ಚಿಕ್ಕಮಗಳೂರು: ರೈತ ಈ ದೇಶದ ಬೆನ್ನೆಲುಬು. ಆದರೆ ರೈತನ ಬೆನ್ನೆಲುಬು ರಾಸುಗಳು, ಅಂತಹ ರಾಸುಗಳಿಗಾಗೇ ಚಿಕ್ಕಮಗಳೂರು ಜಿಲ್ಲೆ ಅಜ್ಜಂಪುರದಲ್ಲಿ ಜೋಡೆತ್ತಿನ ಗಾಡಿ ಸ್ಪರ್ಧೆ (Bullock Cart Race) ಏರ್ಪಡಿಸಿದ್ದರು. ಕಾಫಿನಾಡಿನ ಬಯಲುಸೀಮೆ ಭಾಗದಲ್ಲಿ ಜೋಡೆತ್ತು ರೇಸ್ ನಡೆಯೋದು ಸಾಮಾನ್ಯ, ಆದ್ರೆ ಅಜ್ಜಂಪುರದಲ್ಲಿ ಇದೇ ಮೊದಲ ಬಾರಿಗೆ ಎತ್ತಿನಬಂಡಿಯ ಜೋಡೆತ್ತುಗಳ ರೇಸ್ ನಡೆದು ನೆರೆದಿದ್ದವರನ್ನ ಹುಚ್ಚೆದ್ದು ಕುಣಿಯುವ ಹಾಗೆ ಮಾಡಿತ್ತು. ನಿನ್ನೆಯಿಂದ ನಡೆದ ಈ ಜೋಡೆತ್ತಿನ ರೇಸ್, ರಾತ್ರಿಯೂ ಕೂಡ ಬಿಡುವಿಲ್ಲದೇ ಮುಂದುವರೆದಿತ್ತು.
ಜನರತ್ತ ನುಗ್ಗಿ ಬರೋ ಎತ್ತಿನ ಗಾಡಿಗಳಿಂದ ತಪ್ಪಿಸಿಕೊಳೋದು ಪ್ರೇಕ್ಷಕರಿಗೆ ಹರಸಾಹಸವೇ ಸರಿ. ಇನ್ನು ರೈತರು ಸ್ಪರ್ಧೆಗಾಗಿಯೇ ಎತ್ತುಗಳನ್ನ ಮೀಸಲಿಡ್ತಾರೆ. ಕೆಲ ರೈತರು ಹೊಲ ಗದ್ದೆಗಳಲ್ಲಿನ ಕೆಲಸ ಮುಗಿದ ಮೇಲೆ ಇಂತಹ ಆಟೋಟಗಳಲ್ಲಿ ತಮ್ಮ ರಾಸುಗಳನ್ನ ಓಡಿಸಿ ಖುಷಿ ಪಡ್ತಾರೆ. ಕೆಲವರು ಇಂತಹ ಸ್ಪರ್ಧೆಗಳಿಗಾಗಿಯೇ ರಾಸುಗಳನ್ನ ಸಾಕ್ತಾರೆ. ಸ್ಪರ್ಧೆಯ ಹದಿನೈದು ದಿನ ಮುಂಚಿತವಾಗಿಯೇ ಎತ್ತುಗಳಿಗೆ ವಿಶೇಷ ತರಬೇತಿ ಜೊತೆ ತಯಾರಿಯನ್ನೂ ಮಾಡ್ತಾರೆ. ಪ್ರತಿ ದಿನ ವಾಕ್ ಮಾಡಿಸುತ್ತಾರೆ. ದಿನಕ್ಕೆರಡು ಬಾರಿ ಈಜು ಹೊಡೆಸುತ್ತಾರೆ. ಇಂಡಿ, ಬೂಸಾ, ಹಸಿ ಹುಲ್ಲು, ರಾಗಿ ಹುಲ್ಲು, ಮೆಕ್ಕೆಜೋಳದ ಜೊತೆ ಮೊಟ್ಟೆ ಹಾಗೂ ಮೆಂತೆ ಮುದ್ದೆಯನ್ನೂ ನೀಡ್ತಾರೆ. ಸ್ಪರ್ಧೆಯಲ್ಲಿ ಪ್ರಶಸ್ತಿ ಗೆಲ್ಲೊದ್ಕಿಂತ ಭಾಗವಹಿಸೋದೆ ರೈತರಿಗೆ ಸಂತಸ. ಬಯಲುಸೀಮೆಯಲ್ಲಿ ಅಪರೂಪವೆನಿಸಿದ್ದ ಈ ಜೋಡೆತ್ತಿನ ಗಾಡಿ ಸ್ಪರ್ಧೆಯನ್ನ ಸಾವಿರಾರು ಮಂದಿ ವೀಕ್ಷಿಸಿದರು.
ಈ ಸ್ಪರ್ಧೆಗೆ ಹಾಸನ, ಮೈಸೂರು, ಹಾವೇರಿ, ತುಮಕೂರು, ಮಂಡ್ಯ, ಶಿವಮೊಗ್ಗ ಸೇರಿದಂತೆ ರಾಜ್ಯದ ನಾನಾ ಭಾಗದಿಂದ 70ಕ್ಕೂ ಅಧಿಕ ಜೋಡೆತ್ತುಗಳು ಆಗಮಿಸಿದ್ವು. ಸ್ಪರ್ಧಾಳುಗಳು ಕೂಡ ಕೋಟಿ ಕಾರಿಗೂ ನಮ್ಮ ಎತ್ತಿನ ಕಾಲುಗಳು ಸವಾಲು ಹಾಕುತ್ವೆ. ಕೋಟಿ ಕಾರು ಕೂಡ ನಮ್ಮ ರಾಸುಗಳ ಮುಂದೆ ಓಡಲ್ಲ ಎಂದು ರೈತರು ತಮ್ಮ ರಾಸುಗಳ ಬಗ್ಗೆ ಹೆಮ್ಮೆಯಿಂದ ಮಾತನಾಡಿದರು. ಸ್ಪರ್ಧೆ ಯಲ್ಲಿ ಮೊದಲ ಬಹುಮಾನ ಪಡೆದ ಪುನೀತ್ ಮಾತಾನಾಡಿ ತುಂಬಾ ಖುಷಿಯಾಗ್ತಿದೆ, ಮೊನ್ನೆ ಮಹಾರಾಷ್ಟ್ರ ದಿಂದ ರಾಸು ತಂದಿದೆ. ಇವತ್ತು ಮೊದಲ ಬಹುಮಾನ ಬಂದಿದ್ದು ಖುಷಿ ತಂದಿದೆ ಎಂದರು.
ಸಾಮಾನ್ಯವಾಗಿ ಕಾಫಿನಾಡಿನಲ್ಲಿ ಜನವರಿಯಿಂದ ಮಾರ್ಚ್- ಏಪ್ರಿಲ್ ಮೇವರೆಗೆ ಜೋಡೆತ್ತಿನ ಸ್ಪರ್ಧೆಗಳು ನಡೆಯುತ್ತೆ. ಆದ್ರೆ ಎತ್ತಿನಬಂಡಿ ರೇಸ್ ನಡೆಸೋಕೆ ಇಂತಹದ್ಧೆ ಸಮಯ ಬೇಡ. ರಾಸುಗಳ ಜೊತೆ ನಮಗೆ ಮನರಂಜನೆ ಬೇಕು ಅಂದ್ರೆ ಯಾವಾಗ ಬೇಕಾದ್ರೂ ಸ್ಪರ್ಧೆ ಆಯೋಜಿಸಬಹುದು ಅಂತಾ ಅಜ್ಜಂಪುರದ ರೈತರು ತೋರಿಸಿದ್ದಾರೆ. ಒಟ್ಟಾರೆ, ಆಧುನಿಕತೆಯ ಭರಾಟೆಯಲ್ಲಿ ಗ್ರಾಮೀಣ ಕ್ರೀಡೆಗಳು ನಶಿಸ್ತಿರೋ ಇತ್ತೀಚಿನ ದಿನಗಳಲ್ಲಿ ಜೋಡಿಎತ್ತಿನ ಗಾಡಿ ಸ್ಪರ್ಧೆ ಜನಮನ ಸೆಳೆದಿದೆ. ಇಂತಹ ಕಾರ್ಯಕ್ರಮಗಳ ನೆನಪದಲ್ಲಾದರೂ ಗ್ರಾಮೀಣ ಕ್ರೀಡೆಗಳು ಉಳಿಯಲಿ, ಬೆಳೆಯಲಿ ಅನ್ನೋದು ನಮ್ಮ ಆಶಯ.
ಇದನ್ನು ಓದಿ: Mekedatu Project: ಮೇಕೆದಾಟು ಯೋಜನೆಗೆ ಒತ್ತಾಯಿಸಿ ಕನ್ನಡ, ರೈತಪರ ಸಂಘಟನೆಗಳಿಂದ ಪಾದಯಾತ್ರೆ; ಸಂಸದ ಡಿ.ಕೆ.ಸುರೇಶ್ ಬೆಂಬಲ
ನ್ಯೂಸ್18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್ ಕೇಸ್ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್ ನಿಯಮಗಳಾದ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ಅನಗತ್ಯವಾಗಿ ಯಾರೂ ಮನೆಯಿಂದ ಹೊರಗೆ ಬಾರದೆ ಅಗತ್ಯ ಮುನ್ನೆಚ್ಚರಿಕೆ ವಹಿಸಬೇಕಿದೆ. ಹಾಗೂ ಗುಂಪುಗೂಡುವುದನ್ನು ಆದಷ್ಟು ನಿಯಂತ್ರಿಸಬೇಕಿದೆ. ಸರ್ಕಾರ ಕಾಲಕಾಲಕ್ಕೆ ಹೊರಡಿಸುತ್ತಿರುವ ಕೊರೋನಾ ಮಾರ್ಗಸೂಚಿಗಳನ್ನು ಪ್ರತಿಯೊಬ್ಬರೂ ಕಡ್ಡಾಯವಾಗಿ ಪಾಲಿಸಬೇಕಿದೆ.
ವರದಿ: ವೀರೇಶ್ ಹೆಚ್ ಜಿ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ