ಅಭಿಮಾನಿಗಳ ಜೊತೆ ನಕ್ಷತ್ರ ಫೋಟೋಶೂಟ್; ಕೇಕ್ ಕತ್ತರಿಸಿ ಹುಟ್ಟುಹಬ್ಬ ಆಚರಣೆ

ಹಾವೇರಿ ಮೊದಲಾದೆಡೆ ಹೋರಿ ಓಡಿಸುವ ಸ್ಪರ್ಧೆ ಬಹಳ ಜನಪ್ರಿಯ. ಇದಕ್ಕಾಗಿ ಅಣಿಗೊಂಡಿರುವ ನಕ್ಷತ್ರ ಎಂಬ ಹೋರಿಯೊಂದರ ಹುಟ್ಟುಹಬ್ಬ ಆಚರಣೆ ಭರ್ಜರಿಯಾಗಿ ಆಚರಿಸಲಾಯಿತು.

ನಕ್ಷತ್ರ ಹೋರಿಯ ಹುಟ್ಟುಹಬ್ಬ

ನಕ್ಷತ್ರ ಹೋರಿಯ ಹುಟ್ಟುಹಬ್ಬ

 • Share this:
  ಹಾವೇರಿ: ನಗರದ ಮಹೇಶ ಸತ್ಯಪ್ಪನವರ ಅನ್ನೋ ಯುವಕನದ್ದು ಕೃಷಿ ಕುಟುಂಬ. ಎತ್ತುಗಳು ಅಂದ್ರೆ ಮಹೇಶಗೆ ಎಲ್ಲಿಲ್ಲದ ಪ್ರೀತಿ. ಅದ್ರಲ್ಲೂ ಇತ್ತೀಚಿನ ದಿನಗಳಲ್ಲಿ ಹೋರಿ ಓಡಿಸೋ ಹಬ್ಬ ಅಂದ್ರೆ ಎಲ್ಲಿಲ್ಲದ ಖುಷಿ. ಈಗಾಗಲೇ ಮನೆಯಲ್ಲಿ ರಾಜಕುಮಾರ ಹೆಸರಿನ ಒಂದು ಹೋರಿಯನ್ನ ಕೊಬ್ಬರಿ ಹೋರಿ ಓಡಿಸೋ ಸ್ಪರ್ಧೆಗಳಲ್ಲಿ ಓಡಿಸಲಾಗುತ್ತೆ. ಅದರ ಜೊತೆಗೆ ಈಗ ನಕ್ಷತ್ರ ಅನ್ನೋ ಹೆಸರಿನ ಹೋರಿ ತಯಾರಾಗ್ತಿದೆ. ಕಳೆದ ಒಂದು ವರ್ಷದ ಹಿಂದೆ ಎಂಬತ್ತು ಸಾವಿರ ರುಪಾಯಿ ಕೊಟ್ಟು ತಂದಿರುವ ನಕ್ಷತ್ರ ಹೆಸರಿನ ಹೋರಿಯನ್ನ ಇನ್ಮುಂದೆ ನಡೆಯೋ ಹೋರಿ ಓಡಿಸೋ ಸ್ಪರ್ಧೆಗಳಿಗೆ ಬಿಡಲು ತಯಾರಿ ಮಾಡಿಕೊಳ್ಳಲಾಗಿದೆ. ಮೇಲಾಗಿ ನಕ್ಷತ್ರ ಹೆಸರಿನ ಹೋರಿ ಖರೀದಿಸಿ ಇಂದಿಗೆ ಬರೋಬ್ಬರಿ ಒಂದು ವರ್ಷವಾಗಿದೆ. ಹೀಗಾಗಿ ಹೋರಿಗೆ ಒಂದನೆ ವರ್ಷದ ಬರ್ತ್ ಡೇ ಆಚರಿಸಲಾಯ್ತು.

  ನಕ್ಷತ್ರ ಹೋರಿಗೆ ಆಕಾಶದೆತ್ತರಕ್ಕೆ ಬಲೂನ್ ಗಳನ್ನ ಕಟ್ಟಿ, ಮೈಮೇಲೆ ಜೂಲಾ ಹಾಕಿ, ಕೋಡಿಗೆ ಭರ್ಜರಿ ಅಲಂಕಾರ ಮಾಡಲಾಗಿತ್ತು. ಏಳು ಕೆ.ಜಿ ತೂಕದ ಕೇಕ್ ತಯಾರಿಸಿ ತರಲಾಗಿತ್ತು. ಹೋರಿ ಮಾಲೀಕ ಮಹೇಶನ ಮನೆಯ ಮುಂದೆ ಹೋರಿಯ ಅಭಿಮಾನಿಗಳು ಸೇರ್ಕೊಂಡು ಹೋರಿಗೆ ಬರ್ತ್ ಡೇ ಸೆಲೆಬ್ರೇಟ್ ಮಾಡಿದ್ರು. ಕೇಕ್ ಕತ್ತರಿಸಿ ಹೋರಿಗೆ ತಿನ್ನಿಸಿ, ತಾವೂ ಕೇಕ್ ತಿಂದು ಕೇಕೆ, ಸಿಳ್ಳೆಗಳ ಮೂಲಕ ನಕ್ಷತ್ರ ಹೋರಿಗೆ ಹುಟ್ಟುಹಬ್ಬದ ಶುಭಾಶಯಗಳನ್ನ ಹೇಳಿದ್ರು. ಹೋರಿಯ ಮನೆಯ ಹೆಣ್ಣು ಮಕ್ಕಳು ಹೋರಿಗೆ ಆರತಿ ಬೆಳಗಿ, ಹೋರಿಗೆ ಬರ್ತ್ ಡೇ ವಿಶ್ ಮಾಡಿದ್ರು.

  ಬರ್ತ್ ಡೇ ಆಚರಣೆಗೂ ಮುಂಚಿತವಾಗಿ ನಗರದ ಮುನ್ಸಿಪಲ್‌ ಹೈಸ್ಕೂಲ್ ಮೈದಾನದಲ್ಲಿ ನಕ್ಷತ್ರ ಹೋರಿಗೆ ಫೋಟೋ ಶೂಟ್ ನಡೆಸಲಾಯ್ತು. ಎರಡು ಕ್ಯಾಮರಾಗಳಲ್ಲಿ ಇಬ್ಬರು ಫೋಟೋಗ್ರಾಫರ್ ಗಳು ಬರ್ತ್ ಡೇ ಸಂಭ್ರಮಕ್ಕಾಗಿ ಅಲಂಕಾರಗೊಂಡಿದ್ದ ಹೋರಿಯ ಫೋಟೋಗಳನ್ನ ಕ್ಯಾಮರಾದಲ್ಲಿ ಸೆರೆಹಿಡಿದ್ರು. ಹೋರಿಯೂ ಛಾಯಾಗ್ರಾಹಕರ ಕ್ಯಾಮರಾ ಕಣ್ಣಿಗೆ ತಕ್ಕಂತೆ ಕ್ಯಾಮರಾಗೆ ಪೋಜು ಕೊಟ್ಟಿತು. ಹೋರಿಯ ಫೋಟೋ ಶೂಟ್ ಮತ್ತು ಬರ್ತ್ ಡೇ ಸಂಭ್ರಮ ಹೋರಿ ಮನೆಯವರಿಗೆ ಮಾತ್ರವಲ್ಲ ನಕ್ಷತ್ರ ಹೋರಿಯ ಅಭಿಮಾನಿಗಳಲ್ಲಿ ಎಲ್ಲಿಲ್ಲದ ಸಂತಸ ಮೂಡಿಸಿತ್ತು.

  ಇದನ್ನೂ ಓದಿ: ಸಿ.ಟಿ.ರವಿ ಶೀಘ್ರ ಸಂಪುಟ ಸಚಿವರಾಗಿ, ನನ್ನ ನಾಲಿಗೆಯಲ್ಲಿ ಉಲ್ಟಾ ಮಚ್ಚೆ ಇದೆ ಎಂಬ ಅವರ ನಂಬಿಕೆ ನಿಜವಾಗಲಿ; ಸಿದ್ದರಾಮಯ್ಯ

  ಈಗಾಗಲೇ ಒಂದೆರಡು ಹೋರಿ ಓಡಿಸೋ ಸ್ಪರ್ಧೆಗಳಲ್ಲಿ ನಕ್ಷತ್ರ ಹೋರಿಯನ್ನ ಸಾಂಕೇತಿಕವಾಗಿ ಓಡಿಸಲಾಗಿದೆ. ಇನ್ಮುಂದೆ ನಡೆಯೋ ಹೋರಿ ಓಡಿಸೋ ಸ್ಪರ್ಧೆಗಳಿಗೆ ನಕ್ಷತ್ರ ಹೆಸರಿನ ಹೋರಿಯನ್ನ ಬಿಡಲಾಗುತ್ತದೆ. ಹೋರಿ ಓಡಿಸೋ ಸ್ಪರ್ಧೆಯಲ್ಲಿ ಓಡೋ ಬಗ್ಗೆ ಈಗಾಗಲೆ ಹೋರಿಗೆ ತರಬೇತಿ ನೀಡಿರೋ ಹೋರಿ ಮಾಲೀಕ ಮತ್ತು ಹೋರಿ ಅಭಿಮಾನಿಗಳು ನೆಚ್ಚಿನ ಹೋರಿಗೆ ಬರ್ತ್ ಡೇ ಸೆಲೆಬ್ರೇಟ್ ಮಾಡಿ, ಫೋಟೋ ಶೂಟ್ ನಡೆಸಿ ಸಂಭ್ರಮಿಸಿದ್ರು. ಒಟ್ನಲ್ಲಿ ಮನುಷ್ಯರಿಗಿಂತ ಕಮ್ಮಿ ಇಲ್ಲ ಅನ್ನೋ ಹಾಗೆ ಹೋರಿ ಮನೆಯವರು ಮತ್ತು ಹೋರಿ ಅಭಿಮಾನಿಗಳು ಹಾವೇರಿ ನಕ್ಷತ್ರ ಹೆಸರಿನ ಹೋರಿಗೆ ಬರ್ತ್ ಡೇ ಆಚರಿಸಿ, ಫೋಟೋ ಶೂಟ್ ಮಾಡಿ ಖುಷಿ ಅನುಭವಿಸಿದ್ರು.

  (ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರೂ ಕೈ ಜೋಡಿಸಬೇಕು.)

  ವರದಿ: ಮಂಜುನಾಥ್ ತಳವಾರ
  Published by:Vijayasarthy SN
  First published: