ಹಾವೇರಿ(ಸೆಪ್ಟೆಂಬರ್.29): ರಾಜ್ಯದಲ್ಲಿ ಯಾವುದೇ ಕಾರಣಕ್ಕೂ ಮುಖ್ಯಮಂತ್ರಿ ಬದಲಾವಣೆ ಇಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಸ್ಪಷ್ಟಪಡಿಸಿದರು. ಸಿಎಂ ಬದಲಾವಣೆ ವಿಚಾರಕ್ಕೆ ಮಾಲ್ಕು ತಿಂಗಳ ಹಿಂದೆ ಸಭೆಯಾಗಿತ್ತು, ಸುರೇಶ್ ಅಂಗಡಿ ಅವರನ್ನೆ ಮುಖ್ಯಮಂತ್ರಿ ಮಾಡುವ ಹಿನ್ನೆಲೆ ಎಂದು ಸುರೇಶ ಅಂಗಡಿಯವರ ಸೋದರ ಮಾವ ಲಿಂಗರಾಜ ಹೇಳಿಕೆ ನೀಡಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ಅವರು, ಈ ಬಗ್ಗೆ ಎಲ್ಲೂ ಚರ್ಚೆಯಾಗಿಲ್ಲಾ, ಎಲ್ಲಿಯೂ ಮಾತುಕತೆಯಾಗಿಲ್ಲಾ, ಮುಂದಿನ ಮೂರುವರ್ಷ ಬಿಎಸ್ ವೈ ಮುಖ್ಯಮಂತ್ರಿಯಾಗಿ ಮುಂದುವರೆಯುತ್ತಾರೆ. ಸಚಿವ ಸಂಪುಟ ವಿಸ್ತರಣೆ ಮುಖ್ಯಮಂತ್ರಿಗಳ ವಿವೇಚನೆ ಬಿಟ್ಡಿದ್ದು, ಸುರೇಶ್ ಅಂಗಡಿಯವರು ನನಗೆ ಬಹಳ ಆತ್ಮೀಯರು, ಅವರು ಎಂದು ನನ್ನ ಹತ್ತಿರ ಹೇಳಿಲ್ಲ ಎಂದರು. ಇನ್ನೂ ಕೇಂದ್ರ ಮತ್ತು ರಾಜ್ಯ ಸರಕಾರದ ರೈತ ಪರವಾದ ಕಾಯ್ದೆ, ಅದರ ವಿರುದ್ಧ ಕಾಂಗ್ರೆಸ್ ರಾಜಕಾರಣ ಮಾಡಿದೆ. ರೈತರನ್ನು ಎತ್ತಿ ಕಟ್ಟುವ ಕೆಲಸ ಮಾಡಿದೆ ಎಂದು ತಿಳಿಸಿದರು.
ರೈತ ತನ್ನ ಬೆಳೆಗಳ ಮಾರುಕಟ್ಟೆಯ ಧಾರಣೆಯನ್ನು ತಾನೇ ಮಾಡಬೇಕು. ಈ ನಿಟ್ಟಿನಲ್ಲಿ ಕೇಂದ್ರ ಸರಕಾರ ಎಪಿಎಂಸಿ ಕಾಯ್ದೆ ತಿದ್ದುಪಡಿ ತಂದಿದೆ. ಈ ಕಾಯ್ದೆಯಿಂದ ಬಿಜೆಪಿಗೆ ಲಾಭವಾಗುತ್ತದೆ ಎಂದು ವಿರೋಧಿಸುತ್ತಿದ್ದಾರೆ. ದಲ್ಲಾಳಿಗಳ ಪರವಾಗಿ ಕಾಂಗ್ರೆಸ್ ಬ್ಯಾಟಿಂಗ್ ಮಾಡುತ್ತಿದೆ. ರೈತರ ದಲ್ಲಾಳಿಗಳ ತುಳಿತಕ್ಕೆ ಒಳಗಾಗಿದ್ದಾರೆ. ಇವತ್ತಿನಿಂದ ಅದು ಪರಿವರ್ತನೆಯಾಗಿದೆ. ಮುಂದೆ ರೈತನ ತೀರ್ಮಾನವೇ ಅಂತಿಮ ತೀರ್ಮಾನವಾಗುತ್ತದೆ. ದಲ್ಲಾಳಿಗಳು ರೈತ ಮನೆ ಬಾಗಿಲಿಗೆ ಬರುತ್ತಾರೆ. ರೈತ ವಿರೋಧಿಯಾಗಿ ಕಾಂಗ್ರೆಸ್ ತೀರ್ಮಾನ ಮಾಡಿದೆ ಎಂದರು.
ನಿನ್ನೆಯ ಬಂದ್ ಗೆ ಬೆಂಬಲ ಸೂಚಿಸಿ ಕಿಚ್ಚು ಹಚ್ಚುವ ಪ್ರಯತ್ನ ಮಾಡಿದ್ದಾರೆ. ಬಂದ್ ವಿಫಲವಾಗಿದೆ. ರಾಜ್ಯದ ಜನರು ಕೇಂದ್ರ, ರಾಜ್ಯ ಸರಕಾರದ ಪರವಾಗಿ ನಿಂತಿದ್ದಾರೆ. ಕಾಂಗ್ರೆಸ್ ರೈತ ವಿರೋಧಿಯಾಗಿದೆ. ಅಧಿಕಾರ ಕಳೆದುಕೊಂಡಾಗ
ಬೆಂಕಿ ಹಚ್ಚುವ ಕೆಲಸ ಕಾಂಗ್ರೆಸ್ ಹಿಂದೆಯು ಮಾಡಿದೆ. ಮುಂದೆಯು ಮಾಡುತ್ತದೆ ಎಂದು ಕಿಡಿಕಾರಿದರು.
ಎಪಿಎಂಸಿ ಕಾಯ್ದೆ ಮಸೂದೆ ರೈತರ ಪರವಾಗಿದೆ : ಬಿ ಸಿ ಪಾಟೀಲ್
ಇನ್ನೂ ಎಪಿಎಂಸಿ ಹಾಗೂ ಭೂ ಸುಧಾರಣೆ ಕಾಯ್ದೆ ತಿದ್ದುಪಡಿ ವಿರೋಧಕ್ಕೆ ಪ್ರತಿಕ್ರಿಯೆ ನೀಡಿದ ಕೃಷಿ ಸಚಿವ ಬಿ ಸಿ ಪಾಟೀಲ್, ರಾಜ್ಯದ ಭೌಗೂಳಿಕ ವಿಸ್ತರಣೆ 190 ಲಕ್ಷ ಹೆಕ್ಟರ್ ಇದೆ. ಕೃಷಿಗೆ ಯೋಗ್ಯ ಭೂಮಿ 118 ಲಕ್ಷ ಹೆಕ್ಟೇರ್ ಬಂಜರು ಭೂಮಿ, ಏಳು ಲಕ್ಷದ ಆರವತ್ತೊಂಬ್ಬತು ಸಾವಿರ ಹೆಕ್ಟೇರ್. ಕೃಷಿ ಮಾಡಬಹುದಾದ ತಾಜ್ಯ ಭೂಮಿ 4.03 ಹೆಕ್ಟೇರ್ ಇದೆ.
ಇದನ್ನೂ ಓದಿ :
ಪೋಷಕರಲ್ಲಿ ಭಯ ಇದೆ; ಪ್ರಾಯೋಗಿಕವಾಗಿ ಶಾಲೆ ಆರಂಭಿಸಲಿ: ಸಚಿವ ಜಗದೀಶ್ ಶೆಟ್ಟರ್
ಈವರೆಗೆ ರೈತರು ಮಾತ್ರ ಭೂಮಿ ಖರೀದಿ ಮಾಡಬೇಕು ಎನ್ನುವಂತಿತ್ತು. ಭೂ ಸುಧಾರಣೆಯಿಂದ ಹೊಸಬರಿಗೆ, ಯುವಕರಿಗೆ ಅವಕಾಶ ಸಿಕ್ಕಂತಾಗಿದೆ. ಕಾಂಗ್ರೆಸ್, ಜೆಡಿಎಸ್ ಪಕ್ಷ ಕೆಲ ರೈತ ಸಂಘಟನೆ ವಿರೋಧ ಮಾಡುತ್ತಿರುವುದು ದುರುದ್ದೇಶಪೂರಕವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಎಪಿಎಂಸಿ ಕಾಯ್ದೆ ಮಸೂದೆ ರೈತರ ಪರವಾಗಿದೆ. ಮಾರುಕಟ್ಟೆಗೆ ಒಯ್ಯದಿದ್ದರೆ ರೈತರಿಗೆ ದಂಡ ವಿಧಿಸುತ್ತಿದ್ದರು. ಹೊರ ರಾಜ್ಯದಲ್ಲಿ ರೈತರನ್ನು ತಡೆಯುತ್ತಿದ್ದರು.ಇವತ್ತು ಇಡೀ ದೇಶದಲ್ಲಿ ಒಂದು ಮಾರುಕಟ್ಟೆ, ಒಂದು ಬೆಳೆ, ಒಂದು ದೇಶ ಎಂಬ ಕಾನೂನು ಪ್ರಧಾನಿ ನರೇಂದ್ರ ಮೋದಿ ತಂದಿದ್ದಾರೆ ಎಂದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ