Cauvery Theerthodbhava 2021: ಈ ವರ್ಷವೂ ತೀರ್ಥೋದ್ಭವದಲ್ಲಿ ಭಾಗವಹಿಸಲು ಮುಕ್ತ ಅವಕಾಶವಿಲ್ಲ..!

Tala Kaveri: ತೀರ್ಥೋದ್ಭವದಂದು ತಲಕಾವೇರಿಗೆ ಎಲ್ಲಾ ವಾಹನಗಳನ್ನು ನಿಷೇಧಿಸಲಾಗಿದೆ. ಕಾಲ್ನಡಿಗೆಯಲ್ಲಿ ತಲಕಾವೇರಿಗೆ ಬರುವವರು ಬರಬಹುದು. ಆದರೆ ಎಲ್ಲರಿಗೂ ಕೋವಿಡ್ ನೆಗೆಟಿವ್ ವರದಿ ಕಡ್ಡಾಯ ಮಾಡಲಾಗಿದೆ ಎಂದಿದ್ದಾರೆ.

ಕಾವೇರಿ ತೀರ್ಥೋದ್ಬವ

ಕಾವೇರಿ ತೀರ್ಥೋದ್ಬವ

  • Share this:
ಕೊಡಗು(ಅ.3): ಕನ್ನಡ ನಾಡಿನ ಜೀವನದಿ, ಕೊಡಗಿನ ಕುಲದೇವತೆ ಕಾವೇರಿ ಮಾತೆ ತೀರ್ಥರೂಪಿಣಿಯಾಗುವುದನ್ನು ಕಣ್ತುಂಬಿಕೊಳ್ಳಲು ಈ ಬಾರಿಯೂ ಸರ್ಕಾರ(Karnataka Government) ಮತ್ತು ಜಿಲ್ಲಾಡಳಿತ ಸಾಕಷ್ಟು ನಿಯಮಗಳನ್ನು ಜಾರಿ ಮಾಡಿ ಆದೇಶ ಹೊರಡಿಸಿದೆ. ಅಂದರೆ ತೀರ್ಥೋದ್ಭವದಲ್ಲಿ ಭಾಗವಹಿಸಲು ಭಕ್ತರಿಗೆ ಮುಕ್ತ ಅವಕಾಶ ನೀಡಿಲ್ಲ. ಹೌದು, ಕೊಡಗು ಜಿಲ್ಲೆ ಮಡಿಕೇರಿ(Madikeri) ತಾಲ್ಲೂಕಿನ ತಲಕಾವೇರಿ(Tala Kaveri)ಯಲ್ಲಿ ಅಕ್ಟೋಬರ್ 17 ರಂದು ಮಧ್ಯಾಹ್ನ 01 ಗಂಟೆ 11 ನಿಮಿಷಕ್ಕೆ ತೀರ್ಥೋದ್ಭವ(Theerthodbhava) ಸಂಭವಿಸಲಿದೆ. ಈ ವೇಳೆ ಸಾವಿರಾರು ಭಕ್ತರು ಕೊಡಗು(Kodagu) ಜಿಲ್ಲೆ ಜೊತೆಗೆ ಹೊರ ಜಿಲ್ಲೆಗಳಿಂದಲೂ ಭಾಗವಹಿಸುತ್ತಾರೆ. ಆದರೆ ಕೋವಿಡ್ ಸೋಂಕಿನ(Coronavirus) ಮೂರನೆ ಅಲೆಯ(3rd Wave) ಆತಂಕ ಇರುವುದರಿಂದ ಎಲ್ಲಾ ಭಕ್ತರು ತೀರ್ಥೋದ್ಭವದಲ್ಲಿ ಭಾಗವಹಿಸಲು ಮುಕ್ತ ಅವಕಾಶ ನೀಡಿಲ್ಲ.

ಹೊರ ಜಿಲ್ಲೆಗಳಿಂದ ಬರುವ ಭಕ್ತರು ತೀರ್ಥೋದ್ಭವದಲ್ಲಿ ಭಾಗವಹಿಸುವುದನ್ನು ನಿಷೇಧಿಸಲಾಗಿದೆ. ಆದರೆ ಕೊಡಗು ಜಿಲ್ಲೆಯ ಭಕ್ತರು ತೀರ್ಥೋದ್ಭವಕ್ಕೆ ಭಾಗವಹಿಸಲು ಹಲವು ನಿಬಂಧನೆಗಳೊಂದಿಗೆ ಅವಕಾಶ ನೀಡಲಾಗಿದೆ. ಜಿಲ್ಲೆಯ ಭಕ್ತರು ತೀರ್ಥೋದ್ಭವದಲ್ಲಿ ಭಾಗವಹಿಸಬೇಕಾದರೆ 72 ಗಂಟೆಯೊಳಗೆ ಪಡೆದ ಕೋವಿಡ್ ನೆಗೆಟಿವ್ ವರದಿ ಹೊಂದಿರುವುದನ್ನು ಸರ್ಕಾರ ಕಡ್ಡಾಯಗೊಳಿಸಿದೆ. ಜೊತೆಗೆ ಕನಿಷ್ಠ ಒಂದು ಡೋಸ್ ವ್ಯಾಕ್ಸಿನ್ ಪಡೆದಿರುವುದನ್ನು ಕಡ್ಡಾಯ ಎಂದು ಕೊಡಗು ಕೋವಿಡ್ ನಿರ್ವಹಣೆ ಉಸ್ತುವಾರಿ ಹೊತ್ತಿರುವ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಅವರು ಹೇಳಿದ್ದಾರೆ.

ಇದನ್ನೂ ಓದಿ:Karnataka Weather Today: ಮುಂದಿನ ಎರಡು ದಿನ ರಾಜ್ಯದಲ್ಲಿ ಧಾರಕಾರ ಮಳೆ ಸಾಧ್ಯತೆ- ಇಂದಿನ ಹವಾಮಾನ ವರದಿ ಹೀಗಿದೆ..

ಮಡಿಕೇರಿಯಲ್ಲಿ ತಲಕಾವೇರಿ ಜಾತ್ರಾ ಮಹೋತ್ಸವ ಮತ್ತು ದಸರಾ ಸಂಬಂಧ ನಡೆದ ಸಭೆಯಲ್ಲಿ ಅವರು ಮಾಹಿತಿ ನೀಡಿದ್ದಾರೆ. ತೀರ್ಥೋದ್ಭವದಂದು ತಲಕಾವೇರಿಗೆ ಎಲ್ಲಾ ವಾಹನಗಳನ್ನು ನಿಷೇಧಿಸಲಾಗಿದೆ. ಕಾಲ್ನಡಿಗೆಯಲ್ಲಿ ತಲಕಾವೇರಿಗೆ ಬರುವವರು ಬರಬಹುದು. ಆದರೆ ಎಲ್ಲರಿಗೂ ಕೋವಿಡ್ ನೆಗೆಟಿವ್ ವರದಿ ಕಡ್ಡಾಯ ಮಾಡಲಾಗಿದೆ ಎಂದಿದ್ದಾರೆ.

ಅಲ್ಲದೆ ವಾಹನಗಳ ನಿಲುಗಡೆಗೆ ಭಾಗಮಂಡಲದಲ್ಲೇ ವ್ಯವಸ್ಥೆ ಮಾಡಲಾಗಿದ್ದು, ಹೆಚ್ಚಿನ ಸ್ಥಳದ ಅಗತ್ಯವಿದ್ದಲ್ಲಿ ಜಿಲ್ಲಾಡಳಿತ ವ್ಯವಸ್ಥೆ ಮಾಡಲಿದೆ ಎಂದಿದ್ದಾರೆ. ಇನ್ನು ಈ ಬಾರಿಯೂ ಸರಳ ದಸರಾಕ್ಕೆ ಸರ್ಕಾರ ನಿರ್ಧರಿಸಿದ್ದು ಜನರು ಕೋವಿಡ್ ನಿಯಮಗಳನ್ನು ಪಾಸಿವುದು ಅಗತ್ಯ ಎಂದು ಕೋಟಾ ಶ್ರೀನಿವಾಸ ಪೂಜಾರಿ ಅವರು ಹೇಳಿದ್ದಾರೆ.

ಅಕ್ಟೋಬರ್ 7 ರಂದು ಮಡಿಕೇರಿ ಶಕ್ತಿ ದೇವತೆಗಳ ಕರಗ ಉತ್ಸವಗಳ ಮೂಲಕ ದಸರಾಕ್ಕೆ ಚಾಲನೆ ದೊರೆಯಲಿದೆ. ಈ ವೇಳೆ ಪ್ರತಿ ಕರಗ ಉತ್ಸವದಲ್ಲಿ 25 ಭಕ್ತರು ಮಾತ್ರ ಭಾಗವಹಿಸಬಹುದು. ಕಳೆದ ಬಾರಿ ಕರಗ ಉತ್ಸವ ಮನೆ ಮನೆಗೆ ತೆರಳಲು ಅವಕಾಶ ಇರಲಿಲ್ಲ. ಆದರೆ ಈ ಬಾರಿ ಮನೆ ಮನೆಗೆ ತೆರಳು ಅವಕಾಶ ನೀಡಲಾಗಿದೆ. ಕರಗ ಉತ್ಸವ ಮನೆ ಮನೆಗೆ ತೆರಳುವ ಸಂದರ್ಭ 10 ಭಕ್ತರು ಮಾತ್ರ ಜೊತೆಯಲ್ಲಿ ಇರಬೇಕು.

ಇದನ್ನೂ ಓದಿ:Karnataka Dams Water Level: ರಾಜ್ಯದ ಪ್ರಮುಖ ಜಲಾಶಯಗಳ ಇಂದಿನ ನೀರಿನ ಮಟ್ಟ ಹೀಗಿದೆ

ಇನ್ನು ದಸರಾ ಸಂದರ್ಭದಲ್ಲಿ ಯಾವುದೇ ಕಾರಣಕ್ಕೂ ಒಂದು ಮಂಟಪದ ಬಳಿ ಕೇವಲ 100 ಜನರು ಮಾತ್ರವೇ ಭಾಗವಹಿಸಬಹುದು. ಅದನ್ನು ಮೀರಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಇರುವಂತೆ ಇಲ್ಲ. ಪ್ರತೀ ಮಂಟಪದಿಂದ ಮತ್ತೊಂದು ಮಂಟಪದ ಮೆರವಣಿಗೆಗೆ ಸಾಕಟ್ಟು ಅಂತರ ಇರಬೇಕು ಎಂದು ಕೋಟಾ ಶ್ರೀನಿವಾಸ ಪೂಜಾರಿ ಅವರು ಸ್ಪಷ್ಟಪಡಿಸಿದ್ದಾರೆ.
Published by:Latha CG
First published: