ಸಭೆಯಲ್ಲಿ ಮಾಸ್ಕ್ ಹಾಕದ ಮಹಿಳಾ ಅಧಿಕಾರಿಗೆ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ತರಾಟೆ

ಮಾಸ್ಕ್ ಇಲ್ಲದಿದ್ರೆ ಹೊರಗೆ ಹೋಗಿಬಿಡಿ ಎಂದು ಸಚಿವರು ಮಹಿಳಾ ಅಧಿಕಾರಿಗೆ ಹೇಳುತ್ತಿದ್ದಂತೆ ಸಭೆಯಲ್ಲಿದ್ದ ಎಲ್ಲಾ ಅಧಿಕಾರಿಗಳು ಒಂದು ಕ್ಷಣ ಕಕ್ಕಾಬಿಕ್ಕಿಯಾದರು.

news18-kannada
Updated:July 7, 2020, 10:43 PM IST
ಸಭೆಯಲ್ಲಿ ಮಾಸ್ಕ್ ಹಾಕದ ಮಹಿಳಾ ಅಧಿಕಾರಿಗೆ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ತರಾಟೆ
ಧಾರವಾಡ ಜಿಲ್ಲಾಧಿಕಾರಿ ಕಚೇರಿ ಸಭೆಯಲ್ಲಿ ಇದ್ದ ಶಾರದಾ ಕೋಲ್ಕಾರ
  • Share this:
ಧಾರವಾಡ: ಮಾಸ್ಕ್ ಇಲ್ಲದೇ ಸಭೆಗೆ ಆಗಮಿಸಿದ್ದ ಮಹಿಳಾ ಅಧಿಕಾರಿಯೊಬ್ಬರಿಗೆ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ತರಾಟೆಗೆ ತೆಗದುಕೊಂಡ ಘಟನೆ ಧಾರವಾಡದಲ್ಲಿ ನಡೆದಿದೆ. ಜಿಲ್ಲಾಧಿಕಾರಿ ಕಚೇರಿಯ ನೂತನ ಸಭಾಂಗಣದಲ್ಲಿ ಸಭೆ ನಡೆಸಲಾಗುತ್ತಿತ್ತು. ಸಭೆಗೂ ಮುನ್ನ ಎಲ್ಲ ಅಧಿಕಾರಿಗಳು ಮಾಸ್ಕ್ ಹಾಕಿರುವ ಬಗ್ಗೆ ಕೇಂದ್ರ ಸಚಿವರು ಗಮನಿಸುತ್ತಿದ್ದರು. ಇದೇ ವೇಳೆ ಸಭಾಂಗಣದ ಮೊದಲ ಸಾಲಿನಲ್ಲಿ ಕುಳಿತಿದ್ದ ಮಹಿಳಾ ಅಧಿಕಾರಿಯೊಬ್ಬರು ಮಾಸ್ಕ್ ಇಲ್ಲದೆ ಕುಳಿತಿದ್ದರು. ಎಲ್ಲಾ ಅಧಿಕಾರಿಗಳು ಮಾಸ್ಕ್ ಹಾಕಿಕೊಳ್ಳುವಂತೆ ಸೂಚಿಸಿದ ಸಚಿವರಿಗೆ ಮಹಿಳಾ ಅಧಿಕಾರಿ ಶಾರದಾ ಕೋಲ್ಕಾರ ಕಣ್ಣಿಗೆ ಬಿದ್ದರು.

ವಿಶೇಷ ಭೂ ಸ್ವಾಧೀನಾಧಿಕಾರಿ ಶಾರದಾ ಕೋಲ್ಕಾರ ಅವರು ಮಾಸ್ಕ್ ಹಾಕದೆ ಸಭೆಗೆ ಹಾಜರಾಗಿದ್ದರು. ಇದನ್ನು ಗಮನಿಸಿದ ಕೇಂದ್ರ ಸಚಿವರು ಮಹಿಳಾ ಅಧಿಕಾರಿಗೆ ಕ್ಲಾಸ್ ತೆಗೆದುಕೊಂಡರು. ಸಭೆಯಲ್ಲಿ‌ ಮಾಸ್ಕ್ ಇಲ್ಲದೇ ಕುಳಿತಿದ್ದೀರಿ. ಹೊರಗೆ ಹೋಗಿ ಬಿಡಿ. ಇಲ್ಲಾ ಮಾಸ್ಕ್ ಹಾಕಿಕೊಂಡು ಸಭೆಯಲ್ಲಿ ಭಾಗಿಯಾಗಿ ಎಂದು ಕೇಂದ್ರ ಸಚಿವ ಜೋಶಿ ಅಪ್ಪಣೆ ಮಾಡಿದರು.

ಇದನ್ನೂ ಓದಿ: ಹಾಸನದಲ್ಲಿ ನಯಾ ಲಾಕ್​ಡೌನ್; ಸ್ವಯಂಪ್ರೇರಿತವಾಗಿ ದಿಗ್ಬಂಧನ ಹಾಕಿಕೊಂಡ ಜನರು

ಮಾಸ್ಕ್ ಇಲ್ಲದಿದ್ರೆ ಹೊರಗೆ ಹೋಗಿಬಿಡಿ ಎಂದು ಸಚಿವರು ಮಹಿಳಾ ಅಧಿಕಾರಿಗೆ ಹೇಳುತ್ತಿದ್ದಂತೆ ಸಭೆಯಲ್ಲಿದ್ದ ಎಲ್ಲಾ‌ ಅಧಿಕಾರಿಗಳು ಒಂದು ಕ್ಷಣ ಕಕ್ಕಾಬಿಕ್ಕಿಯಾದರು. ಸಚಿವರು ತರಾಟೆಗೆ ತೆಗೆದುಕೊಳ್ಳುತ್ತಿದ್ದಂತೆ ಮಹಿಳಾ ಅಧಿಕಾರಿಗೆ ಸಿಬ್ಬಂದಿಯೊಬ್ಬರು ಮಾಸ್ಕ್ ಕೊಟ್ಟರು. ಬಳಿಕ ಶಾರದಾ ಅವರು ಮಾಸ್ಕ್ ಹಾಕಿಕೊಂಡು ಸಭೆಯಲ್ಲಿ ಕುಳಿತರು.ಸಾರ್ವಜನಿಕರು ಮಾಸ್ಕ್ ಹಾಕದೇ ಇದ್ದರೆ ದಂಡ ಹಾಕುವ ಅಧಿಕಾರಿಗಳೇ ತಪ್ಪು ಮಾಡಿದ್ರೆ ಹೇಗೆ ಎಂಬ ಪ್ರಶ್ನೆ ಕೇಳಿ ಬರುತ್ತಿದೆ.

ವರದಿ: ಮಂಜುನಾಥ ಯಡಳ್ಳಿ
Published by: Vijayasarthy SN
First published: July 7, 2020, 10:43 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading