HOME » NEWS » District » BUILD ROAD HUMPS WHERE RUN CRUSHER TRUCKS SAYS CC PATIL RHHSN ATVR

ಕ್ರಷರ್ ಲಾರಿಗಳು ಸಂಚರಿಸುವ ಮಾರ್ಗದಲ್ಲಿ ರಸ್ತೆ ಉಬ್ಬುಗಳನ್ನು ನಿರ್ಮಿಸಿ: ಸಿ.ಸಿ.ಪಾಟೀಲ್ ಸೂಚನೆ

ಈ ಭಾಗದಲ್ಲಿ ಕ್ರಷರ್ ಗಳನ್ನು ನಡೆಸುವ ಭರದಲ್ಲಿ ಸರ್ಕಾರಿ ಭೂಮಿಗಳ ಜೊತೆಗೆ ರೈತರ ಬೇಸಾಯದ ಭೂಮಿಗಳು ಒತ್ತುವರಿಯಾಗುತ್ತಿವೆ. ಹಾಗಾಗಿ ರಾಜ್ಯ ಸರ್ಕಾರ ಈ ಬಗ್ಗೆ ಗಮನಹರಿಸಿ ಸೂಕ್ತ ಕ್ರಮವಹಿಸಬೇಕೆಂದು ಜಿಲ್ಲೆಯ ಜನರು ನ್ಯೂಸ್ 18 ಮೂಲಕ ಆಗ್ರಹಿಸಿದ್ದಾರೆ.

news18-kannada
Updated:January 1, 2021, 7:35 PM IST
ಕ್ರಷರ್ ಲಾರಿಗಳು ಸಂಚರಿಸುವ ಮಾರ್ಗದಲ್ಲಿ ರಸ್ತೆ ಉಬ್ಬುಗಳನ್ನು ನಿರ್ಮಿಸಿ: ಸಿ.ಸಿ.ಪಾಟೀಲ್ ಸೂಚನೆ
ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಭೆ ನಡೆಸಿದ ಸಚಿವ ಸಿಸಿ ಪಾಟೀಲ.
  • Share this:
ರಾಮನಗರ: ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಗಣಿಗಾರಿಕೆ ಹಾಗೂ ಕ್ರಷರ್ ಗಳ ಬಗ್ಗೆ ಸಭೆ ನಡೆಸಿ ಪರಿಶೀಲನೆ ನಡೆಸಲಾಗುವುದು. ಅಕ್ರಮ ಗಣಿಗಾರಿಕೆ ಕಂಡುಬಂದಲ್ಲಿ ನಿಯಮಾನುಸಾರ ದಂಡ ವಿಧಿಸಲಾಗುವುದು ಎಂದು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಸಚಿವ ಸಿ.ಸಿ. ಪಾಟೀಲ್ ಹೇಳಿದರು. ಅಧಿಕಾರಿಗಳೊಂದಿಗೆ ಬಿಡದಿಯ ಉರುಗಹಳ್ಳಿ ಗಣಿಗಾರಿಕೆ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಪರಿಶೀಲನೆಯ ನಂತರ ಮಾಧ್ಯಮದವರ ಜೊತೆಗೆ ಮಾತನಾಡಿದರು.

ಗಣಿಗಾರಿಕೆ ಸುತ್ತಮುತ್ತಲಿನ ಗ್ರಾಮಗಳು ಹಾಗೂ ರಸ್ತೆಯನ್ನು ಡಿ.ಎಂ.ಎ ಫಂಡ್ ಮೂಲಕ ಅಭಿವೃದ್ಧಿಗೊಳಿಸಲಾಗುವುದು. ಜಿಲ್ಲೆಯ ಗಣಿಗಾರಿಕೆ ಸುತ್ತಮುತ್ತಲಿನ ಪ್ರದೇಶದ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲಾಗುವುದು. ಗಣಿಗಾರಿಕೆ ವಸ್ತುಗಳ ಓವರ್ ಲೋಡಿಂಗ್ ಪರಿಶೀಲಿಸಲು ಚೆಕ್ ಪೋಸ್ಟ್‌ ಗಳನ್ನು ಬಲವರ್ಧನೆಗೊಳಿಸಲಾಗುವುದು. ಹೆಗ್ಗಡಗೆರೆ ಬಳಿ ಇರುವ ಚೆಕ್ ಪೋಸ್ಟ್‌ ಇನ್ನೂ ಮುಂದೆ ದಿನದ 24 ಗಂಟೆಯೂ ಕಾರ್ಯನಿರ್ವಹಿಸಲಿದೆ ಎಂದರು.

ನಂತರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಜಿಲ್ಲಾಧಿಕಾರಿ ಹಾಗೂ ಇಲಾಖೆಯ ಅಧಿಕಾರಿಗಳ ಜೊತೆಗೆ ಸಭೆ ನಡೆಸಿದ ಸಿ.ಸಿ.ಪಾಟೀಲ್ ಜಿಲ್ಲೆಯಲ್ಲಿರುವ ಗಣಿಗಾರಿಕೆಯ ಬಗ್ಗೆ ಸಂಪೂರ್ಣ ಮಾಹಿತಿ ಪಡೆದರು. ಈ ಸಂದರ್ಭದಲ್ಲಿ ಮಾತನಾಡಿದ ಸಿ.ಸಿ.ಪಾಟೀಲ್ ಜಿಲ್ಲೆಯಲ್ಲಿ ಅಕ್ರಮವಾಗಿ ಗಣಿಗಾರಿಕೆ ನಡೆಯುತ್ತಿದ್ದರೆ ಅಂತಹ ಗಣಿಗಾರಿಕೆಗಳಿಗೆ ನೋಟಿಸ್ ನೀಡಿ ದಂಡ ವಸೂಲಾತಿ ಮಾಡಲು ಜಿಲ್ಲಾಧಿಕಾರಿಗೆ ಸೂಚನೆ ನೀಡಿದರು.

ಇನ್ನು ಗಣಿಗಾರಿಕೆ ನಡೆಯುತ್ತಿರುವ ಸುತ್ತಮುತ್ತಲ ವಾತಾವರಣ ಕೆಡುತ್ತಿರುವ ವಿಚಾರವಾಗಿ ಮಾತನಾಡಿ ಕ್ರಷರ್ ನಡೆಸುವವರು ಎಲ್ಲಾ ರೀತಿಯ ಸುರಕ್ಷಿತ ಕ್ರಮಗಳನ್ನು ಕೈಗೊಳ್ಳಲು ಸೂಚನೆ ನೀಡಿದರು. ಕ್ರಷರ್ ಗಳಿಂದ ಪರಿಸರ ಹಾಳಾಗಬಾರದೆಂದು ತಿಳಿಸಿದರು. ಇನ್ನು ಕ್ರಷರ್ ಲಾರಿಗಳು ಓಡಾಡುವ ಹಳ್ಳಿ ರಸ್ತೆಗಳಲ್ಲಿ ಅಪಘಾತಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಕಡ್ಡಾಯವಾಗಿ ರಸ್ತೆ ಉಬ್ಬುಗಳನ್ನು ಹಾಕಲು ಸಂಬಂಧಪಟ್ಟ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳಿಗೆ ಸಭೆಯಲ್ಲಿ ಸೂಚನೆ ನೀಡಿದರು. ಇನ್ನು ಕ್ರಷರ್ ಲಾರಿಗಳು ಹೆಚ್ಚಿನ ತೂಕ ಹಾಕಿಕೊಂಡು ಹೋಗುವ ಹಿನ್ನೆಲೆ ರಸ್ತೆಗಳು ಹಾಳಾಗುತ್ತಿವೆ. ಹಾಗಾಗಿ ಈ ಬಗ್ಗೆ ಕ್ರಮ ವಹಿಸಿ ಎಂದು ಜಿಲ್ಲಾಧಿಕಾರಿ ಎಂ.ಎಸ್.ಅರ್ಚನಾಗೆ ಸೂಚಿಸಿದರು.

ಇದನ್ನು ಓದಿ: ಪಂಚಾಯ್ತಿ ಫೈಟಲ್ಲಿ ಸೋತು-ಗೆದ್ದವರ ಮಧ್ಯೆ ಮಾರಾಮಾರಿ; ಕೇಕ್ ಕತ್ತರಿಸುವ ವಿಚಾರಕ್ಕೆ ಗಲಾಟೆ

ಬಿಡದಿ ಭಾಗದಲ್ಲಿ ಕ್ರಷರ್ ಗಳಿಂದ ಜನರಿಗೆ ಭಾರೀ ಕಷ್ಟ-ನಷ್ಟ

ರಾಮನಗರ ಜಿಲ್ಲೆಯ ಬಿಡದಿ ಭಾಗದಲ್ಲಿ ಕ್ರಷರ್ ಗಳಿಂದ ಈ ಭಾಗದ ಜನರಿಗೆ, ರೈತರಿಗೆ ಸಾಕಷ್ಟು ಅನಾನುಕೂಲಗಳು ಆಗುತ್ತಿವೆ. ಕ್ರಷರ್ ಗಳಿಂದ ಬರುತ್ತಿರುವ ಧೂಳಿಂದ ಸುತ್ತಲಿನ ಪರಿಸರ ಸಂಪೂರ್ಣ ಹಾಳಾಗುತ್ತಿದೆ. ಜೊತೆಗೆ ಜಾನುವಾರುಗಳು ಕುಡಿಯುವ ನೀರು ಕಲುಷಿತವಾಗುತ್ತಿದ್ದು ದನಕರುಗಳು ಸಾವನ್ನಪ್ಪುತ್ತಿವೆ. ಈ ಬಗ್ಗೆ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳಿಗೆ ಎಷ್ಟೇ ದೂರು ನೀಡಿದರೂ ಸಹ ಈವರೆಗೆ ಯಾವುದೇ ಪ್ರಯೋಜನವಾಗಿಲ್ಲ. ಹಾಗಾಗಿ ಸಿ.ಸಿ.ಪಾಟೀಲ್ ರವರು ಈ ಬಗ್ಗೆ ಗಮನಹರಿಸಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ಇನ್ನು ಈ ಭಾಗದಲ್ಲಿ ಕ್ರಷರ್ ಗಳನ್ನು ನಡೆಸುವ ಭರದಲ್ಲಿ ಸರ್ಕಾರಿ ಭೂಮಿಗಳ ಜೊತೆಗೆ ರೈತರ ಬೇಸಾಯದ ಭೂಮಿಗಳು ಒತ್ತುವರಿಯಾಗುತ್ತಿವೆ. ಹಾಗಾಗಿ ರಾಜ್ಯ ಸರ್ಕಾರ ಈ ಬಗ್ಗೆ ಗಮನಹರಿಸಿ ಸೂಕ್ತ ಕ್ರಮವಹಿಸಬೇಕೆಂದು ಜಿಲ್ಲೆಯ ಜನರು ನ್ಯೂಸ್ 18 ಮೂಲಕ ಆಗ್ರಹಿಸಿದ್ದಾರೆ.

ವರದಿ : ಎ.ಟಿ.ವೆಂಕಟೇಶ್ 
Published by: HR Ramesh
First published: January 1, 2021, 7:35 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories