HOME » NEWS » District » CALF FELL INTO A PIT WHILE SCAVENGING FOOD IN GADAG ON LOCKDOWN DAY PEOPLE STEP IN TO HELP SKG SKTV

Lockdown Effect: ಗದಗದಲ್ಲಿ ಕರ್ಫ್ಯೂ ದಿನ ಆಹಾರಕ್ಕಾಗಿ ಅಲೆದು ಗುಂಡಿಯಲ್ಲಿ ಬಿದ್ದ ಕರು, ಹೆತ್ತ ಕರುಳಿನ ಸಂಕಷ್ಟ ನೋಡಿ ತಾಯಿ ಹಸುವಿನ ಗೋಳಾಟ

ಕಿಲ್ಲರ್ ಕೊರೊನಾ ಕಟ್ಟಿ ಹಾಕಲು ಎರಡು ದಿನ ವೀಕೆಂಡ್ ಕರ್ಫ್ಯೂ ಜಾರಿ ಮಾಡಿರೋದರಿಂದ ಅದರ ಬಿಸಿ ನೇರವಾಗಿ ಹುಸುಗಳಿಗೆ ತಟ್ಟಿದೆ. ನಗರ ಪ್ರದೇಶದ ಹಸುಗಳು ಹಸುವಿನಿಂದ ಬಳಲುತ್ತಿದ್ದು, ತಾಯಿ ಹಸು ಹಾಗೂ ಪುಟಾಣಿ ಕರು ಆಹಾರವನ್ನು ಅರಿಸಿಕೊಂಡು ಹೋಗುತ್ತಿದ್ದವು. ಈ ವೇಳೆ ಗದಗ ನಗರದ ಮಹೇಂದ್ರಕರ್ ಸರ್ಕಲ್, ಕಟ್ಟದ ಗುಂಡಿಯಲ್ಲಿ ಆಹಾರ ಸಿಗುತ್ತೇ ಅಂತಾ ಇಣುಕಿ ನೋಡುವಾಗ, ಆಯತಪ್ಪಿ ಕರು ಬಿದ್ದಿದೆ.

news18-kannada
Updated:April 26, 2021, 7:19 AM IST
Lockdown Effect: ಗದಗದಲ್ಲಿ ಕರ್ಫ್ಯೂ ದಿನ ಆಹಾರಕ್ಕಾಗಿ ಅಲೆದು ಗುಂಡಿಯಲ್ಲಿ ಬಿದ್ದ ಕರು, ಹೆತ್ತ ಕರುಳಿನ ಸಂಕಷ್ಟ ನೋಡಿ ತಾಯಿ ಹಸುವಿನ ಗೋಳಾಟ
ಗುಂಡಿಯಲ್ಲಿ ಬಿದ್ದ ಕರು
  • Share this:
ಗದಗ: ಆ ಹಸು, ತನ್ನ ಕರುಳಿನ ಕುಡಿಯೊಂದಿಗೆ ಆಹಾರ ಅರಿಸಿಕೊಂಡು ಹೋಗುತ್ತಿತ್ತು. ಕಳೆದ ಎರಡು ದಿನ Curfew ಜಾರಿಯಾಗಿರೋದರಿಂದ ಸಮರ್ಪಕವಾಗಿ ಆಹಾರ ಸಿಗದೆ ಪರದಾಟ ನಡೆಸಿದ್ದವು. ಆದ್ರೆ, ತಾಯಿ ಹಸುವಿನೊಂದಿಗೆ ಹೋಗುತ್ತಿರುವಾಗ ಕರು, ಗುಂಡಿಯೊಂದರಲ್ಲಿ ಏನಾದರೂ ಆಹಾರ ಸಿಗುತ್ತೇ ಅಂತಾ ಬಂದು ಆಯತಪ್ಪಿ ಗುಂಡಿಗೆ ಬಿದ್ದಿದೆ. ತನ್ನ ಕರುಳಿನ ಕುಡಿಯನ್ನು ರಕ್ಷಣೆ ಮಾಡುವಂತೆ ತಾಯಿ ಹಸು ರೋಧನೆ ಅನುಭವಿಸುತ್ತಿತ್ತು. ಕೊನೆಗೆ ಸಾರ್ವಜನಿಕರು ಕರ್ಫ್ಯೂ ನಡುವೆ, ಕರುವನ್ನು ರಕ್ಷಣೆ ಮಾಡಿ ಮಾನವೀಯತೆ ಮರೆದಿದ್ದಾರೆ. 

ಹೌದು ಇತ್ತಿಚಿನ ದಿನಮಾನಗಳಲ್ಲಿ ಮಾನವೀಯತೆ ಮರೆಯಾಗುತ್ತಿದೆ. ಅದರಲ್ಲೂ ಈ ಕೊರೊನಾ ಸಮಯದಲ್ಲಿ ಯಾರಿಗೆ ಯಾರು ಹೆಲ್ತ್ ಮಾಡಲು ಮುಂದೆ ಬರ್ತಾಯಿಲ್ಲಾ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಮನುಷ್ಯರೆ ಮನುಷ್ಯರನ್ನು ರಕ್ಷಣೆ ಮಾಡಲು ಹಿಂದೆ ಮುಂದೆ ನೋಡುವ ಕಾಲವಿದು. ಇಂತಹ ವೇಳೆಯಲ್ಲಿ ಗದಗ ನಗರದಲ್ಲಿ ಮಾನವೀಯತೆ ಮೆರೆದು ಪುಟಾಣಿ ಕರು ಹಾಗೂ ತಾಯಿಯನ್ನು ಒಂದು ಮಾಡಲಾಗಿದೆ.

ಕಿಲ್ಲರ್ ಕೊರೊನಾ ಕಟ್ಟಿ ಹಾಕಲು ಎರಡು ದಿನ ವೀಕೆಂಡ್ ಕರ್ಫ್ಯೂ ಜಾರಿ ಮಾಡಿರೋದರಿಂದ ಅದರ ಬಿಸಿ ನೇರವಾಗಿ ಹುಸುಗಳಿಗೆ ತಟ್ಟಿದೆ. ನಗರ ಪ್ರದೇಶದ ಹಸುಗಳು ಹಸುವಿನಿಂದ ಬಳಲುತ್ತಿದ್ದು, ತಾಯಿ ಹಸು ಹಾಗೂ ಪುಟಾಣಿ ಕರು ಆಹಾರವನ್ನು ಅರಿಸಿಕೊಂಡು ಹೋಗುತ್ತಿದ್ದವು. ಈ ವೇಳೆ ಗದಗ ನಗರದ ಮಹೇಂದ್ರಕರ್ ಸರ್ಕಲ್, ಕಟ್ಟದ ಗುಂಡಿಯಲ್ಲಿ ಆಹಾರ ಸಿಗುತ್ತೇ ಅಂತಾ ಇಣುಕಿ ನೋಡುವಾಗ, ಆಯತಪ್ಪಿ ಕರು ಬಿದ್ದಿದೆ. ತಾಯಿ ಹಸು ಕರುವನ್ನು ರಕ್ಷಣೆ ಮಾಡಲು ಹರ ಸಾಹಸ ಪಟ್ಟಿದೆ.

ಉಳಿದ ಹಸುಗಳು ಬಂದು ಇಡೀ ಸರ್ಕಲ್ ಸುತ್ತುವರೆದು ರೋಧಿಸಲು ಶುರುಮಾಡಿದವು. ಕೊನೆಗೆ ಸ್ಥಳೀಯರು ನೋಡಿ ಕರುವನ್ನು ಮೇಲೆತ್ತಿ ರಕ್ಷಣೆ ಮಾಡಿ ಪುಣಾಣಿ ಕರು ಹಾಗೂ ತಾಯಿ ಹಸುವನ್ನು ಒಂದು ಮಾಡಿದ್ದಾರೆ.

ಇನ್ನೂ ಟೈಟ್ ಕರ್ಫ್ಯೂ ಜಾರಿ ಮಾಡಿರೋದರಿಂದ ಜನರು ಕೂಡಾ ಓಡಾಡುತ್ತಿರಲ್ಲಿಲ್ಲ. ಆಹಾರ ಅರಿಸಿಕೊಂಡು ಹೋದ ಕರು ಗುಂಡಿಯಲ್ಲಿ ಬಿದ್ದು ನರಳಾಡುತ್ತಿದೆ. ಮಹೇಂದ್ರಕರ್ ಸರ್ಕಲ್ ನಿವಾಸಿಗಳು ಕರು ಬಿದ್ದಿರೋದನ್ನು ನೋಡಿ ಕರ್ಫ್ಯೂ ನಡುವೆ ಸ್ಥಳೀಯರು ಸೇರಿಕೊಂಡು ರಕ್ಷಣೆ ಮಾಡಲು ಮುಂದಾಗಿದ್ದಾರೆ. ಆರಂಭದಲ್ಲಿ ತಾಯಿ ಹಸು ತನ್ನ ಕರುಳು ಬಳ್ಳಿಗೆ ಏನಾದರೂ ಆಗುತ್ತೇ ಅಂತಾ ಸ್ಥಳೀಯರನ್ನು ಕರುವಿನ ಹತ್ತಿರ ಬಿಡ್ತಾಯಿರಲಿಲ್ಲ. ಪುಟಾಣಿ ಕರು ಹಾಗೂ ತಾಯಿ ಹಸುವಿಗೆ ಸಾಥ್ ನೀಡುವ ಹಾಗೇ ಇನ್ನೆರಡು ಹಸು ಅದೇ ಸರ್ಕಲ್ ಸುತ್ತುವರೆದು ಯಾರನ್ನು ಆ ಕರುವಿನ ಹತ್ತಿರ ಬಿಡದೆ ದಿಗ್ಬಂಧನ ಹಾಕಿದ್ದವು. ಆದ್ರೂ ಕೂಡಾ ಸ್ಥಳೀಯರು ಕರುವನ್ನು ರಕ್ಷಣೆ ಮಾಡಿದ ಮೇಲೆ ತನ್ನ ಕರುಳಿನ ಕುಡಿಯನ್ನು ನೆಕ್ಕುತ್ತಾ, ಮೇಲೆತ್ತಿದವರಿಗೆ ತಮ್ಮದೆ ಭಾಷೆಯಲ್ಲಿ ಕೃತ್ಯಜ್ಞಯನ್ನು ಸಲ್ಲಿಸಿವೆ.

ಕಳೆದ ಹಲವಾರು ವರ್ಷಗಳಿಂದ ಮಹೇಂದ್ರಕರ್ ಸರ್ಕಲ್ ಕಾಮಗಾರಿಯನ್ನು ಅರ್ಧ ಮಾಡಿ ಕೈಬಿಟ್ಟಿದ್ದಾರೆ. ಕಾಮಕಾರಿ ಪೂರ್ಣವಾಗಿದ್ರೆ ಇಂತಹ ಘಟನೆಗಳು ನಡೆಯುತ್ತಿರಲಿಲ್ಲ ಎನ್ನುವದು ಸ್ಥಳೀಯರ ಆರೋಪವಾಗಿದೆ. ನಾಲ್ಕೈದು ಗಂಟೆಗಳ ಕಾಲ ಕರು ಹಾಗೂ ತಾಯಿ ಹಸು ರೋಧನೆ ಅನುಭಿಸಿವೆ, ಕೊನೆಗೆ ಸ್ಥಳೀಯರು ನೋಡಿ ಕರು ಹಾಗೂ ತಾಯಿ ಹಸುವನ್ನು ಒಂದು ಮಾಡಿ ಮಾನವೀಯತೆ ಮೆರೆದಿದ್ದಾರೆ.
Youtube Video
ಈ ಕೊರೊನಾ ಸಮಯದಲ್ಲಿ ಮಾನವೀಯತೆ ಮರೆಯುತ್ತಿರುವಾಗ ಗದಗ ಜನರು, ಮೂಕಪ್ರಾಣಿಗಳ ಕಷ್ಟಕ್ಕೆ ಸ್ಪಂದಿಸಿ, ಒಂದು ಮಾಡಿದ್ದು, ಮೆಚ್ಚುಗೆಗೆ ಪಾತ್ರವಾಗಿದೆ.
Published by: Soumya KN
First published: April 26, 2021, 7:19 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories