BS Yediyurappa: ಕಾಂಗ್ರೆಸ್​ನಲ್ಲಿ ಭವಿಷ್ಯವಿಲ್ಲ, ಆ ಪಕ್ಷ ಬಿಟ್ಟು ಬಿಜೆಪಿ ಸೇರಿಕೊಳ್ಳಿ; ಬಿಎಸ್ ಯಡಿಯೂರಪ್ಪ

ಇದು ಬೊಮ್ಮಾಯಿಯವರ ಕ್ಷೇತ್ರ. ಇದು ಗೌರವದ ಪ್ರಶ್ನೆ. ಇಪ್ಪತ್ತರಿಂದ ಇಪ್ಪತ್ತೈದು ಸಾವಿರ ಮತಗಳ ಅಂತರದಿಂದ ನಮ್ಮ ಅಭ್ಯರ್ಥಿ ಗೆಲ್ಲಿಸಿ. ದಿವಂಗತ ಉದಾಸಿಯವರ ಆತ್ಮಕ್ಕೆ ಶಾಂತಿ ಸಿಗಬೇಕು ಅಂದರೆ ಸಜ್ಜನರ ಗೆಲ್ಲಿಸಿ. ಆಗ ನಾನು ಮತ್ತು ಬೊಮ್ಮಾಯಿ ಇಲ್ಲಿಗೆ ಬಂದಿದ್ದಕ್ಕೆ ಸಾರ್ಥಕ ಆಗುತ್ತದೆ ಎಂದರು.

ಬಿ ಎಸ್ ಯಡ್ಯೂರಪ್ಪ

ಬಿ ಎಸ್ ಯಡ್ಯೂರಪ್ಪ

 • Share this:
  ಹಾವೇರಿ: ಇಂದಿನಿಂದ ಹಾನಗಲ್ ಉಪಚುನಾವಣಾ (Hangal By Election) ಅಖಾಡಕ್ಕೆ ಇಳಿದ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ (Former CM BS Yediyurappa) ಇಂದು ಹಾನಗಲ್ ತಾಲೂಕಿನ ಬಮ್ಮನಹಳ್ಳಿ ಗ್ರಾಮದಲ್ಲಿ ಬಿಜೆಪಿ ಅಭ್ಯರ್ಥಿ ಶಿವರಾಜ ಸಜ್ಜನರ ಪರ ನಡೆದ ಪ್ರಚಾರ ಸಭೆಯಲ್ಲಿ ಪಾಲ್ಗೊಂಡರು. ಬಿಎಸ್​ವೈ ಭಾಷಣ ಆರಂಭಿಸಲು ಬರ್ತಿದ್ದಂತೆ ರಾಜಾಹುಲಿ.. ರಾಜಾಹುಲಿ ಅನ್ನೋ  ಕೂಗು ಮೊಳಗಿತು. ಬಳಿಕ ಮಾತು ಆರಂಭಿಸಿದ ಯಡಿಯೂರಪ್ಪ ಅವರು, ಬಿಜೆಪಿ ಸರಕಾರದ ಯೋಜನೆಗಳು ಸಿಕ್ಕಿಲ್ಲದ ಒಂದು ಮನೆಗಳೂ ಇಲ್ಲ. ಸಾಮಾನ್ಯ ಜನರು ಕೈಚಾಚಿ ಬೇಡಬಾರ್ದು ಎಂದು ಹೇಳಿದರು.

  ಪ್ರಧಾನಿ ಮೋದಿ ಇವತ್ತು ನೂರು ಕೋಟಿ ಲಸಿಕೆ ಕೊಟ್ಟರು. ಈಡಿ ಪ್ರಪಂಚ ಮೋದಿ ಅವರನ್ನು ಹಾಡಿ ಹೊಗಳುತ್ತಿದೆ. ಪ್ರತಿಪಕ್ಷದವರು ಹಗುರವಾಗಿ ಮಾತನಾಡ್ತಾರೆ. ಹಗುರವಾಗಿ ಮಾತನಾಡೋರಿಗೆ ಜನರೆ ಪಾಠ ಕಲಿಸ್ತಾರೆ. ಇದರಿಂದ ನಿಮ್ಮ ಗೌರವ ಕಡಿಮೆ ಆಗುತ್ತದೆ. ಇಲ್ಲಿನ‌ ಜನರ ಉತ್ಸಾಹ ನೋಡಿ, ಇವತ್ತಿಂದ 29 ನೇ ತಾರೀಖಿನವರೆಗೆ ಜನರ ಮನೆ ಮನೆಗೆ ಹೋಗಿ ಮನವೊಲಿಸಿ ಬಿಜೆಪಿಗೆ ಮತ ನೀಡುವಂತೆ ಕೇಳಿ. ಅವರಿನ್ನೂ ಬೇರೆ ಪಕ್ಷದ ಕಡೆಗೆ ನೋಡ್ತಿದ್ರೆ ಸರಕಾರದ ಸಾಧನೆಗಳನ್ನ ತಿಳಿಸಿ. ಕೇಂದ್ರ ಸರಕಾರ ಕಿಸಾನ್ ಸಮ್ಮಾನ ಹಣ ಕೊಟ್ಟಿದೆ. ನಾನು ಸಿಎಂ ಆಗಿದ್ದಾಗ ಎರಡು ಸಾವಿರದಂತೆ ಎರಡು ಕಂತುಗಳಲ್ಲಿ ಹಣ ಕೊಟ್ಟೆ. ಇದನ್ನು ಯಾರೂ ಮಾಡಲಿಲ್ಲ. ನಮಗೆ ಜಾತಿ ಗೊತ್ತಿಲ್ಲ. ಹಿಂದೂ ಮುಸ್ಲಿಂ ಕ್ರಿಶ್ಚಿಯನ್‌ ಒಂದೇ ತಾಯಿ ಮಕ್ಕಳಂತೆ ಬಾಳಬೇಕು ಅನ್ನೋದು ಬಿಜೆಪಿ. ಎಲ್ಲರಿಗೂ ಸವಲತ್ತು ಕೊಟ್ಟಿದ್ದೇವೆ. ಅಜ್ಜಿಗೆ ಹಣ ಬರ್ತಿದೆ. ಹೀಗಾಗಿ ಅಜ್ಜಿಯರನ್ನು ಚೆನ್ನಾಗಿ ನೋಡಿಕೊಳ್ತಿದ್ದಾರೆ ಎಂದು ಹೇಳಿದರು.

  ಇನ್ನು ಐವತ್ತು ವರ್ಷ ನಿಮ್ಮ (ಕಾಂಗ್ರೆಸ್) ಅಡ್ರೆಸ್ ಇರೋದಿಲ್ಲ. ಬರೆದಿಟ್ಟುಕೊಳ್ಳಿ. ಇದನ್ನ ನಿಮ್ಮ ಮೊಮ್ಮಕ್ಕಳಿಗೂ ಹೇಳ್ರಿ. ಕಾಂಗ್ರೆಸ್ ನಲ್ಲಿ ಭವಿಷ್ಯವಿಲ್ಲ. ಕಾಂಗ್ರೆಸ್ ಬಿಟ್ಟು ಬಿಜೆಪಿ ಸೇರಿಕೊಳ್ಳುವಂತೆ ಹೇಳ್ರಿ. ನಿಮಗೆ ಯಾವುದೇ ಅನುಮಾನ ಮಾಡಬೇಡಿ. ಟೀಕೆಗಾಗಿ ಟೀಕೆ ಮಾಡಬೇಡಿ. ಗೋಣಿ ಚೀಲದಲ್ಲಿ ದುಡ್ಡು ತುಂಬಿಕೊಂಡು ಹೋಗಿದ್ದೇವಂತೆ. ನಾಚಿಕೆ ಆಗಬೇಕು ನಿಮಗೆ. ಮತದಾರರಿಗೆ ಅಪಮಾನ ಮಾಡ್ತಿದ್ದೀರಿ. ನನಗೆ ತುಂಬಾ ಆನಂದ ಆಗಿದೆ. ಸಂಸದ ಉದಾಸಿಯವರು ಪ್ರತ್ಯಕ್ಷ ಜನ ಬೆಂಬಲ‌ ನೋಡುವಂತೆ ಹೇಳಿದ್ದರು. ಬಿಸಿಲಿನಲ್ಲೂ ನಿಂತು ಸಭೆ ಯಶಸ್ವಿ ಮಾಡಿದ್ದೀರಿ. ಕೈ ಜೋಡಿಸಿ ಪ್ರಾರ್ಥನೆ ಮಾಡುವೆ, ಎಲ್ಲ ಕೆಲಸಗಳನ್ನ ಬದಿಗಿಟ್ಟು ಮತದಾನ ಕೇಂದ್ರಕ್ಕೆ ಬಂದು ಶಿವರಾಜ ಸಜ್ಜನರ ಚಿಹ್ನೆಗೆ ಮತ ಕೊಟ್ಟು ಗೆಲ್ಲಿಸುವಂತೆ ಮನವಿ ಮಾಡಿದರು.

  ನಾನು ಮತ್ತು ಬೊಮ್ಮಾಯಿ ಇಲ್ಲಿಗೆ ಬಂದಿದ್ದಕ್ಕೆ ಸಾರ್ಥಕವಾಗುತ್ತೆ

  ಇದು ಬೊಮ್ಮಾಯಿಯವರ ಕ್ಷೇತ್ರ. ಇದು ಗೌರವದ ಪ್ರಶ್ನೆ. ಇಪ್ಪತ್ತರಿಂದ ಇಪ್ಪತ್ತೈದು ಸಾವಿರ ಮತಗಳ ಅಂತರದಿಂದ ನಮ್ಮ ಅಭ್ಯರ್ಥಿ ಗೆಲ್ಲಿಸಿ. ದಿವಂಗತ ಉದಾಸಿಯವರ ಆತ್ಮಕ್ಕೆ ಶಾಂತಿ ಸಿಗಬೇಕು ಅಂದರೆ ಸಜ್ಜನರ ಗೆಲ್ಲಿಸಿ. ಆಗ ನಾನು ಮತ್ತು ಬೊಮ್ಮಾಯಿ ಇಲ್ಲಿಗೆ ಬಂದಿದ್ದಕ್ಕೆ ಸಾರ್ಥಕ ಆಗುತ್ತದೆ ಎಂದರು.

  ಕಾಂಗ್ರೆಸ್ ನ ಸ್ನೇಹಿತರು ಹಣ, ಜಾತಿ ಬಲದಿಂದ, ಜಾತಿ ವಿಷಬೀಜ ಬಿತ್ತಿ ಚುನಾವಣೆ ಗೆಲ್ಲೋದು ದೇಶದಲ್ಲಿ ಪ್ರಾರಂಭ ಆಯ್ತು. ಎಂಟು ವರ್ಷದ ಹಿಂದೆ ನರೇಂದ್ರ ಮೋದಿ ಪಿಎಂ ಆದ್ಮೇಲೆ‌ ಕಾಂಗ್ರೆಸ್ ಧೂಳಿಪಟ ಆಯ್ತು. ನಮ್ಮ ನಾಯಕರು ಯಾರು ಅಂತಾ ಅವರು ಹುಡುಕೋ‌ ಪರಿಸ್ಥಿತಿಗೆ ಬಂದಿದ್ದಾರೆ. ಮತ ಎಣಿಕೆ ಆರಂಭವಾದ ಒಂದು ಗಂಟೆಯೊಳಗೆ ಕಾಂಗ್ರೆಸ್ ನವರು ಜಾಗ ಖಾಲಿ ಮಾಡಬೇಕು. ಆ ರೀತಿಯಲ್ಲಿ ನಮ್ಮ ಅಭ್ಯರ್ಥಿಗೆ ಮತವನ್ನ ಚಲಾವಣೆ ಮಾಡಬೇಕು. ಇಪ್ಪತ್ತೈದು ಸಾವಿರಕ್ಕೂ ಹೆಚ್ಚಿನ ಮತಗಳ ಅಂತರದಿಂದ ಗೆಲ್ಲಿಸಿ ಎಂದು ಬಿ.ಎಸ್.ವೈ ಕರೆ ನೀಡಿದರು.

  ಇದನ್ನು ಓದಿ: ಸಿದ್ದರಾಮಯ್ಯ ಮಾತುಮಾತಿಗೂ ಅನ್ನಭಾಗ್ಯ ಅಂತಾರೆ, ಅದಕ್ಕೂ ಮೊದಲು ಯಾರೂ ಅಕ್ಕಿ ಕೊಟ್ಟಿರಲಿಲ್ವಾ: CM Bommai

  ದಿವಂಗತ ಉದಾಸಿಯವರು ಹೇಳಿದ ಎಲ್ಲ ಕೆಲಸಗಳನ್ನ ಪ್ರಾರಂಭ ಮಾಡಿದ್ದೇವೆ‌. ಇನ್ನೂ ನೂರು ವರ್ಷ ದಿವಂಗತ ಉದಾಸಿಯವರನ್ನ ನೆನಪು ಮಾಡಿಕೊಳ್ಳುವಂತೆ ಕೆಲಸಗಳು ಆಗಿವೆ. ಈಗ ಕೆಲಸಗಳು ಬಹಳ ಉಳಿದಿಲ್ಲ. ನೀರಾವರಿ, ಶಿಕ್ಷಣ ಸೇರಿದಂತೆ ಎಲ್ಲ ಕ್ಷೇತ್ರಗಳ ಅಭಿವೃದ್ಧಿ ಮಾಡಿದ್ದಾರೆ. ಸಂಸದ ಶಿವಕುಮಾರ ಉದಾಸಿಯವರ ಬಗ್ಗೆ ಹೆಚ್ಚು ಮಾತನಾಡೋದಿಲ್ಲ. ಪ್ರಧಾನಿಯವರ ಅಚ್ಚುಮೆಚ್ಚಿನ ಶಿಷ್ಯನಾಗಿ ಸಂಸದ ಶಿವಕುಮಾರ ಇದ್ದಾರೆ. ಅವರಿಗೆ ಜಿಲ್ಲೆ ಮಾತ್ರವಲ್ಲ ರಾಜ್ಯದ ಜನರ ಪರವಾಗಿ ಅಭಿನಂದನೆ ಸಲ್ಲಿಸುವೆ ಎಂದು ಹೇಳಿದರು.
  Published by:HR Ramesh
  First published: