• Home
 • »
 • News
 • »
 • district
 • »
 • NMP: 6 ಲಕ್ಷ ಕೋಟಿ ಮೌಲ್ಯದ ಆಸ್ತಿ ಮಾರಲು ಹೊರಟಿದೆ ಕೇಂದ್ರ ಸರ್ಕಾರ: ನಿರ್ಮಲ ಸೀತಾರಾಮನ್ ಪ್ಲಾನ್​

NMP: 6 ಲಕ್ಷ ಕೋಟಿ ಮೌಲ್ಯದ ಆಸ್ತಿ ಮಾರಲು ಹೊರಟಿದೆ ಕೇಂದ್ರ ಸರ್ಕಾರ: ನಿರ್ಮಲ ಸೀತಾರಾಮನ್ ಪ್ಲಾನ್​

ನಿರ್ಮಲಾ ಸೀತಾರಾಮನ್​​​

ನಿರ್ಮಲಾ ಸೀತಾರಾಮನ್​​​

 ಈ ಯೋಜನೆಯಡಿ, 15 ರೈಲ್ವೇ ಕ್ರೀಡಾಂಗಣಗಳು, 25 ವಿಮಾನ ನಿಲ್ದಾಣಗಳು, 160 ಕಲ್ಲಿದ್ದಲು ಗಣಿಗಾರಿಕೆ ಯೋಜನೆಗಳನ್ನು ಮಾರಾಟ ಮಾಡುವ ಮೂಲಕ ಸರ್ಕಾರವು ಹಣ ಗಳಿಕೆ ಮಾಡಲು ಯೋಜನೆ ರೂಪಿಸಿದೆ ಎಂದು ಕಾಂತ್​ ಹೇಳಿದರು.

 • Share this:

   ಸರ್ಕಾರವು ಸೋಮವಾರ ರಾಷ್ಟ್ರೀಯ ಹಣಗಳಿಕೆಯ ( National Monetisation pipeline (NMPಎನ್‌ಎಂಪಿ) ಮಾರ್ಗಕ್ಕೆ ಒಂದಷ್ಟು ಯೋಜನೆಗಳನ್ನು ಹಾಕಿಕೊಂಡಿರುವುದಾಗಿ  ಹಾಗೂ ಶೀಘ್ರದಲ್ಲೆ ಆರಂಭಿಸುವುದಾಗಿ ಸೋಮವಾರ ಹೇಳಿದೆ. ಹಣಗಳಿಕೆ ಅಥವಾ ಸರ್ಕಾರಿ ಆಸ್ತಿ ಮಾರಾಟ (monetisation plan) ಯೋಜನೆಯನ್ನು ಸಚಿವೆ ನಿರ್ಮಲಾ ಸೀತಾರಾಮನ್ ತಮ್ಮ ವಾರ್ಷಿಕ ಬಜೆಟ್ ಭಾಷಣದ ವೇಳೆ ಘೋಷಿಸಿದರು. ಇದು ಸರ್ಕಾರದ ಆಸ್ತಿ ಮಾರಾಟ ಉಪಕ್ರಮಕ್ಕೆ ಮಧ್ಯಮ ಅವಧಿಯ ಪೂರ್ವಭಾವಿ ಯೋಜನೆಯಾಗಿ ಕಾರ್ಯನಿರ್ವಹಿಸುತ್ತದೆ.


  ಈ ಯೋಜನೆಯು ಸರ್ಕಾರದ ಮೂಲಸೌಕರ್ಯ ಆಸ್ತಿಗಳನ್ನು ಮುಂದಿನ ನಾಲ್ಕು-ವರ್ಷಗಳಲ್ಲಿ ಮಾರಾಟ ಮಾಡಲು ನಿರ್ಧಾರ ಮಾಡಲಾಗಿದ್ದು ಇದರಿಂದ ರೂ. 6 ಲಕ್ಷ ಕೋಟಿಗಳಷ್ಟು ಹಣವನ್ನು ಗಳಿಸುವ ಗುರಿ ಹೊಂದಲಾಗಿದೆ ಎಂದು ಹೇಳಲಾಗಿದೆ.


  ಮೂಲಸೌಕರ್ಯಕ್ಕಾಗಿ ನವೀನ ಮತ್ತು ಪರ್ಯಾಯ ಮಾರ್ಗದಲ್ಲಿ ಹಣಕಾಸು ಸಂಗ್ರಹಿಸುವ ಸಾಧನವಾಗಿ ಇದನ್ನು ಬಳಸಲಾಗುತ್ತದೆ. ಈ ಬಾರಿಯ ಬಜೆಟ್ ಆಸ್ತಿ ಗಳಿಕೆಯ ಮೇಲೆ ಹೆಚ್ಚಿನ ಒತ್ತು ನೀಡಿದೆ ಮತ್ತು ಹಲವಾರು ಪ್ರಮುಖ ಘೋಷಣೆಗಳನ್ನು ಒಳಗೊಂಡಿದೆ ಎಂದು ಹೇಳಿದ್ದಾರೆ.  ಸ್ವತ್ತುಗಳ ಹಣಗಳಿಕೆಯು ಕ್ಯಾಪೆಕ್ಸ್ ವೆಚ್ಚವನ್ನು ಹೆಚ್ಚಿಸುತ್ತದೆ ಮತ್ತು ವಿಶ್ವ ದರ್ಜೆಯ ಮೂಲಸೌಕರ್ಯವನ್ನು ನಿರ್ಮಿಸುತ್ತದೆ: ನೀತಿ ಆಯೋಗದ (Niti Aayog) ಸಿಇಒ ಅಮಿತಾಬ್ ಕಾಂತ್ ಹೇಳಿದ್ದಾರೆ.
  ಹೊಸ ಮೂಲಸೌಕರ್ಯ ಸೃಷ್ಟಿಗೆ ಖಾಸಗಿ ವಲಯದ ಹೂಡಿಕೆಯನ್ನು ಉತ್ತೇಜಿಸುವ ಅಥವಾ ಟ್ಯಾಪ್​ ಮಾಡುವ ಗುರಿಯನ್ನು ಈ ಯೋಜನೆ ಹೊಂದಿದೆ. ಸರ್ಕಾರ ಮಾಲಿಕತ್ವ ಹೊಂದಿರುವ ಆಸ್ತಿಗಳನ್ನು ಮಾತ್ರ ಪಟ್ಟಿ ಮಾಡಲಾಗಿದೆ ಎಂದು ನೀತಿ ಆಯೋಗದ ಸಿಇಒ ಹೇಳಿದರು.   ಈ ಯೋಜನೆಯಡಿ, 15 ರೈಲ್ವೇ ಕ್ರೀಡಾಂಗಣಗಳು, 25 ವಿಮಾನ ನಿಲ್ದಾಣಗಳು, 160 ಕಲ್ಲಿದ್ದಲು ಗಣಿಗಾರಿಕೆ ಯೋಜನೆಗಳನ್ನು ಮಾರಾಟ ಮಾಡುವ ಮೂಲಕ ಸರ್ಕಾರವು ಹಣ ಗಳಿಕೆ ಮಾಡಲು ಯೋಜನೆ ರೂಪಿಸಿದೆ ಎಂದು ಕಾಂತ್​ ಹೇಳಿದರು.
  ರಾಷ್ಟ್ರೀಯ ಆಸ್ತಿಗಳ ಮಾರಾಟ ಪ್ರಕ್ರಿಯೆ ಒಂದು ಮಟ್ಟದ ಯಶಸ್ಸನ್ನು ತಲುಪಿಸಲು ನಾವು ಸಂಪೂರ್ಣವಾಗಿ ಬದ್ಧರಾಗಿದ್ದೇವೆ. ಸಾರ್ವಜನಿಕರಿಗೆ ಸರ್ಕಾರದ ಸೇವೆಗಳಲ್ಲಿ ಉತ್ತಮ ಕಾರ್ಯಾಚರಣೆ ಮತ್ತು ನಿರ್ವಹಣೆಗಾಗಿ ಖಾಸಗಿ ವಲಯವನ್ನು ತರುವುದು ಬಹಳ ಮುಖ್ಯ ಎಂದು ನಾವು ಭಾವಿಸುತ್ತೇವೆ, ಆದ್ದರಿಂದ ನಾವು ಈ ನೆಲದ ಕಾನೂನಿನ ಮೇಲೆ ಸರ್ಕಾರಿ ಆಸ್ತಿಗಳ ವಿತರಣೆಗೆ ಬದ್ಧರಾಗಿದ್ದೇವೆ ಎಂದು ನುಡಿದರು.  ಈ ಯೋಜನೆಯು ಕೇವಲ ಲಾಭದಾಯಕವಲ್ಲದ ಸ್ವತ್ತುಗಳ ಬಗ್ಗೆ ಮಾತನಾಡುತ್ತಿದ್ದು, ಅಲ್ಲಿ ಈಗಾಗಲೇ ಹೂಡಿಕೆ ಮಾಡಲಾಗುತ್ತಿದೆ, ಅಲ್ಲಿ ಸೊತ್ತುಗಳ ಮೌಲ್ಯ ಕುಸಿಯುತ್ತಿವೆ ಅಥವಾ ಸಂಪೂರ್ಣವಾಗಿ ಅವು ಹಣ ಗಳಿಸಲು ವಿಫಲವಾಗಿವೆ ಅಥವಾ ಸರಿಯಾದ ರೀತಿಯಲ್ಲಿ ಬಳಕೆಯಾಗುತ್ತಿಲ್ಲ ಆದ ಕಾರಣ ಈ ಮಹತ್ವದ ನಿರ್ಧಾರಕ್ಕೆ ಬರಲಾಗಿದೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತರಾಮನ್​ ಹೇಳಿದರು.


  ಹಣಗಳಿಕೆ ಯೋಜನೆಯಲ್ಲಿ ಕೋರ್ ಇನ್ಫ್ರಾ ಸ್ವತ್ತುಗಳ  ಮಾಲೀಕತ್ವವು ಸರ್ಕಾರದೊಂದಿಗೆ ಮುಂದುವರಿಯುತ್ತದೆ ಮತ್ತು ನಿಗದಿತ ಕಾಲಾವಧಿಯ ನಂತರ ಕಡ್ಡಾಯವಾಗಿ ಆ ಆಸ್ತಿಗಳನ್ನು ಹಿಂಪಡೆಯಲಾಗುತ್ತದೆ ಎಂದು ಹೇಳಿದ್ದಾರೆ.


  ಯೋಜನೆಯು ಅಸ್ತಿತ್ವದಲ್ಲಿರುವ ಆಸ್ತಿ ಮೂಲದಿಂದ ಹಣಗಳಿಸುವುದು ಮತ್ತು ಅವರ ಆದಾಯವನ್ನು ಹೊಸ ಮೂಲಸೌಕರ್ಯ ಸೃಷ್ಟಿಗೆ ಮತ್ತು ಅಭಿವೃದ್ದಿಗೆ ಬಳಸುವುದು, ಭವಿಷ್ಯದ ಸ್ವತ್ತುಗಳನ್ನು ಮರುಬಳಕೆ ಮಾಡುವುದು ಮತ್ತು ಈ ಬೆಳವಣಿಗೆಯನ್ನು ದ್ವಿಗುಣಗೊಳಿಸುವ ವಾತಾವರಣವನ್ನು ನಿರ್ಮಿಸುವುದು ಎಂದು ಹೇಳಲಾಗಿದೆ.


  ಇದನ್ನೂ ಓದಿ: ಪಶ್ಚಿಮ ಬಂಗಾಳ: ಚುನಾವಣೋತ್ತರ ಗಲಭೆ; ಸಭೆ ನಡೆಸಿದ ಸಿಬಿಐ ಹಿರಿಯ ಅಧಿಕಾರಿಗಳು


  ಸರ್ಕಾರವು ಮೊದಲು ಘೋಷಿಸಿದ ರಾಷ್ಟ್ರೀಯ ಮೂಲಸೌಕರ್ಯ ಯೋಜನೆಯೊಂದಿಗೆ ಇದನ್ನು ಸೇರಿಸಿ ಪರಸ್ಪರ ಸಂಬಂಧ ಬೆಸಯಲು ಯೋಜಿಸಲಾಗಿದೆ. ನಮ್ಮ ಬಳಿ ಇರುವ ಸ್ವತ್ತಿನಿಂದ ಹೆಚ್ಚಿನ ಲಾಭ ಪಡೆಯುವ ಸಮಯ ಬಂದಿದೆ ಇದನ್ನು ಎಲ್ಲರೂ ಅಂದರೆ ದೇಶವೇ ಗುರುತಿಸುವುದು ಮುಖ್ಯವಾಗಿದೆ ಎಂದರು.


  ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು.

  Published by:HR Ramesh
  First published: