• Home
  • »
  • News
  • »
  • district
  • »
  • ಕೇಂದ್ರ ಸರಕಾರದಿಂದ ಕೊಪ್ಪಳಕ್ಕೆ ಆಕ್ಸಿಜನ್ ಉತ್ಪಾದನಾ ಘಟಕ‌ ಮಂಜೂರು

ಕೇಂದ್ರ ಸರಕಾರದಿಂದ ಕೊಪ್ಪಳಕ್ಕೆ ಆಕ್ಸಿಜನ್ ಉತ್ಪಾದನಾ ಘಟಕ‌ ಮಂಜೂರು

ಕೊಪ್ಪಳದ ಆಕ್ಸಿಜನ್ ಉತ್ಪಾದನಾ ಘಟಕ.

ಕೊಪ್ಪಳದ ಆಕ್ಸಿಜನ್ ಉತ್ಪಾದನಾ ಘಟಕ.

ಕೊಪ್ಪಳ ಜಿಲ್ಲೆಯಲ್ಲಿ ಈಗ ಆಕ್ಸಿಜನ್ ಸಮಸ್ಯೆ ಬಗೆಹರಿದಿದೆ. ಆದರೆ ಬೆಡ್ ಗಳ ಸಮಸ್ಯೆ ಇದೆ. ಜಿಲ್ಲಾಸ್ಪತ್ರೆ, ಖಾಸಗಿಯಲ್ಲಿಯೂ ಬೆಡ್ ಗಳ ಕೊರತೆ ಇದೆ. ಬೆಡ್ ಗಳಿಗಾಗಿ ಕೊಪ್ಪಳ ಗವಿಸಿದ್ದೇಶ್ವರ ಆಯುರ್ವೇದ ಮಹಾವಿದ್ಯಾಲಯದಿಂದ 100 ಬೆಡ್ ಆಸ್ಪತ್ರೆ, ಮುನಿರಾಬಾದಿನಲ್ಲಿ 30 ಹಾಸಿಗೆ ಕೋವಿಡ್ ಆಸ್ಪತ್ರೆ ಸೇರಿದಂತೆ 250 ಹಾಸಿಗೆ ಕೋವಿಡ್ ಆಸ್ಪತ್ರೆ ಇಷ್ಟರಲ್ಲಿಯೇ ಆರಂಭವಾಗಲಿವೆ.

ಮುಂದೆ ಓದಿ ...
  • Share this:

ಕೊಪ್ಪಳ: ರಾಜ್ಯದಲ್ಲಿ ಕೊರೋನಾ ಅಬ್ಬರಿಸುತ್ತಿರುವಾಗ ಮುಖ್ಯವಾಗಿ ಆಕ್ಸಿಜನ್ ಕೊರತೆ ಹಾಗೂ ಬೆಡ್ ಗಳ ಸಮಸ್ಯೆ ತೀವ್ರವಾಗಿ ಕಾಡಲಾರಂಭಿಸಿದೆ. ಆದರೆ, ಕೊಪ್ಪಳ‌ ಜಿಲ್ಲೆಯಲ್ಲಿ ಆಕ್ಸಿಜನ್ ಸಮಸ್ಯೆ ಇಲ್ಲ, ಬೆಡ್ ಸಮಸ್ಯೆ ಇದೆ. ಈ ಮಧ್ಯೆ ಕೇಂದ್ರ ಸರಕಾರವು ಕೊಪ್ಪಳದಲ್ಲಿ ಆಕ್ಸಿಜನ್ ಉತ್ಪಾದನಾ ಘಟಕ ಮಂಜೂರು ಮಾಡಿದೆ. ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿಯಿಂದ ಮೂರು ಆಕ್ಸಿಜನ್ ಉತ್ಪಾದನಾ ಘಟಕಗಳು ಸಹ ಮಂಜೂರಾಗಿವೆ.


ಕೊಪ್ಪಳ ಜಿಲ್ಲೆಯಲ್ಲಿ ಎಂಎಸ್ ಪಿಎಲ್, ಪ್ರಾಕ್ಷರಿ ಹಾಗು ರೇಣುಕಾ ಆಕ್ಸಿಜನ್ ಘಟಕದಿಂದ ನಿತ್ಯ 210 ಟನ್ ಆಕ್ಸಿಜನ್ ಉತ್ಪಾದನೆಯಾಗುತ್ತಿದೆ. ಈ ಆಕ್ಸಿಜನ್ ಮೊದಲು ಜಿಲ್ಲೆಯ ಆರೋಗ್ಯ ಸೇವೆ ಹಾಗೂ ಕಾರ್ಖಾನೆಗಳಿಗೆ ಉಪಯೋಗವಾಗುತ್ತಿತ್ತು. ಈಗ ಆಕ್ಸಿಜನ್ ಎಮರ್ಜೆನ್ಸಿ ಇರುವುದರಿಂದ ಮೊದಲ ಆದ್ಯತೆ ಆರೋಗ್ಯ ಸೇವೆಗೆ ನೀಡಲಾಗುತ್ತಿದೆ. ಇಲ್ಲಿಂದ ವಿಜಯಪುರ, ಗದಗ, ಹಾವೇರಿ, ಸೇರಿದಂತೆ ಹಲವು ಕಡೆ ಸರಬರಾಜು ಆಗುತ್ತಿದೆ. ರಾಜ್ಯ ಸರಕಾರ ಇಲ್ಲಿಂದ ಜಿಲ್ಲಾವಾರು ಆಕ್ಸಿಜನ್ ಸರಬರಾಜು ಕೋಟಾ ನಿಗದಿ ಮಾಡಿದೆ. ಅದರಲ್ಲಿ ಕೊಪ್ಪಳ ಜಿಲ್ಲೆಯ ಪಾಲು 15 ಟನ್ ಆಗಿದೆ. ನಿಗದಿಯಾದ ಆಕ್ಸಿಜನ್ ನಲ್ಲಿ ಈಗ ನಿತ್ಯ 12.50 ಟನ್ ಆಕ್ಸಿಜನ್ ಬಳಕೆಯಾಗುತ್ತಿದೆ. ಈಗ ಜಿಲ್ಲೆಯಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಅಧಿಕವಾಗುತ್ತಿರುವ ಹಿನ್ನಲೆಯಲ್ಲಿ ಆಕ್ಸಿಜನ್ ಅವಶ್ಯವಾಗಿದೆ. ಈ ಹಿನ್ನಲೆಯಲ್ಲಿ ಸರಕಾರ ಆಕ್ಸಿಜನ್ ಬಳಕೆಗೆ ಘಟಕಗಳನ್ನು ಸ್ಥಾಪಿಸಲಾಗುತ್ತಿದೆ.


ಜಿಲ್ಲೆಯಲ್ಲಿ ಕಳೆದ ಬಾರಿ ಕೊರೋನಾ ಸಂದರ್ಭದಲ್ಲಿ ಜಿಲ್ಲಾಸ್ಪತ್ರೆಯಲ್ಲಿ 6 ಟನ್ ಸಂಗ್ರಹದ ಆಕ್ಸಿಜನ್ ಸಂಗ್ರಹ ಘಟಕ ನಿರ್ಮಾಣವಾಗಿ ಸಂಗ್ರಹವಾಗುತ್ತಿದೆ. ಈ ಮಧ್ಯೆ ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿಯಿಂದ 2 ಟನ್ ಸಾಮರ್ಥ್ಯ ದ ಆಕ್ಸಿಜನ್ ಸಂಗ್ರಹದ ಘಟಕಗಳು ಮಂಜೂರಾಗಿವೆ. ಅವುಗಳಿಂದ ತಾಲೂಕು ಆಸ್ಪತ್ರೆಗಳಲ್ಲಿ ಆಕ್ಸಿಜನ್ ಬಳಕೆಯಾಗುತ್ತಿದೆ. ಈ ಮಧ್ಯೆ ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿಯಿಂದ 22.50 ಕೋಟಿ ರೂಪಾಯಿಯಲ್ಲಿ ವೈದ್ಯಕೀಯ ಉಪಕರಣಗಳ ಖರೀದಿಗಾಗಿ ಹಣ ಮಂಜೂರು ಮಾಡಿದೆ. ಅದರಲ್ಲಿ ಸುಮಾರು 70 ಲಕ್ಷ ರೂಪಾಯಿಯಲ್ಲಿ ಮೂರು ಆಕ್ಸಿಜನ್ ಉತ್ಪಾದನಾ ಘಟಕಗಳು ಆರಂಭವಾಗಲಿವೆ. ಗಂಗಾವತಿ, ಕುಷ್ಟಗಿ ಹಾಗೂ ಯಲಬುರ್ಗಾ ತಾಲೂಕು ಆಸ್ಪತ್ರೆಯಲ್ಲಿ ಈ ಘಟಕಗಳು ಆರಂಭವಾಗಲಿದೆ.


ಇದನ್ನು ಓದಿ: ಸರಿಗಮಪ ಖ್ಯಾತಿಯ ಪೊಲೀಸ್ ಪತ್ನಿ ಸಾವಿನ ಪ್ರಕರಣಕ್ಕೆ ಟ್ವಿಸ್ಟ್; ಕೌಟುಂಬಿಕ ಕಲಹದಿಂದ ಆತ್ಮಹತ್ಯೆಗೆ ಯತ್ನಿಸಿದ್ದ ಜ್ಯೋತಿ?


ಈ ಮಧ್ಯೆ 2.50 ಕೋಟಿ ರೂಪಾಯಿ ವೆಚ್ಚದಲ್ಲಿ 2000 ಲೀಟರ್ ಸಾಮರ್ಥ್ಯದ ಆಕ್ಸಿಜನ್ ಉತ್ಪಾದನಾ ಘಟಕಕ್ಕೆ ಕೇಂದ್ರ ಸರಕಾರ ಒಪ್ಪಿಗೆ ನೀಡಿದೆ. ಕೇಂದ್ರ ಸರಕಾರದಿಂದ ರಾಜ್ಯದಲ್ಲಿ ಮೂರು ಕಡೆ ಆಕ್ಸಿಜನ್ ಘಟಕ ಉತ್ಪಾದನೆಗೆ ಮಂಜೂರಾತಿ ನೀಡಿದ್ದು, ಅದರಲ್ಲಿ ಕೊಪ್ಪಳದಲ್ಲಿಯೂ ಒಂದು ಮಂಜೂರಾಗಿದೆ. ಈ ಘಟಕವು ಇನ್ನೂ ಮೂರು ವಾರದಲ್ಲಿ ಉತ್ಪಾದನೆ ಆರಂಭಿಸಲಿದೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಿಂದ ಈಗ ನಿರ್ಮಾಣ ಕಾರ್ಯ ಆರಂಭಿಸಲಾಗುತ್ತಿದೆ ಎಂದು ಕೊಪ್ಪಳ ಜಿಲ್ಲಾಧಿಕಾರಿ ವಿಕಾಸ ಕಿಶೋರ ಸುರಳ್ಕರ್ ತಿಳಿಸಿದ್ದಾರೆ‌.


ಕೊಪ್ಪಳ ಜಿಲ್ಲೆಯಲ್ಲಿ ಈಗ ಆಕ್ಸಿಜನ್ ಸಮಸ್ಯೆ ಬಗೆಹರಿದಿದೆ. ಆದರೆ ಬೆಡ್ ಗಳ ಸಮಸ್ಯೆ ಇದೆ. ಜಿಲ್ಲಾಸ್ಪತ್ರೆ, ಖಾಸಗಿಯಲ್ಲಿಯೂ ಬೆಡ್ ಗಳ ಕೊರತೆ ಇದೆ. ಬೆಡ್ ಗಳಿಗಾಗಿ ಕೊಪ್ಪಳ ಗವಿಸಿದ್ದೇಶ್ವರ ಆಯುರ್ವೇದ ಮಹಾವಿದ್ಯಾಲಯದಿಂದ 100 ಬೆಡ್ ಆಸ್ಪತ್ರೆ, ಮುನಿರಾಬಾದಿನಲ್ಲಿ 30 ಹಾಸಿಗೆ ಕೋವಿಡ್ ಆಸ್ಪತ್ರೆ ಸೇರಿದಂತೆ 250 ಹಾಸಿಗೆ ಕೋವಿಡ್ ಆಸ್ಪತ್ರೆ ಇಷ್ಟರಲ್ಲಿಯೇ ಆರಂಭವಾಗಲಿವೆ. ಆದರೂ ಜಿಲ್ಲೆಯಲ್ಲಿ ಸರಿಯಾದ ಚಿಕಿತ್ಸೆ ಸಿಗದೆ ಸೋಂಕಿತರು ಅಧಿಕ ಸಂಖ್ಯೆಯಲ್ಲಿ ಸಾವನ್ನಪ್ಪುತ್ತಿರುವುದು ಆತಂಕ ಮೂಡಿಸಿದೆ.

Published by:HR Ramesh
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು