ಶಿರಾ ಯಶಸ್ಸಿನ ಬಳಿಕ ಮಸ್ಕಿ, ಬಸವಕಲ್ಯಾಣ ಉಪಚುನಾವಣೆಗಳತ್ತ ಬಿ.ವೈ. ವಿಜಯೇಂದ್ರ ಚಿತ್ತ
ಬಿಜೆಪಿ ಗೆದ್ದ ಇತಿಹಾಸವೇ ಇಲ್ಲದ ಕೆಆರ್ ಪೇಟೆ ಮತ್ತು ಶಿರಾದಲ್ಲಿ ಕಮಲ ಅರಳಲು ಪ್ರಮುಖ ಕಾರಣಕರ್ತರೆನ್ನಲಾದ ಬಿ.ವೈ. ವಿಜಯೇಂದ್ರ ಅವರು ಈಗ ಮುಂಬರಲಿರುವ ಬಸವಕಲ್ಯಾಣ ಮತ್ತು ಮಸ್ಕಿ ಕ್ಷೇತ್ರಗಳತ್ತ ಗಮನ ಹರಿಸಿದ್ದಾರೆ.
news18-kannada Updated:November 13, 2020, 2:10 PM IST

ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ ವೈ ವಿಜಯೇಂದ್ರ
- News18 Kannada
- Last Updated: November 13, 2020, 2:10 PM IST
ಕಲಬುರ್ಗಿ/ಬೀದರ್(ನ. 13): ಇತ್ತೀಚೆಗೆ ನಡೆದ ಶಿರಾ ಉಪಚುನಾವಣೆಯಲ್ಲಿ ಬಿಜೆಪಿ ಸಾಧಿಸಿದ ಗೆಲುವು ಬಿ.ವೈ. ವಿಜಯೇಂದ್ರ ಅವರನ್ನು ಸ್ಟಾರ್ ಪಟ್ಟಕ್ಕೆ ಏರಿಸಿದೆ. ಮುಂಬರಲಿರುವ ಬಸವ ಕಲ್ಯಾಣ ಮತ್ತು ಮಸ್ಕಿ ಕ್ಷೇತ್ರಗಳ ಉಪಚುನಾವಣೆಯಲ್ಲಿ ವಿಜಯೇಂದ್ರ ಅವರೇ ಬಿಜೆಪಿ ಪಾಲಿಗೆ ಟ್ರಂಪ್ ಕಾರ್ಡ್ ಆಗುವ ಎಲ್ಲಾ ಸೂಚನೆಗಳು ಇವೆ. ಶಿರಾದಲ್ಲಿನ ಗೆಲುವಿನ ಖುಷಿಯಲ್ಲಿ ಮೈಮರೆಯದ ವಿಜಯೇಂದ್ರ ಈಗಾಗಲೇ ಮುಂದಿನ ಉಪಚುನಾವಣೆಳತ್ತ ಚಿತ್ತ ಹರಿಸಿದ್ದಾರೆ. ಚುನಾವಣೆ ದಿನಾಂಕ ಘೋಷಣೆ ಆಗದಿದ್ದರೂ ಅದಾಗಲೇ ಅಖಾಡಕ್ಕೆ ಧುಮುಕ ಸಂಘಟನಾ ಕಾರ್ಯಗಳಿಗೆ ಪ್ರಯತ್ನಿಸುತ್ತಿದ್ದಾರೆ. ಸಿಎಂ ಯಡಿಯೂರಪ್ಪ ಅವರ ಮಗನಾದರೂ ತಮ್ಮದೇ ಛಾಪು ಮೂಡಿಸುತ್ತಿರುವ ಅವರು ಬಸವ ಕಲ್ಯಾಣಕ್ಕೆ ಇಂದು ಭೇಟಿ ನೀಡಿದ್ಧಾರೆ. ಇಲ್ಲಿಯ ಅನುಭವ ಮಂಟಪಕ್ಕೆ ಭೇಟಿ ನೀಡಿ ಅಲ್ಲಿನ ಆವರಣದಲ್ಲಿ ಷಟ್ ಸ್ಥಲ ಧ್ವಜಾರೋಹಣ ಮಾಡಿದ್ದಾರೆ. ಹಾಗೆಯೆ, ಪಕ್ಷದ ಸಂಘಟನೆಯ ಬಲಪಡಿಸುವ ದೃಷ್ಟಿಯಲ್ಲಿ ಸ್ಥಳೀಯ ಬಿಜೆಪಿ ಮುಖಂಡರು ಮತ್ತು ಕಾರ್ಯಕರ್ತರನ್ನು ಅವರು ಭೇಟಿಯಾಗುತ್ತಿದ್ದಾರೆ. ಇದಾದ ಬಳಿಕ ಅವರು ಬೆಂಗಳೂರಿಗೆ ಮರಳುವ ಸಾಧ್ಯತೆ ಇದೆ.
ಇದಕ್ಕೂ ಮುನ್ನ ಅವರು ಕಲ್ಬುರ್ಗಿಗೆ ಭೇಟಿ ನೀಡಿದರು. ಬಿಜೆಪಿಯ ರಾಜ್ಯ ಉಪಾಧ್ಯಕ್ಷರೂ ಅದ ವಿಜಯೇಂದ್ರ ಅವರು ಇದೇ ವೇಳೆ ತಾವು ಬಸವ ಕಲ್ಯಾಣ ಕ್ಷೇತ್ರದಲ್ಲಿ ಸ್ಪರ್ಧಿಸುವ ಇಂಗಿತ ಇಲ್ಲ ಎಂದು ಸ್ಪಷ್ಟಪಡಿಸಿದರು. ಕಲಬುರ್ಗಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡುತ್ತಿದ್ದ ಅವರು, ತಾವು ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ. ಆದರೆ, ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವಿಗೆ ಏನೆಲ್ಲಾ ತಂತ್ರ ರೂಪಿಸಬೇಕೋ ಅದನ್ನು ಮಾಡುತ್ತೇನೆ ಎಂದರು. ಇದನ್ನೂ ಓದಿ: ಬಸವಕಲ್ಯಾಣದತ್ತ ವಿಜಯೇಂದ್ರ ಪ್ರಯಾಣ; ಉಪಚುನಾವಣೆ ಘೋಷಣೆಗೂ ಮೊದಲು ತಾಲೀಮು ಆರಂಭ
ಮಸ್ಕಿ ಮತ್ತು ಬಸವ ಕಲ್ಯಾಣ ಕ್ಷೇತ್ರಗಳಲ್ಲಿ ಕೆಲಸ ಮಾಡಲು ಮನವಿ ಇದೆ. ಆದರೆ, ಯಾವ ಕ್ಷೇತ್ರದ ಉಸ್ತುವಾರಿ ಕೊಡಬೇಕು ಎಂಬುದನ್ನು ಪಕ್ಷದ ನಾಯಕರು ನಿರ್ಧರಿಸುತ್ತಾರೆ. ಪಕ್ಷದ ಆದೇಶದಂತೆ ನಾನು ಕಾರ್ಯನಿರ್ವಹಿಸುತ್ತೇನೆ. ಯಾವ ಜವಾಬ್ದಾರಿ ಕೊಟ್ಟರೂ ನಿಭಾಯಿಸುತ್ತೇನೆ ಎಂದು ನ್ಯೂಸ್18 ಕನ್ನಡಕ್ಕೆ ಬಿ.ವೈ. ವಿಜಯೇಂದ್ರ ಹೇಳಿಕೆ ನೀಡಿದ್ದಾರೆ.
ಶಿರಾ ಕ್ಷೇತ್ರದಲ್ಲಿ ಬಿಜೆಪಿ ಗೆಲುವಿಗೆ ಅಧಿಕಾರ ದುರುಪಯೋಗ ಕಾರಣ ಎಂದು ಸಿದ್ದರಾಮಯ್ಯ ನೀಡಿದ ಹೇಳಿಕೆಯನ್ನು ವಿಜಯೇಂದ್ರ ಸಾರಾಸಗಟಾಗಿ ತಿರಸ್ಕರಿಸಿದ್ದಾರೆ. ಶಿರಾದಲ್ಲಿ ತಾವು ಕಾಂಗ್ರೆಸ್ ಮತ್ತು ಜೆಡಿಎಸ್ನ ವೈಫಲ್ಯಗಳನ್ನ ಎತ್ತಿತೋರಿಸಿದ್ದೇವೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಸಾಧನೆಗಳನ್ನ ಜನರಿಗೆ ತಿಳಿಸಿಕೊಟ್ಟಿದ್ದೇವೆ. ಎಲ್ಲಿಯೂ ಅಧಿಕಾರ ದುರ್ಬಳಕೆ ಮಾಡಿಕೊಂಡಿಲ್ಲ. ಸೋಲಿನ ಹತಾಶೆಯಿಂದ ಸಿದ್ದರಾಮಯ್ಯ ಹೀಗೆಲ್ಲಾ ಮಾತನಾಡುತ್ತಿದ್ದಾರೆ ಎಂದು ಬಿ.ವೈ. ವಿಜಯೇಂದ್ರ ತಿರುಗೇಟು ನೀಡಿದರು.
ಬಿ.ವೈ. ವಿಜಯೇಂದ್ರ ಅವರು ಬಿಜೆಪಿಯ ಉದಯೋನ್ಮುಖ ತಾರೆಯಾಗಿ ಕಾಣಿಸಿದ್ದು 2018ರ ವಿಧಾನಸಭಾ ಚುನಾವಣೆಯಲ್ಲಿ. ಸಿದ್ದರಾಮಯ್ಯ ಅವರ ಭದ್ರಕೋಟೆ ಎನಿಸಿದ ವರುಣಾ ಕ್ಷೇತ್ರದಲ್ಲಿ ಅವರ ಮಗ ಯತೀಂದ್ರ ಸ್ಪರ್ಧಿಸಿದಾಗ ವಿಜಯೇಂದ್ರ ಅವರು ಆ ಕ್ಷೇತ್ರದಲ್ಲಿ ಮಿಂಚಿನ ಸಂಚಾರ ನಡೆಸಿ ಸಂಘಟನಾ ಕೆಲಸದಲ್ಲಿ ತೊಡಗಿಸಿಕೊಂಡಿದ್ದರು. ಆ ಚುನಾವಣೆಯಲ್ಲಿ ಯತೀಂದ್ರ ಬಹಳ ಕಡಿಮೆ ಮತಗಳ ಅಂತರದಿಂದ ಗೆಲುವು ಸಾಧಿಸಿದರು. ಆ ಚುನಾವಣೆಯಲ್ಲಿ ಬಿಜೆಪಿ ಸೋತರೂ ವಿಜಯೇಂದ್ರ ಅವರ ಸಂಘಟನಾ ಚಾತುರ್ಯ ಒರೆಗೆ ಹಚ್ಚಿ ಗಮನ ಸೆಳೆದಿತ್ತು.
ಇದನ್ನೂ ಓದಿ: ಬಸವಕಲ್ಯಾಣದಿಂದ ವಿಜಯೇಂದ್ರ ಸ್ಪರ್ಧೆ ಇಲ್ಲ; ಸಚಿವ ಎಸ್.ಟಿ. ಸೋಮಶೇಖರ್ ಸ್ಪಷ್ಟನೆಅದಾದ ಬಳಿಕ ಕಳೆದ ವರ್ಷ ನಡೆದ ಉಪಚುನಾವಣೆಯಲ್ಲಿ ಬಿಜೆಪಿಗೆ ಗೆಲುವಿನ ಇತಿಹಾಸವೇ ಇಲ್ಲದ ಕೆಆರ್ ಪೇಟೆಯಲ್ಲಿ ವಿಜಯೇಂದ್ರ ಚುನಾವಣಾ ತಂತ್ರಗಾರಿಕೆ ರೂಪಿಸಿದರು. ಜೆಡಿಎಸ್ನ ಭದ್ರಕೋಟೆ ಎನಿಸಿದ್ದ ಆ ಕ್ಷೇತ್ರದಲ್ಲಿ ಬಿಜೆಪಿ ಗೆದ್ದು ಹೊಸ ಅಧ್ಯಾಯ ಪ್ರಾರಂಭಿಸಿತು. ಅದಾದ ಬಳಿಕ ಕೆಲ ದಿನಗಳ ಹಿಂದಿನ ಶಿರಾ ಉಪಚುನಾವಣೆ ಬಿ.ವೈ. ವಿಜಯೇಂದ್ರ ಅವರ ವರ್ಚಸ್ಸನ್ನು ಹೆಚ್ಚಿಸಿದೆ. ಇಲ್ಲಿಯೂ ಕೂಡ ಬಿಜೆಪಿ ಮೊತ್ತಮೊದಲ ಬಾರಿಗೆ ಗೆಲುವು ಸಾಧಿಸಲು ವಿಜಯೇಂದ್ರ ಅವರ ಶ್ರಮ ಕಾರಣ ಎನ್ನಲಾಗುತ್ತಿದೆ. ಇವರು ಚುನಾವಣಾ ದಿನಾಂಕ ಘೋಷಣೆ ಆಗುತ್ತಿದ್ದಂತೆಯೇ ಶಿರಾ ಕ್ಷೇತ್ರಕ್ಕೆ ಹೋಗಿ ಸಂಘಟನಾ ಕಾರ್ಯಗಳಲ್ಲಿ ಅವಿರತವಾಗಿ ತೊಡಗಿಸಿಕೊಂಡಿದ್ದರು.
ಈಗ ಮಸ್ಕಿ ಮತ್ತು ಬಸವ ಕಲ್ಯಾಣ ಕ್ಷೇತ್ರಗಳ ಉಪಚುನಾವಣೆಗಳು ನಡೆಯಬೇಕಿದೆ. ಮಸ್ಕಿ ಕ್ಷೇತ್ರದ ಸಂಭಾವ್ಯ ಬಿಜೆಪಿ ಅಭ್ಯರ್ಥಿ ಪ್ರತಾಪ್ ಗೌಡ ಪಾಟೀಲ್ ಅವರು ವಿಜಯೇಂದ್ರರ ಸಹಾಯ ಕೋರಿದ್ದಾರೆ. ಬಸವ ಕಲ್ಯಾಣದಲ್ಲೂ ಚುನಾವಣೆ ಉಸ್ತುವಾರಿ ವಹಿಸಿಕೊಳ್ಳುವಂತೆ ಬೇಡಿಕೆಗಳಿವೆ. ಈ ಎರಡೂ ಕ್ಷೇತ್ರಗಳು ಈ ಮೊದಲು ಕಾಂಗ್ರೆಸ್ ಪಾಲಾಗಿದ್ದಂಥವು. ಪ್ರತಾಪ್ ಗೌಡ ಪಾಟೀಲ್ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ ಹಿನ್ನೆಲೆಯಲ್ಲಿ ಅನರ್ಹಗೊಂಡಿದ್ದರಿಂದ ಈ ಸ್ಥಾನ ತೆರವುಗೊಂಡಿದೆ. ಬಸವ ಕಲ್ಯಾಣದಲ್ಲಿ ಕಾಂಗ್ರೆಸ್ ಶಾಸಕರಾಗಿದ್ದ ನಾರಾಯಣರಾವ್ ಅವರ ನಿಧನರಾದ ಹಿನ್ನೆಲೆಯಲ್ಲಿ ತೆರವುಗೊಂಡಿದೆ.
ವರದಿ: ಶಿವರಾಮ ಅಸುಂಡಿ / ಸಿದ್ದಪ್ಪ ಸತ್ಯಣ್ಣನವರ
ಇದಕ್ಕೂ ಮುನ್ನ ಅವರು ಕಲ್ಬುರ್ಗಿಗೆ ಭೇಟಿ ನೀಡಿದರು. ಬಿಜೆಪಿಯ ರಾಜ್ಯ ಉಪಾಧ್ಯಕ್ಷರೂ ಅದ ವಿಜಯೇಂದ್ರ ಅವರು ಇದೇ ವೇಳೆ ತಾವು ಬಸವ ಕಲ್ಯಾಣ ಕ್ಷೇತ್ರದಲ್ಲಿ ಸ್ಪರ್ಧಿಸುವ ಇಂಗಿತ ಇಲ್ಲ ಎಂದು ಸ್ಪಷ್ಟಪಡಿಸಿದರು. ಕಲಬುರ್ಗಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡುತ್ತಿದ್ದ ಅವರು, ತಾವು ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ. ಆದರೆ, ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವಿಗೆ ಏನೆಲ್ಲಾ ತಂತ್ರ ರೂಪಿಸಬೇಕೋ ಅದನ್ನು ಮಾಡುತ್ತೇನೆ ಎಂದರು.