Kangana Ranaut; ನಟಿ ಕಂಗನಾ ವಿರುದ್ಧ ಬೆಳಗಾವಿ ಪೊಲೀಸ್ ಠಾಣೆಯಲ್ಲಿ ಕೇಸ್​; ಟ್ವಿಟರ್ ‌ನಿಂದಲೇ ಬ್ಯಾನ್ ಮಾಡಲು ಆಗ್ರಹ!

ಖ್ಯಾತ ಬಾಲಿವುಡ್ ನಟಿ ಕಂಗನಾ ವಿರುದ್ಧ ಬೆಳಗಾವಿ ವಕೀಲ ಹರ್ಷವರ್ಧನ ಪಾಟೀಲ ಇಲ್ಲಿನ ಟಿಳಕವಾಡಿ  ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪೊಲೀಸರು ಹರ್ಷವರ್ಧನ ನೀಡಿದ ದೂರನ್ನು ಸ್ವೀಕರಿಸಿದ್ದಾರೆ. ಆದರೆ, ನಟಿ ಕಂಗನಾ ರಣಾವತ್ ವಿರುದ್ಧ ಇನ್ನೂ FIR ದಾಖಲಿಸಿಲ್ಲ.

ನಟಿ ಕಂಗನಾ.

ನಟಿ ಕಂಗನಾ.

  • Share this:
ಬೆಳಗಾವಿ (ಫೆಬ್ರವರಿ 8); ಕೇಂದ್ರ ಸರ್ಕಾರದ ವಿವಾದಾತ್ಮಕ ಮೂರು ಕೃಷಿ ಕಾಯ್ದೆಗಳ ವಿರುದ್ಧ ದೇಶದ ಅನ್ನದಾತರು ಕಳೆದ 73 ದಿನಗಳಿಂದ ದೆಹಲಿಯಲ್ಲಿ ಹೋರಾಟವನ್ನು ಮುಂದುವರಿಸಿದ್ದಾರೆ. ಆದರೆ, ರೈತರ ಹೋರಾಟದ ಬಗ್ಗೆ ಬಾಲಿವುಡ್ ನಟಿ ಕಂಗನಾ ರಣಾವತ್ ನಿರಂತರವಾಗಿ ವಿವಾದಾತ್ಮಕ ಟ್ವಿಟ್​ಗಳನ್ನು ಮಾಡುತ್ತಿದ್ದಾರೆ. ನಟಿಯ ಈ ವರ್ತನೆಯನ್ನು ಆಕ್ಷೇಪಿಸಿರುವ ಬೆಳಗಾವಿ ವಕೀಲ ಹರ್ಷವರ್ಧನ್ ಕಂಗನಾ ರಣಾವತ್​ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಅಲ್ಲದೆ, ಟ್ವೀಟ್​ ಮೂಲಕ ಉದ್ಧಟ ತನ ಮೆರೆಯುತ್ತಿರುವ ನಟಿ ಕಂಗನಾ ಅವರ ಟ್ವಿಟರ್ ಖಾತೆಯನ್ನೇ ಬ್ಯಾನ್ ಮಾಡಬೇಕು ಎಂದು ಆಗ್ರಹಿಸಿದ್ದಾರೆ.

ಕೇಂದ್ರ ಸರ್ಕಾರದ ಮೂರು ಕೃಷಿ ಮಸೂದೆಗಳನ್ನ ರದ್ದು ಪಡಿಸುವಂತೆ ರೈತರು ದೆಹಲಿಯಲ್ಲಿ ಹೋರಾಟ ಮುಂದುವರೆಸಿದ್ದಾರೆ. ರೈತರ ಹೋರಾಟಕ್ಕೆ ದೇಶಾದ್ಯಂತ ವಿವಿಧ ರೈತ ಪರ ಸಂಘಟನೆಗಳಿಂದ ಬೆಂಬಲ ವ್ಯಕ್ತವಾಗಿದೆ. ಈ ನಡುವೆ ಬಾಲಿವುಡ್ ನಟಿ ಕಂಗನಾ ರಣಾವತ್ ರೈತರ ಬಗ್ಗೆ ವಿವಾದಾತ್ಮಕ ಟ್ವಿಟ್ ಮಾಡಿದ್ದರು. ನಟಿ ಕಂಗನಾ ತಮ್ಮ ಟ್ವಿಟ್ ನಲ್ಲಿ ರೈತರನ್ನು ಉಗ್ರವಾದಿಗಳು, ಖಲಿಸ್ತಾನಿಗಳು, ಈ ಹೋರಾಟಕ್ಕೆ ಪಾಕಿಸ್ತಾನ, ಚೀನಾದ ದೇಶಗಳ ಬೆಂಬಲ ಇದೆ ಎಂದು ಹೇಳಿದ್ದರು. ಆದರೆ, ಅವರ ಈ ಟ್ವೀಟ್​ಗೆ ದೇಶಾದ್ಯಂತ ಸಾಕಷ್ಟು ಟೀಕೆ ಗಳು ವ್ಯಕ್ತವಾಗಿದ್ದವು.

ಇದೇ ವಿಚಾರವನ್ನು ಮುಂದಿಟ್ಟು, ಖ್ಯಾತ ಬಾಲಿವುಡ್ ನಟಿ ಕಂಗನಾ ವಿರುದ್ಧ ಬೆಳಗಾವಿ ವಕೀಲ ಹರ್ಷವರ್ಧನ ಪಾಟೀಲ ಇಲ್ಲಿನ ಟಿಳಕವಾಡಿ  ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪೊಲೀಸರು ಹರ್ಷವರ್ಧನ ನೀಡಿದ ದೂರನ್ನು ಸ್ವೀಕರಿಸಿದ್ದಾರೆ. ಆದರೆ, ನಟಿ ಕಂಗನಾ ರಣಾವತ್ ವಿರುದ್ಧ ಇನ್ನೂ FIR ದಾಖಲಿಸಿಲ್ಲ.

ಇದನ್ನೂ ಓದಿ: Farmers Protest: ಕೇಂದ್ರ ಕೃಷಿ ಕಾನೂನನ್ನು ಬೆಂಬಲಿಸಿ ಸೆಲೆಬ್ರಿಟಿಗಳ ಒಂದೇ ಥರದ ಟ್ವೀಟ್; ಮಹಾರಾಷ್ಟ್ರ ಸರ್ಕಾರದಿಂದ ತನಿಖೆಗೆ ಆದೇಶ

ಈ ಕುರಿತು ಬೆಳಗಾವಿಯಲ್ಲಿ ಸುದ್ದಿಗೋಷ್ಠಿ ನಡೆಸಿರುವ ವಕೀಲ ಹರ್ಷವರ್ಧನ ಪಾಟೀಲ್,  "ಬಾಲಿವುಡ್ ನಟಿ ಕಂಗನಾ ರಣಾವತ್ ವಿರುದ್ಧ ದೂರು ಸ್ವೀಕರಿಸಿರುವ ಟಿಳಕವಾಡಿ ಪೊಲೀಸರು, ತಕ್ಷಣ ಸೆಕ್ಷನ್ 153, 154A, 503, 504, 505(1), 505(B), 505(C), 505(2), 506 IPC ಅಡಿ FIR ದಾಖಲಿಸಬೇಕು. ಇಲ್ಲದಿದ್ದರೆ, ನಾನು ಕೋರ್ಟ್ ಮೊರೆ ಹೋಗುತ್ತೇನೆ. ದೇಶದಲ್ಲಿ ವಾಕ್ ಸ್ವಾತಂತ್ರ್ಯ ಇದೆ. ಆದರೇ ಇದು ದುರುಪಯೋಗ ಆಗಬಾರದು. ಟ್ವಿಟರ್ ನಿಂದ ನಟಿ ರಣಾವತ್ ಬ್ಯಾನ್ ಮಾಡಬೇಕು" ಎಂದು ಆಗ್ರಹಿಸಿದ್ದಾರೆ.

ದೆಹಲಿಯಲ್ಲಿ ‌ನಡೆಯುತ್ತಿರುವ ರೈತ‌ ಹೋರಾಟವನ್ನು ಬೆಂಬಲಿಸಿ ಇತ್ತೀಚೆಗೆ ಅಂತರಾಷ್ಟ್ರೀಯ ಸೆಲೆಬ್ರಿಟಿಗಳು ಟ್ವಿಟ್ ಮಾಡುವ ಮೂಲಕ ಗಮನ ಸೆಳೆದಿದ್ದರು. ಆದರೆ, ಇದಕ್ಕೆ ದೇಶ ಅನೇಕ ನಟ, ನಟಿಯರು ಹಾಗೂ ಕ್ರೀಡಾಪಟುಗಳು ಪ್ರತ್ಯುತ್ತರ ನೀಡಿದ್ದರು. ತಮ್ಮ ದೇಶದ ಸಮಸ್ಯೆಯನ್ನು ತಾವೇ ಬಗೆಹರಿಸಿಕೊಳ್ಳುತ್ತೇವೆ ಎಂದು ಖಡಕ್ ಉತ್ತರ ನೀಡಿದ್ದರು. ಆದರೆ, ಈ ಸಂದರ್ಭದಲ್ಲಿ ನಟಿ ಕಂಗನಾ ಮಾಡಿದ್ದ ಟ್ವೀಟ್​ ಅತಿರೇಕಕ್ಕೆ ಹೋಗಿತ್ತು. ಅಲ್ಲದೆ, ಅವರ ವಿರುದ್ಧ ತುಮಕೂರಿನಲ್ಲಿ ಈಗಾಗಲೇ ಒಂದು ಕೇಸ್​ ದಾಖಲಾಗಿದೆ ಎಂಬುದು ಉಲ್ಲೇಖಾರ್ಹ.
Published by:MAshok Kumar
First published: