news18-kannada Updated:June 3, 2020, 11:56 AM IST
ಸಂಸದ ಭಗವಂತ ಖೂಬಾ
ಬೀದರ್: ಬಿಜೆಪಿ ಸರಕಾರದ ಮೊದಲ ಅವಧಿಯಲ್ಲಿ ಬೀದರ್ ಜಿಲ್ಲೆಗೆ 13 ಹೊಸ ರೈಲುಗಳ ಸಂಚಾರ ಆರಂಭಗೊಂಡಿತ್ತು. ಇದೀಗ ಮತ್ತೆ ಬೀದರ್-ನಾಂದೇಡ್ ರೈಲು ಮಾರ್ಗಕ್ಕೆ ಮಂಜೂರಾತಿ ಪಡೆಯಲಾಗಿದೆ ಎಂದು ಸಂಸದ ಭಗವಂತ ಖೂಬಾ ತಿಳಿಸಿದ್ದಾರೆ.
ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಪ್ರಭು ಚೌಹಾಣ್ ಸಚಿವರಾದ ಮೇಲೆ ಅವರು ನಾನು ಸೇರಿ ಕೇವಲ 35 ದಿನಗಳಲ್ಲೇ ಬೀದರ್-ಬೆಂಗಳೂರು, ಬೆಂಗಳೂರು-ಬೀದರ್, ವಿಮಾನಯಾನ ಆರಂಭಿಸಿದ್ದೇವು. ಮುಂದಿನ ಎರಡು ವರ್ಷಗಳ ಅವಧಿಯಲ್ಲಿ ಬೀದರ್ ಮಾರ್ಗವಾಗಿ ಓಡಾಡುವ ಎಲ್ಲ ರೈಲುಗಳನ್ನು ವಿದ್ಯುದ್ದೀಕರಣಗೊಳಿಸಲಾಗುವುದು ಎಂದು ತಿಳಿಸಿದರು.
ಸಾಮಾಜಿಕ ಭದ್ರತೆ ಮತ್ತು ಪಿಂಚಣಿ ನಿರ್ದೇಶನಾಲಯದಿಂದ ಬೀದರ್ ಜಿಲ್ಲೆಗೆ 600 ಕೋಟಿ ಅನುದಾನ ಬಂದಿದೆ. ಕೇಂದ್ರ ಸರಕಾರವು ಸಹ ಗರೀಬ್ ಕಲ್ಯಾಣ ಯೋಜನೆಯಲ್ಲಿ ಜಿಲ್ಲೆಯ ಫಲಾನುಭವಿಗಳಿಗೆ 21.35 ಕೋಟಿ ವಿತರಿಸಿದೆ. ಬೀದರ್ ಸಂಪರ್ಕಿಸುವ ಪುಣೆ-ಹೈದರಾಬಾದ್ ಹೆದ್ದಾರಿಯನ್ನು ಚತುಷ್ಪಥ ಮಾರ್ಗವನ್ನಾಗಿ ಪರಿವರ್ತಿಸಲಾಗಿದೆ. ಆದರೂ ಜಿಲ್ಲೆಯ ಕಾಂಗ್ರೆಸ್ ನಾಯಕರು ನಮ್ಮನ್ನು ದೂಷಿಸುವುದನ್ನು ಬಿಟ್ಟಿಲ್ಲ. ಬಡವರಿಗೆ ಅನುಕೂಲವಾಗಲಿ ಎಂಬ ಉದ್ದೇಶದಿಂದ ಬೀದರ್ ಜಿಲ್ಲೆಯಾದ್ಯಂತ 15 ಜನೌಷಧಿ ಕೇಂದ್ರಗಳನ್ನು ತೆರೆಯಲಾಗಿದೆ. ಭಾಲ್ಕಿ ತಾಲೂಕಿನ ಶಾಸಕರು ಸಹಕಾರ ನೀಡದ ಕಾರಣ ಆ ತಾಲೂಕಿನಲ್ಲಷ್ಟೇ ಜನೌಷಧಿ ಕೇಂದ್ರಗಳನ್ನು ತೆರೆಯಲಾಗಿಲ್ಲ ಎಂದು ನೇರವಾಗಿಯೇ ಶಾಸಕ ಈಶ್ವರ್ ಖಂಡ್ರೆಯವರನ್ನು ದೂಷಿಸಿದರು.
ಇದನ್ನು ಓದಿ: ಇಂದು 110 ಕಿ.ಮೀ. ವೇಗದಲ್ಲಿ ಮುಂಬೈಗೆ ಬಂದಪ್ಪಳಿಸಲಿದೆ ನಿಸರ್ಗ ಚಂಡಮಾರುತ; ಕರ್ನಾಟಕದಲ್ಲೂ ಹೈ ಅಲರ್ಟ್
First published:
June 3, 2020, 11:55 AM IST