ಯೋಧರ ನಾಡಿನ ಮೇಲೆ ವಿಶೇಷ ಅಕ್ಕರೆ ಹೊಂದಿದ್ದ Bipin Rawat; ಕೊಡಗಿಗೆ 4 ಬಾರಿ ಭೇಟಿ!

ಮ್ಯೂಸಿಯಂ ಉದ್ಘಾಟನೆಗೆ ಬಂದಿದ್ದ ರಾವತ್ ಅವರು ‘ಇದೊಂದು ಅದ್ಭುತ ಗಳಿಗೆ, ತಿಮ್ಮಯ್ಯ ಅವರ ಹೆಸರು ಭಾರತೀಯ ಯೋಧರ ಮನಸ್ಸಿನಲ್ಲಿಯೂ ಉಳಿದಿದೆ’ ಎಂದು ಉದ್ಘರಿಸಿ ತಮ್ಮ ಹಸ್ತಾಕ್ಷರ ದಾಖಲಿಸಿದ್ದಾರೆ.

ಕೊಡಗಿಗೆ ಬಂದಿದ್ದ ಬಿಪಿನ್ ರಾವತ್. (ಸಂಗ್ರಹ ಚಿತ್ರ)

ಕೊಡಗಿಗೆ ಬಂದಿದ್ದ ಬಿಪಿನ್ ರಾವತ್. (ಸಂಗ್ರಹ ಚಿತ್ರ)

  • Share this:
ಕೊಡಗು: ಯೋಧರ ನಾಡು ಕೊಡಗಿನ (Kodagu) ಮೇಲೆ ಮೂರು ಸೇನಾಪಡೆಗಳ ಮುಖ್ಯಸ್ಥ ಹುತಾತ್ಮ ಬಿಪಿನ್ ರಾವತ್ (Defence Staff General Bipin Rawat) ಅವರಿಗೆ ಅದೇನೋ ವಿಶೇಷ ಪ್ರೀತಿಯಿತ್ತು. ಹೀಗಾಗಿಯೇ ಅವರು ಕೊಡಗಿಗೆ ವಿಶೇಷ ಕೊಡುಗೆ ನೀಡಿದ್ದರು. ಯೋಧರ ನಾಡು ಕೊಡಗು ಜಿಲ್ಲೆಗೆ ನಾಲ್ಕು ಬಾರಿ ಬಂದಿದ್ದರು. (Bipin Rawat Visited Four Time To Kodagu) ಹೌದು, 2016 ರ ಆಗಸ್ಟ್ 7 ರಂದು ಮೊದಲ ಬಾರಿಗೆ ಕೊಡಗಿಗೆ ಬಂದಿದ್ದರು. ಕರ್ನಾಟಕ ಹಾಗೂ ಕೇರಳ ಸಬ್ ಏರಿಯಾದ ವತಿಯಿಂದ ನಡೆದಿದ್ದ, ನಿವೃತ್ತ ಯೋಧರ ಸಮಾವೇಶಕ್ಕೆ ಅಂದಿನ ಭೂಸೇನಾ ಮುಖ್ಯಸ್ಥ ದಲ್ಬೀರ್ ಸಿಂಗ್ ಸುಹಾಗ್ ಅವರೊಂದಿಗೆ ರಾವತ್ ಬಂದಿದ್ದರು. ಆಗ ರಾವತ್ ಅವರು ದಕ್ಷಿಣ ವಲಯ ಕಮಾಂಡರ್ ಇನ್ ಆರ್ಮಿ ಚೀಫ್ ಆಗಿದ್ದರು.

ಭೂಸೇನಾ ಮುಖ್ಯಸ್ಥರಾದ ಬಳಿಕ 2017 ರ ನಂಬರ್ 4 ರಂದು ಕೊಡಗಿಗೆ ಬಂದಿದ್ದರು. ಜಿಲ್ಲೆಯ ಗೋಣಿಕೊಪ್ಪಲಿನ ಕಾವೇರಿ ಕಾಲೇಜು ಆರವಣದಲ್ಲಿ ನಿರ್ಮಿಸಿದ್ದ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಹಾಗೂ ಜನರಲ್ ಕೆ.ಎಸ್ ತಿಮ್ಮಯ್ಯ ಅವರ ಪ್ರತಿಮೆಗಳ ಅನಾವರಣ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಬಳಿಕ 2021 ರ ಫೆಬ್ರವರಿ 6 ರಂದು ಜನರಲ್ ತಿಮ್ಮಯ್ಯ ಮ್ಯೂಸಿಯಂ ಲೋಕಾರ್ಪಣೆಗೆ ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು ಆಗಮಿಸಿದ್ದರು. ಅವರೊಂದಿಗೂ ರಕ್ಷಣಾ ಪಡೆಗಳ ಮುಖ್ಯಸ್ಥರಾಗಿದ್ದ ಬಿಪಿನ್ ರಾವತ್ ಮತ್ತು ಅವರ ಪತ್ನಿ ಮಧುಲಿಕಾ ಅವರು ಕೂಡ ಬಂದಿದ್ದರು. ಅದನ್ನು ಏರ್ ಮಾರ್ಷಲ್ ಕೆ.ಸಿ ಕಾರ್ಯಪ್ಪ ನೆನೆಪಿಸಿಕೊಂಡಿದ್ದಾರೆ.

ತಿಮ್ಮಯ್ಯ ಮ್ಯೂಸಿಯಂ ಉದ್ಘಾಟನೆಗೆ ಬಂದಿದ್ದ ಬಿಪಿನ್ ರಾವತ್ ಮತ್ತು ರಾಷ್ಟ್ರಪತಿ ರಾಮನಾಥ ಕೋವಿಂದ್


ಜನರಲ್ ತಿಮ್ಮಯ್ಯ ಮ್ಯೂಸಿಯಂಗಾಗಿ ಅನುದಾನ ಒದಗಿಸಿದ್ದ ರಾವತ್

ಜನರಲ್ ತಿಮ್ಮಯ್ಯ ಮ್ಯೂಸಿಯಂಗಾಗಿ ಬೇಕಾಗಿದ್ದ ಅನುದಾನಕ್ಕಾಗಿ ಸಿಡಿಎಸ್ ಬಿಪಿನ್ ರಾವತ್ ಅವರನ್ನು ಹಲವು ಬಾರಿ ಭೇಟಿ ಮಾಡಿದ್ದೆ. ಭೂಸೇನೆ, ವಾಯುಸೇನೆ ಮತ್ತು ನೌಕಾಸೇನೆಗಳ ಮುಖ್ಯಸ್ಥರನ್ನು ಭೇಟಿ ಮಾಡಿದ್ದ ಪರಿಣಾಮವಾಗಿ ಮ್ಯೂಸಿಯಂ ನಿರ್ಮಾಣಕ್ಕೆ 20 ಲಕ್ಷ ವಿಶೇಷ ಕೊಡುಗೆಯನ್ನು ತರಲು ಸಾಧ್ಯವಾಗಿದೆ. ಅವರಿಗೆ ನಾನು ಅಭಾರಿಯಾಗಿದ್ದೇನೆ ಎಂದು ನಂದಾ ಕಾಯಪ್ಪ ಅವರು ನೆನಪಿಸಿಕೊಂಡಿದ್ದಾರೆ. ಬಿಪಿನ್ ರಾವತ್ ಅವರಿಗೆ ಜಿಲ್ಲೆಯ ಮೇಲೆ ವಿಶೇಷ ಪ್ರೀತಿ ಇತ್ತು. ಹೀಗಾಗಿಯೇ ತಿಮ್ಮಯ್ಯ ಮ್ಯೂಸಿಯಂಗೆ ಯುದ್ಧ ಟ್ಯಾಂಕರ್, ಮಿಗ್ ಯುದ್ಧ ವಿಮಾನ, ತಿಮ್ಮಯ್ಯ ಅವರು ಸೇನೆಯಲ್ಲಿದ್ದಾಗ ಬಳಸುತ್ತಿದ್ದ ಯುದ್ಧ ಬಂದೂಕುಗಳು ಸೇರಿದಂತೆ ಅಗತ್ಯವಿರುವ ಸೇನೆಯ ಪರಿಕರಗಳನ್ನು ನೀಡುವಂತೆ ಕೇಳಿದಾಗ ಯಾವುದೇ ಮರುಮಾತನಾಡದೆ ಎಲ್ಲವನ್ನೂ ಒದಗಿಸಿಕೊಟ್ಟಿದ್ದರು ಎಂದು ತಿಮ್ಮಯ್ಯ ಫೋರಂನ ಮುಖಂಡ ಉಳಿಯಡ ಪೂವಯ್ಯ ಸ್ಮರಿಸಿದ್ದಾರೆ.

ತಿಮ್ಮಯ್ಯ ಮ್ಯೂಸಿಯಂ ಉದ್ಘಾಟನೆಗೆ ಬಂದಿದ್ದ ಬಿಪಿನ್ ರಾವತ್ ಮತ್ತು ರಾಷ್ಟ್ರಪತಿ ರಾಮನಾಥ ಕೋವಿಂದ್


ಜನರಲ್ ತಿಮ್ಮಯ್ಯ ಅವರಿಗೆ ಸಿಡಿಎಸ್ ಆಗುವುದಕ್ಕೆ ಅವಕಾಶವಿತ್ತು. ಅದನ್ನು ಲಾರ್ಡ್ ಮೌಂಟ್ ಬ್ಯಾಟನ್ ಅವರು ಅಂದಿನ ಪ್ರಧಾನಿಯವರಿಗೆ ಪತ್ರ ಬರೆದಿದ್ದರು. ಇದರ ಲೆಟರ್ ಪ್ರತಿಯನ್ನು ಬಿಪಿನ್ ರಾವತ್ ಅವರು ತಿಮ್ಮಯ್ಯ ಮ್ಯೂಸಿಯಂ ಒದಗಿಸಿಕೊಟ್ಟಿದ್ದಾರೆ. ಜೊತೆಗೆ ಮ್ಯೂಸಿಯಂ ಉದ್ಘಾಟನೆಗೆ ಬಂದಿದ್ದ ರಾವತ್ ಅವರು ‘ಇದೊಂದು ಅದ್ಭುತ ಗಳಿಗೆ, ತಿಮ್ಮಯ್ಯ ಅವರ ಹೆಸರು ಭಾರತೀಯ ಯೋಧರ ಮನಸ್ಸಿನಲ್ಲಿಯೂ ಉಳಿದಿದೆ’ ಎಂದು ಉದ್ಘರಿಸಿ ತಮ್ಮ ಹಸ್ತಾಕ್ಷರ ದಾಖಲಿಸಿದ್ದಾರೆ.

ಇದನ್ನು ಓದಿ: ಹೆಲಿಕಾಪ್ಟರ್ ದುರಂತದಲ್ಲಿ ಬದುಕುಳಿದ ಏಕೈಕ ವ್ಯಕ್ತಿ ಬೆಂಗಳೂರಿಗೆ ಶಿಫ್ಟ್; ಪೈಲೆಟ್ ವರುಣ್ ಸಿಂಗ್ ಸ್ಥಿತಿ ಗಂಭೀರ!

ಹೆಲಿಕಾಪ್ಟರ್ ದುರಂತದಲ್ಲಿ ಅಸುನೀಗಿದ ರಾವತ್

ತಮಿಳುನಾಡಿನ ನೀಲಗಿರಿ ಜಿಲ್ಲೆಯ ಕನೂರಿನಲ್ಲಿ ಭಾರತೀಯ ವಾಯುಪಡೆಯ ಎಂಐ-17ವಿ5 (IAF Mi-17V5) ಹೆಲಿಕಾಪ್ಟರ್​ ಪತನಗೊಂಡು, ಸೇನಾ ಪಡೆಗಳ ಮುಖ್ಯಸ್ಥ (CDS) ಬಿಪಿನ್​ ರಾವತ್​ (Defence Staff General Bipin Rawat) ಸೇರಿದಂತೆ 13 ಮಂದಿ ಅಸುನೀಗಿದ್ದರು. ನಿನ್ನೆ ನಡೆದ ಹೆಲಿಕಾಪ್ಟರ್ ಪತನದಲ್ಲಿ ಬಿಪಿನ್​ ರಾವತ್, ಅವರ ಪತ್ನಿ ಮಧುಲಿಕಾ ರಾವತ್​ ಸೇರಿದಂತೆ 13 ಮಂದಿ ಮೃತಪಟ್ಟಿದ್ದಾರೆ. ಬ್ರಿಗೇಡಿಯರ್ ಎಲ್ಎಸ್ ಲಿಡ್ಡರ್, ಲೆಫ್ಟಿನೆಂಟ್ ಕರ್ನಲ್ ಎಚ್ ಸಿಂಗ್, ವಿಂಗ್ ಕಮಾಂಡರ್ PS ಚೌಹಾಣ್, ಲೆಫ್ಟಿನೆಂಟ್ ಕಮಾಂಡರ್ ಹರ್ಜಿಂದರ್ ಸಿಂಗ್, ಜೂನಿಯರ್ ಕಮಿಷನ್ಡ್ ಆಫೀಸರ್ ದಾಸ್, ಜೂನಿಯರ್ ಕಮಿಷನ್ಡ್ ಆಫೀಸರ್ ಪ್ರದೀಪ್ ಎ, ಹಾವ್ ಸತ್ಪಾಲ್, ಲ್ಯಾನ್ಸ್ ನಾಯಕ್ ಗುರುಸೇವಕ್ ಸಿಂಗ್, ಲ್ಯಾನ್ಸ್ ನಾಯಕ್ ಜಿತೇಂದರ್, ಲ್ಯಾನ್ಸ್ ನಾಯಕ್ ವಿವೇಕ್, ಲ್ಯಾನ್ಸ್ ನಾಯಕ್ ಎಸ್ ತೇಜ ಮೃತಪಟ್ಟಿದ್ದಾರೆ.

  • ವರದಿ: ರವಿ ಕೊಡಗು

Published by:HR Ramesh
First published: