ವಿಜಯಪುರ (ಮಾರ್ಚ್ 21)- ರಾಜ್ಯದಲ್ಲಿ ನಡೆದಿರುವ ಸಿಡಿ ವಿಚಾರಕ್ಕೆ ಸಂಬಂಧಿಸಿದಂತೆ ವಿಜಯಪುರ ನಗರ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಮತ್ತೊಂದು ಹೊಸ ಬಾಂಬ್ ಸಿಡಿಸಿದ್ದಾರೆ.ವಿಜಯಪುರದಲ್ಲಿ ಮಾತನಾಡಿದ ಅವರು, "ಸಿಎಂ ಗೆ ಜಲ ಸಂಪನ್ಮೂಲ, ಹಣಕಾಸು, ಇಂಧನ, ಬೆಂಗಳೂರು ನಗರಾಭಿವೃದ್ಧಿ ಇಲಾಖೆ ತಮ್ಮಲ್ಲಿಯೇ ಉಳಿಯಬೇಕಾಗಿದೆ. ಮಾರ್ಚ್ ಕೊನೆಯಲ್ಲಿ ಈ ಇಲಾಖೆಗಳಿಗೆ ಸಾವಿರಾರು ಕೋಟಿ ರೂಪಾಯಿ ಹಣ ಬಿಡುಗಡೆಯಾಗುತ್ತದೆ. ಆ ಹಣ ಹೇಗೆ ತೆಗೆದುಕೊಳ್ಳಬೇಕು? ಎಂಬುದು ಮುಖ್ಯಮಂತ್ರಿ ಪ್ಲ್ಯಾನ್ ಆಗಿತ್ತು. ಇದೇ ಕಾರಣಕ್ಕೆ ರಮೇಶ್ ಜಾರಕಿಹೊಳಿ ಯವರನ್ನು ಹೀಗೆ ಕೇಸ್ ಒಂದರಲ್ಲಿ ಸಿಲುಕಿಸಿದ್ದಾರೆ" ಎಂದು ಹೇಳುವ ಮೂಲಕ ಮಾಜಿ ಸಚಿವ ರಮೇಶ ಜಾರಕಿಹೊಳಿ ಅವರ ಸಿಡಿ ಪ್ರಕರಣ ಕುರಿತು ವಿಜಯುಪರ ನಗರ ಬಿಜೆಪಿ ಶಾಸಕ ಬನಸಗೌಡ ಪಾಟೀಲ ಮತ್ತೋಮ್ಮೆ ಗಂಭೀರ ಆರೋಪ ಮಾಡಿದ್ದಾರೆ.
"ಈ ಹಿಂದೆ ಜಾರಕಿಹೊಳಿ ಅವರಿಗೆ ಅನಿವಾರ್ಯವಾಗಿ ಆ ಖಾತೆ ಕೊಟ್ಟರು. ಈಗ ಆ ಖಾತೆಯನ್ನು ಗೋವಿಂದ ಕಾರಜೋಳ, ಬೊಮ್ಮಾಯಿ, ಆರ್. ಅಶೋಕ ಅವರಿಗೆ ಹೆಚ್ಚುವರಿಯಾಗಿ ನೀಡಬಹುದಿತ್ತು. ಆದರೆ, ಸಿಎಂ ಗೆ ಮೂರು ಇಲಾಖೆಗಳನ್ನೂ ಮಗ ವಿಜಯೇಂದ್ರನ ಕೈಗೆ ಕೊಡಬೇಕಾಗಿದೆ. ಹೀಗಾಗಿ ಮತ್ತೆ ಈ ಖಾತೆಗಳನ್ನು ಇಟ್ಟುಕೊಂಡಿದ್ದಾರೆ" ಎಂದು ಯತ್ನಾಳ ವಾಗ್ದಾಳಿ ನಡೆಸಿದ್ದಾರೆ.
"ಸಿಡಿ ವಿಚಾರ ಸಮಗ್ರ ತನಿಖೆಯಾಗಬೇಕು. ಕಾಂಗ್ರೆಸ್ ಹಾಗೂ ಬಿಜೆಪಿಯ ಇಬ್ಬರು ಮಹಾನ್ ನಾಯಕರ ಬಳಿ ಸಿಡಿ ರೆಡಿಯಾಗುತ್ತವೆ. ಅವರು ಸಿಡಿ ರೆಡಿ ಮಾಡುವ ಪ್ಯಾಕ್ಟರಿ ಹೊಂದಿದ್ದಾರೆ. ಇದಲ್ಲದೆ, ರಾಜ್ಯದ ರಾಜಕಾರಣಿಗಳ 400 ಸಿಡಿಗಳಿವೆ. ಹೀಗಂತ ವಿಧಾನಸೌಧದ ಮೊಗಸಾಲೆಯಲ್ಲಿ ಮಾತನಾಡುತ್ತಿದ್ದಾರೆ. ಗ್ಯಾಂಗ್ ಕಟ್ಟಿಕೊಂಡು ಶಾಸಕರ ಟಾರ್ಗೆಟ್ ಮಾಡ್ತಿದ್ದಾರೆ. ಮೊದಲು ಕೆಲಸ ಇದೆ ಅಂತಾ ಶಾಸಕರನ್ನು ಪರಿಚಯ ಮಾಡಿಕೊಳ್ಳುತ್ತಾರೆ. ಸಲುಗೆ ಬೆಳೆಸಿಕೊಂಡು ಸಿಡಿ ಮಾಡಿ, ಬ್ಲ್ಯಾಕಮೇಲ್ ಮಾಡ್ತಾರೆ. ಕರ್ನಾಟಕದಲ್ಲಿ ದೊಡ್ಡ ಸಿಡಿ ಗ್ಯಾಂಗ್ ಇದೆ. ರಾಜಕಾರಣಿಗಳು, ಅಧಿಕಾರಿಗಳು, ಸಿನೇಮಾ ಸ್ಟಾರ್ ಗಳನ್ನು ಬ್ಲ್ಯಾಕ್ ಮೇಲ್ ಮಾಡುವ ಗ್ಯಾಂಗ್ ಗಳಿವೆ.
ಹುಬ್ಬಳ್ಳಿಯಲ್ಲೂ ಕೆಲವರಿಗೆ ಹೀಗೆ ಬ್ಲಾಕ್ ಮೇಲ್ ಮಾಡಿದ್ದಾರೆ. ಸಿಡಿ ಬ್ಲಾಕ್‌ಮೇಕ್ ಈಗ ಹೊರಥರ ಬಿಜಿನೆಸ್ ಆಗಿದೆ. ಹೀಗಾಗಿ ಜಾರಕಿಹೊಳಿ ಕೇಸ್ ನ್ನು ಸಿಬಿಐ ಗೆ ನೀಡಬೇಕು. ಸಿಬಿಐನಿಂದ ಮಾತ್ರ ತಾರ್ಕಿ ಅಂತ್ಯ ಸಾಧ್ಯ. ಎಸ್ಐಟಿ ಮೇಲೆ ವಿಶ್ವಾಸ ಇಲ್ಲ. ಎಸ್‌ಐಟಿ ಸಿಎಂ, ಗೃಹ ಸಚಿವರ ಅಧೀನದಲ್ಲಿದೆ. ಯಾರನ್ನು ಅದರಲ್ಲಿ ಸಿಕ್ಕಿಸಬೇಕು? ಯಾರನ್ನು ಬಿಡಿಸಬೇಕು ಎಂಬುದನ್ನು ಅವರು ಮಾಡುತ್ತಾರೆ. ಡ್ರಗ್ಸ್ ಕೇಸ್ ಹೀಗೆ ಆಗಿದೆ. ಡ್ರಗ್ಸ್ ಕೇಸಲ್ಲಿ ಶಾಸಕರ ಮಕ್ಕಳು ಇದ್ದರೂ ಅವರ ಹೆಸರೇ ಬಂದಿಲ್ಲ" ಎಂದು ಇದೇ ವೇಳೆ ಯತ್ನಾಳ್ ಆರೋಪಿಸಿದ್ದಾರೆ.
"ಇದಲ್ಲದೆ ಮುಖ್ಯಮಂತ್ರಿ ಯಡಿಯೂರಪ್ಪ ಡಿ ವರ್ಗದ ಸಿಬ್ಬಂದಿಯ ವರ್ಗಾವಣೆಯಲ್ಲಿ ತೊಡಗಿದ್ದಾರೆ. ಇಂದು ಡಿ ಗ್ರೂಪ್ ನೌಕರರನ್ನು ಸಹಿತ ಮುಖ್ಯಮಂತ್ರಿಯೇ ವರ್ಗಾವಣೆ ಮಾಡುತ್ತಾರೆ. ಪ್ರತಿಯೊಂದು ವರ್ಗಾವಣೆ ಮುಖ್ಯಮಂತ್ರಿ ಕಂಟ್ರೋಲ್ ತೆಗೆದುಕೊಂಡಿದ್ದಾರೆ. ಪ್ರಜಾತಂತ್ರದ ಒಕ್ಕೂಟ ವ್ಯವಸ್ಥೆಯಲ್ಲಿ ಇದು ಸರಿ ಅಲ್ಲ" ಎಂದು ಅವರು ತಿಳಿಸಿದ್ದಾರೆ.
ಪಂಚರಾಜ್ಯ ಚುನಾವಣೆ ಬಳಿಕ ರಾಜ್ಯದ ನಾಯಕರ ಬದಲಾವಣೆ ಶತಸಿದ್ದ. ಮೂರು ರಾಜ್ಯದ ನಾಯಕರ ಬದಲಾವಣೆ ಮಾಡಬೇಕು ಎಂಬುದು ಬಹಳ ದಿನದಿಂದ ಚರ್ಚೆ ನಡೆದಿದೆ. ಪಂಚರಾಜ್ಯ ಚುನಾವಣೆಯ ಬಳಿಕ ಅದು ಬದಲಾಗುತ್ತದೆ. ಉತ್ತರಾಖಂಡದಲ್ಲಿ ಸಿಎಂ ಬದಲಾವಣೆಗೆ ಆಗಿದೆ. ಈಗ ಹರಿಯಾಣ ಹಾಗೂ ಕರ್ನಾಟಕದಲ್ಲಿ ಸಹಿತ ಬದಲಾವಣೆ ಆಗುತ್ತದೆ. ನನಗೆ ಕೇಂದ್ರದ ನಾಯಕರಿಂದ ಮಾಹಿತಿ ಗೊತ್ತಾಗಿದೆ ಎಂದು ಯತ್ನಾಳ ಇದೇ ಸಂದರ್ಭದಲ್ಲಿ ತಿಳಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ