HOME » NEWS » District » BY VIJAYENDRA ENTERED SIRA BY ELECTION TO PREPARE BJP HK

Sira By Election : ರಂಗೇರುತ್ತಿದೆ ಶಿರಾ ಉಪಚುನಾವಣೆ ; ಅಖಾಡಕ್ಕೆ ಬಿ.ವೈ. ವಿಜಯೇಂದ್ರ ಎಂಟ್ರಿ

ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇರುವುದರಿಂದ ಈ ಉಪಚುನಾವಣೆಯನ್ನ ಗಂಭೀರವಾಗಿ ಪರಿಗಣಿಸಿದ್ದು, ಕೆ.ಆರ್.ಪೇಟೆ ಮಾದರಿಯಲ್ಲೇ ಶಿರಾ ಉಪಚುನಾವಣೆಗೆ ಬಿಜೆಪಿ ಪಕ್ಷ ಸಜ್ಜಾಗಿದೆ ಎಂದು ಬಿ.ವೈ ವಿಜಯೇಂದ್ರ ಹೇಳಿದ್ದಾರೆ

news18-kannada
Updated:September 21, 2020, 7:23 PM IST
Sira By Election : ರಂಗೇರುತ್ತಿದೆ ಶಿರಾ ಉಪಚುನಾವಣೆ ; ಅಖಾಡಕ್ಕೆ ಬಿ.ವೈ. ವಿಜಯೇಂದ್ರ ಎಂಟ್ರಿ
ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ ವೈ ವಿಜಯೇಂದ್ರ
  • Share this:
ತುಮಕೂರು(ಸೆಪ್ಟೆಂಬರ್. 21): ಶಿರಾ ಶಾಸಕ ಸತ್ಯನಾರಾಯಣ್ ಸಾವಿನಿಂದ ತೆರವಾದ ಶಿರಾ ವಿಧಾನಸಭಾ ಉಪಚುನಾವಣೆಯ ಕಾವು ದಿನದಿಂದ ದಿನಕ್ಕೆ ಏರ ತೊಡಗಿದೆ. ಸದ್ದಿಲ್ಲದೇ ಮತ ಬೇಟೆ ಶುರು ಮಾಡಿರುವ ಉಭಯ ಪಕ್ಷಗಳು ತಮ್ಮದೇ ಕಾರ್ಯತಂತ್ರ ರೂಪಿಸುತ್ತಿವೆ. ಈ ನಡುವೇ ಶಿರಾ ಕ್ಷೇತ್ರದಲ್ಲಿ ಈವರೆಗೂ ಖಾತೆಯೇ ತೆರಯದ ಬಿಜೆಪಿ ಪಕ್ಷ ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ಮಾದರಿಯಲ್ಲಿ ಉಪ ಚುನಾವಣೆ ಎದುರಿಸಲು ಸಜ್ಜಾಗಿದ್ದು, ಫೀಲ್ಡಿಗಿಳಿದ ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ ವೈ ವಿಜಯೇಂದ್ರ, ಶಿರಾದಲ್ಲಿ ಕಮಲ ಅರಳಿಸುವ ಪಣತೊಟ್ಟಿದ್ದಾರೆ. ಚುನಾವಣೆ ಘೋಷಣೆಗೂ ಮುನ್ನವೇ ರಾಜ್ಯದ ಗಮನ ಸೆಳೆಯುತ್ತಿರುವ ತುಮಕೂರಿನ ಶಿರಾ ಕ್ಷೇತ್ರ ಮತ್ತಷ್ಟು ರಂಗೇರಿದೆ.ಈವರೆಗೂ ಖಾತೆಯೇ ತೆರೆಯದ ಬಿಜೆಪಿ ಪಕ್ಷ, ಈ ಬಾರಿಯ ಉಪಚುನಾವಣೆಯನ್ನ ಗಂಭೀರವಾಗಿ ಪರಿಗಣಿಸಿದಂತಿದೆ. ಶಿರಾ ಕ್ಷೇತ್ರವನ್ನ ತಮ್ಮದಾಗಿಸಿಕೊಳ್ಳಲು ಪಣತೊಟ್ಟಿರುವ ಮೂರು ಪಕ್ಷಗಳು ತಮ್ಮದೇ ಆದ ಕಾರ್ಯತಂತ್ರ ರೂಪಿಸುತ್ತಿದೆ.

ಈ ನಡುವೇ ಇಂದು ಶಿರಾಗೆ ಭೇಟಿ ನೀಡಿದ ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ ವೈ ವಿಜಯೇಂದ್ರ, ಶಿರಾ ಪಟ್ಟಣದ ಕೋಟೆ ಆಂಜನೇಯ ದೇವಾಲಯದಲ್ಲಿ ಪೂಜೆ ಸಲ್ಲಿಸುವ ಮೂಲಕ ಬೂತ್ ಮಟ್ಟದ ಪ್ರಚಾರ ಸಭೆಯಲ್ಲಿ ಭಾಗವಹಿಸಿದ್ದಾರೆ‌‌. ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇರುವುದರಿಂದ ಈ ಉಪಚುನಾವಣೆಯನ್ನ ಗಂಭೀರವಾಗಿ ಪರಿಗಣಿಸಿದ್ದು, ಕೆ.ಆರ್.ಪೇಟೆ ಮಾದರಿಯಲ್ಲೇ ಶಿರಾ ಉಪಚುನಾವಣೆಗೆ ಬಿಜೆಪಿ ಪಕ್ಷ ಸಜ್ಜಾಗಿದೆ ಎಂದು ಬಿ.ವೈ ವಿಜಯೇಂದ್ರ ಹೇಳಿದ್ದಾರೆ.

ಕೆ.ಆರ್.ಪೇಟೆಯಲ್ಲಿ ವಿಜಯ ಸಾಧಿಸಿದಂತೆ ಶಿರಾದಲ್ಲೂ ಖಾತೆ ತೆರೆಯಲ್ಲಿದ್ದು, ಮಂಡ್ಯದಲ್ಲಿ ಬಿಜೆಪಿ ಅಭ್ಯರ್ಥಿ ಗೆಲ್ಲುವುದಿಲ್ಲ ಎಂದು ವಿರೋಧ ಪಕ್ಷ ಬೊಬ್ಬೆ ಹೊಡೆದು, ನಮ್ಮನ್ನ ಲೆಕ್ಕಕೆ ತೆಗೆದುಕೊಂಡಿರಲಿಲ್ಲ. ಮುಖಂಡರು, ಕಾರ್ಯಕರ್ತರು ಎಲ್ಲಾ ಒಗ್ಗಟ್ಟಾಗಿ ಪ್ರಯತ್ನ ಮಾಡಿದ್ದೀವಿ. ಕೆ.ಆರ್.ಪೇಟೆಯಲ್ಲಿ 10 ಸಾವಿರ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದೇವೆ. ಅದೇ ರೀತಿ ಶಿರಾ ಕ್ಷೇತ್ರದಲ್ಲೂ ಗೆಲುವು ಸಾಧಿಸುತ್ತೇವೆ ಎಂದು ವಿಜಯೇಂದ್ರ ವಿಶ್ವಾಸ ವ್ಯಕ್ತಪಡಿಸಿದ್ದಾರೆ‌.

ಇನ್ನೂ ಉಪಚುನಾವಣೆಯಲ್ಲಿ ಶಿರಾದ ಮದಲೂರು ಕೆರೆಗೆ ಹೇಮಾವತಿ ನೀರು ಹರಿಸುವ ವಿಚಾರ ಮುನ್ನಲೆಗೆ ಬಂದಿದ್ದು, ಈ ಹಿಂದೆ ಮದಲೂರು ಕೆರೆಗೆ ಹೇಮಾವತಿ ಹರಿಸಬಾರದು ಅಂತಾ ಪತ್ರ ಬರೆದಿದ್ದ ಬಿಜೆಪಿ ಶಾಸಕರ ಪತ್ರ ಇದೀಗ ಸಾಕಷ್ಟು ವಿರೋಧಕ್ಕೆ ಕಾರಣವಾಗಿದೆ.

ಇದನ್ನು ಓದಿ : ವಿಧಾನಸೌಧದಲ್ಲಿ ಬಿಜೆಪಿ ಸಚಿವರು-ಶಾಸಕರ ಜಟಾಪಟಿ: ಅವರ ಪದ ಬಳಕೆ ಬೇಜಾರಾಯ್ತು ಎಂದ ನಾರಾಯಣಗೌಡ

ಈ ಕುರಿತು ಪ್ರತಿಕ್ರಿಯೆ ನೀಡಿದ ಮಾಜಿ ಶಾಸಕ ಸುರೇಶ್ ಗೌಡ, ಹೇಮಾವತಿ ನಾಲೆಯ ವ್ಯಾಪ್ತಿಗೆ ನಿಗದಿಪಡಿಸಿದ್ದ ಕೆರೆಗಳಿಗೆ ನೀರು ಹರಿಸಿ ಬಳಿಕ ಬೇರೆ ಕೆರೆಗಳಿಗೆ ಹರಿಸಿ ಎಂದು ಪತ್ರ ಬರೆದಿದ್ದೇವೆ ಹೊರತು ಮದಲೂರು ಕೆರೆಗೆ ನೀರು ಹರಿಸಬೇಡಿ ಎಂದು ನಾವು ಪತ್ರ ಬರೆದಿಲ್ಲಾ ಅಂತಾ ಹೇಳುವ ಮೂಲಕ ಡ್ಯಾಮೇಜ್ ಕಂಟ್ರೋಲ್ ಗೆ ಮುಂದಾಗಿದ್ದಾರೆ.
ಇನ್ನೂ ಅಭ್ಯರ್ಥಿಯನ್ನ ಫೈನಲ್ ಮಾಡದ ಬಿಜೆಪಿ, ಕ್ಷೇತ್ರದಲ್ಲಿ ಬೀಡು ಬಿಟ್ಟು ಪ್ರಚಾರ ಕಾರ್ಯ ನಡೆಸುತ್ತಿದೆ‌‌. ತಮ್ಮದೇ ಪಕ್ಷದ ಶಾಸಕರನ್ನ ಕಳೆದುಕೊಂಡು, ಅನುಕಂಪ ಗಿಟ್ಟಿಸಿಕೊಂಡಿರುವ ಜೆಡಿಎಸ್ ಹಾಗೂ ಕಾಂಗ್ರೆಸ್ ಅಭ್ಯರ್ಥಿ ಟಿ.ಬಿ.ಜಯಚಂದ್ರ ಅವರ ವರ್ಚಸ್ಸು, ಈ ನಡುವೇ ಆಡಳಿತ ಪಕ್ಷ ಬಿಜೆಪಿ, ಮೂರು ಪಕ್ಷಗಳು ತಮ್ಮದೇ ಕಾರ್ಯತಂತ್ರದ ಮೂಲಕ ಮತ ಬೇಟೆಗೆ ಮುಂದಾಗಿದ್ದು, ಯಾರ ಕಾರ್ಯ ತಂತ್ರ ವರ್ಕ್ ಆಗುತ್ತೆ ಎನ್ನುವುದು ಮಾತ್ರ ಕಾದು ನೊಡಬೇಕು.
Published by: G Hareeshkumar
First published: September 21, 2020, 7:19 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories