ಕೇಂದ್ರ ಅಧ್ಯಯನ ತಂಡ ಬೆಳಗಾವಿಗೆ ಭೇಟಿ; ನೆರೆ ಸಂತ್ರಸ್ತರಿಂದ ಕಾರಿಗೆ ಘೇರಾವ್ ಹಾಕಿ ಆಕ್ರೋಶ

ಗೋಕಾಕ್ ತಾಲೂಕಿನ ಲೋಳಸೂರ ಬಳಿ ಅಧ್ಯಯನಕ್ಕೆ ಆಮಿಸಿದ ಕೇಂದ್ರ ತಂಡದ ಕಾರಿಗೆ ಸಂತ್ರಸ್ತರು ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತ ಪಡಿಸಿದ್ದರು. ಕಳೆದ ವರ್ಷ ಆಗಿರೋ ಭೀಕರ ಪ್ರವಾಹದಿಂದ ನೂರಾರು ಜನ ಮನೆ, ಮಠ ಕಳೆದುಕೊಂಡಿದ್ದು, ಇವರೆಗೆ ಯಾವುದೇ ಪರಿಹಾರದ ಹಣ ಸಿಕ್ಕಿಲ್ಲ. ಹೀಗಾಗಿ ಸಂತ್ರಸ್ತರು ಕೇಂದ್ರ ತಂಡದ ಮುಂದೆ ಇದನ್ನು ಪ್ರಶ್ನೆ ಮಾಡಿದ್ದರು. ಆದರೇ ಇದಕ್ಕೆ ಯಾವುದೇ ಸರಿಯಾದ ಉತ್ತರವನ್ನು ಅಧಿಕಾರಿಗಳು ನೀಡಲಿಲ್ಲ.

news18-kannada
Updated:September 9, 2020, 7:21 AM IST
ಕೇಂದ್ರ ಅಧ್ಯಯನ ತಂಡ ಬೆಳಗಾವಿಗೆ ಭೇಟಿ; ನೆರೆ ಸಂತ್ರಸ್ತರಿಂದ ಕಾರಿಗೆ ಘೇರಾವ್ ಹಾಕಿ ಆಕ್ರೋಶ
ಕೇಂದ್ರದ ಅಧ್ಯಯನ ತಂಡ.
  • Share this:
ಬೆಳಗಾವಿ: ಜಿಲ್ಲೆಯಲ್ಲಿ ಅತಿವೃಷ್ಠಿ ಹಾಗೂ ಪ್ರವಾಹದಿಂದ ಸಾಕಷ್ಟು ಪ್ರಮಾಣದಲ್ಲಿ ಹಾನಿಯಾಗಿದೆ. ಈ ಬಗ್ಗೆ ಸಮೀಕ್ಷೆಗೆ ಇಂದು ಕೇಂದ್ರದ ಅಧ್ಯಯನ ತಂಡ ಆಗಮಿಸಿದೆ. ಆದರೆ, ಕಳೆದ ವರ್ಷದ ಪ್ರವಾಹದಿಂದ ಆಗಿರೋ ಹಾನಿಯ ಪರಿಹಾರ ಸರಿಯಾಗಿ ಬಂದಿಲ್ಲ. ಈ ಬಗ್ಗೆ ಸಂತ್ರಸ್ತರು ಕೇಂದ್ರ ಅಧ್ಯಯನ ತಂಡದ ಅಧಿಕಾರಿಗಳ ಕಾರಿಗೆ ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿರುವ ಘಟನೆ ನಡೆದಿದೆ. ಹೈದ್ರಾಬಾದ್ ಕೃಷಿ ಇಲಾಖೆಯ ಎಣ್ಣೆಬೀಜಗಳ ಅಭಿವೃದ್ಧಿ ನಿರ್ದೇಶನಾಲಯದ ನಿರ್ದೇಶಕ ಡಾ.  ಮನೋಹರನ್, ಬೆಂಗಳೂರಿನ ಜಲಶಕ್ತಿ ಸಚಿವಾಲಯದ ಅಧೀಕ್ಷಕ ಇಂಜಿನಿಯರ್ ಗುರುಪ್ರಸಾದ್ ಜೆ ಅತಿವೃಷ್ಟಿಯಿಂದ ಹಾನಿಯಾಗಿರೋ ಪ್ರದೇಶಗಳಿಗೆ ಭೇಟಿ ನೀಡಿದ್ದರು. ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ಆಗಿರೋ ಹಾನಿ ಬಗ್ಗೆ ವಿವಿಧ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ, ರೈತರಿಂದ ಮಾಹಿತಿ ಸಂಗ್ರಹಿಸಿದರು. ಆದರೆ, ಈ ವೇಳೆ ರೈತರು ಅಧಿಕಾರಿಗಳಿಗೆ ಘೇರಾವ್‌ ಹಾಕಿದ್ದಾರೆ.

ಕಳೆದ ತಿಂಗಳು ಜಿಲ್ಲೆಯ ಕೃಷ್ಣ, ಘಟಪ್ರಭಾ, ಮಲಪ್ರಭ, ಹಿರಣ್ಯಕೇಶಿ ಹಾಗೂ ಮಾರ್ಕಂಡಯ್ಯ ನದಿಗಳು ಅಪಾದಯ ಮಟ್ಟ ಮೀರಿ ಹರಿದ್ದವು. ಇದರಿಂದ ಜಿಲ್ಲೆಯ ಅನೇಕ ತಾಲೂಕಿನಲ್ಲಿ ಅಪಾರ ಪ್ರಮಾಣದ ಹಾನಿ ಸಂಭವಿಸಿದೆ. ಜಿಲ್ಲೆಯಲ್ಲಿ 41 ಸಾವಿರ ಹೆಕ್ಟರ್ ಪ್ರದೇಶದಲ್ಲಿ ಬೆಳೆಹಾನಿಯಾಗಿದ್ದು. 972 ಕೋಟಿ ರೂಪಾಯಿ ನಷ್ಟ ಸಂಭವಿಸಿದೆ ಎಂದು ಈಗಾಗಲೇ ಜಿಲ್ಲಾಢಳಿತದಿಂದ ರಾಜ್ಯ ಸರ್ಕಾರಕ್ಕೆ ವರದಿ ಸಲ್ಲಿಕೆಯಾಗಿದೆ.

ಇಂದು ಭೇಟಿ ನೀಡಿದ ಕೇಂದ್ರ ಅಧ್ಯಯನ ಹುಕ್ಕೇರಿ ತಾಲೂಕಿನ ಹುಕ್ಕೇರಿ ತಾಲೂಕಿನ ಬಡಕುಂದ್ರಿ, ಗೋಕಾಕ್ ತಾಲೂಕಿನ ಲೋಳಸೂರ ಸೇರಿ ಅನೇಕ ಪ್ರದೇಶಗಳಿಗೆ ಭೇಟಿ ನೀಡಿದ್ರು. ರೈತರಿಂದ ನೇರವಾಗಿ ಆಗಿರೋ ಹಾನಿಯ ಬಗ್ಗೆ ಮಾಹಿತಿಯನ್ನು ಸಂಗ್ರಹಿಸಿದ್ದರು. ಈ ವೇಳೆಯಲ್ಲಿ ಸೋಯಾಬಿನ್ ಬೆಳೆ ನಷ್ಟದ ಬಗ್ಗೆ ರೈತರು ಕೇಂದ್ರ ಅಧ್ಯಯನ ತಂಡದ ಮುಂದೆ ತಮ್ಮ ಅಳಲನ್ನು ತೋಡಿಕೊಂಡರು.

ಇದನ್ನೂ ಓದಿ : ಭಾರತದ ವಿರುದ್ಧ ಗಡಿಯ ಉದ್ದಕ್ಕೂ ಚೀನಾ ಸೇನೆ ಆಕ್ರಮಣಶೀಲ ನೀತಿ ಅನುಸರಿಸುತ್ತಿದೆ; ಸರ್ಕಾರಿ ಮೂಲದ ಮಾಹಿತಿ

ಕೇಂದ್ರ ಅಧ್ಯಯನ ತಂಡಕ್ಕೆ ಜಿಲ್ಲೆಯಲ್ಲಿ ಪ್ರವಾಹ, ಅತಿವೃಷ್ಠಿಯಿಂದ ಆಗಿರೋ ಹಾನಿಯ ಬಗ್ಗೆ ವಿಧಾನ ಪರಿಷತ್ ಸದಸ್ಯ ಮಹಾಂತೇಶ ಕವಟಗಿಮಠ ಭೇಟಿಯಾಗಿ ಹಾನಿಯ ಬಗ್ಗೆ ಮಾಹಿತಿ ನೀಡಿದ್ರು. ಜತೆಗೆ ಕೃಷ್ಣ ಹಾಗೂ ಮಲಪ್ರಭಾ ನದಿಯಿಂದ ಹೆಚ್ಚು ಹಾನಿ ಸಂಭವಿಸಿದೆ. ಈ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸುವಂತೆ ಸಹ ಮನವಿ ಯನ್ನು ಮಾಡಿಕೊಂಡರು.

ಕೇಂದ್ರ ಅಧ್ಯಯನ ತಂಡದ ಕಾರಿಗೆ ಮುತ್ತಿಗೆಗೋಕಾಕ್ ತಾಲೂಕಿನ ಲೋಳಸೂರ ಬಳಿ ಅಧ್ಯಯನಕ್ಕೆ ಆಮಿಸಿದ ಕೇಂದ್ರ ತಂಡದ ಕಾರಿಗೆ ಸಂತ್ರಸ್ತರು ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತ ಪಡಿಸಿದ್ದರು. ಕಳೆದ ವರ್ಷ ಆಗಿರೋ ಭೀಕರ ಪ್ರವಾಹದಿಂದ ನೂರಾರು ಜನ ಮನೆ, ಮಠ ಕಳೆದುಕೊಂಡಿದ್ದು, ಇವರೆಗೆ ಯಾವುದೇ ಪರಿಹಾರದ ಹಣ ಸಿಕ್ಕಿಲ್ಲ.

ಹೀಗಾಗಿ ಸಂತ್ರಸ್ತರು ಕೇಂದ್ರ ತಂಡದ ಮುಂದೆ ಇದನ್ನು ಪ್ರಶ್ನೆ ಮಾಡಿದ್ದರು. ಆದರೇ ಇದಕ್ಕೆ ಯಾವುದೇ ಸರಿಯಾದ ಉತ್ತರವನ್ನು ಅಧಿಕಾರಿಗಳು ನೀಡಲಿಲ್ಲ. ಹೀಗಾಗಿ ಕಾರಿಗೆ ಮುಂದೆ ಕುಳಿತು ತಮ್ಮ ಆಕ್ರೋಶವನ್ನು ಹೊರ ಹಾಕಿದ್ರು. ಬೆಳಗಾವಿ ಜಿಲ್ಲಾಧಿಕಾರಿ ಎಂ. ಜಿ ಹಿರೇಮಠ ಸಂತ್ರಸ್ತರನ್ನು ಸಮಾಧಾನ ಪಡಿಸಲು ಹರಸಾಹಸ ಪಟ್ಟರು.
Published by: MAshok Kumar
First published: September 9, 2020, 7:21 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading