• ಹೋಂ
  • »
  • ನ್ಯೂಸ್
  • »
  • ಜಿಲ್ಲೆ
  • »
  • ದೇಶ ವಿದ್ರೋಹಿಗಳ ಜತೆ ಕಾಂಗ್ರೆಸ್ ನಂಟು, ದೇಶದ ಸಮಗ್ರತೆಯಲ್ಲಿ ಕೈ ನಿಲುವೇನು?; ಕೇಂದ್ರ ಸಚಿವ ಜೋಶಿ ಪ್ರಶ್ನೆ

ದೇಶ ವಿದ್ರೋಹಿಗಳ ಜತೆ ಕಾಂಗ್ರೆಸ್ ನಂಟು, ದೇಶದ ಸಮಗ್ರತೆಯಲ್ಲಿ ಕೈ ನಿಲುವೇನು?; ಕೇಂದ್ರ ಸಚಿವ ಜೋಶಿ ಪ್ರಶ್ನೆ

ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ.

ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ.

ಪಶ್ಚಿಮ ಬಂಗಾಳದಲ್ಲಿ ರಾಜಕೀಯ ಹತ್ಯೆಗಳು ಹೆಚ್ಚಿವೆ. ತೃಣಮೂಲ ಕಾಂಗ್ರೆಸ್ ಸರ್ಕಾರದಿಂದ 130ಕ್ಕೂ ಅಧಿಕ ಬಿಜೆಪಿ-ಆರ್‌ಎಸ್‌ಎಸ್ ಕಾರ್ಯಕರ್ತರು ಹತ್ಯೆ ಆಗಿದ್ದಾರೆ. ಪ್ರಸಕ್ತ ಚುನಾವಣೆಯಲ್ಲಿ ಮಮತಾ ಬ್ಯಾನರ್ಜಿ ಅವರನ್ನು ಬಿಜೆಪಿಯು ರಾಜಕೀಯವಾಗಿ ಮುಗಿಸಲಿದೆ ಎಂದು ಪ್ರಹ್ಲಾದ್ ಜೋಶಿ ಆರೋಪಿಸಿದ್ದಾರೆ.

ಮುಂದೆ ಓದಿ ...
  • Share this:

ಧಾರವಾಡ: ದೇಶ ವಿದ್ರೋಹಿಗಳ ಜತೆ ಕಾಂಗ್ರೆಸ್ ನಂಟು ಹೊಂದಿದೆ. ದೇಶದ ಸಮಗ್ರತೆ ಹಾಗೂ ಸುಭ್ರತೆ ದೃಷ್ಟಿಯಲ್ಲಿ ಕಾಂಗ್ರೆಸ್ ಪಕ್ಷದ ನಿಲುವೇನು ಎಂಬುದು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಸ್ಪಷ್ಟಪಡಿಸಬೇಕೆಂದು ಕೇಂದ್ರ ಕಲ್ಲಿದ್ದಲು ಹಾಗೂ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ ಆಗ್ರಹಿಸಿದ್ದಾರೆ. ಧಾರವಾಡದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, "ಭಾರತ ತುಂಡರಿಸುವ ಹಾಗೂ ಜಮ್ಮು-ಕಾಶ್ಮೀರ ಪ್ರತ್ಯೇಕಿಸುವ ಉದ್ದೇಶ ಹೊಂದಿರುವ ವಿಡಿಪಿ, ಸಿಡಿಪಿಐ, ಸಿಪಿಐಎಂ ಇತರ ಉಗ್ರ ಸಂಘಟನೆ ಒಳಗೊಂಡ ಗುಪ್ಕಾರ್ ಗ್ಯಾಂಗ್ ಜತೆಗೆ ಕಾಂಗ್ರೆಸ್ ನಾಯಕರು ನಂಟು ಹೊಂದಿದ್ದಾರೆ" ಎಂದು ಗಂಭೀರ ಆರೋಪ ಮಾಡಿದರು.


ರಕ್ಷಣಾ ಪಡೆಗಳು ಕಾಶ್ಮೀರದಲ್ಲಿ ಉಗ್ರರ ಪಡೆ ಹೊಡೆದುರುಳಿಸಿವೆ. ಇಂತಹ ದೇಹದ್ರೋಹಿ ಚಟಿವಟಿಕೆಗಳ ಹಿಂದೆ ಗುಪ್ಕಾರ್ ಗ್ಯಾಂಗ್ ಕುಮ್ಮಕ್ಕಿದೆ. ಈ ಗ್ಯಾಂಗ್ ಜತೆಗೆ ಕೆಲ ಎಡಪಕ್ಷಗಳು ಜೊತೆ ಕಾಂಗ್ರೆಸ್ ಕೈ ಜೋಡಿಸಿದೆ. ಗುಪ್ಕಾರ್ ಜೊತೆಗಿನ ಸಂಬಂಧದ ಕಾಂಗ್ರೆಸ್ ಸ್ಪಷ್ಟಪಡಿಸಬೇಕು. ಜಮ್ಮು-ಕಾಶ್ಮೀರದಲ್ಲಿ ಕಲಂ 370 ತೆಗೆದು ಹಾಕುವ ಮುನ್ನ ನೂರಕ್ಕೆ ಹೆಚ್ಚು ಕಾನೂನು ಉಗ್ರ ಸಂಘಟನೆಗೆ ಅನ್ವಯವೇ ಆಗುತ್ತಿರಲಿಲ್ಲ. ಜಮ್ಮು-ಕಾಶ್ಮೀರದಲ್ಲಿ ಕಲಂ 370 ಪುನರ್ ಸ್ಥಾಪಿಸುವುದೇ ಗುಪ್ಕಾರ್ ಸಂಘಟನೆ ಉದ್ದೇಶ. ಈ ಸಂಘಟನೆ ಜತೆಗೆ ಕೈಜೋಡಿಸಿ ಕಾಂಗ್ರೆಸ್ ದೇಶದ್ರೋಹಿ ಕೆಲಸ ಮಾಡುತ್ತಿದೆ ಎಂದು ಜೋಶಿ ಕಿಡಿಕಾರಿದ್ದಾರೆ.


1948 ರಿಂದ ಫಾರುಖ್ ಅಬ್ದುಲ್ ಹಾಗೂ ಶೇಖ್ ಅಬ್ದುಲ್ ಕಾಲದಿಂದಲೂ ಈ ಸಂಘಟನೆ ಭಾರತ ವಿರೋಧ ಚಟವಟಿಕೆ ಮಾಡಿಕೊಂಡು ಬಂದಿದೆ. ಚೀನಾದ ಸಹಾಯದಿಂದ ಪಾಕಿಸ್ತಾನ ನಡೆಸುವ ದೇಶವಿರೋಧಿ ಚಟವಟಿಕೆಗೆ ಕೈ ನಾಯಕರು ಪುಷ್ಠಿ ನೀಡಿರುವುದು ದೊಡ್ಡ ದುರಂತ ಎಂದು ಕಳವಳ ವ್ಯಕ್ತಪಡಿಸಿದರು.


70 ವರ್ಷ ಸಾವಿರಾರೂ ಕೋಟಿ ಲೂಟಿ ಹೊಡೆದ ಪರಿಣಾಮ ಜಮ್ಮು-ಕಾಶ್ಮೀರ ಅಭಿವೃದ್ಧಿ ವಂಚಿತವಾಗಿದೆ. ಮೋದಿ ಸರ್ಕಾರ ಬಂದ ನಂತರ ಜಮ್ಮು-ಕಾಶ್ಮೀರದಲ್ಲಿ ಅಭಿವೃದ್ಧಿ ಶಕೆ ಆರಂಭಗೊಂಡಿದೆ. ಈಗ ಗ್ರಾಪಂ ಚುನಾವಣೆ ನಡೆದಿದ್ದು, ಅಭ್ಯರ್ಥಿಗಳನ್ನೇ ಕೊಲೆ ಮಾಡುತ್ತಿರುವುದು ದುರ್ಧೈವದ ಸಂಗತಿ ಎಂದರು.


ಚೀನಾ ಹಾಗೂ ಪಾಕಸ್ತಾನ ಸೈನ್ಯ ಎದುರಿಸುವಷ್ಟ ಭಾರತ ಸೈನ್ಯ ಬಲಿಷ್ಠವಾಗಿದೆ. ಮೋದೀಜಿ ಸೈನ್ಯಕ್ಕೆ ವಿಶೇಷ ಅಧಿಕಾರದ ಜತೆಗೆ ಶಕ್ತಿ ನೀಡಿದ್ದಾರೆ. ಇದರ ಪರಿಣಾಮ ದೇಶದ ಸೈನಿಕರು ಈಚೇಗೆ ಕಾಶ್ಮೀರದಲ್ಲಿ ಉಗ್ರರರನ್ನು ಹೊಡೆದುರಿಳಿಸುವ ಮೂಲಕ ದೊಡ್ಡ ಅನುಹುತ ತಡೆದಿದ್ದಾರೆ ಎಂದು ಹೆಮ್ಮೆ ವ್ಯಕ್ತಪಡಿಸಿದರು.


ಸಾಲು-ಸಾಲಿನ ಸೋಲಿನ ನಂತರ ಹತಾಶೆಗೆ ಒಳಗಾದ ಕಾಂಗ್ರೆಸ್ ಪಕ್ಷ ಚೀನಾದ ಸಹಾಯ ಪಡೆದು ವಿಕೃತ ಚಟವಟಿಕೆಗೆ ಪ್ರಚೋದಿಸುತ್ತಿದೆ. ಪ್ರತ್ಯೇಕತಾವಾದಿಗಳು, ದೇಶ ದ್ರೋಹಿಗಳು, ಭಯೋತ್ಪಾದಕರ ಜತೆಗೆ ನಂಟು ಹೊಂದಿದ್ದಾರೆ. ಈ ಬಗ್ಗೆ ತನಿಖೆ ನಡೆದಿದ್ದು, ಮೋದಿ ಸರ್ಕಾರ ಕಠಿಣ ಕ್ರಮ ಕೈಗೊಳ್ಳಲಿದೆ ಎಂದರು.


ಚೀನಾ ಹಾಗೂ ಪಾಕಿಸ್ತಾನ ಭಾರತಕ್ಕೆ ತೊಂದರೆ ಕೊಡಲು ಕೈ ನಾಯಕರೇ ಕಾರಣ. ಮುಖ್ಯವಾಗಿ ನೆಹರೂ ಅವರ ನೀತಿ ಕಾರಣ. ಗುಪ್ಕಾರ್ ಗ್ಯಾಂಗ್ ಜತೆಗೆ ಕಾಂಗ್ರೆಸ್ ಸಂಬಂಧ ಏನು. ಕಾಂಗ್ರೆಸ್ ನಿಷ್ಠೆ ಭಾರತದ ಪರವೋ, ಚೀನಾ-ಪಾಕ್ ಪರವೋ ಎಂಬುದು ರಾಹುಲ್ ಗಾಂಧಿ ಸ್ಪಷ್ಟಪಡಿಸಬೇಕು ಎಂದು ಒತ್ತಾಯಿಸಿದರು.


ಇದನ್ನೂ ಓದಿ : ಶಿವಮೊಗ್ಗ; ಭ್ರೂಣ ಹತ್ಯೆ ನಿಗಾ ವಹಿಸಲು ಸ್ಕ್ಯಾನಿಂಗ್ ಸೆಂಟರ್​ಗಳ ಪರಿಶೀಲನೆಗೆ ಮುಂದಾದ ಜಿಲ್ಲಾಡಳಿತ

top videos


    ಪಶ್ಚಿಮ ಬಂಗಾಳದಲ್ಲಿ ರಾಜಕೀಯ ಹತ್ಯೆಗಳು ಹೆಚ್ಚಿವೆ. ತೃಣಮೂಲ ಕಾಂಗ್ರೆಸ್ ಸರ್ಕಾರದಿಂದ 130ಕ್ಕೂ ಅಧಿಕ ಬಿಜೆಪಿ-ಆರ್‌ಎಸ್‌ಎಸ್ ಕಾರ್ಯಕರ್ತರು ಹತ್ಯೆ ಆಗಿದ್ದಾರೆ. ಪ್ರಸಕ್ತ ಚುನಾವಣೆಯಲ್ಲಿ ಮಮತಾ ಬ್ಯಾನರ್ಜಿ ಅವರನ್ನು ಬಿಜೆಪಿಯು ರಾಜಕೀಯವಾಗಿ ಮುಗಿಸಲಿದೆ ಎಂದರು.


    ಇದೇ ಸಂದರ್ಭದಲ್ಲಿ ರಮೇಶ ಜಾರಕಿಹೊಳಿ ದೆಹಲಿ ಪ್ರವಾಸ ಹಾಗೂ ಸಚಿವ ಸಂಪುಟ  ವಿಚಾರಕ್ಕೆ ಸಂಬಂಧಿಸಿದಂತೆ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಜೋಶಿ, ರಮೇಶ ಜಾರಕಿಹೊಳಿ ನನ್ನ ಬಳಿಯೂ ಬಂದಿದ್ದರು. ಆದರೆ, ಕೇವಲ 3-4 ನೀರಾವರಿ ಯೋಜನೆ ಬಗ್ಗೆ ಚರ್ಚಿಸಿದ್ದಾರೆ. ಯೋಜನೆಗಳಿಗೆ ಭಾರತ ಸರ್ಕಾರದ ಸಹಾಯ ಕೇಳಿದ್ದಾರೆ. ಅಷ್ಟನ್ನೇ ನಾವು ಮಾಡಿದ್ದೇವೆ. ಉಳಿದಿದ್ದು ಗೊತ್ತಿಲ್ಲ. ರಮೇಶ ಇನ್ನೂ ದೆಹಲಿಯಲಿದ್ದು, ನಾನು ಮೊನ್ನೆಯೇ ದೆಹಲಿಯಿಂದ ಬಂದಿರುವೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದರು.

    First published: