ಬದಲಾವಣೆಯ ಮಾತೇ ಇಲ್ಲ, ಯಡಿಯೂರಪ್ಪನವರೇ ರಾಜ್ಯಕ್ಕೆ ಪೂರ್ಣ ಅವಧಿ ಸಿಎಂ; ಸಚಿವ ಆರ್. ಶಂಕರ್​

ಮುಖ್ಯಮಂತ್ರಿ ಯಡಿಯೂರಪ್ಪ ಈಗ ಕೊರೋನಾ ಎರಡನೇ ಅಲೆಯನ್ನು ಅತ್ಯುತ್ತಮ ವಾಗಿ ನಿರ್ವಹಣೆ ಮಾಡುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಎಲ್ಲಾ ಸಚಿವರುಗಳು ಸಿಎಂ ಬೆನ್ನಿಗೆ ನಿಲ್ಲಬೇಕು ಎಂದು ಸಚಿವ ಆರ್. ಶಂಕರ್ ತಿಳಿಸಿದ್ದಾರೆ.

ಆರ್. ಶಂಕರ್.

ಆರ್. ಶಂಕರ್.

  • Share this:
ಯಾದಗಿರಿ: ರಾಜ್ಯದ ಸಿಎಂ ಬದಲಾವಣೆ ವಿಚಾರವಾಗಿ ದೇಹಲಿಗೆ ತೆರಳಿದ ಸಚಿವ ಸಿ.ಪಿ.ಯೋಗೇಶ್ವರ ವಿರುದ್ಧ ತೋಟಗಾರಿಕೆ ಹಾಗೂ ರೇಷ್ಮೆ ಸಚಿವ ಆರ್.ಶಂಕರ್ ವಾಗ್ದಾಳಿ ನಡೆಸಿದ್ದಾರೆ. ಕೇವಲ ದೆಹಲಿಗೆ ಹೋಗಿ ಬಂದರೆ ಸಿಎಂ ಬದಲಾವಣೆ ಆಗಲ್ಲ ಹಾಗಾದ್ರೆ ಬಹಳ ಜನ ದೇಹಲಿಗೆ ತೆರಳಿ ಬರುತ್ತಾರೆ. ಯಾವುದೇ ಕಾರಣಕ್ಕು ರಾಜ್ಯದಲ್ಲಿ ಸಿಎಂ ಬದಲಾವಣೆ ಆಗಲ್ಲ. ಸಿಎಂ ಬಿ‌ಎಸ್ ಯಡಿಯೂರಪ್ಪ ಅವರು ಪೂರ್ಣ ಅವಧಿ ಅಧಿಕಾರ ಪೂರೈಸುತ್ತಾರೆಂದು ಹೇಳಿದ್ದಾರೆ. ಅವರು ನಗರದ ಸರ್ಕೀಟ್ ಹೌಸ್ ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, "ಬಿಎಸ್.ಯಡಿಯೂರಪ್ಪ ಅವರು ರಾಜ್ಯವನ್ನು ಮಾದರಿಯನ್ನಾಗಿ ಅಭಿವೃದ್ಧಿ ಕಾರ್ಯ ಮಾಡುತ್ತಿದ್ದಾರೆ. ಕಳೆದ ವರ್ಷ ಕೂಡ ಕೋವಿಡ್  ಸಂದರ್ಭದಲ್ಲಿ ಉತ್ತಮವಾಗಿ ಕೋವಿಡ್ ನಿರ್ವಹಣೆ ಮಾಡಿದರು.

ಮುಖ್ಯಮಂತ್ರಿ ಯಡಿಯೂರಪ್ಪ ಈಗ ಕೊರೋನಾ ಎರಡನೇ ಅಲೆಯನ್ನು ಅತ್ಯುತ್ತಮ ವಾಗಿ ನಿರ್ವಹಣೆ ಮಾಡುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಸಚಿವರುಗಳು ಸಿಎಂ ಬೆನ್ನಿಗೆ ನಿಲ್ಲಬೇಕು. ಕೋವಿಡ್ ಸಂದರ್ಭದಲ್ಲಿ ಜನರ ಜೀವ ಉಳಿಸುವ ಬಗ್ಗೆ ಕಾಳಜಿ ಸಿ.ಪಿ. ಯೋಗೇಶ್ವರ ಅವರಿಗೆ ಇರಬೇಕು. ನಮಗೆ ಸದ್ಯಕ್ಕೆ ರಾಜ್ಯದ ಜೀವ ಉಳಿಸುವದು ಮುಖ್ಯ ಇಂತಹ ಸಂದರ್ಭದಲ್ಲಿ ಸಿಎಂ ಬದಲಾವಣೆ ಬಗ್ಗೆ ದೇಹಲಿಗೆ ಹೋದ್ರೆ ಎಷ್ಟು ಸರಿ" ಎಂದು ಸಚಿವ ಶಂಕರ್ ತಿಳಿಸಿದ್ದಾರೆ.

ಯಾವುದೇ ಕಾರಣಕ್ಕು ಸಿಎಂ ಬದಲಾವಣೆ ಆಗಲ್ಲ.ರಾಜಕೀಯದಲ್ಲಿ ಊಹಾಪೋಹಗಳು ಹೊಸದಲ್ಲ. ಮೊದಲಿನಿಂದ ಊಹಾಪೋಹಗಳಿಗೆ ರೆಕ್ಕೆ ಪುಕ್ಕಗಳನ್ನು ಕಟ್ಟುವದು ಜಾಸ್ತಿಯಾಗಿದೆ. ಸಿಎ ಬಿಎಸ್ ವೈಗೆ 78  ವಯಸ್ಸಾದರು ಕೂಡ 28 ರ ಯುವಕರಂತೆ ಕೆಲಸ ಮಾಡುತ್ತಿದ್ದಾರೆ. ಕಳೆದ ವರ್ಷ ಪ್ರವಾಹ,ಕೊರೊನಾ ಸಂದರ್ಭದಲ್ಲಿ ಸಮರ್ಥವಾಗಿ ಎದುರಿಸಿದ್ದಾರೆ. ಈ ಬಾರಿ ರಾಜ್ಯದಲ್ಲಿ ಕೊರೊನಾ ಕೈಮಿರಿದರು ಅದನ್ನು ತಡೆಗಟ್ಟಲು ಕಟ್ಟುನಿಟ್ಟಿನ ಕ್ರಮಕೈಗೊಂಡಿದ್ದಾರೆ ಎಂದರು.

ಯಶಸ್ವಿಯಾಗಿ ಜವಾಬ್ದಾರಿಯುತವಾಗಿ ಕೆಲಸ ಮಾಡುತ್ತಿದ್ದಾರೆ. ಮುಂದಿನ ವಿಧಾನಸಭೆ ಚುನಾವಣೆ ಬಿಎಸ್ ವೈ ನೇತೃತ್ವದಲ್ಲಿ ಹೋಗುತ್ತೆವೆ. ನಮ್ಮ ಪಕ್ಷದಲ್ಲಿ ಯಾವುದೇ ಭಿನ್ನಾಭಿಪ್ರಾಯವಿಲ್ಲ ಯಾರೋ ಒಬ್ಬರು ದೆಹಲಿಗೆ ಹೋಗಿ ಬಂದರೆ ಬಣ್ಣ ಕಟ್ಟುವ ಕೆಲಸ ನಡೆಯುತ್ತಿದೆ. ಸಚಿವ ಸಿ.ಪಿ. ಯೋಗೇಶ್ವರ ಅವರು ಕೊರೊನಾ ಮಹಾಮಾರಿ ತಡೆಗಟ್ಟುವ ಕೆಲಸ ಮಾಡಬೇಕು ಎಂದು ವಾಗ್ದಾಳಿ ಮಾಡಿದ್ದಾರೆ.

ಇದನ್ನೂ ಓದಿ: Narada Case: ನಾರದಾ ಲಂಚ ಪ್ರಕರಣ: ಟಿಎಂಸಿ ಪಕ್ಷದ ನಾಲ್ವರು ಆರೋಪಿಗಳಿಗೆ ಹೈಕೋರ್ಟ್​ನಿಂದ ಮಧ್ಯಂತರ ಜಾಮೀನು!

ಸಿ.ಪಿ.ಯೋಗೇಶ್ವರ ಅವರ ಬೆಂಬಲಿಗರು ಪ್ರೆಸ್ ಮೀಟ್ ಮಾಡಿದ ವಿಚಾರಕ್ಕೆ ಸಂಬಂಧಿಸಿದಂತೆ ಯಾರಾದರು ಎನಾದರು ಕೇಳಿದಾಗ ಅದಕ್ಕೆ ಉತ್ತರ ಕೊಡುವ ಧರ್ಮ ನನ್ನದು ಹೀಗಾಗಿ ಅವರು ಮಾಧ್ಯಮದಲ್ಲಿ ಹೇಳಿಕೆ ನೀಡಿರಬಹುದು ನಾನು ಮಾಧ್ಯಮದಲ್ಲಿ ನನ್ನ ಇತಿಮಿತಿಯಲ್ಲಿ ಮಾತನಾಡುತ್ತೆನೆ  ಹೆಚ್ಚಿಗೆ ಯಾವ ಪದ ಬಳಕೆ ಮಾಡಲ್ಲ. ನಾನು ಆರು ತಿಂಗಳ ಕಾಲ ಎಂಎಲ್ ಸಿ ಆದ ಸಂದರ್ಭದಲ್ಲಿ ಎನನ್ನು ಮಾತನಾಡಿಲ್ಲ. ಎಲ್ಲಿ ಕೇಳಬೇಕು, ಎನು ಕೇಳಬೇಕು ಅಲ್ಲಿ ‌ಕೇಳಿದ್ದೆನೆ ಅವರು ‌ಎನು‌ ಹೇಳಿದ್ದರು ಅದನ್ನ ನನಗೆ ಮಾಡಿದ್ದಾರೆ.

ಇದನ್ನೂ ಓದಿ:  ಕಬ್ಬು ಬೆಳೆಗಾರರ ಸಂಕಷ್ಟಕ್ಕೆ ಸ್ಪಂಧಿಸದ ಸಕ್ಕರೆ ಕಾರ್ಖಾನೆಗಳು; ಕೋಟಿ ಕೋಟಿ ಬಿಲ್ ಬಾಕಿ ಉಳಿಕೊಂಡು ಚೆಲ್ಲಾಟ!

ರಾಜಕೀಯದಲ್ಲಿ ಸಮನ್ವಯತೆ ಬಹಳ ಮುಖ್ಯವಾಗಿದೆ.ರಾಜಕೀಯದಲ್ಲಿ ಕೆಲವರು ಪ್ರಚಾರ ಪ್ರೀಯರು ಇರುತ್ತಾರೆ ಆದರೆ, ನಾನು ಪ್ರಚಾರಕ್ಕೆ ಕೆಲಸ ಮಾಡಲ್ಲ ಎಂದರು ಮುಖ್ಯಮಂತ್ರಿ ಯಡಿಯೂರಪ್ಪ ಅವರು ನನಗೆ ‌ಕೊಟ್ಟ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿರ್ವಹಿಸಿ ಕೊಂಡು‌ ಹೋಗುತ್ತೆನೆ ಎಂದರು.

ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿ ಸಬೇಕು.
Published by:MAshok Kumar
First published: