HOME » NEWS » District » CHALAVADI GURUPEETHA SWAMIJI CONDEMNS CHITRADURGA DYSP PANDURANGA VTC SNVS

ಚಿತ್ರದುರ್ಗ ಡಿವೈಎಸ್​ಪಿ ಪಾಂಡುರಂಗ ಆರೆಸ್ಸೆಸ್ ಚೇಲಾನಾ?: ಚಲವಾದಿ ಗುರುಪೀಠ ಸ್ವಾಮೀಜಿ ಆರೋಪ

ಚಿತ್ರದುರ್ಗ ಪೊಲೀಸ್ ಉಪ ವರಿಷ್ಠಾಧಿಕಾರಿ ಪಾಂಡುರಂಗ ಬಿಜೆಪಿ ಏಜೆಂಟ್ನಂತೆ ಕೆಲಸ ಮಾಡುವುದಾದಲ್ಲಿ ರಾಜೀನಾಮೆ ನೀಡಿ ರಾಜಕೀಯಕ್ಕೆ ಹೋಗಲಿ ಎಂದು ಚಲವಾದಿ ಗುರುಪೀಠದ ಬಸವ ನಾಗಿದೇವ ಸ್ವಾಮೀಜಿ ಒತ್ತಾಯಿಸಿದ್ದಾರೆ.

news18-kannada
Updated:April 23, 2021, 12:03 PM IST
ಚಿತ್ರದುರ್ಗ ಡಿವೈಎಸ್​ಪಿ ಪಾಂಡುರಂಗ ಆರೆಸ್ಸೆಸ್ ಚೇಲಾನಾ?: ಚಲವಾದಿ ಗುರುಪೀಠ ಸ್ವಾಮೀಜಿ ಆರೋಪ
ಚಿತ್ರದುರ್ಗ ಚಲವಾದಿ ಗುರುಪೀಠದ ಬಸವ ನಾಗಿದೇವ ಸ್ವಾಮೀಜಿ
  • Share this:
ಚಿತ್ರದುರ್ಗ: ಚಿತ್ರದುರ್ಗ DySP ಪಾಂಡುರಂಗ ಅವರು ಪೊಲೀಸ್ ಅಧಿಕಾರಿಯೋ ಅಥವಾ RSS ಚೇಲಾ ನಾ VHP ಚೇಲಾನ ನಿಖರಗೊಳಿಸಿ.ಯಾರಿಗಾದ್ರೂ ಆತ ಚೇಲಾ ಆಗಿದ್ದರೆ ರಾಜೀನಾಮೆ ನೀಡಿ ರಾಜಕೀಯ ಮಾಡಲಿ ಎಂದು ಚಿತ್ರದುರ್ಗದ ಚಲವಾದಿ ಗುರುಪೀಠದ ಬಸವ ನಾಗಿದೇವ ಸ್ವಾಮೀಜಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನಗರದ ಪ್ರತಿಕಾ ಭವನದಲ್ಲಿ ಸುದ್ದಿಗೋಷ್ಠಿ ಮಾಡಿ ಮಾತನಾಡಿದ ಸ್ವಾಮೀಜಿ, ಚಿತ್ರದುರ್ಗ ನಗರಸಭೆಯ ಹತ್ತನೆ ವಾರ್ಡ್​ನ ಸದಸ್ಯೆ ಕವಿತಾ ಪತಿ ಶ್ರೀನಿವಾಸ್ ವಿರುದ್ದ ಡಿವೈಎಸ್ಪಿ ಇಲ್ಲ ಸಲ್ಲದ ಕೇಸ್ ದಾಖಲಿಸುತ್ತಿದ್ದಾರೆ. ಶ್ರೀನಿವಾಸ್ ಅವರನ್ನು ಗಡಿಪಾರು ಮಾಡಲು DySP ಹುನ್ನಾರ ಮಾಡಿ ಕಿರುಕುಳ ನೀಡುತ್ತಿದ್ದಾರೆ. ಕರ್ತವ್ಯ ಲೋಪ ಮಾಡಿ ಅಧಿಕಾರ ದುರುಪಯೋಗ ಮಾಡಿದ್ದಾರೆ ಎಂದು ಎಂದು ಸ್ವಾಮೀಜಿ ಗಂಭೀರ ಆರೋಪ ಮಾಡಿದ್ದಾರೆ.

ಅಷ್ಟೆ ಅಲ್ಲದೇ ಅವರ ಅಧಿಕಾರ ವ್ಯಾಪ್ತಿಯಲ್ಲಿ ಯಾವುದೇ ಜಾತಿ ನಿಂದನೆ ಕೇಸ್ ದಾಖಲಿಸಲು ಲಂಚಕ್ಕೆ ಬೇಡಿಕೆ ಇಡುತ್ತಿರುವುದು ಗಮನಕ್ಕೆ ಬಂದಿದೆ. ಅವರು ಲಂಗು ಲಗಾಮು ಇಲ್ಲದೆ ಹುಚ್ಚು ಕುದುರೆಯಂತೆ ಓಡುತ್ತಿದ್ದಾರೆ. ಬಾಳೆಕಾಯಿ ಶ್ರೀನಿವಾಸ್​ಗೆ ಎನ್ ಕೌಂಟರ್ ಮಾಡುತ್ತೇನೆ ಎಂದು ಬೆದರಿಸುತ್ತಿದ್ದಾರೆ. ಇವರಿಗೆ ಬಂದೂಕು‌ ಕೊಡುವಾಗ ಇದನ್ನೇ ಹೇಳಿಕೊಟ್ಟಿದ್ದಾರಾ ಎಂದು ಚಲವಾದಿ ಗುರುಪೀಠದ ಸ್ವಾಮೀಜಿ‌ ಪ್ರಶ್ನಿಸಿದ್ದಾರೆ.

ಇದನ್ನೂ ಓದಿ: ದೇವದತ್ ಪಡಿಕ್ಕಲ್ ಮಲಯಾಳಿ ಎಂದು ಕೊಚ್ಚಿಕೊಂಡ ಸಂಸದನಿಗೆ ದೊಡ್ಡ ಗಣೇಶ್ ಕೊಟ್ಟ ಉತ್ತರ ಇದು

ಚಿತ್ರದುರ್ಗ ಎಸ್​ಪಿ ರಾಧಿಕಾ ಅವರು ಕೂಡಲೇ ಕ್ರಮ ಕೈಗೊಳ್ಳಬೇಕು. ಡಿವೈಎಸ್​ಪಿ ಪಾಂಡುರಂಗ ಅವರನ್ನ ಅಮಾನತು ಮಾಡಬೇಕು ಒತ್ತಾಯಿಸಿರುವ ಬಸವ ನಾಗಿದೇವ ಸ್ವಾಮೀಜಿ, DYSP ವಿರುದ್ದ ಕೇಳಿ ಬಂದಿರುವ ಆರೋಪಗಳಿಗೆ ಸಾಕ್ಷ್ಯವಾಗಿಉರವ ದಾಖಲೆಗಳನ್ನ ಕಲೆ ಹಾಕಿ ನಾನೇ ಜಾತಿ ನಿಂದನೆ ಪ್ರಕರಣ ದಾಖಲಿಸುತ್ತೇನೆ ಎಂದು ಎಚ್ಚರಿಕೆ ನೀಡಿದ್ದಾರೆ.

ಶ್ರೀನಿವಾಸ್ ತಪ್ಪು ಮಾಡಿದ್ದರೆ ನಾನು ಅವರ ಪರ ನಿಲ್ಲುತ್ತಿರಲಿಲ್ಲ.‌ ಸುಮ್ಮನೇ ಸುಳ್ಳು ದಾಖಲೆ ಸೃಷ್ಠಿಸಿ, ಪಾಂಡುರಂಗ ಅವರು ಕೇಸ್ ಹಾಕುತ್ತಿದ್ದಾರೆ. ರಾಜ್ಯ ಹಾಗೂ ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಆಡಳಿತದಲ್ಲಿ ಇದೆ. ಬಿಜೆಪಿ ಪಕ್ಷದ ವತಿಯಿಂದ ಡಿವೈಎಸ್​ಪಿ ಆಡಳಿತ ಮಾಡುತ್ತಿದ್ದಾನೋ ಗೊತ್ತಿಲ್ಲ. ಅವರು RSS, VHP, ಬಿಜೆಪಿಯವರು ಈತನನ್ನು ಡಿವೈಎಸ್​ಪಿ ಮಾಡಿ ಸಂಬಳ ನೀಡುತ್ತಿದ್ದಾರೋ ಗೊತ್ತಿಲ್ಲ. ಇಂಥ ಹುನ್ನಾರ ಏನಾದರೂ ಇದ್ದರೆ ಈತ ಕೂಡಲೇ ರಾಜೀನಾಮೆ ನೀಡಿ ರಾಜಕೀಯಕ್ಕೆ ಹೋಗಲಿ ಮಾಡಲಿ ಎಂದಿರುವ ಸ್ವಾಮೀಜಿ ಅವರು ಪರೋಕ್ಷವಾಗಿ ಅಣ್ಣಾಮಲೈ ಅವರ ಉದಾಹರಣೆ ನೀಡಿದ್ದಾರೆ.

ಈ ಕುರಿತು ನ್ಯೂಸ್ 18 ಗೆ ಪ್ರತಿಕ್ರಿಯಿಸಿರುವ ಎಸ್​ಪಿ ರಾಧಿಕಾ ಅವರು, ಸ್ವಾಮೀಜಿ ಸುದ್ದಿಗೋಷ್ಠಿ ಮಾಡಿದ್ದಾರೆ ಅಷ್ಟೇ ಹೊರತು ನಮಗೆ ಯಾವುದೇ ದೂರು ನೀಡಿಲ್ಲ. ದೂರು ನೀಡಿದರೆ ಅದನ್ನ ಪರೀಶೀಲಿಸಿ ಕ್ರಮ ವಹಿಸುತ್ತೇವೆ ಎಂದಿದ್ದಾರೆ.ವರದಿ: ವಿನಾಯಕ‌ ತೊಡರನಾಳ್
Published by: Vijayasarthy SN
First published: April 23, 2021, 12:03 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories