HOME » NEWS » District » CASE FILED AGAINST 18 PERSONS FOR DISTURBED FUNERAL THE PERSON WHO DIED FROM CORONAVIRUS RH

ಕೊರೋನಾದಿಂದ ಮೃತಪಟ್ಟ ವ್ಯಕ್ತಿ ಅಂತ್ಯಸಂಸ್ಕಾರಕ್ಕೆ ಅಡ್ಡಿ; 18 ಜನರ ವಿರುದ್ಧ ಪ್ರಕರಣ ದಾಖಲು

ರಾತ್ರಿ ಎಂಟು ಗಂಟೆಯ ಬಳಿಕ ಕರ್ಫ್ಯೂ ಆದೇಶ ಉಲ್ಲಂಘನೆ ಮಾಡಿದ ಹಾಗೂ ಸರ್ಕಾರಿ ಕೆಸಲಕ್ಕೆ ಅಡ್ಡಿಮಾಡಿದ ಆರೋಪಿತರ ಮೇಲೆ ಕಾನೂನು ಕ್ರಮ ಜರುಗಿಸುವಂತೆ ಸಂಗಾಪುರದ ಗ್ರಾಮ ಲೆಕ್ಕಾಧಿಕಾರಿ ಅಸ್ಲಾಮ್ ಪಟೇಲ್ ಅವರು ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

news18-kannada
Updated:July 11, 2020, 4:12 PM IST
ಕೊರೋನಾದಿಂದ ಮೃತಪಟ್ಟ ವ್ಯಕ್ತಿ ಅಂತ್ಯಸಂಸ್ಕಾರಕ್ಕೆ ಅಡ್ಡಿ; 18 ಜನರ ವಿರುದ್ಧ ಪ್ರಕರಣ ದಾಖಲು
ಸಾಂದರ್ಭಿಕ ಚಿತ್ರ
  • Share this:
ಕೊಪ್ಪಳ: ಜಿಲ್ಲೆಯಲ್ಲಿ ಕೊರೋನಾದಿಂದ ಮೃತಪಟ್ಟವರ ಅಂತ್ಯಸಂಸ್ಕಾರ ನೆರವೇರಿಸುವುದೇ ದೊಡ್ಡ ಪ್ರಯಾಸದ ಕೆಲಸ ಎನ್ನುವಂತಾಗಿದೆ. ಮೃತದೇಹವನ್ನು ಕುಟುಂಬಸ್ಥರು ಪಡೆಯಲು ಸಿದ್ದರಿರುವುದಿಲ್ಲ. ಕೊನೆಗೆ ಜಿಲ್ಲಾಡಳಿತವೇ ಮುಂದಾಗಿ ಅಂತ್ಯಸಂಸ್ಕಾರ ನೆರವೇರಿಸಲು ಮುಂದಾದರೆ ಗ್ರಾಮಸ್ಥರು, ಸ್ಥಳೀಯರು ಅದಕ್ಕೆ ಪ್ರತಿರೋಧ ಒಡ್ಡಿ ಪ್ರತಿಭಟನೆ ಮಾಡುತ್ತಿದ್ಧಾರೆ.

ಮೊನ್ನೆ ಇಂಥದ್ದೇ ಘಟನೆ ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಸಂಗಾಪುರದಲ್ಲಿ ನಡೆದಿತ್ತು. ತಡರಾತ್ರಿಯವರೆಗೆ ನಡೆದ ಪ್ರತಿಭಟನೆ ಹೋರಾಟ ಚದುರಿಸಲು ಪೋಲಿಸರು ಲಾಠಿ ಪ್ರಹಾರವವನ್ನೂ ಮಾಡಬೇಕಾಯಿತು. ಈಗ ಅಂದು ಅಂತಿಮಸಂಸ್ಕಾರಕ್ಕೆ ತಡೆಯೊಡ್ಡಿದ 18 ಜನರು ಮತ್ತಿತರ ಮೇಲೆ ಗಂಗಾವತಿ ಗ್ರಾಮೀಣ ಠಾಣೆಯಲ್ಲಿ  ಪ್ರಕರಣ ದಾಖಲಿಸಲಾಗಿದೆ.

ಕೊರೋನಾದಿಂದ ಹಿರೆಜಂತಕಲ್‌ನ 52 ವರ್ಷ ವ್ಯಕ್ತಿ ಜು.9ರಂದು ಮೃತಪಟ್ಟಿದ್ದರು. ಅವರ ಶವ ಸಂಸ್ಕಾರವನ್ನು ತಾಲೂಕು ಆಡಳಿತ ನೆರವೇರಿಸಲು ಮುಂದಾಗಿತ್ತು. ಅದರಂತೆ ಶವಸಂಸ್ಕಾರಕ್ಕೆ ಮೃತದೇಹವನ್ನು ಆ್ಯಂಬುಲೆನ್ಸ್‌ನಲ್ಲಿ ಅಂದು ರಾತ್ರಿ ತೆಗೆದುಕೊಂಡು ಹೋಗಲಾಗಿತ್ತು. ಆಗ ಗ್ರಾಮದ ಒಂದು ತಂಡ ಅವಾಚ್ಯ ಶಬ್ದಗಳಿಂದ ಬೈಯ್ಯುತ್ತಾ ಶವಸಂಸ್ಕಾರ ಮಾಡದಂತೆ ತಡೆದು, ಸರಕಾರಿ ಕರ್ತವ್ಯಕ್ಕೆ ಅಡೆತಡೆ ಮಾಡಿದ್ದಾರೆ. ಅಲ್ಲದೇ ಶವ ಸಂಸ್ಕಾರಕ್ಕೆ ತೆಗೆದುಕೊಂಡು ಹೋಗಿದ್ದ ಜೆ.ಸಿ.ಬಿಗೆ ಕಲ್ಲು ಹೊಡೆದು ವಾಹನ ಜಖಂಗೊಳಿಸಿದ್ದಾರೆ. ಜೊತೆಗೆ ಚಾಲಕ ಗೋವಿಂದಪ್ಪ ಮೇಲೆ ಹಲ್ಲೆ ಮಾಡಿದ್ದಾರೆ.

ರಾತ್ರಿ ಎಂಟು ಗಂಟೆಯ ಬಳಿಕ ಕರ್ಫ್ಯೂ ಆದೇಶ ಉಲ್ಲಂಘನೆ ಮಾಡಿದ ಹಾಗೂ ಸರ್ಕಾರಿ ಕೆಸಲಕ್ಕೆ ಅಡ್ಡಿಮಾಡಿದ ಆರೋಪಿತರ ಮೇಲೆ ಕಾನೂನು ಕ್ರಮ ಜರುಗಿಸುವಂತೆ ಸಂಗಾಪುರದ ಗ್ರಾಮ ಲೆಕ್ಕಾಧಿಕಾರಿ ಅಸ್ಲಾಮ್ ಪಟೇಲ್ ಅವರು ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಇದನ್ನು ಓದಿ: ಇಷ್ಟು ದಿನ‌ ದುಡ್ಡು ಮಾಡಿದ್ದು ಸಾಕು, ಈಗ ಮಾನವೀಯತೆಯಿಂದ ಕೆಲಸ ಮಾಡಿ; ಖಾಸಗಿ ಆಸ್ಪತ್ರೆಗಳಿಗೆ ಆರ್.ಅಶೋಕ್ ತರಾಟೆ

ದೂರಿನ ಆಧಾರದ ಮೇಲೆ ಆರೋಪಿತರ ಮೇಲೆ ಐಪಿಸಿ ಸೆಕ್ಷನ್ 180 / 2020 ಕಲಂ : 143, 147, 148, 341, 323, 353, 332, 427, 504, 269, 270 ರೆಡ್ ವಿತ್ 149 ಅಡಿ ಪ್ರಕರಣ ದಾಖಲಿಸಿಕೊಂಡಿರುವ ಗಂಗಾವತಿ ಗ್ರಾಮೀಣ ಠಾಣೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
Published by: HR Ramesh
First published: July 11, 2020, 4:12 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories