HOME » NEWS » District » BSY CLOSE ASSOCIATES SANTOSH AND MARISWAMY FIGHT IN ARASIKERE HASSAN SNVS

ಹಾಸನದ ಅರಸೀಕೆರೆ ಕ್ಷೇತ್ರಕ್ಕಾಗಿ ಯಡಿಯೂರಪ್ಪ ಶಿಷ್ಯಂದಿರ ಕಿತ್ತಾಟ

ಯಡಿಯೂರಪ್ಪ ಅವರ ಆಪ್ತರಾದ ಎನ್.ಆರ್. ಸಂತೋಷ್ ಮತ್ತು ಮರಿಸ್ವಾಮಿ ಅವರು ಅರಸೀಕೆರೆ ಕ್ಷೇತ್ರದ ಮೇಲೆ ಕಣ್ಣಿಟ್ಟಿದ್ದು, ಇದೀಗ ಅವರ ಬೆಂಬಲಿಗರ ಮಧ್ಯೆ ಕಚ್ಚಾಟಕ್ಕೆ ಕಾರಣವಾಗಿರುವಂತಿದೆ.

news18-kannada
Updated:August 23, 2020, 11:03 AM IST
ಹಾಸನದ ಅರಸೀಕೆರೆ ಕ್ಷೇತ್ರಕ್ಕಾಗಿ ಯಡಿಯೂರಪ್ಪ ಶಿಷ್ಯಂದಿರ ಕಿತ್ತಾಟ
ಸಿಎಂ ಬಿಎಸ್​ ಯಡಿಯೂರಪ್ಪ
  • Share this:
ಹಾಸನ(ಆ. 23): ಹಾಸನದಲ್ಲಿ ಅತಿಹೆಚ್ಚು ಲಿಂಗಾಯತರು ಇರುವ ಕ್ಷೇತ್ರ ಅರಸೀಕೆರೆ. ಬಿಜೆಪಿಗೆ ಹೆಚ್ಚು ಬಲ ಇರುವ ಕ್ಷೇತ್ರವೂ ಇದೇ. ಈಗ ಅರಸೀಕೆರೆ ಕ್ಷೇತ್ರಕ್ಕಾಗಿ ಬಿಜೆಪಿಯೊಳಗೆ ಬಿಗ್ ಫೈಟ್ ನಡೆಯುತ್ತಿರುವಂತಿದೆ. ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರ ಆಪ್ತರಾದ ಎನ್.ಆರ್. ಸಂತೋಷ್ ಮತ್ತು ಮರಿಸ್ವಾಮಿ ಅವರ ಬೆಂಬಲಿಗರ ನಡುವೆ ಕೆಲ ದಿನಗಳಿಂದ ಜಟಾಪಟಿ ನಡೆಯುತ್ತಿದೆ. ಕ್ಷೇತ್ರದಲ್ಲಿ ಹಳಬರಾಗಿರುವ ಮರಿಸ್ವಾಮಿ ಅವರಿಂದ ದೌರ್ಜನ್ಯ ನಡೆಯುತ್ತಿದೆ ಎಂದು ಸಂತೋಷ್ ಬೆಂಬಲಿಗರು ಮುಖ್ಯಮಂತ್ರಿಗೆ ಅವರಲ್ಲಿಗೇ ದೂರು ನೀಡಿದ್ದಾರೆ. ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಆಗಿರುವ ಎನ್.ಆರ್. ಸಂತೋಷ್ ಅವರ ಜನ್ಮದಿನದ ಆಚರಣೆಯು ಕಚ್ಚಾಟಕ್ಕೆ ಎಡೆ ಮಾಡಿಕೊಟ್ಟಿದೆ.

ಮೂರ್ನಾಲ್ಕು ದಿನಗಳ ಹಿಂದೆ ಎನ್.ಆರ್. ಸಂತೋಷ್ ಹುಟ್ಟುಹಬ್ಬ ಆಚರಿಸಿಕೊಂಡಿದ್ದರು. ಆಗ ಸಂತೋಷ್ ಬೆಂಬಲಿಗರು ಅರಸೀಕೆರೆ ಪಟ್ಟಣದಲ್ಲಿ ಬ್ಯಾನರ್ ಹಾಕಿಸಿದ್ದರು. ಈ ವೇಳೆ, ಬ್ಯಾನರ್ ಅನ್ನು ಯಾರೋ ಕಿಡಿಗೇಡಿಗಳು ಹರಿದುಹಾಕಿದ್ದಾರೆ. ಮರಿಸ್ವಾಮಿ ಬೆಂಬಲಿಗರು ಈ ಕೆಲಸ ಮಾಡಿದ್ದಾರೆ ಎಂಬುದು ಸಂತೋಷ್ ಬೆಂಬಲಿಗರ ಆರೋಪ. ಕ್ಷೇತ್ರದ ಕೆಲ ಲಿಂಗಾಯತ ಸಂಘಟನೆಗಳು ಮರಿಸ್ವಾಮಿ ವಿರುದ್ಧ ತಿರುಗಿಬಿದ್ದಿದ್ದು ಮುಖ್ಯಮಂತ್ರಿಗೆ ಪತ್ರ ಬರೆದು ಈ ವಿಚಾರವನ್ನು ಗಮನಕ್ಕೆ ತಂದಿದ್ದಾರೆ. ಮರಿಸ್ವಾಮಿ ಹಿಂಬಾಲಕರು ಕ್ಷೇತ್ರದಲ್ಲಿ ದೌರ್ಜನ್ಯ ಎಸಗುತ್ತಿದ್ದಾರೆ. ಲಿಂಗಾಯತ ಸಮುದಾಯದ ಮಧ್ಯೆ ಒಡಕು ಮೂಡಿಸುತ್ತಿದ್ದಾರೆ. ಮರಿಸ್ವಾಮಿ ಅವರನ್ನು ನೀವು ನಿಯಂತ್ರಿಸಬೇಕು ಎಂದು ಸಿಎಂಗೆ ಇವರು ಮನವಿ ಮಾಡಿದ್ದಾರೆ.

ಇದನ್ನೂ ಓದಿ: ಸಚಿವ ರಮೇಶ ಜಾರಕಿಹೊಳಿ ಕ್ಷೇತ್ರದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಪ್ರವಾಸ

ಬೆಂಗಳೂರು ಗ್ರಾಮಾಂತರ ಜಿ.ಪಂ. ಅಧ್ಯಕ್ಷರಾಗಿರುವ ಮರಿಸ್ವಾಮಿ ಅವರು ಈ ಹಿಂದೆ ಅರಸೀಕೆರೆ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸೋಲನುಭವಿಸಿದ್ದರು. ಮತ್ತೆ ಆ ಕ್ಷೇತ್ರದಿಂದ ಸ್ಪರ್ಧಿಸುವ ಆಲೋಚನೆಯಲ್ಲಿದ್ದಾರೆ. ಆದರೆ, ಅರಸೀಕೆರೆ ಕ್ಷೇತ್ರದಲ್ಲಿ ಮರಿಸ್ವಾಮಿ ಸೋತಿರುವುದರಿಂದ ಎನ್.ಆರ್. ಸಂತೋಷ್ ಅವರಿಗೆ ಟಿಕೆಟ್ ನೀಡಿಬೇಕು ಎಂಬುದು ಸಂತೋಷ್ ಬೆಂಬಲಿಗರ ಒತ್ತಾಯವಾಗಿದೆ.

Youtube Video


ಅರಸೀಕೆರೆ ಕ್ಷೇತ್ರದಲ್ಲಿ 80 ಸಾವಿರಕ್ಕೂ ಹೆಚ್ಚು ಲಿಂಗಾಯತ ಮತಗಳಿವೆ. ಇಲ್ಲಿ ಚುನಾವಣೆಯ ಗೆಲುವಿಗೆ ಈ ಸಮುದಾಯದವರ ಮತಗಳೇ ನಿರ್ಣಾಯಕ ಆಗಿದೆ. ಸಂತೋಷ್ ಮತ್ತು ಮರಿಸ್ವಾಮಿ ಇಬ್ಬರೂ ಲಿಂಗಾಯತ ಸಮುದಾಯಕ್ಕೆ ಸೇರಿದವರು ಹಾಗೂ ಯಡಿಯೂರಪ್ಪನವರ ಆಪ್ತರೇ ಆಗಿದ್ದಾರೆ. ಈ ಹಿನ್ನೆಲೆಯಲ್ಲಿ ಯಡಿಯೂರಪ್ಪನವರ ಮುಂದಿನ ನಡೆ ಏನು ಎಂಬುದು ಕುತೂಹಲ.
Published by: Vijayasarthy SN
First published: August 23, 2020, 11:03 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories