• ಹೋಂ
  • »
  • ನ್ಯೂಸ್
  • »
  • ಜಿಲ್ಲೆ
  • »
  • ಮಂಡ್ಯದಲ್ಲಿ ದಿನೇ ದಿನೇ ಹೆಚ್ಚಾಗುತ್ತಿರುವ ಸರಗಳ್ಳತನ ಪ್ರಕರಣ; ಮಹಿಳೆಯರು ಕಂಗಾಲು

ಮಂಡ್ಯದಲ್ಲಿ ದಿನೇ ದಿನೇ ಹೆಚ್ಚಾಗುತ್ತಿರುವ ಸರಗಳ್ಳತನ ಪ್ರಕರಣ; ಮಹಿಳೆಯರು ಕಂಗಾಲು

ಸಾಂದರ್ಭಿಕ ಚಿತ್ರ.

ಸಾಂದರ್ಭಿಕ ಚಿತ್ರ.

ಸರಗಳ್ಳತನ ಪ್ರಕರಣಗಳು‌ ಹೆಚ್ಚಾದ ಹಿನ್ನೆಲೆಯಲ್ಲಿ ಪೊಲೀಸರು ಆಕ್ಟೀವ್ ಆಗಿದ್ದಾರೆ. ಸರಗಳ್ಳತನ ಎಸಗುತ್ತಿರುವ ದುಷ್ಕರ್ಮಿಗಳ ಪತ್ತೆಗಾಗಿ ಪೊಲೀಸ್ ಇಲಾಖೆ ಅಲರ್ಟ್ ಆಗಿ ವಿಶೇಷ ತಂಡ ರಚನೆ ಮಾಡಿದೆ. ಅಲ್ಲದೇ ಜಿಲ್ಲೆಯ ಎಲ್ಲಾ ಕಡೆ ಪ್ರಮುಖ ರಸ್ತೆಯಲ್ಲಿ CCTV ಅಳವಡಿಸಿ ಪೊಲೀಸರ ನಾಕಾಬಂಧಿ ವಿಧಿಸಿ ತಪಾಸಣೆ ಮಾಡಲು ಮುಂದಾಗಿದ್ದಾರೆ.

ಮುಂದೆ ಓದಿ ...
  • Share this:

ಮಂಡ್ಯ: ಸಕ್ಕರೆನಾಡು ಮಂಡ್ಯ ಜಿಲ್ಲೆಯಲ್ಲಿ ದಿನೇ ದಿನೇ ಸರಗಳ್ಳತನ‌ ಪ್ರಕರಣಗಳು ಹೆಚ್ಚಾಗುತ್ತಿವೆ. ಮಹಿಳೆಯರು ಮತ್ತು ವೃದ್ದೆಯರನ್ನು ಟಾರ್ಗೆಟ್ ಮಾಡಿಕೊಂಡ ಕಳ್ಳರ ತಂಡವೊಂದು ಜಿಲ್ಲೆಯಲ್ಲಿ ಪ್ರತಿನಿತ್ಯ ಜಿಲ್ಲೆಯಲ್ಲಿ ಒಂದಲ್ಲ ಒಂದು ಕಡೆ ಸರಗಳ್ಳತನ ಮಾಡುತ್ತಿದೆ. ವಿಳಾಸ ಕೇಳುವ ನೆಪದಲ್ಲೋ, ಇಲ್ಲ ಅಂಗಡಿಯಲ್ಲಿ ವ್ಯವಹರಿಸುವ ನೆಪದಲ್ಲೋ ಇಲ್ಲ ವಾಯುವಿಹಾರದ ನೆಪದಲ್ಲಿ ಬಂದು ಮಹಿಳೆಯರ ಕತ್ತಿನಲ್ಲಿರುವ ಚಿನ್ನದ ಸರವನ್ನು‌ ಎಗರಿಸಿ ನಾಪತ್ತೆಯಾಗುತ್ತಿದ್ದಾರೆ. ಇದು ಜಿಲ್ಲೆಯ ಪೊಲೀಸ್ ಇಲಾಖೆಗೆ ತಲೆ ನೋವಾಗಿದೆ. ಅಲ್ಲದೇ ಮಹಿಳೆಯರು ಕೂಡ ಇದೀಗ ಒಂಟಿಯಾಗಿ ತಿರುಗಾಡಲು ಭಯಪಡುವಂತಾಗಿದೆ.


ಹೌದು!ಮಂಡ್ಯ ಜಿಲ್ಲೆಯಲ್ಲಿ ಇದೀಗ ಸರಗಳ್ಳತನ ಪ್ರಕರಣಗಳು ಮೇಲಿಂದ ಮೇಲೆ ನಡೆಯುತ್ತಿವೆ. ಮಂಡ್ಯ ಜಿಲ್ಲೆಯ ಮದ್ದೂರು, ಮಳವಳ್ಳಿ, ಶ್ರಿರಂಗಪಟ್ಟಣ ಸೇರಿ  ಮಂಡ್ಯ ತಾಲೂಕುಗಳಲ್ಲಿ ಸರಗಳ್ಳತನ ಪ್ರಕರಣಗಳು ಪ್ರತಿದಿನ‌ ವರದಿಯಾಗುತ್ತಿದೆ. ಮಹಿಳೆಯರು ಮತ್ತು ವೃದ್ದೆಯರನ್ನು ಟಾರ್ಗೆಟ್ ಮಾಡಿಕೊಂಡಿರುವ ಈ ಸರಗಳ್ಳರ ತಂಡ ಜಿಲ್ಲೆಯಲ್ಲಿ ಒಂದಲ್ಲ ಒಂದು ಕಡೆ ತಮ್ಮ ಕೈ ಚಳಕ ಪ್ರದರ್ಶನ ಮಾಡ್ತಿದ್ದಾರೆ. ಬೈಕ್​ನಲ್ಲಿ ಬಂದು ಕೃತ್ಯ ಎಸಗುತ್ತಿರುವ ಈ ತಂಡ ವಿಳಾಸ ಕೇಳುವ ನೆಪದಲ್ಲಿ‌ ಇಲ್ಲವೇ ಅಂಗಡಿಯಲ್ಲಿ ಸಿಗರೇಟು ತೆಗೆದುಕೊಳ್ಳುವ ನೆಪದಲ್ಲಿ‌ ಬಂದು ಮಹಿಳೆಯರ ಕತ್ತಿನಲ್ಲಿರುವ ಚಿನ್ನದ ಸರವನ್ನು ಕಸಿದು ಪರಾರಿಯಾಗ್ತಿದ್ದಾರೆ. ಇದರಿಂದಾಗಿ ಜಿಲ್ಲೆಯಲ್ಲಿ‌ ಮಹಿಳೆಯರು ಒಂಟಿಯಾಗಿ ಓಡಾಡಲು ಭಯ ಪಡ್ತಿದ್ದಾರೆ. ಒಂದು ಕಡೆ ದಿನನಿತ್ಯ ನಡೆಯುತ್ತಿರೋ ಸರಗಳ್ಳತನ ಪ್ರಕರಣ ಮಹಿಳೆಯರು ಆತಂಕಗೊಂಡಿದಿದ್ದರೆ ಪೊಲೀಸರು ಹೈರಾಣಾಗಿದ್ದಾರೆ‌.


ಇನ್ನು  ಜಿಲ್ಲೆಯಲ್ಲಿ ಈ ಸರಗಳ್ಳತನ ಪ್ರಕರಣ ವಿಪರೀತವಾಗುತ್ತಿದ್ದು, ಇಂದು ಮಂಡ್ಯ ಜಿಲ್ಲೆಯಲ್ಲಿ ಒಂದೇ ದಿನ 4 ಸರಗಳ್ಳತನ ಪ್ರಕರಣ ವರದಿಯಾಗಿದೆ. ಇದರ ಜೊತೆ 1 ಮನೆಗಳ್ಳತನ ಕೂಡ ನಡೆದಿದೆ. ಮಂಡ್ಯ ಜಿಲ್ಲೆಯ ಮಳವಳ್ಳಿ ಪಟ್ಟಣದಲ್ಲಿ ರಸ್ತೆಯಲ್ಲಿ ನಡೆದು ಹೋಗುತ್ತಿದ್ದ ವೃದ್ದೆ ಗಿರಿಜಮ್ಮನ ಕತ್ತಿನಿಂದ ಸರ ಕಸಿದು ಪರಾರಿಯಾಗಿದ್ದಾರೆ. ಇನ್ನು‌ ಮದ್ದೂರು ತಾಲೂಕಿನ ಕರಡಕೆರೆ ಬಳಿ ದಂಪತಿಗಳನ್ನು ಬೆದರಿಸಿ ಮಾಂಗಲ್ಯ ಸರವನ್ನು ಕಸಿದು ಪರಾರಿಯಾಗಿದ್ದಾರೆ. ಅಲ್ಲದೇ ಮದ್ದೂರಿನ ಭುಗತಹಳ್ಳಿಯಲ್ಲಿ‌ಮದುವೆಗೆ ಬಂದಿದ್ದ ವೃದ್ದೆಯ ಬಳಿ ಕೂಡ ಚಿನ್ನದ ಸರವನ್ನು ಕಸಿದು ಪರಾರಿಯಾಗಿದ್ದಾರೆ. ಇದರ ಜೊತೆ ಮದ್ದೂರಿನ ವೈದ್ಯನಾಥೇಶ್ವರ ದೇವಾಲಯದ ಜಾತ್ರಾ ಮಹೋತ್ಸವದಲ್ಲೂ ಸರಗಳ್ಳರು ತಮ್ಮ ಕೈ ಚಳಕ ತೋರಿಸಿ ಮಹಿಳೆ ಕತ್ತಿನಿಂದ 50 ಗ್ರಾಂ ಮಾಂಗಲ್ಯ ಸರವನ್ನು ಎಗರಿಸಿದ್ದಾರೆ. ಇದಲ್ಲದೆ ಮದ್ದೂರಿ ಟಿ.ಬಿ. ವೃತ್ತದ ಬಳಿ ಯೋಧನ ಮನೆಗೆ ಕನ್ನಹಾಕಿ ಮನೆಯಲ್ಲಿದ್ದ ನಗನಾಣ್ಯವನ್ನು ದೋಚಿ ಪರಾರಿಯಾಗಿದ್ದಾರೆ. ಇದು ಪೊಲೀಸರಿಗೆ ತಲೆ ನೋವು ತಂದಿದೆ.


ಇದನ್ನು ಓದಿ: West Bengal Assembly Election 2021: ನಂದಿಗ್ರಾಮದಿಂದ ಬ್ಯಾನರ್ಜಿ ಸ್ಪರ್ಧೆ, 291 ಕ್ಷೇತ್ರಗಳ ಅಭ್ಯರ್ಥಿ ಪಟ್ಟಿ ಬಿಡುಗಡೆ ಮಾಡಿದ ಟಿಎಂಸಿ


ಸರಗಳ್ಳತನ ಪ್ರಕರಣಗಳು‌ ಹೆಚ್ಚಾದ ಹಿನ್ನೆಲೆಯಲ್ಲಿ ಪೊಲೀಸರು ಆಕ್ಟೀವ್ ಆಗಿದ್ದಾರೆ. ಸರಗಳ್ಳತನ ಎಸಗುತ್ತಿರುವ ದುಷ್ಕರ್ಮಿಗಳ ಪತ್ತೆಗಾಗಿ ಪೊಲೀಸ್ ಇಲಾಖೆ ಅಲರ್ಟ್ ಆಗಿ ವಿಶೇಷ ತಂಡ ರಚನೆ ಮಾಡಿದೆ. ಅಲ್ಲದೇ ಜಿಲ್ಲೆಯ ಎಲ್ಲಾ ಕಡೆ ಪ್ರಮುಖ ರಸ್ತೆಯಲ್ಲಿ CCTV ಅಳವಡಿಸಿ ಪೊಲೀಸರ ನಾಕಾಬಂಧಿ ವಿಧಿಸಿ ತಪಾಸಣೆ ಮಾಡಲು ಮುಂದಾಗಿದ್ದಾರೆ.


ಒಟ್ಟಾರೆ  ಮಂಡ್ಯ ಪೊಲೀಸರು ಈ ಪ್ರಕರಣದ ತನಿಖೆ ಚುರುಕುಗೊಳಿಸಿ ಸರಗಳ್ಳರಿಗಾಗಿ ಬಲೆ ಬೀಸಿದ್ದಾರೆ. ಜಿಲ್ಲೆಯ ಪೊಲೀಸರ ಕಾರ್ಯಾಚರಣೆ ತೀವ್ರಗೊಳ್ಳುತ್ತಿದ್ದಂತೆ ಪಾಂಡವಪುರ ಪೊಲೀಸರ ಕೈಗೆ ಓರ್ವ  ಸರಗಳ್ಳ ಸಿಕ್ಕಿ ಬಿದ್ದಿದ್ದಾನೆ. ಈತನನ್ನು ವಶಕ್ಕೆ ಪಡೆದಿರುವ ಪೊಲೀಸರ ತಂಡ ಹೆಚ್ಚಿನ ವಿಚಾರಣೆ ನಡೆಸುತ್ತಿದ್ದು, ಆರೋಪಿಯಿಂದ ಮಾಲು ವಶಕ್ಕೆ ಪಡೆದು ಸತ್ಯ ಬಾಯ್ಬಿಡಿಸುವ ಪ್ರಯತ್ನ ಮಾಡ್ತಿದ್ದಾರೆ. ಈ ಸರಗಳ್ಳತನ ಪ್ರಕರಣದಲ್ಲಿ ವ್ಯವಸ್ಥಿತ ಸರಗಳ್ಳತನದ ಜಾಲವೇ  ಇರುವ ಶಂಕೆ ವ್ಯಕ್ತವಾಗಿದ್ದು, ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

Published by:HR Ramesh
First published: