ ಅಗತ್ಯ ಪ್ರಮಾಣದ ಕೋವಿಡ್ ವೈದ್ಯಕೀಯ ಕಿಟ್ ಗಳು,  ಫೇಸ್ ಮಾಸ್ಕ್ ಗಳು ಸ್ಯಾನಿಟೈಸರ್ ಗಳೊಂದಿಗೆ ವಾಹನ ಸೌಲಭ್ಯ ನೀಡಲಾಗಿದೆ.


ಇದನ್ನೂ ಓದಿ: Yogi Adityanath: ಉತ್ತರಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಭೇಟಿಗೆ ತೆರಳಿದ್ದ ವೈದ್ಯರಿಗೆ ಅವಕಾಶ ನಿರಾಕರಣೆ


ಇವರು  ತಮ್ಮ ವ್ಯಾಪ್ತಿಯ ಹಳ್ಳಿಗಳಲ್ಲಿ ಸಂಚರಿಸಿ ಆಶಾ ಕಾರ್ಯಕರ್ತೆಯರ ಸಹಕಾರ ಪಡೆದು ಪ್ರತಿ ಮನೆಗು ಭೇಟಿ ನೀಡಿ ನಿಯಮಿತವಾಗಿ ಜನರ ಆರೋಗ್ಯ ವಿಚಾರಣೆ ಮಾಡುವುದು, ಶಂಕಿತರನ್ನು ಪರೀಕ್ಷೆಗೆ ಒಳಪಡಿಸುವುದು, ರೋಗ ಲಕ್ಷಣ ಕಂಡುಬಂದವರನ್ನು ಅಶಾ ಕಾರ್ಯಕರ್ತೆಯರು,  ಪಿಡಿಓ ಹಾಗು ಹತ್ತಿರದ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಯ ಸಹಕಾರ ಪಡೆದು ಕೋವಿಡ್ ಆಸ್ಪತ್ರೆ ಇಲ್ಲವೆ ಕೇರ್ ಸೆಂಟರ್ ಗಳಿಗೆ ದಾಖಲಿಸುವ ಜವಾಬ್ದಾರಿ ನೀಡಲಾಗಿದೆ. ಅಲ್ಲದೆ ಕೊರೋನಾ ಬಗ್ಗೆ  ಜನರಲ್ಲಿ ಇರುವ ಭಯ ಹೋಗಲಾಡಿಸಿ ಆತ್ಮ ವಿಶ್ವಾಸ ತುಂಬುವ ಕೆಲಸವನ್ನು ಅವರು ಮಾಡಲಿದ್ದಾರೆ.


ಕೋವಿಡ್ ಕ್ಯಾಪ್ಟನ್ ಗಳು ತಾವು ಭೇಟಿ  ನೀಡಿದ ಮನೆಗಳ ಬಗ್ಗೆ ವಿವರ ದಾಖಲಿಸಿ  ಪ್ರತಿದಿನ  ಮದ್ಯಾಹ್ನ 2 ಗಂಟಎ ಹಾಗು ಸಂಜೆ 7 ಗಂಟೆಗೆ ಹೇಗೆ ಎರಡು ಬಾರಿ  ಜಿಲ್ಲಾ ನೋಡಲ್ ಅಧಿಕಾರಿಯಾಗಿರುವ ಜಿಲ್ಲಾ ಪಂಚಾಯ್ತಿ ಸಿಇಓ ಅವರಿಗೆ  ಪ್ರಗತಿ ವರದಿ ಸಲ್ಲಿಸಬೇಕು.  ಡಯಟ್ ನ ಐವರು ಉಪನ್ಯಾಸಕರನ್ನು ತಾಲೋಕು ನೋಡಲ್ ಅಧಿಕಾರಿಗಳಾಗಿ ನಿಯೋಜಿಸಲಾಗಿದ್ದು ಇವರು ಕೋವಿಡ್ ಕ್ಯಾಪ್ಟನ್ ಹಾಗು ಜಿಲ್ಲಾ ನೋಡಲ್ ಅಧಿಕಾರಿ ನಡುವೆ ಸೇತವೆಯಾಗಿ ಕರ್ತವ್ಯ ನಿರ್ವಹಿಸಲಿದ್ದಾರೆ


(ವರದಿ - ಎಸ್.ಎಂ. ನಂದೀಶ್)

Published by:MAshok Kumar
First published: