HOME » NEWS » District » CABINET WILL BE EXPANSION I AM NOT LOST THE MINISTER POST SAYS PRABHU CHOUHAN RH NMPG

ಸಂಪುಟ ವಿಸ್ತರಣೆಯಾಗಲಿದೆ, ಪುನಾರಚನೆ ಆಗುವುದಿಲ್ಲ, ನಾನು ಮಂತ್ರಿ ಸ್ಥಾನ ಕಳೆದುಕೊಳ್ಳುವುದಿಲ್ಲ; ಸಚಿವ ಪ್ರಭು ಚವ್ಹಾಣ

ಈಗಾಗಲೇ ಬೇಗ್ ಅವರನ್ನು ಬಂಧನ ಮಾಡಿ ವಿಚಾರಣೆ ಮಾಡುತ್ತಿದ್ದಾರೆ. ಸಿಬಿಐ ತನಿಖೆ ವಿಚಾರದಲ್ಲಿ ಕೇಂದ್ರ ಸರಕಾರ ಯಾವುದೇ ದ್ವೇಷದ ರಾಜಕೀಯ ಮಾಡುತ್ತಿಲ್ಲ. ಅವರ ಕೆಲಸ ಅವರು ಮಾಡುತ್ತಿದ್ದಾರೆ. ಒಂದು ವೇಳೆ ನಾನು ತಪ್ಪು ಮಾಡಿದ್ರು ವಿಚಾರಣೆ ಮಾಡುತ್ತಾರೆ ಎಂದು ಹೇಳಿದರು. 

news18-kannada
Updated:November 23, 2020, 3:19 PM IST
ಸಂಪುಟ ವಿಸ್ತರಣೆಯಾಗಲಿದೆ, ಪುನಾರಚನೆ ಆಗುವುದಿಲ್ಲ, ನಾನು ಮಂತ್ರಿ ಸ್ಥಾನ ಕಳೆದುಕೊಳ್ಳುವುದಿಲ್ಲ; ಸಚಿವ ಪ್ರಭು ಚವ್ಹಾಣ
ಸಚಿವ ಪ್ರಭು ಚವ್ಹಾಣ್​​
  • Share this:
ಯಾದಗಿರಿ: ರಾಜ್ಯದಲ್ಲಿ ‌ಈಗ ಸಚಿವ ಸ್ಥಾನಕ್ಕಾಗಿ ಬಿಜೆಪಿ ವಲಯದಲ್ಲಿ ಭಾರಿ‌ ಪೈಪೋಟಿ ನಡೆಯುತ್ತಿದೆ. ಸಚಿವ ಸ್ಥಾನ ಗಿಟ್ಟಿಸಿಕೊಳ್ಳಲು ತಮ್ಮ ನಾಯಕರ ಮೂಲಕ ಬಿಜೆಪಿ ಶಾಸಕರು  ಹೈಕಮಾಂಡ್ ಮೇಲೆ ಒತ್ತಡ ಹಾಕುವ ಕೆಲಸ ಮಾಡುತ್ತಿದ್ದಾರೆ. ಇಷ್ಟರ ನಡುವೆ  ಸಚಿವ ಪ್ರಭು ಚವ್ಹಾಣ ಅವರನ್ನು ಸಚಿವ ಸ್ಥಾನದಿಂದ ತೆಗೆಯಲಿದ್ದಾರೆಂದು ರಾಜಕೀಯ ಪಡಸಾಲೆಯಲ್ಲಿ ಚರ್ಚೆ ನಡೆಯುತ್ತಿದೆ. ಈ ನಡುವೆ ಸಚಿವ ಪ್ರಭು ಚವ್ಹಾಣ ನಾನು ಉತ್ತಮ ಅಭಿವೃದ್ಧಿ ಕಾರ್ಯ ಮಾಡಿಕೊಂಡು ಹೋಗುತ್ತಿದ್ದೇನೆ. ಸಿಎಂ ಬಿಎಸ್​ವೈ  ನನ್ನ ಅಭಿವೃದ್ಧಿ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಹೀಗಾಗಿ ಯಾವುದೇ  ಕಾರಣಕ್ಕೂ ನನ್ನನ್ನು ಸಚಿವ ಸ್ಥಾನದಿಂದ  ತೆಗೆಯುವುದಿಲ್ಲ ಎಂದು ಚವ್ಹಾಣ ಹೇಳಿದ್ದಾರೆ.

ಯಾದಗಿರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಮ್ಮ ಮಾಹಿತಿ ಪ್ರಕಾರ ಸಂಪುಟ ವಿಸ್ತರಣೆಯಾಗುತ್ತದೆ. ಆದರೆ, ಪುನರ್ ರಚನೆಯಾಗಲ್ಲ. ಯಾರ್ಯಾರಿಗೆ ಸಚಿವ ಸ್ಥಾನ ಸಿಗುತ್ತದೆ ಎಂದು ಬಿಜೆಪಿ ಹೈಕಮಾಂಡ್ ನಿರ್ಧಾರ ಮಾಡುತ್ತದೆ. ನಾನು ಬಿಜೆಪಿ ಪಕ್ಷದ ಶಿಸ್ತಿನ ಕಾರ್ಯಕರ್ತನಾಗಿದ್ದೇನೆ. ನಾನು ಮೊದಲು ಮಂತ್ರಿಯಾಗುತ್ತೇನೆ ಎಂದು ನನಗೆ ಗೊತ್ತಿರಲಿಲ್ಲ. ಬಿಜೆಪಿ ಪಕ್ಷವು ನನ್ನನ್ನು ಮಂತ್ರಿ ಮಾಡಿದೆ ಎಂದರು.

ಇದನ್ನು ಓದಿ: ಜೈಲಿನಲ್ಲಿ ಕನ್ನಡ ಕಲಿತ ತಮಿಳುನಾಡಿನ ಚಿನ್ನಮ್ಮ; ಗುದ್ದಲಿ ಹಿಡಿದು ಹಣ್ಣು-ತರಕಾರಿ ಬೆಳೆದ ಶಶಿಕಲಾ!

ರೋಷನ್ ಬೇಗ ತಪ್ಪು ಮಾಡಿದ್ರೆ ಶಿಕ್ಷೆಯಾಗಲಿ...!

ಐಎಂಎ ಬಹುಕೋಟಿ ವಂಚನೆ ಪ್ರಕರಣ ಸಂಬಂಧಪಟ್ಟಂತೆ ಈಗಾಗಲೇ ಸಿಬಿಐ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ವಂಚನೆ ಪ್ರಕರಣದಲ್ಲಿ ಮಾಜಿ ಸಚಿವ ರೋಷನ್ ಬೇಗ್ ಕೆಟ್ಟ ಕೆಲಸ ಮಾಡಿದ್ದು ತನಿಖೆಯಲ್ಲಿ  ಸಾಬಿತಾದ್ರೆ ಅವರಿಗೆ ಸೂಕ್ತ ಶಿಕ್ಷೆಯಾಗಲಿ ಎಂದರು.

ಈಗಾಗಲೇ ಬೇಗ್ ಅವರನ್ನು ಬಂಧನ ಮಾಡಿ ವಿಚಾರಣೆ ಮಾಡುತ್ತಿದ್ದಾರೆ. ಸಿಬಿಐ ತನಿಖೆ ವಿಚಾರದಲ್ಲಿ ಕೇಂದ್ರ ಸರಕಾರ ಯಾವುದೇ ದ್ವೇಷದ ರಾಜಕೀಯ ಮಾಡುತ್ತಿಲ್ಲ. ಅವರ ಕೆಲಸ ಅವರು ಮಾಡುತ್ತಿದ್ದಾರೆ. ಒಂದು ವೇಳೆ ನಾನು ತಪ್ಪು ಮಾಡಿದ್ರು ವಿಚಾರಣೆ ಮಾಡುತ್ತಾರೆ ಎಂದು ಹೇಳಿದರು.
Published by: HR Ramesh
First published: November 23, 2020, 3:19 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories