• Home
  • »
  • News
  • »
  • district
  • »
  • ಜಾಗ ಇಲ್ಲದಿದ್ದರೂ ಕಾರು ನುಗ್ಗಿಸಲು ಯತ್ನ; ತಡೆಯಲು ಬಂದವನನ್ನು 200 ಮೀಟರ್ ಎಳೆದೊಯ್ದ ಕಾರು

ಜಾಗ ಇಲ್ಲದಿದ್ದರೂ ಕಾರು ನುಗ್ಗಿಸಲು ಯತ್ನ; ತಡೆಯಲು ಬಂದವನನ್ನು 200 ಮೀಟರ್ ಎಳೆದೊಯ್ದ ಕಾರು

ದೊಡ್ಡಬಳ್ಳಾಪುರದಲ್ಲಿ ಕಾರಿನ ಚಾಲಕ ಮಾಡಿದ ಅವಘಡದ ದೃಶ್ಯಗಳು

ದೊಡ್ಡಬಳ್ಳಾಪುರದಲ್ಲಿ ಕಾರಿನ ಚಾಲಕ ಮಾಡಿದ ಅವಘಡದ ದೃಶ್ಯಗಳು

ಕಾರಿನ ಚಾಲಕನೊಬ್ಬ ಪರಾರಿಯಾಗಲು ಯತ್ನಿಸುವಾಗ ಮಹಿಳೆಯೊಬ್ಬರನ್ನು ಗುದ್ದಿ ಬೀಳಿಸಿದ್ದಲ್ಲದೆ, ತಡೆಯಲು ಬಂದ ಮತ್ತೊಬ್ಬ ವ್ಯಕ್ತಿಯನ್ನು 200 ಮೀಟರ್ ದೂರ ಎಳೆದೊಯ್ದು ರಸ್ತೆಗೆ ಬೀಳಿಸಿದ ಘಟನೆ ದೊಡ್ಡಬಳ್ಳಾಪುರ ರಸ್ತೆಯ ನಾಗೇನಹಳ್ಳಿ ಗೇಟ್ ಬಳಿ ನಡೆದಿದೆ.

  • Share this:

ಯಲಹಂಕ: ಇಕ್ಕಟ್ಟಾದ ರಸ್ತೆಯಲ್ಲಿ ಸ್ಥಳಾವಕಾಶ ಇಲ್ಲದಿದ್ದರೂ ಬಲವಂತವಾಗಿ ಕಾರು ಹೋಗಲು ಯತ್ನಿಸಿದಲ್ಲದೆ ಅಡ್ಡ ಬಂದವರ ಮೇಲೆ ಗುದ್ದಿ ಪರಾರಿಯಾದ ಘಟನೆ ದೊಡ್ಡಬಳ್ಳಾಪುರದ ನಾಗೇನಹಳ್ಳಿ ಗೇಟ್ ಬಳಿ ನಡೆದಿದೆ. ಈ ವೇಳೆ ಕಾರನ್ನು ತಡೆಯಲು ಬಂದ ವ್ಯಕ್ತಿಯನ್ನ 200 ಮೀಟರ್ ದೂರದವರೆಗೆ ಎಳೆದೊಯ್ದು ಹೆದ್ದಾರಿ ಮೇಲೆ ಬೀಳಿಸಿದ ಘಟನೆಯೂ ನಡೆಯಿತು.


ಯಲಹಂಕ ತಾಲೂಕಿನ ದೊಡ್ಡಬಳ್ಳಾಪುರ ರಸ್ತೆಯ ನಾಗೇನಹಳ್ಳಿ ಗೇಟ್ ಬಳಿ ಹೆದ್ದಾರಿಯಿಂದ ಬಡಾವಣೆಗಳಿಗೆ ಸಂಪರ್ಕಿಸುವ ಇಕ್ಕಾಟ್ಟದ ರಸ್ತೆ ಇದೆ. ಬಡಾವಣೆಯಿಂದ ಹೆದ್ದಾರಿಗೆ ಬರಲು ಕಾರುಗಳು ಒಂದೊಂದಾಗಿ ಸಾಲುಗಟ್ಟಿ ನಿಂತಿದ್ದವು. ಈ ಸಮಯದಲ್ಲಿ ಹೆದ್ದಾರಿಯಿಂದ ಬಡಾವಣೆಯ ರಸ್ತೆ ಕಡೆಗೆ ಒಂದು ಕಾರು ಬರುತ್ತದೆ. ಹೋಗಲು ಸ್ಥಳಾವಕಾಶ ಇಲ್ಲದ ಜಾಗದಲ್ಲೂ ಚಾಲಕ ಬಲವಂತದಿಂದ ತನ್ನ ಕಾರು ಚಾಲನೆ ಮಾಡಿದ್ದಾನೆ. ಎದುರಿಗಿದ್ದ ಕಾರಿನ ಚಾಲಕ ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದಾನೆ. ವಿರೋಧ ವ್ಯಕ್ತವಾಗುತ್ತಿದ್ದಂತೆಯೇ ಹೆದ್ದಾರಿಯಿಂದ ಬಂದಿದ್ದ ಚಾಲಕ ಅಲ್ಲಿಂದ ಪರಾರಿಯಾಗಲು ಯತ್ನಿಸಿದ್ದಾನೆ. ಆದರೆ, ಇತ್ತ ಮತ್ತೊಬ್ಬ ಕಾರು ಚಾಲಕ ಕೂಡಲೇ ಆ ಕಾರಿನ ಬ್ಯಾನಟ್ ಮೇಲೆ ಕುಳಿತು ಕಾರು ನಿಲ್ಲಿಸಲು ಯತ್ನಿಸಿದ್ದಾನೆ.


ಇದನ್ನೂ ಓದಿ: ಸರ್ಕಾರಿ ನೌಕರರಿಗೆ 2021ರ ವರ್ಷದ ರಜೆಗಳ ಪಟ್ಟಿ; ಈಗಲೇ ಹಾಲಿಡೇ ಪ್ಲಾನ್ ರೂಪಿಸಿ


ಆದರೆ ಕಾರು ನಿಲ್ಲಿಸದೆ  ವೇಗವಾಗಿ ಓಡಿದೆ. ಸುಮಾರು 150-200 ಮೀಟರ್ ದೂರ ಓಡಿದ ಬಳಿಕ ಬಾನೆಟ್ ಮೇಲೆ ಏರಿದ್ದ ವ್ಯಕ್ತಿ ಆಯತಪ್ಪಿ ನಡು ರಸ್ತೆಗೆ ಪಲ್ಟಿ ಹೊಡೆದಿದ್ದಾನೆ. ರಾಜ್ಯ ಹೆದ್ದಾರಿಯಾಗಿರುವ ದೊಡ್ಡಬಳ್ಳಾಪುರ ಯಲಹಂಕ ರಸ್ತೆಯಲ್ಲಿ ಬಿದ್ದ ಸಮಯಕ್ಕೆ ಅದೃಷ್ಟವಶಾತ್ ಯಾವದೇ ವಾಹನ ಬಂದಿಲ್ಲ. ಸಿನಿಮೀಯ ರೀತಿಯಲ್ಲಿ ನಡೆದ ಈ ಘಟನೆಯಲ್ಲಿ ಕಾರಿನ ಬಾನೆಟ್  ಮೇಲಿಂದ ವ್ಯಕ್ತಿ  ಪ್ರಾಣಾಪಾಯದಿಂದ  ಪರಾರಿಯಾಗಿದ್ದಾನೆ.


ಆ ಕಾರಿನ ಚಾಲಕ ಮಾಡಿದ ಅವಘಡ ಇದೊಂದೇ ಅಲ್ಲ. ಆತ ಪರಾರಿಯಾಗುವ ತರಾತುರಿಯಲ್ಲಿ ಮಹಿಳೆಯೊಬ್ಬರಿಗೆ ಕಾರನ್ನು ಗುದ್ದಿ ಬೀಳಿಸಿದ್ದಲ್ಲದೆ, ಮತ್ತೊಂದು ಕಾರಿಗೆ ಗುದ್ದಿಕೊಂಡು ಹೋಗಿದ್ದಾನೆ. ಈ ದೃಶ್ಯಗಳು ಕೆಲವರ ಮೊಬೈಲ್​ನಲ್ಲಿ ಸೆರೆಯಾಗಿದೆ.


ವರದಿ: ನವೀನ್ ಕುಮಾರ್

Published by:Vijayasarthy SN
First published: