• ಹೋಂ
  • »
  • ನ್ಯೂಸ್
  • »
  • ಜಿಲ್ಲೆ
  • »
  • ಅಕ್ರಮ ಮಣ್ಣು ಸಾಗಿಸಿದ್ದ ಪಿಎನ್​ಸಿ ಉಪ ಗುತ್ತಿಗೆದಾರನ ವಿರುದ್ದ ಚಿತ್ರದುರ್ಗ ಜೆಎಂಎಫ್​ಸಿ ನ್ಯಾಯಾಲಯದಲ್ಲಿ ದೂರು ದಾಖಲು

ಅಕ್ರಮ ಮಣ್ಣು ಸಾಗಿಸಿದ್ದ ಪಿಎನ್​ಸಿ ಉಪ ಗುತ್ತಿಗೆದಾರನ ವಿರುದ್ದ ಚಿತ್ರದುರ್ಗ ಜೆಎಂಎಫ್​ಸಿ ನ್ಯಾಯಾಲಯದಲ್ಲಿ ದೂರು ದಾಖಲು

ಅಕ್ರಮ ಮಣ್ಣು ಸಾಗಟದಿಂದ ಹದಗೆಟ್ಟಿರುವ ರಸ್ತೆ.

ಅಕ್ರಮ ಮಣ್ಣು ಸಾಗಟದಿಂದ ಹದಗೆಟ್ಟಿರುವ ರಸ್ತೆ.

ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಗುತ್ತಿಗೆ ಪಡೆದ PNC ಕಂಪನಿಯ ಸಬ್ ಕಂಟ್ರಾಕ್ಟರ್ ಚಂದ್ರಶೇಖರ್ ಸಾವಿರಾರು ಟನ್ ಅಕ್ರಮ ಮಣ್ಣು ಲೂಟಿ ಮಾಡಿದ್ದು, ಸರ್ಕಾರದ ಬೊಕ್ಕಸಕ್ಕೆ ಲಕ್ಷಾಂತರ ಹಣ ವಂಚಿಸಿದ್ದಾನೆ. ಈ ಸಂಬಂಧ ಸೂಕ್ತ ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ದ ಕಠಿಣ ಶಿಕ್ಷೆಯಾಗಬೇಕಿದೆ.

ಮುಂದೆ ಓದಿ ...
  • Share this:

ಚಿತ್ರದುರ್ಗ: ರಾಷ್ಟ್ರೀಯ ಹೆದ್ದಾರಿ  ಸಬ್ ಕಂಟ್ರಾಕ್ಟರ್ ಕೃಷಿ, ಮತ್ತು ಪಟ್ಟ ಜಮೀನಿನಲ್ಲಿ ಅಕ್ರಮ ಮಣ್ಣು ಸಾಗಾಟ ಮಾಡಿದ್ದ. ಮಣ್ಣು ಸಾಗಾಟದಿಂದ ರಸ್ತೆ ಸಂಪೂರ್ಣ ಹದಗೆಟ್ಟು ಹೋಗಿತ್ತು. ಇದನ್ನು ಪ್ರಶ್ನಿಸಿದ್ದ ಶಾಸಕರಿಗೆ ಆ ಗುತ್ತಿಗೆದಾರ ಬೌನ್ಸರ್ಸ್​ಗಳನ್ನ ಬಿಟ್ಟು ಹೆದರಿಸುವ ಪ್ರಯತ್ನ ಸಹ ಮಾಡಿದ್ದ. ಇದರಿಂದ ಸಿಟ್ಟಿಗೆದ್ದಿದ್ದ ಶಾಸಕರು ಅವರ ವಿರುದ್ದ ದೂರು ದಾಖಲಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದರು. ಅದರಂತೆ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿದ್ದಾರೆ.


ಚಿತ್ರದುರ್ಗ ತಾಲ್ಲೂಕಿನ ಇಂಗಳದಾಳ್ ಲಂಭಾಣಿಹಟ್ಟಿ ಗ್ರಾಮದಿಂದ 3 KM ದೂರದಲ್ಲಿ ರಾಷ್ಟ್ರೀಯ ಹೆದ್ದಾರಿ 4ರ ಅಭಿವೃದ್ದಿ ಕಾಮಗಾರಿ ನಡೆಯುತ್ತಿದೆ‌. ಈ ಕಾಮಗಾರಿಗೆ ಸಾವಿರಾರು ಲೋಡ್ ಮಣ್ಣು ಬೇಕಿದೆ. ಯಾರೇ ಯಾವುದೇ ಜಾಗದಿಂದ ಮಣ್ಣು ಸಾಗಿಸಬೇಕು ಅಂದರೆ ಸರ್ಕಾರದ ಅನುಮತಿ ಪಡಲೇಬೇಕು. ಆದರೆ ಹಣ ಉಳಿಸುವ ಪ್ಲಾನ್ ಮಾಡಿದ್ದ PNC ಕಂಪನಿ ಸಬ್ ಕಂಟ್ರಾಕ್ಟರ್ ಅನುಮತಿ ಪಡೆಯದೆ, ಗ್ರಾಮದ ಖಾಸಗಿ ಭೂಮಿಗಳಿಂದ  ಅಕ್ರಮವಾಗಿ ಮಣ್ಣು ಸಾಗಾಣಿಕೆ ಮಾಡುತ್ತಿದ್ದ. ಇದರಿಂದ ಆ ಗ್ರಾಮದ ರಸ್ತೆಯೂ ಹದಗೆಟ್ಟಿತ್ತು. ಈ ಕುರಿತು ಸ್ಥಳೀಯರು ಸಬ್ ಕಂಟ್ರಾಕ್ಟರ್ ಚಂದ್ರಶೇಖರ್ ವಿರುದ್ದ ಶಾಸಕರಿಗೆ ದೂರು ನೀಡಿದ್ದರು. ಬಳಿಕ ಚಿತ್ರದುರ್ಗ ಶಾಸಕ ಜಿ.ಹೆಚ್. ತಿಪ್ಪಾರೆಡ್ಡಿ ಸ್ಥಳ ಪರಿಶೀಲನೆ ಮಾಡಿದ್ದರು. ಆ ವೇಳೆ ಗುತ್ತಿಗೆದಾರ ಬೌನ್ಸರ್ಸ್ ಗಳನ್ನು ಬಿಟ್ಟು ಹೆದರಿಸುವ ಪ್ರಯತ್ನ ಮಾಡಿದ್ದ. ಇದರಿಂದ ರೊಚ್ಚಿಗೆದ್ದ ಶಾಸಕ ಜಿಹೆಚ್ ತಿಪ್ಪಾರೆಡ್ಡಿ ಗುತ್ತಿಗೆದಾರನ ವಿರುದ್ದ ದೂರು ದಾಖಲಿಸಲು ಅಧಿಕಾರಿಗಳಿಗೆ‌ ಸೂಚನೆ ನೀಡಿದ್ದರು. ಅದರಂತೆ ಗಣಿ ಇಲಾಖೆ ಅಧಿಕಾರಿಗಳು ಚಿತ್ರದುರ್ಗ JMFC ನ್ಯಾಯಾಲಯದಲ್ಲಿ ದೂರು ನೀಡಿದ್ದು, ಗಣಿ ಮತ್ತು  ಖನಿಜ ಕಾಯ್ದೆ 21/22 ಅಡಿಯಲ್ಲಿ  ಶಿಕ್ಷೆಗೆ ಮನವಿ ಮಾಡಿದ್ದಾರೆ.


ಇದನ್ನು ಓದಿ: ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ, ಬೆಟ್ಟಿಂಗ್ ದಂಧೆ; ಉತ್ತರಪ್ರದೇಶ ಬಿಜೆಪಿ ನಾಯಕನ ಬಂಧನ!


ಇನ್ನೂ  ಕೃಷಿ ಜಮೀನಲ್ಲಿ ಅಕ್ರಮ ಮಣ್ಣು ಸಾಗಾಣಿಕೆಗೆ ಸಾಥ್ ನೀಡಿದ್ದ ಲಂಭಾಣಿಹಟ್ಟಿ ಗ್ರಾಮದ ಜಮೀನು ಮಾಲೀಕರಾದ ಹನುಮನಾಯ್ಕ್, ವೆಂಕಟೇಶ್, ಶಾಂತಬಾಯಿ ವಿರುದ್ದವೂ ಕೂಡ ದೂರು ದಾಖಲಿಸಲಾಗಿದೆ. ಗ್ರಾಮದ ಸರ್ವೆ ನಂ. 63/10,63/11, ಹಾಗೂ 135/1 ರಲ್ಲಿ ಸುಮಾರು 11 ಸಾವಿರಕ್ಕೂ ಅಧಿಕ ಮೆಟ್ರಿಕ್ ಟನ್ ಅಕ್ರಮ ಮಣ್ಣು ಸಾಗಾಣಿಕೆ ಮಾಡಿದ್ದಾರೆಂದು ಕಂಡು ಬಂದಿದೆ. ಇನ್ನೂ ನೂರಾರು ಲಾರಿಗಳ ಓಡಾಟದಿಂದ PWD  ಇಲಾಖೆಯ ಆರು ಕೋಟಿ ವೆಚ್ಚದ ನೂತನ ರಸ್ತೆಯೂ ಕೂಡಾ ಹಾಳಾಗಿದ್ದು, ಸಬ್ ಕಂಟ್ರಾಕ್ಟರ್ ಚಂದ್ರಶೇಖರ್ ರಸ್ತೆಗೆ ತೇಪೆ ಹಚ್ಚುವ ಕೆಲಸ ಮಾಡಿದ್ದಾನೆ. ಜಮೀನು ಕೊಟ್ಟ‌ ರೈತರಿಗೂ ಮೋಸ ಮಾಡಿದ್ದಾನೆ. ಇಂಥವರಿಗೆ ತಕ್ಕ ಶಿಕ್ಷೆಯಾಗ್ಬೇಕು ಅಂತ ಗ್ರಾಮಸ್ಥರು ಒತ್ತಾಯಿಸಿದ್ದಾರೆ.


ಒಟ್ಟಾರೆ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಗುತ್ತಿಗೆ ಪಡೆದ PNC ಕಂಪನಿಯ ಸಬ್ ಕಂಟ್ರಾಕ್ಟರ್ ಚಂದ್ರಶೇಖರ್ ಸಾವಿರಾರು ಟನ್ ಅಕ್ರಮ ಮಣ್ಣು ಲೂಟಿ ಮಾಡಿದ್ದು, ಸರ್ಕಾರದ ಬೊಕ್ಕಸಕ್ಕೆ ಲಕ್ಷಾಂತರ ಹಣ ವಂಚಿಸಿದ್ದಾನೆ. ಈ ಸಂಬಂಧ ಸೂಕ್ತ ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ದ ಕಠಿಣ ಶಿಕ್ಷೆಯಾಗಬೇಕಿದೆ.


ವರದಿ : ವಿನಾಯಕ ತೊಡರನಾಳ್

Published by:HR Ramesh
First published: