• ಹೋಂ
  • »
  • ನ್ಯೂಸ್
  • »
  • ಜಿಲ್ಲೆ
  • »
  • ಸ್ವಾತಂತ್ರ್ಯ ದಿನಾಚರಣೆ-ಗಣೇಶ ಹಬ್ಬದ ಪ್ರಯುಕ್ತ ಗ್ರಾಹಕರಿಗೆ ನಂದಿನಿ ಹಾಲು ಉತ್ಪನ್ನಗಳ ಬಂಪರ್ ಕೊಡುಗೆ

ಸ್ವಾತಂತ್ರ್ಯ ದಿನಾಚರಣೆ-ಗಣೇಶ ಹಬ್ಬದ ಪ್ರಯುಕ್ತ ಗ್ರಾಹಕರಿಗೆ ನಂದಿನಿ ಹಾಲು ಉತ್ಪನ್ನಗಳ ಬಂಪರ್ ಕೊಡುಗೆ

ಭಾರತ ಧ್ವಜ

ಭಾರತ ಧ್ವಜ

ಶ್ರೀ ಮಹಾ ಮೀರ್ ಮಂದಿರ್ ಟ್ರಸ್ಟ್‌ನ ದೇವಾಲಯವು ಅಯೋಧ್ಯೆಯ ರಾಮ ಜನ್ಮ ಭೂಮಿ ಪಕ್ಕದಲ್ಲೇ ಇದ್ದು ಈ ದೇವಾಲಯದ ಮೂಲಕ ನಂದಿನಿ ತುಪ್ಪ ಬಳಸಿ ರಘುಪತಿ ಲಡ್ಡು ಪ್ರಸಾದವನ್ನು ತಯಾರಿಸಿ ಅಯೋಧ್ಯೆಯ ಭಕ್ತಾಧಿಗಳಿಗೆ ವಿತರಿಸಲಾಗುತ್ತಿದ್ದು , ಇವರೆಗೆ 15 ಲಕ್ಷ ರಘುಪತಿ ಲಡ್ಡು ಪ್ರಸಾದವನ್ನು ವಿತರಿಸಲಾಗಿದೆ ಎಂದು ಕೆಎಂಎಪ್ ಎಂಡಿ ಸತೀಶ್ ತಿಳಿಸಿದ್ದಾರೆ.

ಮುಂದೆ ಓದಿ ...
  • Share this:

ಆನೇಕಲ್: ಕರ್ನಾಟಕ ಹಾಲು ಮಹಾಮಂಡಳಿಯು ರಾಜ್ಯದ ಎಲ್ಲಾ ವರ್ಗದ ಗ್ರಾಹಕರಿಗೆ ಕೈಗೆಟುಕುವ ದರದಲ್ಲಿ ರುಚಿ ಶುಚಿಯಾದ ಹಾಲು ಮತ್ತು ಹಾಲಿನ ಉತ್ಪನ್ನಗಳನ್ನು "ನಂದಿನಿ " ಬ್ಯಾಂಡ್ ಅಡಿಯಲ್ಲಿ ಕಳೆದ 40 ವರ್ಷಗಳಿಂದ ಒದಗಿಸುತ್ತಾ ಬರುತ್ತಿದ್ದು , ರಾಜ್ಯ ಮತ್ತು ಹೊರ ರಾಜ್ಯಗಳಲ್ಲಿ ಗ್ರಾಹಕರ ಆಯ್ಕೆಯ ನೆಚ್ಚಿನ ಬ್ಯಾಂಡ್ ಆಗಿದೆ , ಉತ್ಕೃಷ್ಟ ಗುಣಮಟ್ಟದ ಉತ್ಪನ್ನಗಳ ಜೊತೆಗೆ ಕಾಲಕಾಲಕ್ಕೆ ಗ್ರಾಹಕರಿಗೆ ವಿವಿಧ ಕೊಡುಗೆಗಳನ್ನು ಸಹ ನೀಡುತ್ತಾ ಬರುತ್ತಿದ್ದು , ಕರ್ನಾಟಕ ಜನತೆಯ ಅಚ್ಚುಮೆಚ್ಚಿನ ಬ್ರ್ಯಾಂಡ್ ಆಗಿದೆ .


ಪ್ರಸ್ತುತ , ರಾಷ್ಟ್ರೀಯ ಹಬ್ಬ ಸ್ವಾತಂತ್ರ್ಯ ದಿನಾಚರಣೆ ಮತ್ತು ಗೌರಿ - ಗಣೇಶ ಹಬ್ಬದ ಈ ಸಮಯದಲ್ಲಿ ರಾಜ್ಯದ ಗ್ರಾಹಕರಿಗೆ ಕೆಎಂಎಫ್ ವತಿಯಿಂದ ಬಂಪರ್ ಕೊಡುಗೆಗಳನ್ನು ಜಾರಿಗೊಳಿಸಿದ್ದು , ವಿವಿಧ ಯೋಜನೆಗಳಿಗೆ ಕಹಾಮ ವತಿಯಿಂದ ಚಾಲನೆ ನೀಡಲಾಯಿತು. ಹಾಲಿನ ಗುಣಮಟ್ಟ ಕಾಯ್ದುಕೊಂಡು ನಗರದ ಗ್ರಾಹಕರಿಗೆ ಸದಾ ಕಾಲ ಉತ್ತಮ ಗುಣಮಟ್ಟದ ಹಾಲು ಮತ್ತು ಉತ್ಪನ್ನಗಳನ್ನು ನಗರ ವಾಸಿಗಳಿಗೆ ಒದಗಿಸುವ ಸದುದ್ದೇಶದಿಂದ ಕೋಲಾರ ಹಾಲು ಒಕ್ಕೂಟದಿಂದ ಬೆಂಗಳೂರು ಹೊರವಲಯ ವೈಟ್ ಪೀಲ್ಡ್ ಸಮೀಪದ ಚನ್ನಸಂದ್ರದಲ್ಲಿ ಹೊಸದಾಗಿ ನಿರ್ಮಿಸಿರುವ ನಂದಿನಿ ಶೀಥಲ ಕೊಠಡಿ ಹಾಗೂ ನಂದಿನಿ ಪಾರ್ಲರ್ ನ್ನು ಕೆಎಂಎಫ್ ನಿರ್ದೇಶಕ ಸತೀಶ್ ಹಾಗೂ ಮಾಲೂರು ಶಾಸಕ ನಂಜೇಗೌಡ ಉದ್ಘಾಟಿಸಿದರು.


ಇದೇ ಸಂದರ್ಭದಲ್ಲಿ ದ್ವಿಚಕ್ರದ ನಂದಿನಿ ವೀಲ್ಸ್ ವಾಹನಕ್ಕೆ ಚಾಲನೆ ನೀಡಲಾಯಿತು. ಕೆಎಂಎಫ್ ಈ ವರ್ಷವು ಸಹ ಸ್ವಾತಂತ್ರ್ಯ ದಿನಾಚರಣೆ ಮತ್ತು ಗಣೇಶ ಹಬ್ಬದ ಸಮಯದಲ್ಲಿ ರಾಜ್ಯದ್ಯಾಂತ “ ನಂದಿನಿ ಸಿಹಿ ಉತ್ಸವ ' ಆಚರಿಸಲಾಗುತ್ತಿದ್ದು , ಎಲ್ಲಾ ಸಿಹಿ ಉತ್ಪನ್ನಗಳಾದ ಮೈಸೂರ್‌ಪಾಕ್ / ಪೇಡಾ , ಧಾರವಾಡ ) ಕೇಸರ್ / ಏಲಕ್ಕಿಪೇಡ ) ಬಾದಾಮ್ ಕ್ಯಾಶು / ಟೈಮ್ರರ್ಲ್ಡ್ / ಕೋಕೋನಟ್ / ಚಾಕೋಲೇಟ್‌ಬರ್ಫಿ / ಕುಂದ / ಜಾಮೂನ್ / ರಸಗುಲ್ಲಾ ಜೊತೆಗೆ ನೂತನ ಸಿಹಿ ಉತ್ಪನ್ನಗಳಾದ ಸಿರಿ ಧಾನ್ಯ ಲಡ್ಡು , ಸಿರಿ ಧಾನ್ಯ ಹಾಲಿನ ಪುಡಿ , ಚಕ್ಕಿ ಲಾಡು , ಶ್ರೀಖಂಡ್‌ಗಳಗಳ ಮಾರಾಟ ದರದ ಮೇಲೆ ಶೇ .10 ರಷ್ಟು ರಿಯಾಯಿತಿ ಯನ್ನು ನೇರವಾಗಿ ನೀಡಲಾಗುತ್ತದೆ . ಗ್ರಾಹಕರು ಎಲ್ಲಾ ನಂದಿನಿ ಪಾರ್ಲ‌್ರಗಳು / ಮಳಿಗೆಗಳು . ಕ್ಷೀರ ಕೇಂದ್ರಗಳು , ಸೂಪರ್ ಮಾರ್ಕೆಟ್‌ಗಳಲ್ಲಿ ಶೇ . 10 ರಿಯಾಯತಿ ದರದಲ್ಲಿ ನಂದಿನಿ ಸಿಹಿ ಉತ್ಪನ್ನಗಳನ್ನು ಪಡೆಯಬಹುದಾಗಿದೆ.


ಜೊತೆಗೆ ಅಯೋಧ್ಯೆಯಲ್ಲಿ ಶ್ರೀ ರಾಮ ಮಂದಿರ ನಿರ್ಮಾಣಕ್ಕೆ ಸನ್ಮಾನ್ಯ ಪ್ರಧಾನ ಮಂತ್ರಿಗಳು ಭೂಮಿ ಪೂಜೆ ಮಾಡಲಾಗಿದ್ದು , ಮಂದಿರ ನಿರ್ಮಾಣ ಕಾರ್ಯ ಚಾಲ್ತಿಯಲ್ಲದೆ ಹಾಗು ಈ ಸ್ಥಳದಲ್ಲಿ ಅಖಂಡ ಜ್ಯೋತಿ ಸ್ಥಾಪಿಸಲಾಗಿದ್ದು , ಈ ಜ್ಯೋತಿಗೆ ಕೆಎಂಎಫ್‌ನ ನಂದಿನಿ ತುಪ್ಪವನ್ನು ಪಾಟ್ನಾದ ಮಹಾವೀರ ಮಂದಿರ್ ಟ್ರಸ್ಟ್‌ನ ಮೂಲಕ ಅಯೋಧ್ಯೆಗೆ ನೀಡಲಾಗುತ್ತಿದೆ .


ಇದನ್ನೂ ಓದಿ : Suresh Raina; ಇಲ್ಲಿದೆ ಎಡಗೈ ಮಾಂತ್ರಿಕ ಸುರೇಶ್‌ ರೈನಾ ಅವರ ಟಾಪ್‌-05 ಇನ್ನಿಂಗ್ಸ್‌


ಇದೇ ಶ್ರೀ ಮಹಾ ಮೀರ್ ಮಂದಿರ್ ಟ್ರಸ್ಟ್‌ನ ದೇವಾಲಯವು ಅಯೋಧ್ಯೆಯ ರಾಮ ಜನ್ಮ ಭೂಮಿ ಪಕ್ಕದಲ್ಲೇ ಇದ್ದು ಈ ದೇವಾಲಯದ ಮೂಲಕ ನಂದಿನಿ ತುಪ್ಪ ಬಳಸಿ ರಘುಪತಿ ಲಡ್ಡು ಪ್ರಸಾದವನ್ನು ತಯಾರಿಸಿ ಅಯೋಧ್ಯೆಯ ಭಕ್ತಾಧಿಗಳಿಗೆ ವಿತರಿಸಲಾಗುತ್ತಿದ್ದು , ಇವರೆಗೆ 15 ಲಕ್ಷ ರಘುಪತಿ ಲಡ್ಡು ಪ್ರಸಾದವನ್ನು ವಿತರಿಸಲಾಗಿದೆ ಎಂದು ಕೆಎಂಎಪ್ ಎಂಡಿ ಸತೀಶ್ ತಿಳಿಸಿದ್ದಾರೆ.

First published: